ಧೋನಿ ಬಳಿ ಇರೋ ಕಾರುಗಳ ಒಟ್ಟು ಬೆಲೆ ಎಷ್ಟು..? ಶಾಕ್ ಆಗ್ತೀರಾ..

ಕ್ರಿಕೆಟ್​​​ ಫೀಲ್ಡ್​ನಿಂದ ದೂರಾಗಿ ರಾಂಚಿಯಲ್ಲಿ ಬೀಡು ಬಿಟ್ಟಿದ್ರೂ ಧೋನಿ ಮಾತ್ರ ಸದಾ ಟ್ರೆಂಡಿಂಗ್​ನಲ್ಲಿರ್ತಾರೆ. ಈಗಲೂ ಅಷ್ಟೇ ಧೋನಿಯ ಜಪ ಜೋರಾಗಿದೆ. ರಾಂಚಿ ಱಂಬೋ ಇದೀಗ ತನ್ನ ಸ್ಪೆಷಲ್​​​​ ಕಾರನ್ನೇರಿ ರಾಂಚಿ ರೌಂಡ್ಸ್​​ ಹೊಡೆದಿದ್ದಾರೆ. ತಲಾ ದರ್ಶನ ಪಡೆದ ಫ್ಯಾನ್ಸ್​ ಫುಲ್​ ಥ್ರಿಲ್​ ಆಗಿದ್ದಾರೆ.

author-image
Ganesh Kerekuli
Dhoni car creaze (3)
Advertisment

ಕ್ರಿಕೆಟ್​​​ ಫೀಲ್ಡ್​ನಿಂದ ದೂರಾಗಿ ರಾಂಚಿಯಲ್ಲಿ ಬೀಡು ಬಿಟ್ಟಿದ್ರೂ ಧೋನಿ ಮಾತ್ರ ಸದಾ ಟ್ರೆಂಡಿಂಗ್​ನಲ್ಲಿರ್ತಾರೆ. ಈಗಲೂ ಅಷ್ಟೇ ಧೋನಿಯ ಜಪ ಜೋರಾಗಿದೆ. ರಾಂಚಿ ಱಂಬೋ ಇದೀಗ ತನ್ನ ಸ್ಪೆಷಲ್​​​​ ಕಾರನ್ನೇರಿ ರಾಂಚಿ ರೌಂಡ್ಸ್​​ ಹೊಡೆದಿದ್ದಾರೆ. ತಲಾ ದರ್ಶನ ಪಡೆದ ಫ್ಯಾನ್ಸ್​ ಫುಲ್​ ಥ್ರಿಲ್​ ಆಗಿದ್ದಾರೆ. 

ನಾನೇ ಬೇರೆ ನನ್ನ ಸ್ಟೈಲೆ ಬೇರೆ ಅನ್ನೋ ಮಾತಿದ್ಯಲ್ಲ. ಈ ಮಾತು ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​​ ಎಮ್​.ಎಸ್​​ ಧೋನಿ ಸಖತ್​ ಆಗಿ ಸೂಟ್​​​ ಆಗುತ್ತೆ. ಧೋನಿ ಯಾವಾಗಲೂ ಹಾಗೆಯೇ. ಅನ್​​ಪ್ರಿಡಿಕ್ಟಬಲ್​! ತನಗನ್ನಿಸಿದ್ದನ್ನ ಮಾಡಬೇಕು, ತನ್ನಿಷ್ಟದಂತೆ ಬದುಕಬೇಕು ಅನ್ನೋದು ಧೋನಿಯ ಥೇರಿ. ಧೋನಿ ಬದುಕುತ್ತ ಇರೋದು ಹಾಗೇನೇ. 

ರಾಂಚಿ ರಸ್ತೆಯಲ್ಲಿ ತಲಾ ಧೋನಿ ದರ್ಶನ

2025ರ IPL ಅಂತ್ಯದ ಬಳಿಕ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ರಿಯಲ್​ ಕಿಂಗ್​ ಧೋನಿ ಹೋಮ್​​ಟೌನ್​ ರಾಂಚಿ ಸೇರಿದ್ದಾರೆ. ತಮ್ಮ ಫಾರ್ಮ್​ ಹೌಸ್​ನಲ್ಲಿ ಬೀಡು ಬಿಟ್ಟಿರೋ ಮಾಹಿ, ಕುಟುಂಬದ ಜೊತೆ ಟೈಮ್​ ಸ್ಪೆಂಡ್​ ಮಾಡ್ತಾ ಬಿಡುವಿನ ಸಮಯವನ್ನ ಎಂಜಾಯ್​ ಮಾಡ್ತಿದ್ದಾರೆ. ತನಗೇನು ಇಷ್ಟ ಅನ್ನೋದನ್ನ ತಡ ಮಾಡದೇ ಮಾಡೋ ಧೋನಿ, ತನ್ನ ಹಮ್ಮರ್​ ಕಾರನ್ನೇರಿ ರಾಂಚಿ ರೌಂಡ್ಸ್​​​​ ಹೊಡೆದಿದ್ದಾರೆ.

ಇದನ್ನೂ ಓದಿ:ಮಹಿಳೆಯರೇ ಗಮನಿಸಿ.. ಕಪಾಟಿನಲ್ಲಿಟ್ಟ ಸೀರೆಗಳು ಹಾಳಾಗಬಾರದಾ? ಸೇಫ್​ ಆಗಿರಿಸಲು ಹೀಗೆ ಮಾಡಿ..

Dhoni car creaze

1.5 ಕೋಟಿ ಬೆಲೆಯ ಈ ಐಷಾರಾಮಿ ಹಮ್ಮರ್ ಕಾರನ್ನು ಕೆಲ ದಿನಗಳ ಹಿಂದಷ್ಟೇ ಧೋನಿ ಮಿಲಿಟರಿ ಲುಕ್​ಗೆ ಬದಲಾಯಿಸಿದ್ದಾರೆ. ಆರ್ಮಿ ಗ್ರೀನ್​​ ಕಲರ್​​ ಪೇಂಟ್​ ಮಾಡಿರೋ ಕಾರಿನ ಮೇಲೆ ಸೇನಾ ಹೆಲಿಕಾಪ್ಟರ್​ ಹಾಗೂ ಸೈನಿಕನ ಚಿತ್ರ ಬಿಡಿಸಲಾಗಿದೆ. ಈ ಮೂಲಕ ದೇಶಭಕ್ತಿಯನ್ನ ಮೆರೆದಿರೋ ಧೋನಿ ನೆಚ್ಚಿನ ಕಾರನ್ನೇರಿ ರಾಂಚಿಯಲ್ಲಿ ಜಾಲಿ ರೈಡ್​ ಹೋಗಿದ್ದಾರೆ.

ಐಷಾರಾಮಿ ಕಾರುಗಳಂದ್ರೆ ಧೋನಿಗೆ ಇಷ್ಟ

ಒಂದು, ಎರಡು, ಮೂರು. ಅಬ್ಬಬ್ಬಾ ಅಂದ್ರೆ 7-8 ಐಷಾರಾಮಿ ಕಾರುಗಳನ್ನ ಹೊಂದಿರುವವರ ಬಗ್ಗೆ ನಾವು ಕೇಳಿದ್ದಿವಿ, ನೋಡಿದ್ದಿವಿ.  ಈ ಧೋನಿಗೆ ಕಾರ್​ ಅಂದ್ರೆ ಅದೇನೋ ವಿಚಿತ್ರವಾದ ಆಸಕ್ತಿ. ಒಂದಲ್ಲ, ಎರಡಲ್ಲ.. 20ಕ್ಕೂ ಅಧಿಕ ಐಷಾರಾಮಿ ಕಾರುಗಳನ್ನ ಧೋನಿ ಹೊಂದಿದ್ದಾರೆ. ಇದಲ್ಲದೇ ಹಲವು ವಿಂಟೇಜ್​ ಕಾರುಗಳ ಕಲೆಕ್ಷನ್​ ಕೂಡ ಧೋನಿ ಬಳಿಯಿದೆ. 

ಇದನ್ನೂ ಓದಿ: ಗಣೇಶನಿಗೆ ಇಷ್ಟವಾದ ಮೋದಕ ಜಸ್ಟ್ 10 ನಿಮಿಷದಲ್ಲಿ ಮಾಡೋದು ಹೇಗೆ?

Dhoni car creaze (1)

ಧೋನಿ ಬಳಿ ಇರೋ ಕಾರುಗಳ ಒಟ್ಟು ಬೆಲೆ ಎಷ್ಟು?

ನಂಬೋಕೆ ಕಷ್ಟ ಅನಿಸಿದ್ರೂ ಇದು ಸತ್ಯ. ರೋಲ್ಸ್​ ರಾಯ್ಸ್​, ಫೆರಾರಿ, ಲ್ಯಾಂಡ್​​ ರೋವರ್​, ಆಡಿ, ಜೀಪ್​, ಮರ್ಸಿಡೀಸ್​ ಬೆಂಜ್​​​ ಸೇರಿದಂತೆ ಪ್ರಖ್ಯಾತ ಬ್ರ್ಯಾಂಡ್​ಗಳ ದುಬಾರಿ ಕಾರುಗಳೆಲ್ಲಾ ಧೋನಿ ಬಳಿ ಇವೆ. ಇದಲ್ಲದೇ ಅಂಬಾಸಿಡರ್​, ಪ್ರೀಮಿಯರ್​​ ಪದ್ಮಿನಿಯಂತಹ ವಿಂಟೇಜ್​ ಕಾರುಗಳಿಗೆ ಧೋನಿ ಒಡೆಯನಾಗಿದ್ದಾರೆ. ಒಟ್ಟಾರೆ ಧೋನಿ ಬಳಿ ಇರೋ ಕಾರುಗಳ ಮೌಲ್ಯ 100 ಕೋಟಿಗೂ ಅಧಿಕ.

ಧೋನಿ ಬಳಿ ಎಷ್ಟು ಬೈಕ್​ ಇವೆ ಗೊತ್ತಾ?

ಈ ಹಿಂದೊಮ್ಮೆ ಕ್ರಿಕೆಟ್​ನಲ್ಲಿ ಫುಲ್​ ಬ್ಯುಸಿಯಾಗಿದ್ದ ಸಮಯದಲ್ಲೇ 50ಕ್ಕೂ ಹೆಚ್ಚು ಬೈಕ್​ಗಳು ಧೋನಿ ಗ್ಯಾರೇಜ್​ನಲ್ಲಿದ್ವು. 50 ಬೈಕ್​ ಇವೆ ಅಂತಾ ಸ್ವತಃ ಹೇಳಿಕೊಂಡಿದ್ರು.  ಎಮ್​​.ಎಸ್​​ ಧೋನಿಯ ಬಯೋಪಿಕ್​ ಶೂಟಿಂಗ್​ ಟೈಮ್​ನಲ್ಲಿ 75 ಬೈಕ್​ ಇವೆ ಎಂದು ನಟ ಸುಶಾಂತ್​ ಸಿಂಗ್​ ರಜಪೂತ್​ ಪಕ್ಕಾ ಲೆಕ್ಕ ಹೇಳಿದ್ರು. ಸದ್ಯದ ಮಾಹಿತಿ ಪ್ರಕಾರ ಮಾಹಿ ಬಳಿಯಿರೋ ಬೈಕ್​ ಸಂಖ್ಯೆ 120ರ ಗಡಿ ದಾಟಿದೆ.

ಇದನ್ನೂ ಓದಿ:KL ರಾಹುಲ್, ಪ್ರಸಿದ್ಧ್​ ಕೃಷ್ಣ, ಸಿರಾಜ್​​ಗೆ 2 ತಿಂಗಳು ಸುದೀರ್ಘ ವಿಶ್ರಾಂತಿ..

Dhoni car creaze (2)



ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್​ ಇರುತ್ತೆ ಹಾಗೇ ಧೋನಿಗೆ ಬೈಕ್​ ಮತ್ತು ಕಾರ್​ ವಿಪರೀತ ಕ್ರೇಜ್​ ಇದೆ. ವಯಸ್ಸಾದಂತೆ ವರ್ಷದಿಂದ ವರ್ಷಕ್ಕೆ ಈ ಕ್ರೇಜ್​ ಹೆಚ್ಚಾಗುತ್ತಲೇ ಇದೆ. ಸದ್ಯ ಸುದ್ದಿ ಏನ್​ ಗೊತ್ತಾ? ಎಲೆಕ್ಟ್ರಿಕ್​ ಕಾರು ಮತ್ತು ಬೈಕ್​ಗಳ ಖರೀದಿಯತ್ತ ಇದೀಗ ಧೋನಿ ಆಸಕ್ತಿ ಬಂದಿದೆಯಂತೆ. ಕೆಲವೇ ದಿನಗಳಲ್ಲಿ ಧೋನಿ ಗ್ಯಾರೇಜ್​ಗೆ​ ಇನ್ನಷ್ಟು ವಾಹನಗಳ ಎಂಟ್ರಿ ಪಕ್ಕಾ.

ಇದನ್ನೂ ಓದಿ: ಇ-ಖಾತಾ ಅಂದ್ರೆ ಏನು? ಇ-ಖಾತಾ ಪಡೆಯಲು ಏನೇನು ದಾಖಲೆ ಬೇಕು?

Dhoni car creaze (5)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MS Dhoni investment MS Dhoni defamation case MS Dhoni MS Dhoni car craze
Advertisment