Advertisment

ಸಚಿವ ಡಿ. ಸುಧಾಕರ್​​ ಅಸಲಿ ಮುಖ ಬಯಲು; ಮತ್ತೊಂದು ದಬ್ಬಾಳಿಕೆ ವಿಡಿಯೋ ರಿಲೀಸ್​!

author-image
Ganesh Nachikethu
Updated On
ಸಚಿವ ಡಿ. ಸುಧಾಕರ್​​ ಅಸಲಿ ಮುಖ ಬಯಲು; ಮತ್ತೊಂದು ದಬ್ಬಾಳಿಕೆ ವಿಡಿಯೋ ರಿಲೀಸ್​!
Advertisment
  • ಸಚಿವ ಡಿ.ಸುಧಾಕರ್​ ರಾಜೀನಾಮೆಗೆ ಹೆಚ್ಚಿದ ಕೂಗು
  • ವಿವಿಧೆಡೆ ಜೆಡಿಎಸ್​,ಬಿಜೆಪಿ ಮುಖಂಡರಿಂದ ಪ್ರತಿಭಟನೆ
  • ಜಮೀನಲ್ಲೇ ಟೆಂಟ್‌ ಹಾಕಿರುವ ಸುಧಾಕರ್‌ ಬೆಂಬಲಿಗರು!

ಬೆಂಗಳೂರು: ದಲಿತ ಕುಟುಂಬದ ಮೇಲೆ ದೌರ್ಜನ್ಯ ಆರೋಪ ಹೊತ್ತಿರುವ ಸಚಿವ ಡಿ. ಸುಧಾಕರ್​ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಜೆಡಿಎಸ್​ ಮತ್ತು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದರ ಮಧ್ಯೆ, ಡಿ.ಸುಧಾಕರ್​ ಅವರ ಮತ್ತಷ್ಟು ಅಸಲು ಬಯಲಿಗೆ ಬರುತ್ತಿವೆ.

Advertisment

ಯಲಹಂಕ ಗ್ರಾಮದ ಬಳಿ ದಲಿತ ಕುಟುಂಬಕ್ಕೆ ಸೇರಿಂದ ಜಮೀನನ್ನು ಸಚಿವ ಡಿ.ಸುಧಾಕರ್​ ಕಬಳಿಸಿದ್ದಾರೆ ಹಾಗೂ ಮಂತ್ರಿಯಾದ ಬಳಿಕ ತಮ್ಮ ಪ್ರಭಾವ ಬಳಿಸಿಕೊಂಡು, ಕುಟುಂಬದ ಮೇಲೆ ದೌರ್ಜನ್ಯ ಮಾಡಿದ್ದಾರೆಂಬ ಆರೋಪದಡಿ ಅಟ್ರಾಸಿಟಿ ಕೇಸ್​ ದಾಖಲಾಗಿದೆ. ಜೆಡಿಎಸ್​ ನಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಶಿವಮೊಗ್ಗದಲ್ಲೂ ಕೂಡ, ಡಿ.ಸುಧಾಕರ್​ ವಿರುದ್ಧ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್​​​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರಾಜೀನಾಮೆ ಪಡೆಯದಿದ್ರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿವಾದಿತ ಜಾಗವನ್ನ ಬಿಟ್ಟು ಕೊಡದ ಸುಧಾಕರ್‌ ಪಟಾಲಮ್ಮು

ಯಲಹಂಕ ಎಸಿಪಿ ಮಂಜುನಾಥ್, ತನಿಖೆಯನ್ನು ಚುರುಕುಗೊಳಿಸಿದ್ದು, ಎಫ್ಐಆರ್ ದಾಖಲಿಸಿದ ದೂರುದಾರರು ಹಾಗೂ ಆರೋಪಿ ಸ್ಥಾನದಲ್ಲಿರುವವರಿಗೆ ನೋಟಿಸ್ ನೀಡಲು ಮುಂದಾಗಿದ್ದು, ವ್ಯಕ್ತಿಗಳ ಐಡೆಂಟಿಟಿ ಪತ್ತೆ ಹಚ್ಚುತ್ತಿದ್ದಾರೆ. ಇನ್ನು ಎಫ್​ಐಆರ್​ ಆದ ಬಳಿಕ ಸಚಿವ ಸುಧಾಕರ್​, ಗೃಹ ಸಚಿವರನ್ನು ಭೇಟಿಯಾಗಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್​, ನಮ್ಮ ಇಲಾಖೆಯಿಂದ ವರದಿ ಬಂದ ಮೇಲೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡ್ತೇನೆ. ಸದ್ಯಕ್ಕೆ ಯಾವುದೇ ನಿರ್ದೇಶನ ನೀಡಲ್ಲ ಎಂದಿದ್ದಾರೆ.

ಸಚಿವರ ಮತ್ತೊಂದು ದಬ್ಬಾಳಿಕೆ ವಿಡಿಯೋ ರಿಲೀಸ್​

ಚಿನ್ನದ ವ್ಯಾಪಾರಿ ರತ್ನ ಆಚಾರ್​ ಮತ್ತು ಜಗದೀಶ್​ ಬಿ. ಜೈನ್​ ಎಂಬುವರ ಮಧ್ಯೆ ಹಣಕಾಸಿನ ವ್ಯವಹಾರ ಇತ್ತು. ಈಗ ಸಚಿವರಾಗಿರುವ ಡಿ.ಸುಧಾಕರ್​, ಜಗದೀಶ್ ಜೈನ್ ಬಳಿ 3 ಕೋಟಿ ಹಣ ತೆಗೆದುಕೊಂಡು ಸೆಟಲ್ ಮೆಂಟ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರದಲ್ಲಿ ನ್ಯಾಯ ಕೇಳಲು ಹೋದ ರತ್ನ ಆಚಾರ್​ ಮೇಲೆ ಸುಧಾಕರ್​ ಹಲ್ಲೆಗೆ ಯತ್ನಿಸಿದ್ರು ಎಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಯುವ ಘಟಕ‌ದ ರಾಜ್ಯಾಧ್ಯಕ್ಷ ಆರೋಪಿಸಿದ್ದಾರೆ.

Advertisment

ಇನ್ನು ಚಿತ್ರದುರ್ಗದ ಚಳ್ಳಕೆರೆಯಲ್ಲೂ ಸುಧಾಕರ್​ ದರ್ಪ ತೋರಿದ್ದಾರಂತೆ. ರಾಜಿ ಪಂಚಾಯತಿ ವಿಚಾರದಲ್ಲಿ ಡಿ. ಸುಧಾಕರ್ ನನ್ನ ಮೇಲೂ ಹಲ್ಲೆ ಮಾಡಿದ್ರು ಎಂದು ಚಳ್ಳಕೆರೆಯ ದಲಿತ ಮುಖಂಡ ಹೆಗ್ಗರೆ ಮಂಜುನಾಥ್​ ಆರೋಪ ಮಾಡಿದ್ದಾರೆ.

ಒಟ್ಟಾರೆ.. ಡಿ.ಸುಧಾಕರ್​ ಅವರ ಒಂದೊಂದು ಅಸಲಿ ಮುಖಗಳು ಬಹಿರಂಗವಾಗ್ತಿದೆ. ಆದ್ರೂ ಕೂಡ ಸರ್ಕಾರ ಸಚಿವರ ಸಮರ್ಥನೆಗೆ ನಿಂತಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

Advertisment
Advertisment
Advertisment