ರಾಹುಲ್ ಗಾಂಧಿಗೆ ಸವಾಲು ಹಾಕಿದ ಚುನಾವಣಾ ಆಯೋಗ.. ಆರೋಪ ಸಾಬೀತು ಮಾಡಿ ಇಲ್ಲವೇ ಕ್ಷಮೆ ಕೇಳಿ..!

ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ಭರ್ಜರಿ ಱಲಿ ನಡೆಸಿದ್ದಾರೆ. ಆದರೇ, ಹತ್ತಿರದಲ್ಲೇ ಇದ್ದ ಚುನಾವಣಾ ಆಯೋಗದ ಸಿಇಓ ಕಚೇರಿಗೆ ಹೋಗಿ ಘೋಷಣಾ ಪತ್ರಕ್ಕೆ ಸಹಿ ಹಾಕಿ ಮತ ಕಳವು ಬಗ್ಗೆ ದೂರು ನೀಡಿಲ್ಲ . ಹೀಗಾಗಿ ಈಗ ಚುನಾವಣಾ ಆಯೋಗ ರಾಹುಲ್ ಗೆ ನೇರ ಸವಾಲು ಹಾಕಿದೆ

author-image
Chandramohan
CM_SIDDARAMAIAH
Advertisment
  • ರಾಹುಲ್ ಗಾಂಧಿಗೆ ಸವಾಲು ಹಾಕಿದ ಚುನಾವಣಾ ಆಯೋಗ
  • ನಿಮ್ಮ ಆರೋಪ ಸಾಬೀತು ಮಾಡಿ ಇಲ್ಲವೇ ದೇಶದ ಕ್ಷಮೆ ಕೇಳಿ
  • ಘೋಷಣಾ ಪತ್ರಕ್ಕೆ ಸಹಿ ಹಾಕಿ ನಿರ್ದಿಷ್ಟ ಕೇಸ್ ಗಳ ಬಗ್ಗೆ ದೂರು ನೀಡಲಿ ಎಂದಿದ್ದ ECI

ಚುನಾವಣಾ ಆಯೋಗದ ವಿರುದ್ಧ ಮತಕಳವು ಆರೋಪ ಮಾಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೇರ ಸವಾಲು ಹಾಕಿದೆ. ರಾಹುಲ್ ಗಾಂಧಿ ತಮ್ಮ ಆರೋಪದ  ಬಗ್ಗೆ ಘೋಷಣಾ ಪತ್ರಕ್ಕೆ ಸಹಿ ಹಾಕಿ ಚುನಾವಣಾ ಆಯೋಗಕ್ಕೆ ದೂರು ನೀಡಲಿ ಇಲ್ಲವೇ ಸುಳ್ಳು, ಆಧಾರ ರಹಿತ ಆರೋಪ ಮಾಡಿದ್ದಕ್ಕಾಗಿ ದೇಶದ ಕ್ಷಮೆ ಕೇಳಲಿ ಎಂದು ಚುನಾವಣಾ ಆಯೋಗ ಹೇಳಿದೆ. 

ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ವಿರುದ್ಧ ಱಲಿ ನಡೆಸಿದ ಬಳಿಕ ಕಾಂಗ್ರೆಸ್ ನಿಯೋಗ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಸಿಇಓ ಭೇಟಿಯಾಗಲು ಸಮಯಾವಕಾಶ ಕೇಳಿತ್ತು. ರಾಜ್ಯ ಚುನಾವಣಾ ಆಯೋಗದ ಸಿಇಓ ಸಮಯಾವಕಾಶ ಕೂಡ ನೀಡಿದ್ದರು. ರಾಹುಲ್ ಗಾಂಧಿ ತಾವೇ ಖುದ್ದಾಗಿ ಹೋಗಿ ಘೋಷಣಾ ಪತ್ರಕ್ಕೆ ಸಹಿ ಹಾಕಿ ಚುನಾವಣಾ ಆಯೋಗಕ್ಕೆ ದೂರು ನೀಡಿಲ್ಲ. ಬೆಂಗಳೂರಿನ ಫ್ರೀಡಂ ಪಾರ್ಕ್ ಱಲಿ ಮುಗಿಸಿಕೊಂಡು ಸದಾಶಿವನಗರದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ರಾಹುಲ್ ಗಾಂಧಿ  ಭೇಟಿ ನೀಡಿದ್ದರು. ಬಳಿಕ ತಾಜ್ ವೆಸ್ಟ್ ಎಂಡ್ ಹೋಟೇಲ್ ಗೆ ವಿಶ್ರಾಂತಿಗೆ ತೆರಳಿ, ಬಳಿಕ ಎಚ್‌ಎಎಲ್ ಏರ್ ಪೋರ್ಟ್ ಮೂಲಕ ದೆಹಲಿಗೆ ವಾಪಸಾಗಿದ್ದಾರೆ. 

ಒಂದು ವೇಳೆ ರಾಹುಲ್ ಗಾಂಧಿ ಅವರಿಗೆ ತಮ್ಮ ವಿಶ್ಲೇಷಣೆ ಹಾಗೂ ಆರೋಪವು ನಿಜ ಎಂಬ ನಂಬಿಕೆ ಇದ್ದರೇ, ಘೋಷಣಾಪತ್ರಕ್ಕೆ ಸಹಿ ಹಾಕಿ ದೂರು ನೀಡಲು ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ರಾಹುಲ್ ಗಾಂಧಿ ಘೋಷಣಾ ಪತ್ರ ಸಹಿ ಹಾಕದೇ  ಇದ್ದಲ್ಲಿ, ರಾಹುಲ್ ಗಾಂಧಿಗೆ ತಮ್ಮ ವಿಶ್ಲೇಷಣೆಯಲ್ಲಿ ನಂಬಿಕೆ ಇಲ್ಲ ಎಂದರ್ಥ. ಅಂಥ ಸ್ಥಿತಿಯಲ್ಲಿ ರಾಹುಲ್ ಗಾಂಧಿ ಇಡೀ ದೇಶದ ಕ್ಷಮೆ ಕೇಳಬೇಕು. ಹೀಗಾಗಿ ರಾಹುಲ್ ಗಾಂಧಿಗೆ ಈಗ ಎರಡು ಆಯ್ಕೆಗಳಿವೆ. ಒಂದು ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಿ ಅಥವಾ ಚುನಾವಣಾ ಆಯೋಗದ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕಾಗಿ ದೇಶದ ಕ್ಷಮೆ ಕೇಳಿ ಎಂದು ಚುನಾವಣಾ ಆಯೋಗ ಮಾಧ್ಯಮಗಳ ಮೂಲಕ ರಾಹುಲ್ ಗಾಂಧಿಗೆ ತಿಳಿಸಿದೆ. 

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಗೆ 30 ಸಾವಿರ ಕೋಟಿ ರೂಪಾಯಿ ನೀಡುವ ಮೋದಿ ಸರ್ಕಾರ

ಕೇಂದ್ರ ಚುನಾವಣಾ ಆಯೋಗವು ರಾಹುಲ್ ಗಾಂಧಿ, ಘೋಷಣಾ ಪತ್ರಕ್ಕೆ ಸಹಿ ಹಾಕಬೇಕೆಂದು ಬಯಸುತ್ತಿದೆ. ಘೋಷಣಾ ಪತ್ರದಲ್ಲಿ ಸುಳ್ಳು ಆರೋಪ ಮಾಡಿದ್ದಲ್ಲಿ, ತಮ್ಮ ಆರೋಪ ಸಾಕ್ಷ್ಯ ನೀಡದೇ  ಇದ್ದಲ್ಲಿ ಬಿಎನ್‌ಎಸ್ ಕಾಯಿದೆಯಡಿ ಶಿಕ್ಷಿಸಲು ಅವಕಾಶ ಇದೆ. ಹೀಗಾಗಿ ಘೋಷಣಾ ಪತ್ರಕ್ಕೆ ಸಹಿ ಹಾಕಿ, ತಾವು ಮಾಡಿದ ಆರೋಪವನ್ನು ರಾಹುಲ್ ಗಾಂಧಿಯೇ ಚುನಾವಣಾ ಆಯೋಗದ ಮುಂದೆ ಸಾಬೀತುಪಡಿಸಲಿ ಎಂದು ಚುನಾವಣಾ ಆಯೋಗ ಒತ್ತಾಯಿಸುತ್ತಿದೆ.

ಇದನ್ನೂ ಓದಿ: ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

CEC ECI 333

ರಾಹುಲ್ ಗಾಂಧಿ ಈ ಹಿಂದೆಯೂ ಈ ರೀತಿಯ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ನೀಡಿಲ್ಲ. ಚುನಾವಣಾ ಆಯೋಗ ನೀಡಿದ ಉತ್ತರವನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. 

ಇದನ್ನೂ ಓದಿ: ಕೇಂದ್ರದ ಎನ್‌ಇಪಿ ಗೆ ಸೆಡ್ಡು ಹೊಡೆದು ಎಸ್‌ಇಪಿ ಬಿಡುಗಡೆ ಮಾಡಿದ ತಮಿಳುನಾಡು ರಾಜ್ಯ ಸರ್ಕಾರ, ವರದಿಯಲ್ಲೇನಿದೆ?

ಈ ಹಿಂದೆಯೂ ರಾಹುಲ್ ಗಾಂಧಿ ತಾವು ಸಹಿ ಮಾಡಿದ ಪತ್ರವನ್ನು ಚುನಾವಣಾ ಆಯೋಗಕ್ಕೆ ನೀಡಿಲ್ಲ. ಚುನಾವಣಾ ಆಯೋಗವು ಕಾಂಗ್ರೆಸ್ ಪಕ್ಷದಲ್ಲಿ ಬೇರೆಯವರಿಗೆ ಉತ್ತರ ನೀಡಿದೆ. ಪ್ರತಿಭಾರಿಯೂ ಅದನ್ನು ರಾಹುಲ್ ಗಾಂಧಿ ಒಪ್ಪಿಕೊಳ್ಳುತ್ತಿಲ್ಲ.  2024ರ ಡಿಸೆಂಬರ್ ನಲ್ಲಿ ರಾಹುಲ್ ಗಾಂಧಿ ಮಹಾರಾಷ್ಟ್ರ ಚುನಾವಣೆ ವಿಷಯ ಪ್ರಸ್ತಾಪಿಸಿದ್ದರು. ಆಗ ಎಐಸಿಸಿಯಿಂದ ಕೆಲ ವಕೀಲರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. 2024ರ ಡಿಸೆಂಬರ್ 24 ರಂದು ಚುನಾವಣಾ ಆಯೋಗ ಆ ಬಗ್ಗೆ ವೆಬ್​ಸೈಟ್​ನಲ್ಲೇ ಉತ್ತರ ಕೊಟ್ಟಿತ್ತು. ಆದರೇ ರಾಹುಲ್ ಗಾಂಧಿ ಎಂದೂ ಉತ್ತರವನ್ನೇ ಕೊಟ್ಟಿಲ್ಲ ಎಂದಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. 

ಇದನ್ನೂ ಓದಿ: ರಾಹುಲ್ ಗಾಂಧಿಗೆ ಸವಾಲು ಹಾಕಿದ ಚುನಾವಣಾ ಆಯೋಗ

ನಿನ್ನೆ ರಾಹುಲ್ ಗಾಂಧಿ ಆರೋಪ ಮಾಡಿದ ಮೇಲೆ, ಮಹಾರಾಷ್ಟ್ರ, ಕರ್ನಾಟಕದ ಚುನಾವಣಾ ಆಯೋಗದ ಸಿಇಓಗಳು ನೇರವಾಗಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ರಿಜಿಸ್ಟ್ರೇಷನ್ ಆಫ್ ಎಲೆಕ್ಟ್ರೋರಲ್ ರೂಲ್ಸ್ 1960ರ ರೂಲ್ 20(3)(ಬಿ) ಅಡಿ ಸಹಿ ಹಾಕಿದ ಘೋಷಣಾ ಪತ್ರದಲ್ಲಿ ದೂರು ನೀಡಿ ಎಂದು ಕೋರಿದ್ದೇವೆ. ರಾಹುಲ್ ಗಾಂಧಿ ಯಾವುದೇ ನಿರ್ದಿಷ್ಟ ದೂರು ನೀಡಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Pm Narendra Modi Rahul Gandhi on election fraud BJP
Advertisment