Advertisment

LSGಗೆ ಬೇಕೇಬೇಕು ಕೆಎಲ್ ರಾಹುಲ್; ಕನ್ನಡಿಗನ ಉಳಿಸಿಕೊಳ್ಳಲು ಇದೆ ಮೂರು ಕಾರಣ..!

author-image
Ganesh
Updated On
LSGಗೆ ಬೇಕೇಬೇಕು ಕೆಎಲ್ ರಾಹುಲ್; ಕನ್ನಡಿಗನ ಉಳಿಸಿಕೊಳ್ಳಲು ಇದೆ ಮೂರು ಕಾರಣ..!
Advertisment
  • IPLನಲ್ಲಿ KL ರಾಹುಲ್ ಯಾವ ತಂಡದಲ್ಲಿ ಆಡ್ತಾರೆ? ಭಾರೀ ಕುತೂಹಲ
  • ಸಂಜೀವ್ ಗೋಯೆಂಕಾ-ಕೆಎಲ್ ರಾಹುಲ್ ದಿಢೀರ್ ಭೇಟಿ ಆಗಿದ್ದೇಕೆ?
  • ಗೋಯೆಂಕಾ-ಕೆಎಲ್ ರಾಹುಲ್ ಭೇಟಿಯಿಂದ ಶಮನವಾಯ್ತಾ ಮುನಿಸು?

2025ರಲ್ಲಿ ನಡೆಯುವ ಐಪಿಎಲ್​ನಲ್ಲಿ ಕನ್ನಡಿಗ ಕೆಎಲ್​ ರಾಹುಲ್ ಎಲ್​ಎಸ್​ಜಿ ತಂಡದಲ್ಲಿ ಇರುತ್ತಾರಾ? ಅಥವಾ ಬೇರೆ ತಂಡ ಸೇರಿಕೊಳ್ತಾರಾ ಅನ್ನೋ ಗೊಂದಲ ಇನ್ನೂ ಹಾಗೆ ಇದೆ. ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ನಾಯಕ ಕೆಎಲ್ ರಾಹುಲ್ ನಡುವೆ ಮನಸ್ತಾಪದಿಂದ ಈ ಪ್ರಶ್ನೆ ಕಾಡ್ತಿದೆ.

Advertisment

ಇದರ ಮಧ್ಯೆ ಗೋಯೆಂಕಾ ಮತ್ತು ರಾಹುಲ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ರಾಹುಲ್​ ಅವರನ್ನು ಎಲ್​ಎಸ್​ಜಿ ಉಳಿಸಿಕೊಳ್ಳಲಿದೆ ಎಂದು ನಂಬಲಾಗುತ್ತಿದೆ. ರಾಹುಲ್​ರನ್ನು ಉಳಿಸಿಕೊಳ್ಳಲು ಮೂರು ದೊಡ್ಡ ಕಾರಣಗಳು ಕೂಡ ಇವೆ.

ಇದನ್ನೂ ಓದಿ:ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ 7 ತಿಂಗಳ ತುಂಬು ಗರ್ಭಿಣಿ; ಯಾರಿವರು..?

ತಂಡದಲ್ಲಿ ಸ್ಥಿರತೆ..!
ಕೆಎಲ್ ರಾಹುಲ್ ನಾಯಕತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಪ್ರದರ್ಶನ ನೀಡಿದೆ. ತಂಡದ ಒಗ್ಗಟ್ಟು ಕಾಪಾಡಿಕೊಂಡು ಬಂದಿದ್ದಾರೆ. ಕೆಎಲ್ ರಾಹುಲ್ ಒತ್ತಡ ಮತ್ತು ಕಷ್ಟದ ಸಮಯದಲ್ಲಿ ಕೂಲ್ ಆಗಿರುತ್ತಾರೆ. ಕೆಎಲ್ ರಾಹುಲ್ ಭಾರತ ತಂಡದ ಭಾಗವಾಗಿದ್ದಾರೆ. ಆದ್ದರಿಂದ ಲಕ್ನೋ ಸೂಪರ್‌ಜೈಂಟ್ಸ್‌ಗೆ ಕೆಎಲ್ ರಾಹುಲ್ ಬಿಡುಗಡೆ ಮಾಡುವುದು ಅಷ್ಟು ಸುಲಭವಲ್ಲ.

Advertisment

ಕೆಎಲ್ ರಾಹುಲ್ ಅಮೋಘ ಫಾರ್ಮ್
ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಚೆನ್ನಾಗಿ ಬ್ಯಾಟ್ ಮಾಡ್ತಾರೆ. 2022ರಲ್ಲಿ 616 ರನ್, 2023ರಲ್ಲಿ 274 ರನ್ ಗಳಿಸಿದ್ದರು. 2024ರಲ್ಲಿ 520 ರನ್ ಗಳಿಸಿದರು. ಕೆಎಲ್ ರಾಹುಲ್ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನೆಗಳು ಎದ್ದಿದ್ದರೂ ಈ ಬ್ಯಾಟ್ಸ್‌ಮನ್ ಸಾಕಷ್ಟು ರನ್ ಗಳಿಸಿದ್ದಾರೆ.

ಇದನ್ನೂ ಓದಿ:ಪಾಕ್ ವಿರುದ್ಧ ಚರಿತ್ರೆ ಸೃಷ್ಟಿಸಿದ ಕೃಷ್ಣ ಭಕ್ತ; 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ದಾಖಲೆ..!

ಕೆಎಲ್ ರಾಹುಲ್ ಸಾಮರ್ಥ್ಯ
ಕೆಎಲ್ ರಾಹುಲ್ ಅದ್ಭುತ ಬ್ಯಾಟ್ಸ್‌ಮನ್ ಮಾತ್ರವಲ್ಲದೇ ಕೀಪಿಂಗ್​ನಲ್ಲೂ ಹೆಸರುವಾಸಿ. ಮೈದಾನದ ಯಾವುದೇ ಪ್ರದೇಶದಲ್ಲಿ ಫೀಲ್ಡಿಂಗ್ ಮಾಡಬಹುದು. ಈ ಮೂಲಕ ಲಕ್ನೋ ಸೂಪರ್‌ಜೈಂಟ್ಸ್‌ಗೆ ಕೆಎಲ್ ರಾಹುಲ್ ಬಹಳ ಮುಖ್ಯ. ಹೀಗಾಗಿ ಲಕ್ನೋ ಸೂಪರ್‌ಜೈಂಟ್ಸ್ ಕೆಎಲ್ ರಾಹುಲ್ ಅವರನ್ನು ಸುಲಭವಾಗಿ ಬಿಡುಗಡೆ ಮಾಡುವುದಿಲ್ಲ ಎಂದು ನಂಬಲಾಗಿದೆ.

Advertisment

ಇದನ್ನೂ ಓದಿ:ದ್ರಾವಿಡ್ ಪುತ್ರ ಅಂಡರ್​​-19 ತಂಡಕ್ಕೆ ಆಯ್ಕೆ; ಆದರೆ ಸಮಿತ್​ಗೆ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment