/newsfirstlive-kannada/media/post_attachments/wp-content/uploads/2023/11/CKM_GOVT_SCHOOL.jpg)
ಚಿಕ್ಕಮಗಳೂರು: ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಬೀಗ ಬೀಳ್ತಾನೆ ಇದೆ. ಮಕ್ಕಳಿಗೆ ಬಿಸಿಯೂಟ, ಹಾಲು, ಮೊಟ್ಟೆ, ಸೈಕಲ್ ಅಂತೆಲ್ಲ ವಿವಿಧ ಯೋಜನೆಗಳನ್ನ ಜಾರಿಗೆ ತಂದ್ರೂ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆ ಆಗುತ್ತಿವೆ. ಕಾಫಿನಾಡು ಚಿಕ್ಕಮಗಳೂರಲ್ಲಿ ಈ ವರ್ಷ ಬರೋಬ್ಬರಿ 21 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಸರ್ಕಾರ, ಖಾಸಗಿ ಶಾಲೆಗಳಿಗೆ ಬೇಕಾಬಿಟ್ಟಿ ಅನುಮತಿ ನೀಡ್ತಿರೋದ್ರಿಂದಲೇ ಸರ್ಕಾರಿ ಶಾಲೆಗಳಿಗೆ ಈ ಸ್ಥಿತಿ ಬಂದಿದೆ ಅಂತ ಸ್ಥಳಿಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಿಗೆ ಸರ್ಕಾರದ ಎಲ್ಲ ಸೌಲಭ್ಯ ಬೇಕು ಆದ್ರೆ, ಸರ್ಕಾರಿ ಶಾಲೆ ಮಾತ್ರ ಬೇಡ. ಖಾಸಗಿ ಹಾಗೂ ಇಂಗ್ಲೀಷ್ ಮೀಡಿಯಂನಲ್ಲಿ ಮಕ್ಕಳು ಓದುತ್ತಿದ್ದಾರೆ ಅಂದ್ರೆ ಹೆತ್ತವರಿಗೆ ಡಿಗ್ನಿಟಿ. ಪೋಷಕರು ತಮ್ಮ ಡಿಗ್ನಿಟಿಗಾಗಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
[caption id="attachment_27297" align="alignnone" width="800"] ಗ್ರಾಮಸ್ಥ[/caption]
ನಮ್ಮೂರಿನ ಶಾಲೆಯಲ್ಲಿ ಓದಿದ ಮಕ್ಕಳು ಇವತ್ತು ಬೆಂಗಳೂರು, ಇಸ್ರೋ ಅಂತ ಬೇರೆ ಬೇರೆ ಕಡೆ ಉನ್ನತ ಕೆಲಸದಲ್ಲಿದ್ದಾರೆ. 40 ವರ್ಷದ ಹಿಂದಿನ ಹಳೆಯ ಶಾಲೆ. ಎಲ್ಲರಿಗೂ ಬದುಕು ಕೊಟ್ಟಿದೆ. ಇಂದು ಜನರಿಗೆ ಸರ್ಕಾರದ ಸೌಲಭ್ಯ, ಸೌಲತ್ತು ಎಲ್ಲ ಬೇಕು. ಆದ್ರೆ ಸರ್ಕಾರದ ಶಾಲೆ ಬೇಡವಾಗಿದೆ. ಟೀಚರ್ ಬೇರೆ ಕಡೆಯಿಂದ ಬಂದರೂ ಮಕ್ಕಳು ಇರಲಿಲ್ಲ. ಕನ್ನಡವನ್ನು ನಿರ್ಲಕ್ಷ್ಯವನ್ನು ಮಾಡಿ ಇಂಗ್ಲೀಷ್ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಪೋಷಕರಿಗೆ ಮನದಟ್ಟು ಮಾಡಿಕೊಟ್ಟರು ಯಾವುದೇ ಪ್ರಯೋಜನ ಆಗುತ್ತಿಲ್ಲ ಎನ್ನುತ್ತಿದ್ದಾರೆ ಗ್ರಾಮಸ್ಥರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ