/newsfirstlive-kannada/media/media_files/2025/08/13/rajinikant-colie-2025-08-13-21-14-39.jpg)
ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳು ಎಂದರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ. ರಜನಿಕಾಂತ್ ಹೊಸ ಸಿನಿಮಾ ಅನೌನ್ಸ್ ಆದ್ರೆ ಸಾಕು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತೆ ಆಗುತ್ತೆ. ಅಷ್ಟರ ಮಟ್ಟಿಗೆ ಥಿಯೇಟರ್ಗಳಲ್ಲಿ ಅವರ ಅಭಿಮಾನಿಗಳಂತೂ ರಜನಿಯವರ ಸ್ಟೈಲ್, ಡೈಲಾಗ್ಗೆ ಕುಣಿದು ಕುಪ್ಪಳಿಸುತ್ತಿರುತ್ತಾರೆ. ಅಂತಹ ಒಂದು ಸಂಭ್ರಮದ ಕ್ಷಣಕ್ಕೆ ಇವತ್ತು ಸಾಕ್ಷಿಯಾಗಿದೆ..
ಇದನ್ನೂ ಓದಿ: ‘ನಾವಿಬ್ಬರು ಮ್ಯೂಚುಯಲ್ ಬ್ರೇಕಪ್ ಆಗಿದ್ದೇವೆ..’ ಭರ್ಜರಿ ಬ್ಯಾಚ್ಯುಲರ್ಸ್ ವಿನ್ನರ್ ಸುನಿಲ್, ಅಮೃತಾ ಹೇಳಿದ್ದೇನು
ರಜನಿಕಾಂತ್ ಬಹುನಿರೀಕ್ಷಿತ ಕೂಲಿ ಸಿನಿಮಾ ಇಂದು ರಿಲೀಸ್ ಆಗಿದೆ. ಸ್ಟಾರ್ ಹೀರೋನ ಮತ್ತೊಮ್ಮೆ ದೊಡ್ಡ ಸ್ಕ್ರೀನ್ನಲ್ಲಿ ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದ್ದು, ವಿಶ್ವದಾದ್ಯಂತ ರಿಲೀಸ್ ಆಗಿದೆ.
ಇದನ್ನೂ ಓದಿ:Breaking: ಚಂದನವನದ ಹಿರಿಯ ನಿರ್ದೇಶಕ ಮುರುಳಿ ಮೋಹನ್ ನಿಧನ
ವಿಶೇಷ ಏನೆಂದರೆ ಕೂಲಿ ಸಿನಿಮಾದಲ್ಲಿ ಸ್ಯಾಂಡಲ್ವುಡ್ ಸ್ಟಾರ್ ನಟ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದಾರೆ. ಈಗಾಗಲೇ ಚೆನ್ನೈನಲ್ಲಿ ಫಸ್ಟ್ ಡೇ ಫಸ್ಟ್ ಶೋಗಳು ಕಂಪ್ಲೀಟ್ ಸೋಲ್ಡ್ ಔಟ್ ಆಗಿವೆ. ಮಲ್ಟಿಪ್ಲೆಕ್ಸ್ವೊಂದರಲ್ಲೇ ಮೊದಲ ದಿನ ಒಟ್ಟು 56 ಶೋಗಳನ್ನು ಇಡಲಾಗಿದ್ದು, ಅಂದರೆ ಅಷ್ಟು ಶೋಗಳ ಟಿಕೆಟ್ ಮಾರಾಟವಾಗಿವೆ. ತಮಿಳುನಾಡು ಸರ್ಕಾರ ಥೇಟರ್ಗಳಲ್ಲಿ ಗರಿಷ್ಠ 150ರೂ, ಮಲ್ಟಿಪ್ಲೆಕ್ಸ್ಗಳಲ್ಲಿ 160ರೂ ಹಾಗೂ ಐಮ್ಯಾಕ್ಸ್ಗಳಲ್ಲಿ 480 ರೂ ಟಿಕೆಟ್ ದರವನ್ನು ನಿಗದಿ ಪಡಿಸಲಾಗಿದೆ.
ಇದನ್ನೂ ಓದಿ:ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದಲ್ಲಿ ಮತ್ತೆ ಎರಡು ಹುಲಿ ಮರಿಗಳು ದುರಂತ ಅಂತ್ಯ
ಅಮೆರಿಕಾದಲ್ಲಿ ಕೂಲಿ ಪ್ರೀ ಬುಕ್ಕಿಂಗ್ ದಾಖಲೆ
ತಮಿಳು ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಕೂಲಿ ಸಿನಿಮಾ ಪ್ರಿ ಬುಕ್ಕಿಂಗ್ನಿಂದಲೇ 2 ಮಿಲಿಯನ್ ಡಾಲರ್ ಅಂದರೆ 17.55 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಇದನ್ನ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಅಧಿಕೃತವಾಗಿ ಘೋಷಣೆ ಮಾಡಿದೆ.
ಇದನ್ನೂ ಓದಿ: ಅಭಿಮಾನಿ ಕೈ ಮೇಲೆ ಅರಳಿದ ಪವಿತ್ರ ಗೌಡ.. ಟ್ಯಾಟೂ ಕಂಡು ಅಕ್ಕ ಫುಲ್ ಖುಷ್ -Video
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ