Advertisment

ಜೈಸ್ವಾಲ್ ಆಯ್ಕೆಗೆ ಮುಳ್ಳಾಗಿತ್ತು ಅಗ್ರೆಸ್ಸಿವ್ ಬ್ಯಾಟಿಂಗ್​​! ತಂಡದ ಆಯ್ಕೆಗೆ ಚಕಾರ ಬಂದಿದ್ದೇಕೆ ಗೊತ್ತೇ?

author-image
Ganesh
Updated On
IND vs AUS ರೋಚಕ ಘಟ್ಟ ತಲುಪಿದ ಟೆಸ್ಟ್; ಗೆಲುವಿನ ಭರವಸೆ ಮೂಡಿಸಿದ ಯಶಸ್ವಿ ಜೈಸ್ವಾಲ್..!
Advertisment
  • ಬ್ಯಾಟಿಂಗ್ ಸೆನ್ಸೇಷನ್ ಆಯ್ಕೆಗೆ ಎದುರಾಗಿತ್ತು ವಿರೋಧ
  • ಟೆಸ್ಟ್​ ಕ್ರಿಕೆಟ್​ಗೆ ನಾಲಾಯಕ್ ಎಂದಿದ್ದರು ಸೆಲೆಕ್ಟರ್ಸ್..!
  • ಅಂದು ಜೈಸ್ವಾಲ್​​ ಆಯ್ಕೆಗೆ ವಿರೋಧ ವ್ಯಕ್ತವಾಗಿದ್ದೇಕೆ..?

ಯಶಸ್ವಿ ಜೈಸ್ವಾಲ್. ಸದ್ಯ ಟೀಮ್ ಇಂಡಿಯಾದ ಸೆನ್ಸೇಷನ್. ಈತನ ಬ್ಯಾಟಿಂಗ್​​ ದರ್ಬಾರ್​ಗೆ ಫಿದಾ ಆಗದವರಿಲ್ಲ. ಈ ಮುಂಬೈಕರ್​​ ಆಯ್ಕೆಗೆ ಮೀನಾಮೇಶವೇ ನಡೆದಿತ್ತು. ಟೀಮ್ ಇಂಡಿಯಾ ಇರಲಿ, ಮುಂಬೈ ತಂಡಕ್ಕೆ ಆಯ್ಕೆ ಆಗೋದೇ ಅನುಮಾನವಾಗಿತ್ತು. ಆದ್ರೀಗ ಅದೆಲ್ಲವನ್ನು ಸುಳ್ಳಾಗಿಸಿರುವ ಜೈಸ್ವಾಲ್, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯಶಸ್ವಿ ಪಯಣ ಮುಂದುವರಿಸಿದ್ದಾರೆ.

Advertisment

ಯಶಸ್ವಿ ಜೈಸ್ವಾಲ್. ವಿಶ್ವ ಕ್ರಿಕೆಟ್​ನ ರನ್ ಮಷಿನ್. ವಿಶ್ವ ಕ್ರಿಕೆಟ್ ಲೋಕದ ಹಾಟ್​ ಟಾಪಿಕ್. ಈತನ ಡೇರಿಂಗ್​​​​​​​​​​​​​​​ ಬ್ಯಾಟಿಂಗ್, ಕ್ಲೀನ್ ಹಿಟ್​ ಸ್ಟ್ರೈಕ್ಸ್​ಗೆ ಮಾರು ಹೋಗದ ಕ್ರಿಕೆಟರ್ ಇಲ್ಲ. ಸದ್ಯ ಟೀಮ್ ಇಂಡಿಯಾದ ಈ ನಯಾ ಮ್ಯಾಚ್ ವಿನ್ನರ್ ಆ್ಯಂಡ್​ ನೆಕ್ಸ್ಟ್ ಜನರೇಷನ್​ನ​ ರೂಲರ್. ಇಂತಹ ಅದ್ಭುತ ಪ್ರತಿಭೆಯ ಆಯ್ಕೆಗೆ ಅಂದು ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ:KL ರಾಹುಲ್, ಜೈಸ್ವಾಲ್, ಕೊಹ್ಲಿ ಅಲ್ಲ.. ಬಾಂಗ್ಲಾ ವಿರುದ್ಧದ ಗೆಲುವಿಗೆ ಈ ತ್ರಿಮೂರ್ತಿಗಳೇ ಕಾರಣ!

ಅಂದು ಯಶಸ್ವಿ ಜೈಸ್ವಾಲ್ ಆಯ್ಕೆಗೆ ಮೀನಾಮೇಶ
ಯಶಸ್ವಿ ಜೈಸ್ವಾಲ್, ಇವತ್ತು ಟೀಮ್ ಇಂಡಿಯಾದ ಸೂಪರ್​ ಸ್ಟಾರ್​ ಕ್ರಿಕೆಟರ್ ಆಗಿದ್ದಾರೆ. ಅಗ್ರೆಸ್ಸಿವ್ ಆಟದಿಂದ ಎಲ್ಲರ ಮನ ಗೆಲ್ತಿದ್ದಾರೆ. ವಿಶ್ವದ ಶ್ರೇಷ್ಠ ಕ್ರಿಕೆಟರ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಇಂತಹ ಮಹಾನ್ ಕ್ರಿಕೆಟರ್​​ ಆಯ್ಕೆಗೆ ಅಂದು ಮೀನಾಮೇಶ ನಡೆದಿತ್ತು. ಯಶಸ್ವಿ ಜೈಸ್ವಾಲ್​​ ಬ್ಯಾಟಿಂಗ್ ಶೈಲಿಯೇ ಮುಳ್ಳಾಗಿತ್ತು. ಅಗ್ರೆಸ್ಸೀವ್​ ಬ್ಯಾಟಿಂಗ್​ ಬಗ್ಗೆ ಅಪಸ್ವರ ಎತ್ತಿದ್ದ ಕೆಲ ಸೆಲೆಕ್ಟರ್ಸ್​, ಜೈಸ್ವಾಲ್ ಆಯ್ಕೆಗೆ ವಿರೋಧಿಸಿದ್ದರು.

Advertisment

ಅಗ್ರೆಸ್ಸಿವ್ ಕ್ರಿಕೆಟ್​ ಆಡ್ತಿದ್ದ ಯಶಸ್ವಿ, ರೆಡ್​​ ಬಾಲ್​ ಕ್ರಿಕೆಟ್​​ಗೆ ಸೂಕ್ತ ಅಲ್ಲ ಎಂಬ ನಿರ್ಧಾರಕ್ಕೆ ಹಲವರು ಬಂದಿದ್ದರು. ಇದೇ ಕಾರಣಕ್ಕೆ ರಣಜಿ ತಂಡಕ್ಕೆ ಆಯ್ಕೆ ಮಾಡುವಾಗಲೂ ಕೂಡ ಯಶಸ್ವಿ ಜೈಸ್ವಾಲ್​ನ ಬೆಂಬಲಿಸಲು ಹಲವರು ಹಿಂದೇಟು ಹಾಕಿದ್ದರು. ಜೈಸ್ವಾಲ್​ ಟೆಸ್ಟ್ ಕ್ರಿಕೆಟ್​ನಲ್ಲಿ ಸಕ್ಸಸ್ ಕಾಣಲ್ಲ ಎಂಬ ನಿಲುವಿಗೆ ಹಲವರು ಬಂದಿದ್ದರು. ಇಷ್ಟೆಲ್ಲಾ ವಿರೋಧದ ನಡುವೆ ಮುಂಬೈ ತಂಡಕ್ಕೆ ಜೈಸ್ವಾಲ್ ಆಯ್ಕೆ ಆಗಿದ್ದೆ ರೋಚಕ.
ಜೈಸ್ವಾಲ್ ಫ್ರೂವ್ ಮಾಡಿದ್ದಾರೆ.

ಇದನ್ನೂ ಓದಿ:IND vs BAN; ಮತ್ತೆ ಅಬ್ಬರಿಸಿದ ಜೈಸ್ವಾಲ್​.. ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ

publive-image

ಆ್ಯಟಿಟ್ಯೂಡ್​, ಧೈರ್ಯ, ಸ್ಟ್ರೀಟ್ ಸ್ಮಾಟ್​​ನೆಸ್​ ಕ್ರಿಕೆಟರ್​ನಲ್ಲಿ ಇರಬೇಕು. ನನಗೆ ಜೈಸ್ವಾಲ್​​ನಲ್ಲಿ ಆ ಎಲ್ಲಾ ಇದೆ ಎಂದು ಅನಿಸಿತ್ತು. ಮುಂಬೈ ತಂಡಕ್ಕೆ ಆಯ್ಕೆ ಮಾಡಿದಾಗ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದರು. ಬಹುತೇಕ ಮಂದಿ ಭಿನ್ನ ಭಿನ್ನ ಅಭಿಪ್ರಾಯಗಳನ್ನು ತಿಳಿಸಿದ್ದರು. ಕೆಲವರು ಆತನ ಅಗ್ರೆಸ್ಸಿವ್ ಆಟ ರೆಡ್​​ ಬಾಲ್​ಗೆ ಸರಿ ಅಲ್ಲ ಎಂದು ಭಾವಿಸಿದ್ದರು. ಆದ್ರೆ, ನಾನು ಆತ ಎಲ್ಲಾ ಫಾರ್ಮೆಟ್​​ ಕ್ರಿಕೆಟರ್ ಎಂದು ನಂಬಿದ್ದೆ. ಅದೃಷ್ಟವಶಾತ್ ಅಂದು ಕೆಲ ಆಯ್ಕೆದಾರರು ನನ್ನ ಬೆಂಬಲಕ್ಕೆ ನಿಂತರು. ಈಗ ಜೈಸ್ವಾಲ್ ಅದನ್ನ ಫ್ರೂವ್ ಮಾಡಿದ್ದಾರೆ-ಸಲೀಲ್ ಅಂಕೋಲಾ, ಮಾಜಿ ಕ್ರಿಕೆಟರ್

Advertisment

ಲೆಕ್ಕಾಚಾರ ಸುಳ್ಳಾಗಿಸಿದ ಜೈಸ್ವಾಲ್
2019ರಲ್ಲಿ ಮುಂಬೈ ತಂಡದ ಆಯ್ಕೆ ಆಗುವುದೇ ಅನುಮಾನವಾಗಿತ್ತು. ಇಂಥ ಟೈಮ್​ನಲ್ಲಿ ಜೈಸ್ವಾಲ್ ಪರ ಸಲೀಲ್​​​​​​ ಅಂಕೋಲಾ ಬ್ಯಾಟ್ ಬೀಸಿದ್ರು. ಅಂತಿಮವಾಗಿ ತಂಡಕ್ಕೆ ಆಯ್ಕೆಯಾದ ಜೈಸ್ವಾಲ್, ದೇಶಿ ಕ್ರಿಕೆಟ್​ನಲ್ಲಿ 70 ಪ್ಲಸ್ ಅವರೇಜ್​ನಲ್ಲಿ ಬ್ಯಾಟ್ ಬೀಸಿದ್ದರು. 2022ರ ರಣಜಿ ಟ್ರೋಫಿಯ ಮೊದಲ 3 ಪಂದ್ಯಗಳಲ್ಲೇ 498 ರನ್​ ಚಚ್ಚಿದ್ದರು. ಐಪಿಎಲ್​ನಲ್ಲೂ ಅಬ್ಬರಿಸಿದ ಜೈಸ್ವಾಲ್ ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ್ದರು. ತಾನೆಂಥ ಶ್ರೇಷ್ಠ ಬ್ಯಾಟರ್ ಅನ್ನೋದನ್ನ ಜಗತ್ತಿಗೆ ತೋರಿಸಿದ್ರು. ಜಸ್ಟ್​ ಒಂದೇ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್​ನ ನಂ.3 ಬ್ಯಾಟರ್ ಆಗಿ ಸಲಾಂ ಹೊಡೆಸಿಕೊಳ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಈತನ ಪರ್ಫಾಮೆನ್ಸ್.

4 ಟೆಸ್ಟ್ ಸರಣಿ.. 3ರಲ್ಲಿ​ ಟಾಪ್​ ಸ್ಕೋರ್
2023ರ ಜುಲೈನಲ್ಲಿ ಟೀಮ್ ಇಂಡಿಯಾ ಪರ ಡೆಬ್ಯು ಮಾಡಿದ ಜೈಸ್ವಾಲ್, ವೆಸ್ಟ್ ಇಂಡೀಸ್ ಎದುರು 266 ರನ್ ಕೊಳ್ಳೆ ಹೊಡೆದ್ರೆ, 5 ಪಂದ್ಯಗಳ ಇಂಗ್ಲೆಂಡ್ ಸರಣಿಯಲ್ಲಿ 2 ಡಬಲ್ ಸೆಂಚುರಿ ಸಹಿತ 712 ರನ್ ಚಚ್ಚಿದ್ದರು. ಇತ್ತಿಚೆಗೆ ಮುಕ್ತಾಯವಾದ ಬಾಂಗ್ಲಾ ಟೆಸ್ಟ್​ನಲ್ಲೂ 189 ರನ್ ಗಳಿಸಿ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ:ವಿರಾಟ್​ ಉಗ್ರರೂಪ, ಎದುರಾಳಿಗಳಿಗೆ ಖಡಕ್​ ವಾರ್ನ್​.. ಕೊಹ್ಲಿಗೆ ಕಂಟಕ ಆಗ್ತಾರಾ ಯಶಸ್ವಿ ಜೈಸ್ವಾಲ್?

Advertisment

publive-image

ಟಿ20ಯಲ್ಲೂ ಜೈಸ್ವಾಲ್​ ಅಬ್ಬರಕ್ಕೆ ಇಲ್ಲ ಬ್ರೇಕ್
ಯಶಸ್ವಿ ಯಶಸ್ಸಿನ ಪಯಣ ಜಸ್ಟ್ ಟೆಸ್ಟ್ ಕ್ರಿಕೆಟ್​ಗೆ ಮಾತ್ರವೇ ಸಿಮೀತವಾಗಿಲ್ಲ. ಟಿ20 ಫಾರ್ಮೆಟ್​ನಲ್ಲೂ ಜೈಸ್ವಾಲ್ ದರ್ಬಾರ್ ಜೋರಾಗಿದೆ. ಆಡಿದ 23 ಪಂದ್ಯಗಳಲ್ಲೇ 733 ರನ್ ಚಚ್ಚಿರುವ ಜೈಸ್ವಾಲ್, 164.31ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟಿಂಗ್ ನಡೆಸ್ತಿದ್ದಾರೆ. ಆ ಮೂಲಕ ಟೆಸ್ಟ್ ಹಾಗೂ ಟಿ20 ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಇದೀಗ ಜೈಸ್ವಾಲ್ ಕಣ್ಣು ಏಕದಿನ ಫಾರ್ಮೆಟ್​ನತ್ತ ನೆಟ್ಟಿದೆ. ಈತನ ಕನ್ಸಿಸ್ಟೆನ್ಸಿ ಆ್ಯಂಡ್ ಅಟ್ಯಾಕಿಂಗ್ ಸ್ಟ್ರೈಲ್​ ಆಫ್ ಬ್ಯಾಟಿಂಗ್​​ಗೆ ಮನಸೋತಿರೋ ಕೋಚ್​​​​​​​​​​​​ ಗಂಭೀರ್, ಏಕದಿನ ತಂಡಕ್ಕೂ ಕರೆ ತರುವ ಲೆಕ್ಕಾಚಾರದಲ್ಲಿದ್ದಾರೆ. ಮುಂದಿನ ವರ್ಷ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಸ್ಥಾನ ಪಡೆದರೂ ಅಚ್ಚರಿ ಇಲ್ಲ.

ಒಟ್ನಲ್ಲಿ, ಅಂದು ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟ್ರೈಲ್​​ನಿಂದ ಜೈಸ್ವಾಲ್​,ಮುಂಬೈ ರಣಜಿ ತಂಡಕ್ಕೆ ಆಯ್ಕೆಯಾಗುವುದೇ ಅನುಮಾನವಾಗಿತ್ತು. ಜೈಸ್ವಾಲ್ ಟೆಸ್ಟ್​ಗೆ ಸರಿಯಲ್ಲ ಎನ್ನಲಾಗಿತ್ತು. ಇದೀಗ ಜೈಸ್ವಾಲ್ ನಂಬಿದ್ದ ಅದೇ ಕ್ರಿಕೆಟಿಂಗ್ ಸ್ಕಿಲ್ಸ್​, ವಿಶ್ವದ ಡೇಂಜರಸ್ ಬ್ಯಾಟರ್ ರೂಪುಗೊಳ್ಳುವಂತೆ ಮಾಡಿದೆ.

Advertisment

ಇದನ್ನೂ ಓದಿ:ಕೆಣಕಿದ್ರೆ ಕಥೆ ಮುಗೀತು ಯಾರನ್ನೂ ಬಿಡಲ್ಲ.. ಕಾಲ್ಕೆದರಿ ಬಂದಿದ್ದ ಬಶೀರ್​​ನ ಚಳಿ ಬಿಡಿಸಿದ ಜೈಸ್ವಾಲ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment