ಕನ್ನಡ ಚಿತ್ರರಂಗದ ಹಾಸ್ಯದ ಹೊನಲು.. ರಂಗಭೂಮಿಯ ಕಲಾವಿದ.. ಕ್ಯಾಸೆಟ್​​​ ಯುಗದ ಕಿಂಗ್​​ ಅಂತ ಕರೆಸಿಕೊಂಡಿದ್ದ ರಾಜು ತಾಳಿಕೋಟೆ, ಕಲಿಯುಗದ ಕುಡುಕ ಎಂದೇ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧ... ಈಗ ಉಡುಪಿ ಜಿಲ್ಲೆ ಹೆಬ್ರಿಯಲ್ಲಿ ನಟ ಶೈನ್ ಶೆಟ್ಟಿ ನಟನೆಯ ಚಿತ್ರದ ಶೂಟಿಂಗ್​ನಲ್ಲಿದ್ದ ರಾಜು ತಾಳಿಕೋಟೆ ಸಾವಿನ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸಿದೆ.. ಮೊನ್ನೆ ರಾತ್ರಿ 11.59 ಸುಮಾರಿಗೆ ಎದೆನೋವು, ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಹೆಬ್ರಿ ಮತ್ತು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ..
ಇದನ್ನೂ ಓದಿ:ಹಿರಿಯ ನಟ, ರಂಗಕರ್ಮಿ ರಾಜು ತಾಳಿಕೋಟೆ ನಿಧನ : ಉಡುಪಿಯಲ್ಲಿ ವಿಧಿವಶ, ಏನಾಯ್ತು?
ಚಿತ್ರೀಕರಣ ಆರಂಭಕ್ಕೆ ಒಂದು ದಿನ ಮೊದಲೇ ಗೆಳೆಯರ ಜೊತೆ ಉಡುಪಿಗೆ ಬಂದಿದ್ದ ರಾಜು ತಾಳಿಕೋಟೆ.. ಸಮುದ್ರ.. ಪ್ರವಾಸಿ ತಾಣಗಳಿಗೆ ಸುತ್ತಾಡಿದ್ರು. ಇಷ್ಟದ ಮೀನಿನ ಖಾದ್ಯಗಳನ್ನ ಸವಿದ್ರು. ಶೈನ್ ಶೆಟ್ಟಿ ಜೊತೆ ಬಿಗ್ ಬಾಸ್ 7 ಸೀಸನ್ ನಂತರ ಗೆಳೆತನ ಕೊಂಡಿ ಬೆಸೆದಿತ್ತು. ಅದೇ ಪ್ರೀತಿಯಿಂದ 40 ದಿನದ ಶೂಟಿಂಗ್​ಗೆ ಸಹಿ ಹಾಕಿದ್ರು. ಬಣ್ಣದ ಲೋಕದಿಂದ ಕೆಲಕಾಲ ದೂರವಿದ್ದ ರಾಜು ತಾಳಿಕೋಟೆ ಈಗ ಇಹಲೋಕದ ಯಾತ್ರೆಯನ್ನೇ ಮುಗಿಸಿದ್ದಾರೆ.
ರಾಜು ತಾಳಿಕೋಟೆ ಜೀವನವೇ ಒಂದು ಕೌತುಕ.. ಅವರ ನಿಜವಾದ ಹೆಸರು ರಾಜೇಸಾಬ್ ಮುಕ್ತಂ ಸಾಬ್ ಯಂಕಂಚಿ. ಇಸ್ಲಾಂ ಧರ್ಮದವರಾದ್ರೂ ರಾಜು ಎಂದೇ ಖ್ಯಾತಿ ಪಡೆದಿದ್ರು. ಇಬ್ಬರು ಪತ್ನಿಯರು, ಐವರು ಮಕ್ಕಳ ಜೊತೆ ಅನ್ಯೋನ್ಯವಾಗಿದ್ರು..
ಬರೋಬ್ಬರಿ 35 ವರ್ಷಗಳ ಕಾಲ ರಂಗ ಸೇವೆ ಮಾಡುತ್ತಾ.. 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿರುವ ರಾಜು ತಾಳಿಕೋಟೆ.. ಸದ್ಯ ಧಾರವಾಡ ರಂಗಾಯಣದ ನಿರ್ದೇಶಕರು. ರಾಜ್ಯಾದ್ಯಂತ ಅಪಾರ ಅಭಿಮಾನಿಗಳಿದ್ದು, ಧಾರವಾಡ ರಂಗಾಯಣದ ಆವರಣದಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿಯ ತನ್ನ ಇಷ್ಟದ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ..
ಇದನ್ನೂ ಓದಿ: ರಾಜು ತಾಳಿಕೋಟಿ ಅಂತ್ಯಕ್ರಿಯೆ ಯಾವಾಗ, ಎಲ್ಲಿ.. ಅವರ ಮಗ ಭರತ್​ ಏನು ಹೇಳಿದರು?
ರಾಜು ತಾಳಿಕೋಟೆ ಸಾವಿಗೆ ಡೈರೆಕ್ಟರ್​ ಯೋಗರಾಜ್ ಭಟ್ ಕಂಬನಿ ಮಿಡಿದಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಪರಮಾತ್ಮ, ಮನಸಾರೆ, ಪಂಚರಂಗಿ ಸಿನಿಮಾಗಳಲ್ಲಿ ನಟಿಸಿದ್ದ ರಾಜು ತಾಳಿಕೋಟೆ ಬಗ್ಗೆ ನೆನೆದು ಭಾವುಕರಾಗಿದ್ದಾರೆ..
ರಾಜು ತಾಳಿಕೋಟೆ ನಿಧನಕ್ಕೆ ಡಿಸಿಎಂ ಡಿಕೆಶಿ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಿಎಂ ಬೊಮ್ಮಾಯಿ.. ಸಚಿವ ಶಿವರಾಜ್ ತಂಗಡಗಿ ಕಂಬನಿ ಮಿಡಿದಿದ್ದಾರೆ.
ಖ್ಯಾತ ರಂಗಭೂಮಿ ನಟ, ಹಾಸ್ಯ ಕಲಾವಿದ,
— DK Shivakumar (@DKShivakumar) October 13, 2025
ಧಾರವಾಡ ರಂಗಾಯಣದ ನಿರ್ದೇಶಕರಾಗಿರುವ
ರಾಜು ತಾಳಿಕೋಟಿ ಅವರು ಹೃದಯಾಘಾತದಿಂದ ನಿಧನರಾಗಿರುವುದು ಅತ್ಯಂತ ದುಃಖಕರ ವಿಷಯವಾಗಿದೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ರಾಜು ತಾಳಿಕೋಟಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ನಷ್ಟವಾಗಿದೆ.
ದೇವರು ರಾಜು ತಾಳಿಕೋಟಿ ಅವರ… pic.twitter.com/md7xAfFB9C
ಹಿರಿಯ ರಂಗ ಕಲಾವಿದ ಮತ್ತು ಪ್ರಸಿದ್ಧ ಚಲನಚಿತ್ರ ನಟರು, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ಶ್ರೀ ರಾಜು ತಾಳಿಕೋಟೆ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 13, 2025
ಉತ್ತರ ಕರ್ನಾಟಕ ಸೊಗಡಿನ ಹಾಸ್ಯದಿಂದ ಜನಪ್ರಿಯರಾಗಿದ್ದ ರಾಜು ಅವರ ಅಕಾಲಿಕ ನಿಧನ ಕಲಾಕ್ಷೇತ್ರಕ್ಕೆ ಬಹುದೊಡ್ಡ ನಷ್ಟ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖ… pic.twitter.com/xJTB9StKdj
ಮಣಿಪಾಲ ಕೆಎಂಸಿ ಆಸ್ಪತ್ರೆ ಆವರಣದಲ್ಲಿ ನೂರಾರು ಅಭಿಮಾನಿಗಳು ರಾಜು ತಾಳಿಕೋಟೆ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಕಲಿಯುಗದ ಕುಡುಕ ನಾಟಕದ ಮೂಲಕ ಜಗದ್ವಿಖ್ಯಾತಿ ಪಡೆದಿದ್ದ ರಾಜು ತಾಳಿಕೋಟೆ ಇಹಲೋಕದ ಯಾತ್ರೆ ಕೊನೆಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ