Advertisment

ಇಂದು ನಿರ್ಧಾರವಾಗಲಿದೆ ದರ್ಶನ್​ ಭವಿಷ್ಯ! ಮತ್ತೆ ಪೊಲೀಸ್​ ಕಸ್ಟಡಿನಾ? ಜೈಲೇ ಗತಿನಾ?

author-image
AS Harshith
Updated On
ಸ್ನಾನ ಇಲ್ಲ, ಜಿಮ್​ ಇಲ್ಲ.. ನೆಲದ ಮೇಲೆ ಕೂರ್ಬೇಕು, ಅನ್ನ ಸಾಂಬರ್​ ತಿನ್ಬೇಕು.. ದರ್ಶನ್​ ಈಗಿನ ಪರಿಸ್ಥಿತಿ ಹೇಗಿದೆ?
Advertisment
  • ಆರೋಪಿಗಳ ಕಸ್ಟಡಿ ಅಂತ್ಯ.. ಇಂದು ಕೋರ್ಟ್​​ಗೆ ಹಾಜರು
  • ಜೂನ್ 11ರಂದು ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ ಬಂಧನ
  • ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಲಿರೋ ನಟ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್​​ನ ತನಿಖೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅಂಡ್ ಗ್ಯಾಂಗ್​ಗೆ ಇವತ್ತು ಕಸ್ಟಡಿ ಅಂತ್ಯವಾಗಲಿದ್ದು ಪೊಲೀಸರು ಕೋರ್ಟ್​​ಗೆ ಹಾಜರುಪಡಿಸಲಿದ್ದಾರೆ. ನಟ ದರ್ಶನ್ ಜೈಲು ಸೇರ್ತಾರಾ ಅಥವಾ ನ್ಯಾಯಾಲಯ ಮತ್ತೆ ಪೊಲೀಸ್ ಕಸ್ಟಡಿಗೆ ನೀಡುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

Advertisment

ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಕೆರಳಿದ್ದ ದರ್ಶನ್ ಅಂಡ್ ಗ್ಯಾಂಗ್ ಹಲ್ಲೆ ಮಾಡಿ ಹತ್ಯೆ ಮಾಡಿರುವ ಆರೋಪವಿದ್ದು ಸಂಕಷ್ಟ ಎದುರಾಗಿದೆ. ಪ್ರಕರಣದ ತನಿಖೆ ಬಹುತೇಕ ಮುಗಿದಿದ್ದು ನ್ಯಾಯಾಲಯದ ತೀರ್ಪಿನ ಮೇಲೆ ನಟ ದರ್ಶನ್ ತೂಗುದೀಪನ ಭವಿಷ್ಯ ತೂಗುಯ್ಯಾಲೆಯಲ್ಲಿ ತೂಗುತ್ತಿದೆ.

publive-image

ಇದನ್ನೂ ಓದಿ: ಪವಿತ್ರಾ ನಟ ದರ್ಶನ್ ಪತ್ನಿನಾ? ಕೋರ್ಟ್‌ಗೆ ಸಲ್ಲಿಸಿರೋ ದಾಖಲೆಯಲ್ಲಿ ಅಸಲಿ ಸತ್ಯ ರಿವೀಲ್; ಏನದು?

ಕೊಲೆ ಪ್ರಕರಣದಲ್ಲಿ ದರ್ಶನ್​ಗೆ ಜೈಲಾ.? ಮತ್ತೆ ಪೊಲೀಸರ ಆತಿಥ್ಯನಾ?

ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಡೆವಿಲ್ ಗ್ಯಾಂಗ್ ಅಂದರ್ ಆಗಿದ್ದು ತನಿಖೆ ಎದುರಿಸ್ತಿದೆ. ಕಳೆದ ಜೂನ್ 11ರಂದು ಅರೆಸ್ಟ್ ಆಗಿದ್ದ ಡಿ ಗ್ಯಾಂಗ್​​​ ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಈಗಾಗಲೇ ನಟ ದರ್ಶನ್ ಅಂಡ್ ಗ್ಯಾಂಗ್​​ಗೆ ಎರಡು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಕಳೆದ 10 ದಿನಗಳಿಂದ ಕಸ್ಟಡಿಯಲ್ಲಿ ಇರುವ ಎಲ್ಲಾ 19 ಮಂದಿ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯ ಆಗಲಿದ್ದು ಇವತ್ತು ಪೊಲೀಸರು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

Advertisment

publive-image

ಇದನ್ನೂ ಓದಿ: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕುತ್ತಿಗೆಗೆ ಗಾಯ; ಅಭಿಮಾನಿಗಳಲ್ಲಿ ಆತಂಕ; ಏನಾಯ್ತು?

ಪೊಲೀಸ್ ಕಸ್ಟಡಿಯಲ್ಲಿ 10 ದಿನ ಕಳೆದಿರುವ ಡಿ ಗ್ಯಾಂಗ್

ಕಳೆದ ಜೂನ್ 11ರಂದು ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಬಂಧನ ಆಗಿತ್ತು. ಪೊಲೀಸ್ ಕಸ್ಟಡಿಯಲ್ಲಿ 10 ದಿನ ಕಳೆದಿರುವ ಡಿ ಗ್ಯಾಂಗ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಚಾ ಹೇಳಿಕೆ ದಾಖಲಿಸಿದ್ದಾರೆ. ಇನ್ನು ಸ್ಥಳ ಮಹಜರು ಸೇರಿ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಹೀಗಾಗಿ ಇವತ್ತು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ರೆ ದರ್ಶನ್ ಅಂಡ್​​ ಗ್ಯಾಂಗ್​​ಗೆ ಜೈಲಾಗಲಿದೆ. ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.

publive-image

ಇದನ್ನೂ ಓದಿ: ಬಿಗ್​ಬಾಸ್ ಮತ್ತೆ ಶುರು; ದೊಡ್ಮನೆಗೆ ಎಂಟ್ರಿ ಕೊಡಲು ಸಜ್ಜಾದ ಮೊದಲ ಸ್ಪರ್ಧಿ ಹೆಸರು ಲೀಕ್‌! ಯಾರದು?

Advertisment

ಇನ್ನು ದರ್ಶನ್ ಅಂಡ್ ಗ್ಯಾಂಗ್ ಕಸ್ಟಡಿ ಭವಿಷ್ಯ ಇಂದು ನಿರ್ಧಾರ ಆಗಲಿದೆ. ಕಳೆದ 10 ದಿನಗಳಿಂದ ಕಸ್ಟಡಿಯಲ್ಲಿರುವ ದರ್ಶನ್​ನನ್ನು ಪೊಲೀಸರು ಒಂದು ಪ್ರಕರಣದಲ್ಲಿ 14 ದಿನ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಈಗಾಗಲೇ 10 ದಿನಗಳನ್ನು ಕಸ್ಟಡಿಯಲ್ಲಿ ಕಳೆದಿರುವ ಹಿನ್ನೆಲೆ ಇನ್ನೂ 4 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಆದರೆ ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

publive-image

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಹೇಗಾಯ್ತು.. ದರ್ಶನ್ ಗ್ಯಾಂಗ್‌ ಪೈಶಾಚಿಕ ಕೃತ್ಯ ಎಂಥದ್ದು? ಇಂಚಿಂಚು ಮಾಹಿತಿ ಇಲ್ಲಿದೆ

ಒಟ್ಟಾರೆ, ಇಂದು ಆರೋಪಿಗಳನ್ನು ಏನಾದ್ರೂ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ರೆ ನಟ ದರ್ಶನ್​ ಜೈಲುಪಾಲಾಗಲಿದ್ದಾರೆ. 2ನೇ ಬಾರಿಗೆ ನಟ ದರ್ಶನ್​ ಜೈಲುಕಂಬಿ ಎಣಿಸಬೇಕಾಗಲಿದೆ. ಸಾರ್ವಜನಿಕ ಜೀವನದಲ್ಲಿ ಮಾದರಿಯಾಗಿ ನಡೆಯಬೇಕಿದ್ದ ನಟ ದರ್ಶನ್​ ಕೊಲೆ ಕೇಸ್​​ನಲ್ಲಿ ಜೈಲುಪಾಲಾಗುವ ಭೀತಿ ಎದುರಾಗಿದೆ. ನಟ ದರ್ಶನ್ ಭವಿಷ್ಯ ಏನಾಗಲಿದೆ ಅನ್ನೋದು ಭಾರಿ ಕುತೂಹಲಕ್ಕೆ ಕಾರಣ ಆಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment