Advertisment

ನೋಡ ನೋಡುತ್ತಿದ್ದಂತೆ ಬಸ್ ಅಡಿ ಸಿಲುಕಿ ವ್ಯಕ್ತಿ ಸಾವು; ಅಸಲಿಗೆ ಆಗಿದ್ದೇನು?

author-image
Veena Gangani
Updated On
ನೋಡ ನೋಡುತ್ತಿದ್ದಂತೆ ಬಸ್ ಅಡಿ ಸಿಲುಕಿ ವ್ಯಕ್ತಿ ಸಾವು; ಅಸಲಿಗೆ ಆಗಿದ್ದೇನು?
Advertisment
  • ರಂಗಸ್ವಾಮಿ ಚಾಮರಾಜನಗರ ತಾಲೂಕಿನ ಯಲಕ್ಕೂರು ನಿವಾಸಿ
  • ಮೃತ ವ್ಯಕ್ತಿಯು ಮಾನಸಿಕ ಖಿನ್ನತೆಗೆ ಒಳಗಾಗಿರುವುದಾಗಿ ಶಂಕೆ!
  • ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ

ಚಾಮರಾಜನಗರ: ವ್ಯಕ್ತಿಯೋರ್ವ ಚಲಿಸುತ್ತಿದ್ದ ಬಸ್​ನ ಹಿಂಬದಿ ಚಕ್ರಕ್ಕೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಗರ ಬಸ್ ನಿಲ್ದಾಣದ ಬಳಿ ನಡೆದಿದೆ. ರಂಗಸ್ವಾಮಿ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

Advertisment

ರಂಗಸ್ವಾಮಿ ಎಂಬ ವ್ಯಕ್ತಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ರಂಗಸ್ವಾಮಿ ಚಾಮರಾಜನಗರ ತಾಲೂಕಿನ ಯಲಕ್ಕೂರು ನಿವಾಸಿ. ಕೆಎಸ್​​ಆರ್​ಟಿಸಿ ಬಸ್​ನ ಹಿಂಬದಿಯ ಚಕ್ರಕ್ಕೆ ಬೀಳುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಚಾಮರಾಜನಗರ ಟೌನ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಚಾಮರಾಜನಗರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment