/newsfirstlive-kannada/media/post_attachments/wp-content/uploads/2023/11/dk-shivkumar.jpg)
ಬೆಂಗಳೂರು: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ನಾನ್ಯಾಕೆ ಆ ಹುಡುಗನ ಸೋಲಿಸಲಿ. ನಮ್ಮನೆ ಹುಡುಗ ಇದ್ದಂಗೆ ಅಲ್ವಾ? ಎಂದು ನಿಖಿಲ್ ಕುಮಾರಸ್ವಾಮಿ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನ್ಯೂಸ್ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಮಾತನಾಡಿದರು. 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ, 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ನಿಖಿಲ್ ಕುಮಾರಸ್ವಾಮಿ ಸೋತಿದ್ದರು. ನಿಖಿಲ್ ಸೋಲಿಗೆ ಡಿ.ಕೆ.ಶಿವಕುಮಾರ್ ಕಾರಣ ಅನ್ನೋ ಮಾತುಗಳು ಕೇಳಿಬಂದಿದ್ದವು.
ಇದೇ ವಿಚಾರವನ್ನು ನ್ಯೂಸ್ಫಸ್ಟ್ ಪ್ರಶ್ನೆ ಮಾಡಿದಾಗ ಉತ್ತರಿಸಿದ ಅವರು.. ನಾನು ಸೋಲಿಸಲಿಲ್ಲ. ಮಂಡ್ಯದಲ್ಲಿ ಗೆಲ್ಲಬೇಕು ಅಂತೇಳಿ ಎಷ್ಟು ಹೋರಾಟ ಮಾಡಿದ್ದೀನಿ. ನಮ್ಮ ಕಾರ್ಯಕರ್ತರ ಮೇಲೆ ಎಷ್ಟು ವಿಶ್ವಾಸ ಇಟ್ಟು ಹೋರಾಟ ಮಾಡಿ ಅವರನ್ನು ಬೈದಿದ್ದೇನೆ ಅಂತಾ ನನಗೆ ಗೊತ್ತು. ರಾಮನಗರದಲ್ಲಿ ನನ್ನ ಪಾರ್ಟಿ, ನನ್ನ ಕ್ಯಾಂಡಿಡೇಟ್. ನೀವು ಕ್ಯಾಂಡಿಡೇಟ್ ಮುಖ ನೋಡಬೇಡಿ, ನನ್ನ ಮುಖವನ್ನು ನೋಡಿ ವೋಟ್ ಹಾಕಿ ಎಂದು ಹೇಳಿದ್ದೆ. ನಾನ್ಯಾಕೆ ಆ ಹುಡಗನನ್ನು ಸೋಲಿಸಲಿ. ನಮ್ಮ ಮನೆ ಹುಡುಗನ ಹಾಗೇ ಅಲ್ವಾ. ರಾಜಕಾರಣ ಅದು ನಮ್ಮ ಪಾರ್ಟಿನೇ ಬೇರೆ ಅವರ ಪಾರ್ಟಿನೇ ಬೇರೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ