332 ಕಿ.ಮೀ ದೂರಕ್ಕೆ ದಾಸನ ಪಯಣ.. ದಿಕ್ಕಾಪಾಲಾದ ದರ್ಶನ್ ಗ್ಯಾಂಗ್‌; ಯಾರ್, ಯಾರು ಯಾವ ಜೈಲಿಗೆ?

author-image
Gopal Kulkarni
Updated On
ದರ್ಶನ್​​ಗೆ ಜಾಮೀನು ಬೆನ್ನಲ್ಲೇ ಮತ್ತೊಂದು ಗುಡ್​​ನ್ಯೂಸ್.. ಕೋರ್ಟ್​​ನಿಂದ ಸಿಹಿ ಸುದ್ದಿ
Advertisment
  • ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್​​, ಡಿ ಗ್ಯಾಂಗ್ ಈಗ ದಿಕ್ಕಾಪಾಲು!
  • ಯಾಱರು ಯಾವ ಯಾವ ಜೈಲಿಗೆ ಶಿಫ್ಟ್‌? ಯಾಕಾಗಿ ಆಗ್ತಿದ್ದಾರೆ?
  • ಗಣಿನಾಡಿನ ಜೈಲಿಗೆ ದರ್ಶನ್, ಅಲ್ಲಿ ಹೇಗಿದೆ ಸೆರೆಮನೆಯ ವ್ಯವಸ್ಥೆ?

ಬೆಂಗಳೂರು:  ಪಟ್ಟಣಗೆರೆ ಶೆಡ್​ನಿಂದ ಮೈಸೂರು, ಮೈಸೂರಿಂದ ಕಾಮಾಕ್ಷಿಪಾಳ್ಯಪೊಲೀಸ್​ ಸ್ಟೇಷನ್, ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಿಂದ ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣೆಯ ಜೈಲು, ಅಲ್ಲಿಂದ ಪರಪ್ಪನ ಅಗ್ರಹಾರ. ಈಗ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ದರ್ಶನ್ ಪ್ರಯಾಣ ನಡೆಯತ್ತಿದೆ. ಪರಪ್ಪನ ಅಗ್ರಹಾರದಿಂದ 332 ಕಿಲೋ ಮೀಟರ್​ನ 6 ಗಂಟೆಯ ಪ್ರಯಾಣ ಸದ್ಯದಲ್ಲಿಯೇ ಸಾಗಲಿದೆ.

ದರ್ಶನ್ ಕಾಲಿಟ್ಟಲ್ಲೆಲ್ಲಾ ಬರೀ ಯಡವಟ್ಟುಗಳೇ ಕಾಣ ಸಿಗುತ್ತಿವೆ. ಮೊದಲು ಮುಟ್ಟಿದ್ದೆಲ್ಲವೂ ಚಿನ್ನವೇ ಆಗುತ್ತಿದ್ದ ಒಂದು ಕಾಲವಿತ್ತು. ಆದ್ರೆ ದರ್ಶನ್​ಗೆ ಅದ್ಯಾವಾಗ ಶನಿ ಹೆಗಲೇರಿ ಕಿವಿಯೆರಡರಲ್ಲೂ ಬೆರಳಿಟ್ಟನೋ ಗೊತ್ತಿಲ್ಲ. ಒಂದಿಲ್ಲೊಂದು ವಿವಾದ, ಒಂದಿಲ್ಲೊಂದು ತಕರಾರು. ಒಂದಿಲ್ಲೊಂದು ಕೇಸು. ಈಗ ಪರಪ್ಪನ ಅಗ್ರಹಾರದಲ್ಲೂ ನೆಮ್ಮದಿಯಿಂದ ಇರಲು ಆಗದೇ ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಿದ್ದಾರೆ ದರ್ಶನ್.

publive-image

ದರ್ಶನ್​​ ಬಳ್ಳಾರಿ ಜೈಲಿಗೆ ಶಿಫ್ಟ್​.. ‘ಡಿ’ಗ್ಯಾಂಗ್​ ದಿಕ್ಕಾಪಾಲು!
ಪರಪ್ಪನ ಅಗ್ರಹಾರದಲ್ಲಿ ರಾಯಲ್ ಟ್ರೀಟ್ಮೆಂಟ್ ತೆಗೆದುಕೊಂಡು ಬಿಂದಾಸ್ ಆಗಿದ್ದ ನಟ ದರ್ಶನ್​ಗೆ ಸರ್ಕಾರ ಹಾಗೂ​​ ಪೊಲೀಸರು ಶಾಕ್ ಕೊಟ್ಟಿದ್ದಾರೆ. ದರ್ಶನ್​ ಬಳ್ಳಾರಿ ಜೈಲುಪಾಲಾಗಿದ್ದಾರೆ. ಬರೀ ದರ್ಶನ್​ ಅಷ್ಟೇ ಅಲ್ಲ. ಡಿ ಗ್ಯಾಂಗ್​ನ ಇತರ ಕೆಲ ಆರೋಪಿಗಳನ್ನೂ ಬೇರೆ ಬೇರೆ ಜಿಲ್ಲೆಗಳ ಜೈಲಿಗೆ ಟ್ರಾನ್ಸ್​ಫರ್ ಮಾಡಲಾಗಿದೆ. ರಾಜಾತಿಥ್ಯದ ಫೋಟೋ, ವಿಡಿಯೋಗಳು ವೈರಲ್​ ಆದ ಬೆನ್ನಲ್ಲೇ ಆರೋಪಿಗಳನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಚೀಫ್ ಸೂರ್ಪಡೆಂಟ್​​ರಿಂದ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಮನವಿಯನ್ನು ಆಲಿಸಿದ ಕೋರ್ಟ್​​ ಜೈಲಿನ ಡಿಜಿಗೆ ದರ್ಶನ್​ ಅಂಡ್​ ಗ್ಯಾಂಗ್​ನ ಇತರೆ ಜೈಲಿಗೆ ಶಿಫ್ಟ್​ ಮಾಡಲು ಶಿಫಾರಸ್ಸು ಮಾಡಿ ಆದೇಶ ನೀಡಿದೆ.

publive-image

ಇದನ್ನೂ ಓದಿ:ಬೆಂಗಳೂರು ಡಾನ್​ ಯಾರು? ಭೂಗತ ಲೋಕದ ವಿಲ್ಸನ್ ಗಾರ್ಡನ್ ನಾಗನ ಭಯಾನಕ ಕಥೆ ಇಲ್ಲಿದೆ!

ಪರಪ್ಪನ ಅಗ್ರಹಾರದಲ್ಲೇ ಇದ್ದ 13 ಡಿ ಗ್ಯಾಂಗ್​​ ಸದಸ್ಯರು ಇದೀಗ ದಿಕ್ಕಾಪಾಲಾಗಲಿದ್ದಾರೆ. ಈ ಪೈಕಿ ದರ್ಶನ್​ಗೆ ಬಳ್ಳಾರಿ ಜೈಲಿನ ದರ್ಶನವಾಗಲಿದೆ. ಪವನ್, ರಾಘವೇಂದ್ರ, ನಂದೀಶ್​ ಮೂವರೂ ಮೈಸೂರು ಜೈಲಿನಲ್ಲಿ ಉಳಿಯಬೇಕಾಗಲಿದೆ. ಜಗದೀಶ್​ ಹಾಗೂ ಲಕ್ಷ್ಮಣ್ ಇಬ್ಬರೂ ಶಿವಮೊಗ್ಗ ಜೈಲಿನಲ್ಲಿರಲಿದ್ದಾರೆ. ಧನರಾಜ್​ ಧಾರವಾಡ ಜೈಲಿಗೆ ಶಿಫ್ಟ್ ಆಗ್ತಾನೆ. ವಿನಯ್ ವಿಜಯಪುರ ಜೈಲಿಗೆ ವರ್ಗ ಆಗಿದ್ದಾನೆ. ನಾಗರಾಜ್​​ನನ್ನ ಗುಲ್ಬರ್ಗಾ ಜೈಲಿಗೆ ಎತ್ತಿ ಬಿಸಾಡಲಾಗಿದೆ. ಪ್ರದೋಷ್​​​ ಬೆಳಗಾವಿ ಜೈಲಿಗೆ ಶಿಫ್ಟ್ ಆಗಿದ್ದಾನೆ. ಇನ್ನುಳಿದಂತೆ ಪವಿತ್ರಗೌಡ, ದೀಪಕ್, ಅನುಕುಮಾರ್​ ಮೂವರನ್ನೂ ಪರಪ್ಪನ ಅಗ್ರಹಾರದಲ್ಲೇ ಉಳಿಸಲಾಗಿದೆ. ಈಗಾಗಲೇ ರವಿ , ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲೆ ಇದ್ದರು.

ಇದನ್ನೂ ಓದಿ:ಬ್ರ್ಯಾಂಡೆಡ್‌ ಟೀ ಶರ್ಟ್‌, ಶೂ, ಡ್ರೈಫ್ರೂಟ್ಸ್‌.. ವಿಲ್ಸನ್‌ ಗಾರ್ಡನ್ ನಾಗನ ಲಕ್ಸುರಿ ಲೈಫ್ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!

publive-image

ದರ್ಶನ್​ಗೆ ರಾಜಾತಿಥ್ಯದ ಬಗ್ಗೆ ಸುಮಲತಾ ಶಾಕಿಂಗ್​​ ಹೇಳಿಕೆ!
ದರ್ಶನ್​ದು ಈ ಫೋಟೋ ವೈರಲ್​ ಆಗ್ತಾ ಇದ್ದಂತೆ ಪರಪ್ಪನ ಅಗ್ರಹಾರದಲ್ಲಿ ಅಕ್ಷರಶಃ ಬೆಂಕಿ ಹೊತ್ತಿಕೊಳ್ತು..ಒಬ್ಬರ ಹಿಂದೆ ಒಬ್ಬರಂತೆ 9 ಮಂದಿ ಪೊಲೀಸ್​ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಯ್ತು..ಸಸ್ಪೆಂಡ್ ಅಂದ್ರೆ ಡಿಪಾರ್ಟ್​ಮೆಂಟ್​ ಭಾಷೆಯಲ್ಲಿ ಶಿಕ್ಷೆಯೇನಲ್ಲ ಬಿಡಿ..ಆದ್ರೂ, ಸರ್ಕಾರ ಹಾಗೂ ಪೊಲೀಸ್​ ವ್ಯವಸ್ಥೆ ಇಬ್ಬರೂ ಪ್ರಕರಣದಿಂದ ಮುಜುಗರಕ್ಕೀಡಾಗಿರೋದು ಸತ್ಯ.

ಇನ್ನು, ಫೋಟೋ ಸ್ಫೋಟವಾದ್ಮೇಲೆ ದರ್ಶನ್​ರ ವಿಚಿತ್ರ ಅಭಿಮಾನಿಗಳನ್ನ ಕೇಳ್ಬೇಕಾ? ಬಾಸ್​ ಎಲ್ಲಿದ್ರೂ ಬಾಸೇ ಅಂತಾ ವಿಲಕ್ಷಣವಾಗಿ ಸೆಲೆಬ್ರೇಟ್​ ಮಾಡ್ತಿದ್ದಾರೆ...ಈ ಫೋಟೋ ಅದೇಗೆ ತಮ್ಮ ಬಾಸ್​ಗೇ ಇನ್ನೊಂದು ಗುಂಡಿ ತೋಡಿದೆ ಅನ್ನೋ ಬಗ್ಗೆ ಚೂರೂ ಅರಿವಿಲ್ಲದೇ ವರ್ತಿಸ್ತಿದ್ದಾರೆ. ಇಂಥಾ ಅಭಿಮಾನಿಗಳ ಮಧ್ಯೆ ದರ್ಶನ್​ ಪಾಲಿನ ಮದರ್ ಇಂಡಿಯಾ ಸುಮಲತಾ ಕೊಟ್ಟಿರೋ ಒಂದು ಸ್ಟೇಟ್​ಮೆಂಟ್​ ಕಿಚ್ಚಿಗೆ ಮತ್ತಷ್ಟು ತುಪ್ಪ ಸುರಿದಿದೆ.

ಇದನ್ನೂ ಓದಿ:ದರ್ಶನ್​​ರನ್ನ ಬಳ್ಳಾರಿಗೆ ಶಿಫ್ಟ್ ಮಾಡೋದು ಯಾವಾಗ.. ಇವತ್ತು ರಾತ್ರಿನಾ, ಬೆಳಗ್ಗೆನಾ?

ಜೈಲಲ್ಲಿ ಇದೆಲ್ಲಾ ಮೂಮೂಲಿ ಅಂತಿದ್ದಾರೆ ಸುಮಲತಾ. ಅಂದ್ರೆ, ದರ್ಶನ್​ ಪಶ್ಚಾತಾಪ ಪಡೋದು ಬಿಟ್ಟು ರಾಜಾತಿಥ್ಯ ಅನುಭವಿಸಿದ್ರಲ್ಲಿ ಯಾವುದೇ ತಪ್ಪಿಲ್ಲ ಅನ್ನೋದು ಸುಮಲತಾರವರ ಮಾತಿನ ಅರ್ಥ. ಇಷ್ಟು ಹೇಳಿದ ಸುಮಲತಾ ನಾನು ಇನ್ನೂ ಹೆಚ್ಚು ಮಾತನಾಡಿದ್ರೆ ಕಾಂಟ್ರವರ್ಸಿ ಆಗುತ್ತೆ ಅಂತಲೂ ಹೇಳಿ ಸೈಲೆಂಟ್​ ಆಗಿದ್ದಾರೆ. ಈ ಮಧ್ಯೆ ದರ್ಶನ್​ ಹೆಸ್ರಿಗೆ ಌಡ್​ ಆಗಿರೋ ಆ ಅಲಿಯಾಸ್​ ಅನ್ನೋ ಟೈಟಲ್​ ಬಗ್ಗೆ ಚರ್ಚೆ ಜೋರಾಗಿದೆ.

publive-image

ದರ್ಶನ್​ ಅಲಿಯಾಸ್​ ಡಿಬಾಸ್​ ಹೆಸರು ಬಂದಿದ್ದು ಯಾಕೆ?
ಈಗ ಅಸಲೀ ವಿಷ್ಯಕ್ಕೆ ಬರ್ತೀವಿ ಕೇಳಿ. ದರ್ಶನ್ ಅಲಿಯಾಸ್ ಡಿ ಬಾಸ್​. ಈ ಒಂದು ಬದಲಾವಣೆಯೇ ದರ್ಶನ್​​ ಫ್ಯಾನ್ಸ್​​ಗೆ, ರಾಜ್ಯದ ಮಂದಿಗೆ ಕುತೂಹಲ ಸೃಷ್ಟಿಯಾಗುವಂತೆ ಮಾಡಿದೆ. 2011ರಲ್ಲಿ ಪತ್ನಿಗೆ ಹೊಡೆದು ಜೈಲಿಗೆ ಹೋಗಿದ್ದ ದರ್ಶನ್​​ ವಿರುದ್ಧ ದಾಖಲಾಗಿದ್ದ ಕೇಸ್​​ನ ಪೊಲೀಸ್​ ರೆಕಾರ್ಡ್​ಗಳಲ್ಲಿ ದರ್ಶನ್​ ಶ್ರೀನಿವಾಸ್​ ಅಂತಲೇ ಬರೆಯಲಾಗಿತ್ತು.

ಇದನ್ನೂ ಓದಿ:ದರ್ಶನ್‌ಗೂ ಮುಂಚೆ ಬೇಲ್ ಸಿಗುತ್ತಾ? ಕೋರ್ಟ್‌ ಮೊರೆ ಹೋದ ಪವಿತ್ರಾಗೆ ಪೊಲೀಸರಿಂದ 5 ಕೌಂಟರ್‌!

ಕೊಲೆ ಕೇಸ್​ನಲ್ಲಿ ಈಗಾಗಲೇ ವಿವಿಧ ಸೆಕ್ಷನ್​ಗಳನ್ನ ಎದುರಿಸ್ತಿರೋ ದರ್ಶನ್​ಗೆ ಈಗ ಅದೇ ಫೋಟೋ ಮತ್ತೊಂದು ಕಂಟಕ ತಂದಿಟ್ಟಿದೆ. ಜೈಲಿನಲ್ಲಿ ಹಾಯಾಗಿ ರೌಡಿಗಳ ಜೊತೆಗೆ ಧಮ್​ ಹೊಡೀತಿದ್ದ ದರ್ಶನ್​ ವಿರುದ್ಧ ಮತ್ತೆ 3 ಎಫ್​ಐಆರ್​ಗಳು ಫಿಟ್​ ಆಗಿವೆ. ಆ ಮೂರು ಎಫ್​ಐಆರ್​ಗಳಲ್ಲಿ ಎರಡರಲ್ಲಿ, ದರ್ಶನ್​ ಅಲಿಯಾಸ್​ ಡಿ ಬಾಸ್ ಅಂತಾ ಅಗ್ರಹಾರ ಪೊಲೀಸರು ಕೇಸ್ ದಾಖಲಿಸಿದ್ದಾರೆ.ಇನ್ಮೇಲೆ ಪೊಲೀಸ್ ಕ್ತೈಂ ರೆಕಾರ್ಡ್ಸ್ ನಲ್ಲೂ ದರ್ಶನ್​ ಅಲಿಯಾಸ್​ ಡಿ-ಬಾಸ್ ಅಂತಲೇ ಎಂಟ್ರಿಯಾಗಲಿದೆ..ಅಷ್ಟಕ್ಕೂ ಅಲಿಯಾಸ್ ಅನ್ನೋ ಪಟ್ಟ ಯಾರಿಗೆ ಹೆಚ್ಚಾಗಿ ಸಿಗುತ್ತೆ ಗೊತ್ತಾ?

publive-image

ಘೋರ ಅಪರಾಧಗಳನ್ನು ಮಾಡಿದ್ರೆ ‘ಅಲಿಯಾಸ್​’ ಪಟ್ಟನಾ?
ಈ ಹಿಂದೆ ದರ್ಶನ್​ ಮಾಡಿದ್ದ ತಪ್ಪುಗಳಲ್ಲೆಲ್ಲಾ ಅಷ್ಟೊಂದು ಘೋರತನ ಅನ್ನೋದು ಇರಲಿಲ್ಲ..ಕೋರ್ಟು, ಪೊಲೀಸರು ಯಾರೂ ಕೂಡ ಆ ಕೇಸ್​​ಗಳನ್ನ ಘೋರ ಅಂತಾ ಪರಿಗಣನೆ ಮಾಡಿರಲಿಲ್ಲ....ಹಾಗಾಗಿ, ಎಲ್ಲಾ ಪೊಲೀಸ್​ ರೆಕಾರ್ಡ್​ಗಳಲ್ಲೂ ಬರೀ ದರ್ಶನ್ ಅಂತಲೇ ನಟನ ಹೆಸರನ್ನ ನಮೂದಿಸಲಾಗ್ತಿತ್ತು...ಬಟ್​,​​ ರೇಣುಕಾಸ್ವಾಮಿಯ ಕೊಲೆ ಕೇಸ್​ ಇದ್ಯಲ್ಲ.. ಇದು ನಿಜಕ್ಕೂ ಹೀನಸ್ ಕ್ರೈಂ..ಅಂದ್ರೆ ಘನಘೋರ ಅಪರಾಧ.

ಇದನ್ನೂ ಓದಿ:ದರ್ಶನ್ ಬಳ್ಳಾರಿ ಜೈಲಿಗೆ.. ಪವಿತ್ರಾ ಎಲ್ಲಿಗೆ? ಕೊಲೆ ಆರೋಪಿಗಳು ಯಾವ್ಯಾವ ಜೈಲಿಗೆ ಶಿಫ್ಟ್? ಇಲ್ಲಿದೆ ಕಂಪ್ಲೀಟ್ ಮಾಹಿತಿ!

ಅತ್ಯಾಚಾರ ಮಾಡೋದು, ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಕ್ರೂರವಾಗಿ ದಾಳಿ ಮಾಡೋದನ್ನ ಘೋರ ಅಂತಲೇ ಪರಿಗಣನೆ ಮಾಡಲಾಗುತ್ತೆ..ತಾವ್​ ಮಾಡೋ ಅಪರಾಧಗಳಲ್ಲಿ ಸಿಲುಕಿ ಒಂದು ವೇಳೆ 7 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಬಿದ್ದರೂ ಅದನ್ನ ಹೀನಸ್​ ಕ್ರೈಂನ ಲಿಸ್ಟ್​ಗೆ ಸೇರಿಸಲಾಗುತ್ತೆ.. ಇಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್​​ ಕೂಡ ಅಂತಹದ್ದೇ ಘನಘೋರ ಪ್ರಕರಣ ಅನ್ನೋ ಪರಿಗಣನೆಗೆ ಬರಲಾಗಿದೆ..ಹಾಗಾಗಿ ದರ್ಶನ್​ ಹೆಸರಿನ ಮುಂದೆ ಅಲಿಯಾಸ್​ ಅನ್ನೋ ಹೆಸರು ಬಂದಿರಬಹುದು.

ಈ ಹಿಂದೆ ಮೆರೀತಿದ್ದ ಡಿ-ಬಾಸ್​ ದರ್ಶನ್​, ಇವತ್ತು ದರ್ಶನ್​ ಅಲಿಯಾಸ್​ ಡಿ ಬಾಸ್​ ಆಗಿದ್ದಾರೆ. ಒಟ್ನಲ್ಲಿ ವ್ಯಕ್ತಿಯನ್ನ ಗುರುತಿಸೋಕೆ, ಸುಲಭವಾಗಿ ಕೈದಿ ಅಂತಲೂ ಪರಿಗಣಿಸೋಕೆ, ಅಲಿಯಾಸ್​​ ಅಂತ ಸೇರಿಸ್ತಾರಂತೆ. ಇಲ್ಲಿ ಇನ್ನೂ ಒಂದು ಪ್ರಶ್ನೆ ನಿಮ್ಮನ್ನ ಕಾಡ್ತಾ ಇರಬಹುದು. ದರ್ಶನ್​​​ ಕೂಡ ಎಲ್ಲಾ ರೌಡಿಗಳಂತೆ ಸ್ಲೇಟ್​​ ಹಿಡೀಬೇಕಾ? ಅಂತಾ ಸಭ್ಯತೆಗಳನ್ನ ಅನುಸರಿಸಿಕೊಂಡು, ಧ್ಯಾನ, ಅಥವಾ ಇನ್ಯಾವುದೋ ಶಿಸ್ತು ಕ್ರಮಗಳನ್ನ ಪಾಲಿಸ್ತಾ, ಜಾಮೀನಿ​​ಗಾಗಿ ಟ್ರೈ ಮಾಡ್ತಿದ್ದ ದರ್ಶನ್​ಗೆ, ಈಗ ಮತ್ತೊಂದು ಶಾಕ್​​ ಸಿಕ್ಕಿದೆ. ಪರಪ್ಪನ ಅಗ್ರಹಾರದಿಂದ ದರ್ಶನ್​ರನ್ನ ಬಳ್ಳಾರಿಗೆ ಜೈಲಿಗೆ  ಎತ್ತಿ ಒಗೆಯಲಾಗುತ್ತೆ. ಕೊಲೆ ಕೇಸ್​ ಜೊತೆ ಜೊತೆಗೆ ಮತ್ತೆ ಮೂರು ಕೇಸ್​​ಗಳನ್ನ ತಲೆ ಮೇಲೆ ಹೊತ್ತು ಹೋಗ್ತಿದ್ದಾರೆ ಅಭಿಮಾನಿಗಳ ಚಾಲೆಂಜಿಂಗ್​ ಸ್ಟಾರ್ ದರ್ಶನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment