ಅತ್ಯಂತ ಕಿರಿಯ ಮುಖ್ಯಮಂತ್ರಿ… ಅತಿಶಿ ಯಾರು? ಮಾರ್ಕ್ಸ್ & ಲೆನಿನ್‌ಗೂ ಸ್ಕೂಲ್ ಟೀಚರ್‌ಗೂ ಲಿಂಕ್ ಏನು?

author-image
Gopal Kulkarni
Updated On
ಅತ್ಯಂತ ಕಿರಿಯ ಮುಖ್ಯಮಂತ್ರಿ… ಅತಿಶಿ ಯಾರು? ಮಾರ್ಕ್ಸ್ & ಲೆನಿನ್‌ಗೂ ಸ್ಕೂಲ್ ಟೀಚರ್‌ಗೂ ಲಿಂಕ್ ಏನು?
Advertisment
  • ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ದಂಪತಿಯ ಪ್ರೀತಿಯ ಪುತ್ರಿ ಅತಿಶಿ
  • ಮಕ್ಕಳಿಗೆ ಇತಿಹಾಸ, ಇಂಗ್ಲಿಷ್ ಪಾಠ ಹೇಳುತ್ತಿದ್ದವರು ರಾಜಕೀಯಕ್ಕೆ ಬಂದಿದ್ದು ಹೇಗೆ
  • ಉಪವಾಸ ಸತ್ಯಾಗ್ರಹ, ಚುನಾವಣೆ ಸೋಲು, ಹೇಗಿದೆ ಅತಿಶಿ ರಾಜಕೀಯದ ಹಾದಿ?

ಅತಿಶಿ ಮರ್ಲೇನಾ ಅವರನ್ನು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಈಗಾಗಲೇ ಆಯ್ಕೆ ಮಾಡಲಾಗಿದೆ. ಪಕ್ಷದ ಎಲ್ಲಾ ಶಾಸಕರ ಜೊತೆ ಸೇರಿ ಚರ್ಚೆ ಮಾಡಿ ಬಳಿಕ ಅತಿಶಿಯವರನ್ನು ಸಿಎಂ ಎಂದು ಘೋಷಿಸಿದ್ದಾರೆ ಆಪ್​ ನಾಯಕ ಅರವಿಂದ್ ಕೇಜ್ರಿವಾಲ್​. ಇಂದು ಸಂಜೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೆನಾರನ್ನು ಭೇಟಿಯಾಗಲಿರುವ ಅರವಿಂದ್ ಕೇಜ್ರಿವಾಲ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದಾದ ಬಳಿಕ ಅತಿಶಿ ಅವರ ಪದಗ್ರಹಣಕ್ಕೆ ವೇದಿಕೆ ಸಿದ್ಧವಾಗಲಿದೆ. ಆಪ್​ನಲ್ಲಿ ಅಷ್ಟೆಲ್ಲಾ ನಾಯಕರಿದ್ದರೂ ಅತಿ ಕಿರಿಯ ವಯಸ್ಸಿನನ ಅತಿಶಿಗೆ ಮಣೆ ಹಾಕಿದ್ದು ಯಾಕೆ.? ಯಾರು ಈ ಅತಿಶಿ, ಅವರು ನಡೆದು ಬಂದ ರಾಜಕೀಯ ಪಯಣ ಹೇಗಿತ್ತು ಅನ್ನೋದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಇದನ್ನೂ ಓದಿ:atishi marlena: ದೆಹಲಿಯಲ್ಲಿ ಮತ್ತೆ ಮಹಿಳಾ ದರ್ಬಾರ್; ಕೇಜ್ರಿವಾಲ್‌ ಅತಿಶಿಗೆ ಸಿಎಂ ಪಟ್ಟ ಕಟ್ಟಲು ಕಾರಣವೇನು?

publive-image

ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್​ಗಳಾದ ವಿಜಯ್ ಸಿಂಗ್ ಹಾಗೂ ತೃಪ್ತಿವಹಿ ದಂಪತಿಯ ಪುತ್ರಿ ಈ ಅತಿಶಿ ಮರ್ಲೇನಾ. ದೆಹಲಿ ವಿಶ್ವವಿದ್ಯಾಲಯದ ಸೆಂಟ್ ಸ್ಟೇಫನ್ ಕಾಲೇಜ್​ನಲ್ಲಿ 2001ರಲ್ಲಿ ಪದವಿ ಮುಗಿಸಿದ ಅತಿಶಿ, ಮುಂದಿನ ಅಧ್ಯಯನಕ್ಕೆ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಸೇರಿಕೊಂಡರು. ರಾಜಕೀಯಕ್ಕೂ ಬರುವ ಮೊದಲು ಅವರು ಆಂಧ್ರಪ್ರದೇಶದ ರಿಶಿ ವೆಲ್ಲಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಹಾಗೂ ಇತಿಹಾಸದ ಪಾಠವನ್ನು ಮಾಡುತ್ತಿದ್ದರು.

ಒಂದು ಮೂಲಗಳ ಪ್ರಕಾರ ಅತಿಶಿಯವರ ತಂದೆ ಅವರಿಗೆ ಅತಿಶಿ ಮರ್ಲೇನಾ ಅಂತ ಹೆಸರಿಟ್ಟಿದ್ದರು. ಇದು ಮಾರ್ಕ್ಸ್ (Marx) ಮತ್ತು ಲೆನಿನ್ ( Lenin)​ ಹೆಸರಿನಿಂದ ತೆಗೆದುಕೊಂಡ ಅಕ್ಷರಗಳಿಂದ ಅವರಿಗೆ ಅತಿಶಿ ಮರ್ಲೇನಾ  (Marlena) ಎಂದು ಹೆಸರಿಟ್ಟಿದ್ದರು. 2019ರ ಲೋಕಸಭಾ ಚುನಾವಣೆ ವೇಳೆ ತಮ್ಮ ಹೆಸರಿನ ಹಿಂದಿರುವ ಮರ್ಲೇನಾವನ್ನು ಕೈಬಿಟ್ಟಿದ್ದರು ಅತಿಶಿ. ಅದು ಕ್ರಿಶ್ಚಿಯನ್ ಹೆಸರನ್ನು ಸೂಚಿಸುತ್ತದೆ ಎಂಬ ಕಾರಣಕ್ಕೆ ಆ ಹೆಸರನ್ನು ಕೈಬಿಟ್ಟಿದ್ದರು. ಅತಿಶಿ ಪಂಜಾಬ್​ನ ರಜಪೂತ ಕುಟುಂಬಕ್ಕೆ ಸೇರಿದ್ದಾರೆ. 2019ರ ಬಳಿಕ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಅತಿಶಿ ಅಂತಷ್ಟೇ ಹೆಸರಿಟ್ಟುಕೊಂಡಿದ್ದಾರೆ.

publive-image

ಇದನ್ನೂ ಓದಿ: ನ್ಯೂಯಾರ್ಕ್​ನಲ್ಲಿ ಸ್ವಾಮಿ ನಾರಾಯಣ ಮಂದಿರ ಧ್ವಂಸ, ಆಕ್ರೋಶ ವ್ಯಕ್ತಪಡಿಸಿದ ಅಮೆರಿಕಾದ ಹಿಂದೂಗಳು

ಅತಿಶಿ ಆರಂಭದಿಂದಲೇ ಆಪ್​ ಪಕ್ಷದೊಂದಿಗೆ ಗುರುತಿಸಿಕೊಂಡವರು. ಪಕ್ಷದ ನೀತಿ ನಿರ್ಧಾರಗಳನ್ನು ಮಾಡುವ ಕಾರ್ಯದೊಂದಿಗೆ ತಮ್ಮನ್ನು ತಾವು 2013ರಲ್ಲಿಯೇ ಗುರುತಿಸಿಕೊಂಡವರು. 2015ರಲ್ಲಿ ಮಧ್ಯಪ್ರದೇಶದಲ್ಲಿ ನೀರಿಗಾಗಿ ಆಪ್ ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಆಪ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು ಅತಿಶಿ. ಆದ್ರೆ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ ವಿರುದ್ಧ ಸುಮಾರು 4.77 ಲಕ್ಷ ಮತಗಳ ಅಂತರದಿಂದ ಭಾರೀ ಸೋಲನ್ನು ಕಂಡರು.

publive-image

ಇದನ್ನೂ ಓದಿ:ಸಿಎಂ ಅರವಿಂದ್​​ ಕೇಜ್ರಿವಾಲ್​​​ ದಿಢೀರ್​ ರಾಜೀನಾಮೆಗೆ ಮುಂದಾಗಿದ್ದೇಕೆ? ಇಲ್ಲಿವೆ 5 ಕಾರಣಗಳು!

2020ರ ದೆಹಲಿ ಲೋಕಸಭಾ ಚುನಾವಣೆಯಲ್ಲಿ ಕಲ್ಕಜಿ ಕ್ಷೇತ್ರದಿಂದ ಸ್ಪರ್ಧಿಸಿದ ಅತಿಶಿ ಬಿಜೆಪಿ ಅಭ್ಯರ್ಥಿಯನ್ನು ಸುಮಾರು 11 ಸಾವಿರ ಮತಗಳಿಂದ ಸೋಲಿಸಿ ದೆಹಲಿಯ ವಿಧಾನಸಭೆಯನ್ನು ಪ್ರವೇಶಿಸಿದರು. ಅದೇ ವರ್ಷ ಗೋವಾದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಅತಿಶಿಯವರನ್ನು ಆಪ್​ ಪಕ್ಷದ ಗೋವಾ ವಿಭಾಗದ ಇನ್ ಚಾರ್ಜ್​ ಆಗಿ ನೇಮಿಸಲಾಯಿತು. ಅತಿಶಿ ಸದ್ಯ ದೆಹಲಿ ಸರ್ಕಾರದಲ್ಲಿ ಹಣಕಾಸು, ಕಾನೂನು, ಪ್ರವಾಸ ಸೇರಿದಂತೆ ಹಲವು ಮಂತ್ರಾಲಯಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ದೆಹಲಿ ಸಿಎಂ ಆದ ಮೂರನೇ ಮಹಿಳೆಯ ಎಂಬ ಖ್ಯಾತಿಯನ್ನೂ ಕೂಡ ಪಡೆಯಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment