/newsfirstlive-kannada/media/post_attachments/wp-content/uploads/2024/12/BBK-11-Gold-Suresh.jpg)
ಬಿಗ್ ಬಾಸ್ ಸೀಸನ್ 11ರಲ್ಲಿ ಇವತ್ತು ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಯಾರು ನಿರೀಕ್ಷೆ ಮಾಡಿರದ ಆಘಾತದ ಸುದ್ದಿ ಹೊರ ಬಿದ್ದಿದ್ದು, ಕ್ಯಾಪ್ಟನ್ ಆಗಿ ಮನೆಯಲ್ಲಿ ಖುಷಿಯಾಗಿದ್ದ ಗೋಲ್ಡ್ ಸುರೇಶ್ ಅವರು ದಿಢೀರ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋ ಸಸ್ಪೆನ್ಸ್ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಅಚ್ಚರಿಯ ಘಟನೆ ನಡೆದಿದೆ. ಈ ವಾರ ಸೇಫ್ ಆಗಿ ಒಳ್ಳೆ ಫಾರ್ಮ್‌ಗೆ ಮರಳಿದ್ದ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬರುವ ಪರಿಸ್ಥಿತಿ ಎದುರಾಗಿದೆ.
/newsfirstlive-kannada/media/post_attachments/wp-content/uploads/2024/12/BBK-11-Gold-Suresh-2.jpg)
ಮನೆಯ ಸದಸ್ಯರಿಗೆ ಬಿಗ್ ಬಾಸ್ ಒಂದು ಮಹತ್ವದ ಅನೌನ್ಸ್‌ಮೆಂಟ್ ಮಾಡಿದ್ದಾರೆ. ಮನೆ ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ. ಅದು ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಘೋಷಣೆ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/12/BBK-11-Gold-Suresh-1.jpg)
ಮನೆಯಲ್ಲಿ ತುರ್ತು ಸ್ಥಿತಿ ಎದುರಾಗಿದೆ ಅನ್ನೋ ಸುದ್ದಿ ಕೇಳುವುದು ನಿಜಕ್ಕೂ ಆಘಾತಕಾರಿಯಾದದ್ದು. ಬಿಗ್ ಬಾಸ್ ಮನೆಯಲ್ಲಿರುವ ಎಲ್ಲರೂ ಈ ಸುದ್ದಿ ಕೇಳಿ ಕಣ್ಣೀರು ಹಾಕಿದ್ದಾರೆ. ಗೋಲ್ಡ್ ಸುರೇಶ್ ಅವರು ಕಂಗಾಲಾಗಿದ್ದು, ಮನೆಯ ಸದಸ್ಯರು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ದೇವರು ಒಳ್ಳೆಯದು ಮಾಡುತ್ತೆ ಹೋಗಿ ಬನ್ನಿ ಎಂದು ಹೇಳಿ ಭಾವುಕರಾಗಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಟ್ವಿಸ್ಟ್.. ಸೇಫ್ ಆದ್ರೂ ಆಚೆ ಬಂದ ಗೋಲ್ಡ್ ಸುರೇಶ್; ಕಾರಣವೇನು?
ಬಿಗ್ ಬಾಸ್ ತುರ್ತು ಸುದ್ದಿ ತಿಳಿಸುವ ಜೊತೆಗೆ ಹೆಚ್ಚು ತಡ ಮಾಡದೇ ನಿಮ್ಮ ವಸ್ತುಗಳನ್ನು ಪ್ಯಾಕ್ ಮಾಡಿ ಬಿಗ್ ಬಾಸ್ ಮನೆಯಿಂದ ಕೂಡಲೇ ಹೊರಡಬೇಕಿದೆ ಎಂದು ತಿಳಿಸಿದ್ದಾರೆ. ಗೋಲ್ಡ್ ಸುರೇಶ್ ಅವರು ನಾನು ಈ ಮನೆಗೆ ಹೆಂಗೆ ಬಂದ್ನೋ ಹಂಗೆ ಹೋಗ್ತೀನಿ ಅನ್ನುತ್ತಾ ಮನೆಯಿಂದ ಹೊರ ನಡೆದಿದ್ದಾರೆ. ಇದು ಬಿಗ್ ಬಾಸ್ ಸೀಸನ್ 11ರಲ್ಲೇ ನಡೆದಿರೋ ಅತಿದೊಡ್ಡ ಬೆಳವಣಿಗೆಯಾಗಿದ್ದು, ಮನೆಯ ಸದಸ್ಯರೆಲ್ಲಾ ಮಂಕಾಗುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us