/newsfirstlive-kannada/media/media_files/2025/08/18/rahul-gandhi-2025-08-18-07-52-12.jpg)
ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಮತಕಳ್ಳತನದ ಮೂಲಕ ಅಧಿಕಾರಕ್ಕೇರಿದ್ದಾರೆ. ಇದರ ಹಿಂದೆ ಕೇಂದ್ರ ಚುನಾವಣಾ ಆಯೋಗ ಕೈವಾಡ ಅನ್ನೋ ಮತಗಳ್ಳತನ ಆರೋಪಕ್ಕೆ ವಿಪಕ್ಷಗಳು ಕೈ ಜೋಡಿಸಿ ಹೋರಾಟಕ್ಕಿಳಿದಿದೆ. ಇದರ ನಡುವೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಎಚ್ಚರಿಕೆಯೊಂದನ್ನ ಕೊಟ್ಟಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.
ರಾಹುಲ್ ಗಾಂಧಿ ಮಾಡಿರೋ ಆರೋಪ ಎಲೆಕ್ಷನ್ ಕಮೀಷನ್ಗೆ ಮೈ ಮೇಲೆ ಇರುವೆ ಬಿಟ್ಟಂತೆ ಆಗಿದೆ. ದೇಶಾದ್ಯಂತ ರಾಹುಲ್ ಗಾಂಧಿ ಹಾಗೂ ವಿಪಕ್ಷಗಳು ಮತಕಳ್ಳತನ ಆರೋಪ.. ಮಾಡ್ತಿರೋ ಪ್ರತಿಭಟನೆ ಇದೇ ಚುನಾವಣಾ ಆಯೋಗದ ನಿದ್ದೆ ಕಿತ್ಕೊಂಡಿದೆ. ಈ ಬೆನ್ನಲ್ಲೇ ಎಂಟ್ರಿ ಕೊಟ್ಟ ಆಯೋಗದ ಅಧಿಕಾರಿಗಳು ರಾಹುಲ್ಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.
ಇದನ್ನೂ ಓದಿ:ದೆಹಲಿಗೆ ಬಂದಿಳಿದ ಗಗನಯಾತ್ರಿ ಶುಕ್ಲಾಗೆ ಅದ್ದೂರಿ ಸ್ವಾಗತ.. ಬರಮಾಡಿಕೊಂಡ ಕ್ಷಣ ಹೇಗಿತ್ತು..? Video
ರಾಹುಲ್ ಗಾಂಧಿ ಮಾಡಿದ ಮತ ಕಳ್ಳತನ ಆರೋಪ ಕುರಿತು ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಮೂಲಕ ಉತ್ತರ ನೀಡಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ, ಮತದಾರರನ್ನ ದಾರಿ ತಪ್ಪಿಸುವ ಕೆಲಸವಾಗುತ್ತಿದೆ ಎಂದು ಆಯೋಗ ಹೇಳಿದೆ.
ಇದನ್ನೂ ಓದಿ:ಕಣಿವೆ ನಾಡಿನಲ್ಲಿ ಮತ್ತೊಂದು ಭೀಕರ ಮೇಘಸ್ಫೋಟ; ಗುಡ್ಡ ಕುಸಿದು ಭಾರೀ ಅನಾಹುತ
ಚುನಾವಣಾ ಆಯೋಗ ಹೇಳಿದ್ದೇನು?
- ರಾಹುಲ್ ಗಾಂಧಿ ಮಾಡಿರುವ ಆರೋಪಗಳು ಆಧಾರ ರಹಿತ
- ಸುಳ್ಳು ಆರೋಪಗಳು ಎಂದ ಮುಖ್ಯ ಚುನಾವಣಾ ಆಯುಕ್ತ
- ಒಂದು ವೇಳೆ ನಿಮ್ಮ ಆರೋಪಗಳಿಗೆ ಪುರಾವೆ ಇದ್ದರೆ ಕೊಡಿ
- ಮುಂದಿನ 7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಿ ಎಂದು ಸೂಚನೆ
- ಇಲ್ಲದಿದ್ದರೆ ಇಡೀ ದೇಶಕ್ಕೆ ಕ್ಷಮೆಯಾಚಿಸಿ ಎಂದು ಸವಾಲು
ಈ ಸವಾಲುಗಳ ಯುದ್ಧದ ನಡುವೆ ಮತಗಳವು ಆರೋಪಕ್ಕೆ ಸಂಬಂಧಿಸಿದಂತೆ ಹೋರಾಟ ತೀವ್ರಗೊಂಡಿದ್ದು, ಬೆಂಗಳೂರು ಮತ್ತು ದೆಹಲಿಯಲ್ಲಿ ಪ್ರತಿಭಟನೆ ಬಳಿಕ ಈಗ ಬಿಹಾರದಲ್ಲಿ ಮತದಾರರ ಹಕ್ಕುಗಳ ಯಾತ್ರೆಗೆ ಇಂಡಿಯಾ ಒಕ್ಕೂಟದ ನಾಯಕರು ಚಾಲನೆ ನೀಡಿದ್ದಾರೆ. ಈ ಯಾತ್ರೆಯು 16 ದಿನಗಳ ಕಾಲ ನಡೆಯಲಿದ್ದು, ಸಾವಿರದ 300 ಕಿಲೋ ಮೀಟರ್ ಉದ್ದದ ಮತದಾರ ಅಧಿಕಾರ ಯಾತ್ರೆಗೆ ಸೆಪ್ಟೆಂಬರ್ 1 ಕ್ಕೆ ಅಂತ್ಯಕಾಣಲಿದ್ದು, ಪಾಟ್ನಾದಲ್ಲಿ ಸಮಾರೋಪ ನಡೆಯಲಿದೆ.
ಇದನ್ನೂ ಓದಿ:NDA ಇಂದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲರ ಹೆಸರು ಘೋಷಣೆ
ಬಿಹಾರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಆಯೋಗ ಅಫಿಡವಿಟ್ ಸಲ್ಲಿಸಲು ನನ್ನನ್ನ ಕೇಳಿದೆ. ಚುನಾವಣಾ ಆಯೋಗ ಬಿಜೆಪಿ ಜೊತೆ ಸೇರಿಕೊಂಡು ಜೀವಂತವಾಗಿರುವ ಮತದಾರರನ್ನು ಸತ್ತವರೆಂದು ಘೋಷಿಸುತ್ತಿದೆ. ನಾನು ಇತ್ತೀಚಿಗೆ ದಿಲ್ಲಿಯ ನನ್ನ ಮನೆಯಲ್ಲಿ ಬಿಹಾರದ ಕೆಲವು ಮತದಾರರೊಂದಿಗೆ ಚಹಾ ಸೇವಿಸಿದೆ. ಚುನಾವಣಾ ಆಯೋಗದ ದಾಖಲೆಯ ಪ್ರಕಾರ ಅವರೆಲ್ಲರೂ ಸತ್ತಿದ್ದಾರೆ. ಹಾಗಿದ್ದರೆ ನಾನು ಸತ್ತ ಜನರೊಂದಿಗೆ ಕುಳಿತು ಚಹಾ ಸೇವಿಸಿದೆನಾ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಾರವಾಗಿ ಪ್ರಶ್ನಿಸಿದ್ದಾರೆ.
ಎಲೆಕ್ಷನ್ ಕಮಿಷನ್ ಎಚ್ಚರಿಕೆಯ ನಡುವೆಯೂ ಕಾಂಗ್ರೆಸ್ ಹೋರಾಟದ ಹಾದಿ ತುಳಿದಿದೆ.. ಈ ಆರೋಪಕ್ಕೆ ಯಾವುದೇ ದಾಖಲೆಗಳನ್ನ ಕೊಡ್ತಿಲ್ಲ ಅಂತಾ ಚುನಾವಣಾ ಆಯೋಗ ಹೇಳ್ತಿದೆ. ಇದೊಂಥರ ನಾ ಕೊಡೆ ನೀ ಬಿಡೆ ಎಂಬಾತಗಿದೆ. ಇದು ಎಲ್ಲಿ ಹೋಗಿ ನಿಲ್ಲತ್ತೋ ಕಾದು ನೋಡಬೇಕಿದೆ.
ಇದನ್ನೂ ಓದಿ: ಕ್ರಿಕೆಟರ್ಸ್ ಪ್ರಸಿದ್ಧ ಮಹಾಕಾಳೇಶ್ವರನ ಮೊರೆ ಹೋಗುವುದು ಯಾಕೆ..? ಸನ್ನಿಧಿಯಲ್ಲಿ ಹೆಡ್ ಕೋಚ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ