ತೋಶಖಾನಾ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಇಮ್ರಾನ್ ಖಾನ್
ಇಮ್ರಾನ್ ಖಾನ್ ಪರ ಇಸ್ಲಾಮಾಬಾದ್ ಹೈಕೋರ್ಟ್ ಮಹತ್ವದ ಆದೇಶ
ಚುನಾವಣಾ ಹೊಸ್ತಿಲಲ್ಲಿ ಇಮ್ರಾನ್ ಖಾನ್ಗೆ ಬಿಗ್ ರಿಲೀಫ್
ತೋಶಖಾನಾ ವಂಚನೆ ಪ್ರಕರಣದಲ್ಲಿ ತಗಲಾಕಿಕೊಂಡಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಇಸ್ಲಾಮಾಬಾದ್ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೀಗ ಇಸ್ಲಾಮಾಬಾದ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಇಮ್ರಾನ್ ಖಾನ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ಇಸ್ಲಾಮಾಬಾದ್ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಇಮ್ರಾನ್ ಖಾನ್ ಜೈಲು ಶಿಕ್ಷೆಯ ಜೊತೆಗೆ 1 ಲಕ್ಷ ರೂಪಾಯಿ ದಂಡವಿಧಿಸಿತ್ತು. ಐದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಹೇಳಿತ್ತು. ಆದರೀಗ ಹೈಕೋರ್ಟ್ ಆ ಆದೇಶವನ್ನು ತಲ್ಲಿಹಾಕಿದೆ. ಹೀಗಾಗಿ ಚುನಾವಣಾ ಹೊಸ್ತಿಲಲ್ಲಿ ಇಮ್ರಾನ್ ಖಾನ್ಗೆ ಬಿಗ್ ರಿಲೀಫ್ ಸಿಕ್ಕಿದೆ.
ಇನ್ನು ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆ ಮಾಡಲು ಪಾಕ್ ಪಿಎಂ ಶೆಹಬಾಜ್ ಷರೀಫ್ ಯೋಚಿಸಿದ್ದರು. ಆದರೀಗ ಇಮ್ರಾನ್ ಖಾನ್ ಮತ್ತೆ ಚುನಾವಣೆಗೆ ನಿಲ್ಲುವ ಮುನ್ಸೂಚನೆ ಎದ್ದು ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ