Advertisment

ಈ ಮಹಿಳೆ ಸತ್ತ ನಂತರವೂ 14 ವರ್ಷಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಿದಳು.. ಇದೆಲ್ಲ ಹೇಗೆ ಸಾಧ್ಯ..?

author-image
Ganesh
Updated On
ಈ ಮಹಿಳೆ ಸತ್ತ ನಂತರವೂ 14 ವರ್ಷಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಿದಳು.. ಇದೆಲ್ಲ ಹೇಗೆ ಸಾಧ್ಯ..?
Advertisment
  • ದೆವ್ವ, ಪ್ರೇತಾತ್ಮಗಳು ಇಲ್ಲಿ ಬರಲೇ ಇಲ್ಲ, ಆದರೆ..
  • 45 ಲಕ್ಷ ಪಿಂಚಣಿ ಹಣವನ್ನೂ ಪಡೆದುಕೊಂಡಿದ್ದಾಳೆ
  • ದಂಗು ಬಡಿಸುವಂತಿದೆ ಸಾವಿನ ನಂತರದ ಕೆಲಸ

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಸುದ್ದಿಗಳು ನಮ್ಮನ್ನು ದಂಗು ಬಡಿಸುತ್ತವೆ. ಅಂತೆಯೇ ಚೀನಾದಿಂದ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದ್ದು, ಅಸಲಿ ವಿಚಾರ ಗೊತ್ತಾದರೆ ನೀವು ಬಿಚ್ಚಿ ಬೀಳುತ್ತಿರಿ..!

Advertisment

ಏನಿದು ಶಾಕಿಂಗ್ ನ್ಯೂಸ್..!?
ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಸುದ್ದಿ ನಿಜಕ್ಕೂ ಭಯ ಹುಟ್ಟಿಸುವಂತದ್ದು. ವಿಷಯ ಏನಂದರೆ.. ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿ 14 ವರ್ಷಗಳು ಕಳೆದಿವೆ. ಹೀಗಿದ್ದೂ ಅವರು ಕಚೇರಿಗೆ ಬಂದು ಕೆಲಸವನ್ನು ಮುಂದುವರಿಸಿದ್ದಾರೆ. ಅಷ್ಟೇ ಅಲ್ಲ.. ನಿವೃತ್ತಿಯಾದ ಬಳಿಕ 46 ಲಕ್ಷ ರೂಪಾಯಿ ಪಿಂಚಣಿ ಹಣವನ್ನೂ ಕಂಪನಿಯಿಂದ ಪಡೆದುಕೊಂಡಿದ್ದಾರಂತೆ!

ಇದನ್ನೂ ಓದಿ:20 ತಂಡಗಳು.. 28 ದಿನಗಳ ಕಾದಾಟ.. ಟಿ20 ವಿಶ್ವಕಪ್ ಗೆಲ್ಲುವ ತಂಡದ ಹೆಸರು ತಿಳಿಸಿದ ತಜ್ಞರು..!

publive-image

ವಾಸ್ತವ ಏನು..?
ಉತ್ತರ ಚೀನಾದ ಇನ್ನರ್ ಮಂಗೋಲಿಯಾ (inner mongolia) ಪ್ರದೇಶದ ವುಹೈ ಆನ್ ಎಂಬ ಮಹಿಳೆ 1993ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಸಾವನ್ನಪ್ಪಿದ ನಂತರವೂ ಈಕೆ ಕಚೇರಿಗೆ ಬಂದು ಕೆಲಸ ಮಾಡಿದ್ದಾಳೆ. ಅರರೇ..! ಏನಿದು..? ಸತ್ತ ವ್ಯಕ್ತಿ ಕಚೇರಿಗೆ ಬಂದು ಕೆಲಸ ಮಾಡುವುದೇಗೆ..? ಇದೆಲ್ಲ ಹೇಗೆ ಸಾಧ್ಯ ಎಂದು ನೀವು ಅಚ್ಚರಿ ಪಡಬಹುದು. ಹಾಗೊಂದು ವೇಳೆ ನೀವು ಯೋಚಿಸಿದ್ದರೆ ನಿಮ್ಮ ಯೋಚನೆ ಸರಿಯೇ ಇದೆ.

Advertisment

ಇದನ್ನೂ ಓದಿ:6, 6, 6, 6 ರಿಷಬ್ ಪಂತ್ ಸ್ಫೋಟಕ ಅರ್ಧ ಶತಕ.. ರೋಹಿತ್​ಗೆ ಖಡಕ್ ಮೆಸ್ಸೇಜ್..!

ವಾಸ್ತವ ಏನಂದರೆ.. ಮಹಿಳೆ ಸಾವನ್ನಪ್ಪಿದ ನಂತರ ಆಕೆಯ ಸಹೋದರಿ ಗುರುತಿನ ಚೀಟಿ ತೆಗೆದುಕೊಂಡಿದ್ದಾಳೆ. ಮೃತ ಮಹಿಳೆಯ ಕಚೇರಿಗೆ ಆಕೆಯ ಸಹೋದರಿ ಹೋಗುತ್ತಿದ್ದಳು. ನಿವೃತ್ತಿಯಾದ ಬಳಿಕ ಕಂಪನಿಯಿಂದ ಸುಮಾರು 45 ಲಕ್ಷ ರೂಪಾಯಿ ಪಿಂಚಣಿ ಹಣವನ್ನು ಪಡೆದುಕೊಂಡಿದ್ದಾರೆ.

ಆದರೆ..
ಮೃತ ಮಹಿಳೆ ಮತ್ತು ಆಕೆಯ ಸಹೋದರಿ ನೋಟದಲ್ಲಿ ಒಂದೇ ರೀತಿ ಇದ್ದಾರಾ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ವುಹೈ ನಗರದ ಹೈಬೋವಾನ್ ಪೀಪಲ್ಸ್ ಕೋರ್ಟ್​ಗೆ ಪೊಲೀಸರು ತಿಳಿಸಿರುವ ಮಾಹಿತಿ ಪ್ರಕಾರ.. ಮೃತ ಮಹಿಳೆ ಆನ್ ಸತ್ತು 14 ವರ್ಷಗಳು ಕಳೆದರೂ ಆಕೆಯ ಸಹೋದರಿ ಕಚೇರಿಗೆ ಹೋಗಿ ಕೆಲಸ ಮಾಡಿದ್ದಾಳೆ. 2007 ರವರೆಗೆ ಮೃತಳ ಹೆಸರಲ್ಲಿ ಕೆಲಸ ಮಾಡಿದ್ದಾಳೆ. ಬಳಿಕ ಅಲ್ಲಿಂದ ನಿವೃತ್ತಿ ಪಡೆದುಕೊಂಡಿದ್ದಾಳೆ. ನಂತರ 2023 ರವರೆಗೆ ಅದೇ ಕಂಪನಿಯಿಂದ ಪಿಂಚಣಿ ಕೂಡ ಪಡೆದುಕೊಂಡಿದ್ದಾಳೆ. ಈ ವಿಚಾರವನ್ನು ಮಹಿಳೆಯ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Advertisment

ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು -ಬೌಲಿಂಗ್​ನಲ್ಲಿ ಮಿಂಚಿದ ದುಬೆ, ಅರ್ಷದೀಪ್ ಸಿಂಗ್..!

publive-image

ಸದ್ಯ ಮಹಿಳೆ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಚೀನಾದ ಘನ ನ್ಯಾಯಾಲಯವು 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸುಮಾರು 2.5 ಲಕ್ಷ ರೂಪಾಯಿ ದಂಡ ಕಟ್ಟುವಂತೆಯೂ ಹೇಳಿದೆಯಂತೆ. ಜೊತೆಗೆ ವಂಚನೆ ಹಿನ್ನೆಲೆಯಲ್ಲಿ ಕಂಪನಿಗೆ ಹಣವನ್ನು ವಾಪಸ್ ನೀಡುವಂತೆಯೂ ಸೂಚನೆ ನೀಡಿದೆ.

ಮಹಿಳೆ ಬೆಂಬಲಕ್ಕೆ ನಿಂತ ನೆಟ್ಟಿಗರು..!
ಸುದ್ದಿ ವೈರಲ್ ಆದ ನಂತರ ಕೆಲವರು ಆ ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ. ‘ಇದರಲ್ಲಿ ತಪ್ಪೇನಿದೆ..? ಮಹಿಳೆ ಹಣಕ್ಕೆ ಬದಲಾಗಿ ಕೆಲಸವನ್ನೂ ಮಾಡಿದ್ದಾಳೆ ಎಂದು ಒಬ್ಬ ಬಳಕೆದಾರ ಬರೆದಿದ್ದಾನೆ. ಮತ್ತೊಬ್ಬ ಬಳಕೆದಾರ.. ಕೇವಲ ಪಿಂಚಣಿಗಾಗಿ 14 ವರ್ಷ ಕೆಲಸ ಮಾಡಿದ್ದಾಳೆ. ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾಳೆ ಎಂದು ಆಕೆಯನ್ನು ಬೆಂಬಲಿಸಿದ್ದಾರೆ.

Advertisment

ಇದನ್ನೂ ಓದಿ:ವಿಶ್ವಕಪ್​ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್​ರಿಂದ ಭಾರೀ ಆಕ್ರೋಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment