/newsfirstlive-kannada/media/media_files/2025/08/14/independence-day-2025-4-2025-08-14-21-37-57.jpg)
ಭಾರತ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಕರೆಯಲ್ಪಡುವ ಭಾರತವು ಒಂದು ಕಾಲದಲ್ಲಿ ಬ್ರಿಟಿಷರ ವಸಾಹತುವಾಗಿತ್ತು. ದೊಡ್ಡ, ದೊಡ್ಡ ಮತ್ತು ಶಕ್ತಿಯುತ ದೇಶಗಳು ಸಣ್ಣ ದೇಶಗಳನ್ನು ಆಕ್ರಮಿಸಿ ಅವುಗಳ ಮೇಲೆ ಆಳ್ವಿಕೆ ನಡೆಸುತ್ತಿದ್ದವು.
ಬ್ರಿಟಿಷರ ಮುಷ್ಟಿಯಿಂದ ತಪ್ಪಿಸಿಕೊಂಡು ಸ್ವಾತಂತ್ರ್ಯ ಪಡೆಯಲು ಭಾರತ ದೀರ್ಘ ಕಾಲದವರೆಗೆ ಹೋರಾಟ ನಡೆಸಿತ್ತು. ಇದಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು. ಸ್ವಾತಂತ್ರ್ಯ ಹೋರಾಟಗಾರರು 1930ರಲ್ಲಿಯೇ ದೇಶದಲ್ಲಿ ಸ್ವಾತಂತ್ರ್ಯ ಘೋಷಿಸಿದ್ದರು. ಆದರೆ ಸಂಪೂರ್ಣ ಸ್ವಾತಂತ್ರ್ಯವನ್ನು 15 ಆಗಸ್ಟ್ 1947 ರಂದು ಸಾಧಿಸಲಾಯಿತು.
ಇದನ್ನೂ ಓದಿ: ಮೂರನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ ದರ್ಶನ್.. ಪವಿತ್ರ ಗೌಡ ಕೂಡ ಕಂಬಿ ಹಿಂದೆ..
/filters:format(webp)/newsfirstlive-kannada/media/media_files/2025/08/14/independence-day-2025-2025-08-14-21-09-55.jpg)
ಸ್ವಾತಂತ್ರ್ಯಕ್ಕಾಗಿ ಆಗಸ್ಟ್ 15 ಅನ್ನು ನಿರ್ಧರಿಸಿದ್ದು ಹೇಗೆ?
ಫ್ರೆಂಚ್ ಬರಹಗಾರ ಡೊಮಿನಿಕ್ ಲ್ಯಾಪಿಯರ್ (Dominique Lapierre) ಮತ್ತು ಲ್ಯಾರಿ ಕಾಲಿನ್ಸ್ (Larry Collins) ಅವರ ‘ಫ್ರೀಡಮ್ ಅಟ್ ಮಿಡ್​ನೈಟ್’ ಪುಸ್ತಕದಲ್ಲಿ ಭಾರತದ ಸ್ವಾತಂತ್ರ್ಯದ ದಿನಾಂಕವನ್ನು ಉಲ್ಲೇಖಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ನೀಡುವ ಸಂಬಂಧ ಅನೇಕ ಸಭೆಗಳು ನಡೆದವು. ಅಂದಿನ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್.. ಭಾರತದ ಸ್ವಾತಂತ್ರ್ಯದ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಭಾರತಕ್ಕೆ ಸ್ವಾತಂತ್ರ್ಯದ ದಿನಾಂಕ ನಿಗದಿಪಡಿಸಿದ್ದೀರಾ ಎಂಬ ಪ್ರಶ್ನೆ ಕೇಳಲಾಗಿತ್ತು.
ಇದನ್ನೂ ಓದಿ: ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ, 40 ಮಂದಿ ದುರಂತ ಅಂತ್ಯ.. 220 ಮಂದಿ ನಾಪತ್ತೆ
/filters:format(webp)/newsfirstlive-kannada/media/media_files/2025/08/14/independence-day-2025-2-2025-08-14-21-25-06.jpg)
ಅದಕ್ಕೆ ಮೌಂಟ್‌ಬ್ಯಾಟನ್ ಬಳಿ ಉತ್ತರ ಇರಲಿಲ್ಲ. ಆದರೂ ಅದಕ್ಕೆ ಉತ್ತರಿಸುವುದು ಅಗತ್ಯವೆಂದು ಬ್ಯಾಟನ್ ಭಾವಿಸಿದ್ದರು. ಹೀಗಾಗಿ ಮುಂದುವರಿದು ಎರಡನೇ ಮಹಾಯುದ್ಧದ ಬಗ್ಗೆ ಪ್ರಸ್ತಾಪ ಮಾಡಿದರು. ಎರಡನೆಯ ಮಹಾಯುದ್ಧದಲ್ಲಿ ಜಪಾನ್ ತನಗೆ ಶರಣಾದ 15 ಆಗಸ್ಟ್ 1945ರ ದಿನವನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದ್ದರು. ಎರಡನೇ ವಿಶ್ವಯುದ್ಧದ ವೇಳೆ ಮೌಂಟ್‌ಬ್ಯಾಟನ್ ಆಗ್ನೇಯ ಏಷ್ಯಾದ ಕಮಾಂಡರ್‌ಗಳ ಮುಖ್ಯಸ್ಥರಾಗಿದ್ದರು.
ಇದನ್ನೂ ಓದಿ: ಪೂಜೆ ಮಾಡಿ ಅಮ್ಮನ ತಬ್ಬಿ ಕಣ್ಣೀರಿಟ್ಟ ಪವಿತ್ರ ಗೌಡ.. ಅರೆಸ್ಟ್ ಮಾಡುವ ಮುನ್ನ ನಡೆದಿದ್ದು ಏನು..?
/filters:format(webp)/newsfirstlive-kannada/media/media_files/2025/08/14/independence-day-2025-3-2025-08-14-21-41-09.jpg)
ಎರಡನೇ ಮಹಾಯುದ್ಧದ ದಿನವನ್ನು ನೆನಪಿಸಿಕೊಂಡ ಮೌಂಟ್​ಬ್ಯಾಟನ್, ಭಾರತದ ಸ್ವಾತಂತ್ರ್ಯದ ದಿನಾಂಕವನ್ನು ಆಗಸ್ಟ್ 15, 1947 ಎಂದು ನಿಗದಿಪಡಿಸಿದರು. ಅದು ತಕ್ಷಣ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಘೋಷಣೆಯ ನಂತರ ಬ್ರಿಟಿಷ್ ಸಂಸತ್ತು ‘ಭಾರತೀಯ ಸ್ವಾತಂತ್ರ್ಯ ಕಾಯಿದೆ-1947’ ಅನುಮೋದನೆ ನೀಡಿತು. ‘ಭಾರತೀಯ ಸ್ವಾತಂತ್ರ್ಯ ಕಾಯಿದೆ 1947' ಅಡಿಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. 18 ಜುಲೈ 1947 ರಂದು ಬ್ರಿಟಿಷ್ ಸಂಸತ್ತಿನ ಎರಡೂ ಸದನಗಳು ಈ ಕಾಯಿದೆಯನ್ನು ಅಂಗೀಕರಿಸಿದ್ದವು. ಈ ಕಾಯಿದೆಯ ಅಡಿಯಲ್ಲಿ ಬ್ರಿಟಿಷ್ ಸರ್ಕಾರ ಆಗಸ್ಟ್ 15, 1947 ರಂದು ಭಾರತದಿಂದ ತನ್ನ ವಸಾಹತುವನ್ನು ಕೊನೆಗೊಳಿಸಿದೆ.
ಇದನ್ನೂ ಓದಿ: ‘ಹೇಗಿದ್ದೀರಾ ಸರ್..’ ಅರೆಸ್ಟ್ ವೇಳೆ ದರ್ಶನ್ ಏನ್ಮಾಡಿದರು? ಬಂಧನ​ ಪ್ರಕ್ರಿಯೆ ಹೇಗಿತ್ತು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us