/newsfirstlive-kannada/media/media_files/2025/08/16/minu-muneer-1-2025-08-16-13-21-41.jpg)
ಮೀನು ಮುನೀರ್
ಮೀನು ಮುನೀರ್.. ಮಲೆಯಾಳಂನ ಖ್ಯಾತ ನಟಿ.. ತಮಿಳು ಸಿನಿಮಾಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾಕೆ. ಮೀಟೂ ಅಭಿಯಾನ ನಡೀತಿದ್ದ ವೇಳೆ ಹಲವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮೀನು ಮುನೀರ್ ಇದೀಗ ಪೊಲೀಸರ ಬಲೆಗೆ ಬಂದಿದ್ದಾರೆ. ಈಕೆಯನ್ನ ಪೊಲೀಸರು ಬಂಧಿಸಿದ್ದಾರೆ.
ಇವರ ವಿವಾದಗಳು ಏನೇನು..?
ಕೇರಳ ಸಿನಿರಂಗದಲ್ಲಿ ಲೈಂಗಿಕ ದೌರ್ಜನ್ಯ ನಡೀತಿದೆ ಅನ್ನೋದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸಲ್ಲಿಕೆಯಾಗಿದ್ದ ಹೇಮಾ ಕಮಿಟಿ ರಿಪೋರ್ಟ್ ಸಂಚಲನ ಸೃಷ್ಟಿಸಿತ್ತು.ಹೇಮಾ ಕಮೀಟಿ ನೇಮಕವಾದ ನಂತರ ಅನೇಕರು ಲೈಂಗಿಕ ದೂರುಗಳನ್ನ ನೀಡಿದರು. ನಟಿ ಮಿನು ಮುನೀರ್ ಮಾಡಿದ ಆರೋಪಗಳು ಮಲಯಾಳಂ ಚಿತ್ರರಂಗವನ್ನು ಮತ್ತಷ್ಟು ಬೆಚ್ಚಿಬೀಳಿಸಿದ್ದವು.
ಇದನ್ನೂ ಓದಿ:ಗೆಳೆಯನಿಗೆ ರಕ್ಷಿಸು ಎಂದು ಮೇಸೇಜ್ ಮಾಡಿದ್ದ ಹುಡುಗಿ ಶ*ವವಾಗಿ ಪತ್ತೆ: ಚಿಕ್ಕಪ್ಪನ ಬಂಧನ, ಅಪ್ಪ ನಾಪತ್ತೆ
ಅಂದು ಸೋಶಿಯಲ್ ಮೀಡಿಯಾದಲ್ಲಿ ಅವರು ಹೀಗೆ ಬರೆದುಕೊಂಡಿದ್ದರು. ‘2008ರಲ್ಲಿ ‘De Ingottu Nokkiye’ ಸಿನಿಮಾದಲ್ಲಿ ನಟಿಸುವಾಗ ಚಿತ್ರದ ನಾಯಕ ಜಯಸೂರ್ಯ ನನ್ನನ್ನು ಫ್ಲಾಟ್ಗೆ ಒಬ್ಬಂಟಿಯಾಗಿ ಕರೆದಿದ್ದ. ಆದರೆ ನಾನು ಅದನ್ನು ನಿರಾಕರಿಸಿದೆ. ಅದೇ ರೀತಿ ನಟ ಮುಕೇಶ್ ನನ್ನೊಂದಿಗೆ ಡಬಲ್ ಮೀನಿಂಗ್ ಮಾತನ್ನಾಡುವ ಮೂಲಕ ಮಿತಿ ಮೀರಲು ಪ್ರಯತ್ನಿಸಿದ್ದರು ಅಂತಾ ಆರೋಪಿಸಿದ್ದರು.
2012ರಲ್ಲಿ Da Thadiya ಚಿತ್ರದಲ್ಲಿ ನಟಿಸುವಾಗ ನಿರ್ಮಾಪಕ ಮಣಿಯಂ ಪಿಳ್ಳೈ ರಾಜು ಅವರು ನಾನು ತಂಗಿದ್ದ ಹೋಟೆಲ್ನ ಕೋಣೆಗೆ ಬರಲು ಬಯಸಿದ್ದರು. ಅದಕ್ಕೆ ನಾನು ನಿರಾಕರಿಸಿದೆ. ಆಗ ಚಿತ್ರೀಕರಣದ ವೇಳೆ ನನ್ನ ಮೇಲೆ ಕೋಪ ತೀರಿಸಿಕೊಂಡು ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ.. ಏರುತ್ತಲೇ ಇದೆ ಬೆಳ್ಳಿ ರೇಟ್.. ಕೆಜಿ ಬೆಳ್ಳಿಗೆ ಎಷ್ಟು ರೂಪಾಯಿ..?
ಈ ಎಲ್ಲಾ ಕಾರಣಗಳಿಂದ ನಾನು ಚಿತ್ರೋದ್ಯಮ ತೊರೆದು ಚೆನ್ನೈನಲ್ಲಿ ನೆಲೆಸಿದೆ. ಅದಾದ ನಂತರ ನನ್ನ ಆರೋಪಗಳಿಗೆ ಸಂಬಂಧಿಸಿ ಮಲಯಾಳಂನಲ್ಲಿ ಲೇಖನವೊಂದು ಪ್ರಕಟವಾಯಿತು. ಹೊಂದಾಣಿಕೆಗೆ ಸಹಕರಿಸಲು ನಿರಾಕರಿಸಿದ ನಂತರ ಮೀನು ಮಲಯಾಳಂ ಚಿತ್ರರಂಗವನ್ನು ತೊರೆದಿದ್ದಾರೆ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಯಿತು. ನಾನು ಅನುಭವಿಸಿದ ಯಾತನೆಗೆ ನ್ಯಾಯ ಕೋರಿ ಆರೋಪ ಮಾಡಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಈಗ ಅರೆಸ್ಟ್ ಆಗಿದ್ದು ಯಾಕೆ..?
2014ರಲ್ಲಿ 16 ವರ್ಷ ಬಾಲಕಿಯೊಬ್ಬಳ ಬಾಳಿನಲ್ಲಿ ನಡೆದ ಕಥೆ ಇದು. ಈಕೆ ನಟಿ ಮೀನು ಮುನೀರ್ಗೆ ಸೋದರ ಸಂಬಂಧಿಯಾಗಿದ್ದು, ಈಕೆಯೇ ಇದೀಗ ದೂರು ನೀಡಿರೋದು. ಸಿನಿಮಾ ಒಂದರಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ತಮಿಳುನಾಡಿಗೆ ಬರುವಂತೆ ಮನವೊಲಿಸಿದ್ದರು. ನಟಿಯ ನಿಜವಾದ ಉದ್ದೇಶ ಸಿನಿಮಾಗೆ ಅವಕಾಶ ಕೊಡಿಸೋದು ಆಗಿರಲಿಲ್ಲ. ಬದಲಾಗಿ ತನ್ನನ್ನು ಲೈಂಗಿಕ ದಂಧೆಗೆ ಸೇರಿಸುವುದಾಗಿತ್ತು ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ. ಆ ಬಾಲಕಿಯನ್ನ ಚೆನ್ನೈಗೆ ಕರೆತಂದಿದ್ದ ನಟಿ, ಆಕೆಯನ್ನ ಖಾಸಗಿ ಹೋಟೆಲ್‌ನಲ್ಲಿ ಇರಿಸಿದ್ರಂತೆ. ಈ ವೇಳೆ ನಾಲ್ವರು ಅತ್ಯಾಚಾರ ಎಸಗಿದ್ದಾಗಿ ಬಾಲಕಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ. ಈ ವೇಳೆ ಆ ಗ್ಯಾಂಗ್ನಿಂದ ತಪ್ಪಿಸಿಕೊಂಡ ಸಂತ್ರಸ್ತೆ, 10 ವರ್ಷಗಳ ನಂತರ ಈ ವರ್ಷದ ಮಾರ್ಚ್‌ನಲ್ಲಿ ಪೊಲೀಸರಿಗೆ ದೂರು ನೀಡಿದ್ದಳು. ಈಗ 26 ವರ್ಷ ವಯಸ್ಸಿನ ಸಂತ್ರಸ್ತೆ ನೀಡಿರೋ ಕಂಪ್ಲೆಂಟ್ ಅನ್ವಯ ತಮಿಳುನಾಡು ಪೊಲೀಸರು ನಟಿ ಮೀನು ಮುನೀರ್ಳನ್ನ ಬಂಧಿಸಿದ್ದಾರೆ.
ಅರೆಸ್ಟ್ ಆಗ್ತಿರೋದು ಇದೇ ಮೊದಲಲ್ಲ..!
ನಟಿ ಮೀನು ಮುನೀರ್ ಇದೇ ಮೊದಲು ಜೈಲಿಗೆ ಹೋಗ್ತಿರೋದಲ್ಲ, ಬದಲಾಗಿ ಈ ಹಿಂದೆ ಹಲವು ಬಾರಿ ಸೆರೆವಾಸದ ದರ್ಶನ ಮಾಡಿದ್ದಾರೆ. ಈ ಹಿಂದೆ ಮಲಯಾಳಂ ನಟ ಬಾಲಚಂದ್ರ ಮೆನನ್ ವಿರುದ್ಧ ನಟಿ ಮೀನು ಮುನೀರ್ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆದರೆ ಸಾಕ್ಷ್ಯಗಳ ಕೊರತೆಯಿಂದಾಗಿ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿತು. ಬಳಿಕ ನಟ ಬಾಲಚಂದ್ರ ಮೆನನ್, ಮೀನು ಮುನೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?
ಈ ಪ್ರಕರಣದಲ್ಲಿ ಮೀನು ಮುನೀರ್ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ರು. ಇದಾದ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವರದಿ ನೀಡಲು ಹೇಮಾ ಸಮಿತಿ ರಚಿಸಿದಾಗ ನಟಿ ಮೀನು ಮುನೀರ್ ಹಲವರ ವಿರುದ್ಧ ಆರೋಪ ಮಾಡಿದ್ದರು. ಮುಖೇಶ್, ಮಣಿಯನ್‌ಪಿಳ್ಳ ರಾಜು, ಜಯಸೂರ್ಯ, ಎಡವಲೆ ಬಾಬು ವಿರುದ್ಧ ಮೀಟೂ ಆರೋಪ ಮಾಡಿದ್ರು. ಆದ್ರೀಗ ಈ ನಟಿಯೇ ವೇಶ್ಯಾವಾಟಿಕೆ ಪ್ರಕರಣದಲ್ಲಿ ಅರೆಸ್ಟ್ ಆಗುವಂತಾಗಿದೆ.
ಇದನ್ನೂ ಓದಿ: ಪೋಕ್ಸೋ ಕೇಸಲ್ಲಿ ಜನಪ್ರಿಯ ನಟಿ ಮೀನು ಮುನೀರ್ ಅರೆಸ್ಟ್.. ಏನಿದು ಪ್ರಕರಣ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ