ಉದ್ಯೋಗಿಗಳಿಗೆ ಗುಡ್​ ನ್ಯೂಸ್​: ಮಕ್ಕಳನ್ನು ಮಾಡಿಕೊಂಡರೆ ಸಿಗುತ್ತೆ 5 ಲಕ್ಷ ರೂಪಾಯಿ; ಏನಿದು ಬಂಪರ್ ಆಫರ್?

author-image
Veena Gangani
Updated On
ಪೋಷಕರೇ ಹುಷಾರ್​​.. ನಿಮ್ಮ ಮಕ್ಕಳು ಬೀದಿಯಲ್ಲಿ ಆಟ ಆಡುವಾಗ ಗಮನವಿರಲಿ!
Advertisment
  • ಜಗತ್ತಿನ ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗಿಗಳಿಗೆ ಗುಡ್​ ನ್ಯೂಸ್​​
  • ಟ್ರಿಪ್ ಡಾಟ್ ಕಾಮ್ ಗ್ರೂಪ್ ಎಂಬ ಏಜೆನ್ಸಿ ಮಹತ್ವದ ನಿರ್ಧಾರ
  • 1 ಬೇಕು 2 ಸಾಕು ಅನ್ನೋ ಮನಸ್ಥಿತಿಯಲ್ಲಿ 3ನೇ ಮಗುವಿಗೆ ಪ್ರೋತ್ಸಾಹ

ಇತ್ತೀಚಿನ ಕಾಲದಲ್ಲಿ ದಂಪತಿಗಳು 1 ಅಥವಾ 2 ಮಗುವಿಗೆ ಸೀಮಿತವಾಗಿದ್ದಾರೆ. ಅತಿ ಹೆಚ್ಚು ಮಕ್ಕಳನ್ನು ಮಾಡಿಕೊಂಡರೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಎಂಬ ಭೀತಿಯಿಂದ ಮಕ್ಕಳನ್ನು ಮಾಡಿಕೊಳ್ಳಲು ಜನರು ಹಿಂದೆ ಮುಂದೆ ನೋಡವಂತಾಗಿದೆ. ಇದರ ಮಧ್ಯೆ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿತ್ತು. ಇದೀಗ ಭಾರತ ಜನಸಂಖ್ಯೆಯಲ್ಲಿ ಚೀನಾ ದೇಶವನ್ನೇ ಹಿಂದಿಕ್ಕಿದ್ದು ಚೀನಾಕ್ಕೆ ಇದೀಗ ಭೀತಿ ಎದುರಾಗಿದೆ. ಅದಕ್ಕೆ ಚೀನಾ ಸರ್ಕಾರ ಅಲ್ಲಿನ ಪ್ರತಿಷ್ಠಿತ ಕಂಪನಿಗಳು ಉದ್ಯೋಗಿಗಳಿಗೆ ಬಂಪರ್​​ ಆಫರ್‌ಗಳನ್ನು ನೀಡಿದೆ.

publive-image

5 ವರ್ಷಗಳ ಹಿಂದೆ ಚೀನಾ ಸರ್ಕಾರವು ದಂಪತಿಗೆ 2 ಮಗು ಹೊಂದಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಇದೀಗ ಚೀನಾ ಸರ್ಕಾರ ಹಾಗೂ ಖಾಸಗಿ ಕಂಪನಿಗಳು ದಂಪತಿ ಮೂರು ಮಕ್ಕಳನ್ನು ಮಾಡಿಕೊಳ್ಳಬಹುದು ಎಂದು ಹೊಸ ನಿರ್ಧಾರ ಕೈಗೊಂಡಿದೆ. ಇದರ ಜೊತೆಗೆ ಉದ್ಯೋಗಿಗಳಿಗೆ ಬಂಪರ್​​ ಆಫರ್​​ ಸಹ ನೀಡಿದ್ದಾರೆ. ದಂಪತಿ ಮೂರು ಮಕ್ಕಳನ್ನು ಮಾಡಿಕೊಳ್ಳಲು ಟ್ರಿಪ್ ಡಾಟ್ ಕಾಮ್ ಗ್ರೂಪ್ ಎಂಬ ಏಜೆನ್ಸಿ 5.7 ಲಕ್ಷ ರೂಪಾಯಿಯನ್ನು ನೀಡುವುದಾಗಿ ಘೋಷಿಸಿದೆ.

publive-image

ಜುಲೈ 1ರಿಂದ ಪ್ರತಿ ಮಗುವಿಗೆ 50,000 ಯುವಾನ್ ಅಂದರೆ 5,65,306 ರೂಪಾಯಿ ಪಾವತಿಸುವುದಾಗಿ ಹೇಳಿಕೊಂಡಿದೆ. ಚೀನಾದಲ್ಲಿ ಜನರ ಸಂಖ್ಯೆ ಕುಸಿಯುತ್ತಲೇ ಇದೆ. ಹೀಗಾಗಿ ದೇಶದ ಹಿತದೃಷ್ಟಿಯಿಂದ ಚೀನಾ ಸರ್ಕಾರವು ಒಂದು ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಚೀನಾದ ಜನರಿಗೆ ಮಕ್ಕಳನ್ನು ಮಾಡಿಕೊಳ್ಳುವಂತೆ ಜನರಿಗೆ ಆಫರ್ ನೀಡಿಲು ಮುಂದಾಗಿದೆ. ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ನವಜಾತ ಮಗುವಿಗೆ ವಾರ್ಷಿಕ 10,000 ಯುವಾನ್ ಅಂದರೆ ರೂಪಾಯಿ 5.7 ಲಕ್ಷ ಬೋನಸ್ ಅನ್ನು ಪಡೆಯಬಹುದು ಎಂದು ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment