/newsfirstlive-kannada/media/media_files/2025/12/28/gilli-nata-10-2025-12-28-14-30-46.jpg)
ಪ್ರಾಸ, ಪಂಚು.. ಬಿಗ್​ಬಾಸ್​ ಗಿಲ್ಲಿ ನಟನ ಬಿಗ್​ ಸ್ಟ್ರೆಂಥು! ಒಂದೇ ಟೇಕ್​​ಗೆ ಪಟಾಪಟ ಎಂದು ಉದುರುತ್ತೆ ಡೈಲಾಗ್ಸು!​ ಹಳ್ಳಿ ಹೈದ ದೊಡ್ಡ ದೊಡ್ಡ ತಾರೆಯರ ಮನ ಗೆದ್ದಿದ್ದೇಗೆ? ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಬಿಗ್​ಬಾಸ್​ ಮನೆಯಲ್ಲಿ ಮಾತಿನ ಗಿಲ್ಲಿ ಅಂದ್ರೆ ಮಾತಿನ ಮಲ್ಲ. ಪಂಚಿಂಗ್ ಪಂಟರ್.. ಅಂತಹ ಗಿಲ್ಲಿಯ ಮಾತುಗಳಿಗೆ ಬರೀ ಸಾಮಾನ್ಯರಷ್ಟೇ ಅಲ್ಲ. ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ಫ್ಯಾನ್​ ಆಗಿ ಹೋಗಿದ್ದಾರೆ.. ಅಷ್ಟಲ್ಲೂ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್, ನವರಸನಾಯಕ ಜಗ್ಗೇಶ್​ರಂತಹ ನಟರುಗಳೇ ಗಿಲ್ಲಿಯ ಟೈಮಿಂಗ್ ಹಾಗೂ ಪಂಚಿಂಗ್ ಕಂಡು ಬೆರಗಾಗಿದ್ದಾರೆ.. ಅಷ್ಟಕ್ಕೂ ಹಳ್ಳಿಯಿಂದ ಬೆಂಗಳೂರಿಗೆ ಬಂದ ಗಿಲ್ಲಿ ಇಲ್ಲಿರೋ ಸೆಲೆಬ್ರಿಟಿಗಳ ಮನಗೆದ್ದಿದ್ದೇಗೆ?
ಇದನ್ನೂ ಓದಿ:ಕಲೆ ಯಾರ ಮನೆಯ ಆಸ್ತಿಯೂ ಅಲ್ಲ; ಆರಂಭದಲ್ಲಿ ಗಿಲ್ಲಿ ಜನರ ಮನಸ್ಸು ಗೆದ್ದಿದ್ದು ಹೇಗೆ..?
/filters:format(webp)/newsfirstlive-kannada/media/media_files/2025/11/16/gilli-nata-2025-11-16-13-09-03.jpg)
ತನ್ನ ಹಳ್ಳಿಯ ರಸ್ತೆ ರಸ್ತೆಯಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಸ್ಕಿಟ್​ ಮಾಡ್ಕೊಂಡು ಯ್ಯೂಟ್ಯೂಬ್​ಗಳಲ್ಲಿ ಅಪ್​ಲೋಡ್​ ಮಾಡ್ತಿದ್ದ ಗಿಲ್ಲಿ ನಟ ಇವತ್ತು ರಾಜ್ಯದ ಮನೆ ಮಾತು.. ಅದೆಷ್ಟರ ಮಟ್ಟಿಗೆ ಅಂದ್ರೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ರಂತಹ ದೈತ್ಯ ನಟನ ಡೆವಿಲ್​ ಸಿನಿಮಾದಲ್ಲೂ ಕಾಮೆಡಿಯನ್​ ಆಗಿ ಕಾಣಿಸಿಕೊಳ್ಳುವ ಮಟ್ಟಿಗೆ. ಅಂದಹಾಗೇ ವೀಕ್ಷಕರೇ, ಗಿಲ್ಲಿ ನಟ ತನ್ನ ಪ್ರತಿಭೆ ತೋರಿಸಲು ಆತ ತನ್ನದೇ ವೇದಿಕೆ ಸೃಷ್ಟಿಮಾಡಿಕೊಂಡ್ರೆ ಆತನ ಪ್ರತಿಭೆಯನ್ನ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ ಶೋ ಅಂದ್ರೆ ಅದು ಕಾಮಿಡಿ ಕಿಲಾಡಿಗಳು.
ಗಿಲ್ಲಿ ಗಂಡ್​​ ಮಕ್ಕಳ ಬಗ್ಗೆ ಹೊಡೆದ ಆ ಡೈಲಾಗ್​ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹಲ್​​ಚಲ್​​ನೇ ಎಬ್ಬಿಸಿಬಿಟ್ಟಿತ್ತು ಅಂದ್ರೆ ನೀವು ನಂಬಲೇಬೇಕು..ಇದೊಂದೇ ಅಲ್ಲ, ಫ್ಯಾಂಟಸಿ ರೌಂಡ್​ನಲ್ಲಿ ಯುದ್ಧದ ಸನ್ನಿವೇಶದಲ್ಲಿ ಥೇಟ್​ ಡೈಲಾಗ್​ ಕಿಂಗ್​ ಸಾಯಿಕುಮಾರ್​​ರಂತೆಯೇ ಗಿಲ್ಲಿ ಕೊಟ್ಟಿದ್ದ ಪಂಚ್​ಗಳು, ಇನ್ನೂ ಎಲ್ಲರ ಕಣ್ಮುಂದೆಯೇ ಇದೆ..
ಇದನ್ನೂ ಓದಿ:ಚೆನ್ನಾಗಿದ್ರೆ ದೋಸ್ತಿ, ಎದುರು ಹಾಕಿಕೊಂಡ್ರೆ ಉಡೀಸ್.. ಪಂಚ್ ಮಾಸ್ಟರ್ ಗಿಲ್ಲಿ ಸಕ್ಸಸ್‌ಗೆ 10 ಕಾರಣಗಳು..!
/filters:format(webp)/newsfirstlive-kannada/media/media_files/2025/12/30/gilli-nata-17-2025-12-30-11-25-55.jpg)
ಪ್ರಾಪರ್ಟಿ ಕಾಮಿಡಿನಾದ್ರೂ ಕೊಡಲಿ, ಥೀಮ್​ ಆದ್ರೂ ಕೇಳಲಿ ಗಿಲ್ಲಿ ನಟ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್​ನಲ್ಲಿ ನವರಸನಾಯಕ ಜಗ್ಗೇಶ್​ ಮನಗೆದ್ದಿದ್ದ ಗಿಲ್ಲಿ, ಅಲ್ಲಿಂದ ನೇರ ಬಂದಿದ್ದು ಭರ್ಜರಿ ಬ್ಯಾಚುಲರ್ಸ್ ಸೀಸನ್-1 ಕಾರ್ಯಕ್ರಮಕ್ಕೆ. ನಟಿ ಯಶಸ್ವಿನಿ ಅಲ್ಲಿ ಗಿಲ್ಲಿಗೆ ಮೆಂಟರ್ ಆಗಿದ್ರು. ಇವ್ರಿಬ್ಬರ ಕಾಂಬಿನೇಷನ್ ಸಿಕ್ಕಾಪಟ್ಟೆ ವರ್ಕ್ ಆಗಿತ್ತು. ಆ ಶೋನಲ್ಲಿ ಗಿಲ್ಲಿ ನಟ ಮೊದಲ ರನ್ನರ್ಪ್ ಆಗಿ ಹೊರ ಹೊಮ್ಮಿದ್ದರು. ಜಡ್ಜ್ ಆಗಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ರಚಿತಾ ರಾಮ್ ಗಿಲ್ಲಿ ಮಾತಿನ ಶೈಲಿ, ವಿಭಿನ್ನ ಮ್ಯಾನರಿಸಂನ ಹಾಡಿ ಹೊಗಳಿದ್ದರು.
ಗಿಲ್ಲಿ ನಟ ಪಕ್ಕಾ ಹಳ್ಳಿ ಪ್ರತಿಭೆ. ಆ ಕಾರಣದಿಂದಾನೇ ಅಷ್ಟೊಂದು ನ್ಯಾಚುರಲ್​ ಆಗಿ ನಟನೆ ಮಾಡೋದಕ್ಕೆ ಸಾಧ್ಯ ಅನ್ನೋದು ಹಲವರ ಅಭಿಪ್ರಾಯ ಬಟ್, ಅದೇನೇ ಇರಲಿ. ಅಷ್ಟು ರಾಕೆಟ್​ ವೇಗದಲ್ಲಿ, ಪಟಪಟ ಅಂತಾ ಹರಳುರಿದಂತೆ ಮಾತನಾಡಿ ಜನರನ್ನ ನಗಿಸುವುದು ಸುಲಭದ ಕೆಲಸ ಅಲ್ಲ ಅಲ್ವಾ? ಇಗೋ ಇಲ್ಲಿ ಗಿಲ್ಲಿ ಗಿಳಿಶಾಸ್ತ್ರ ಹೇಳೋ ಜ್ಯೋತಿಷಿಯಾಗಿ ಕೊಟ್ಟಿರೋ ಪಂಚ್​ಗಳು ಸಿಕ್ಕಾಪಟ್ಟೆ ನಗಿಸಿದ್ದವು.
ಇದನ್ನೂ ಓದಿ:ಸೆಟ್​ಬಾಯ್​ ಕೆಲ್ಸದಿಂದ, ಕಲಾ ಪ್ರಪಂಚಕ್ಕೆ ಗಿಲ್ಲಿ ಎಂಟ್ರಿ ಆಗಿದ್ದೇಗೆ?
/filters:format(webp)/newsfirstlive-kannada/media/media_files/2025/12/28/gilli-nata-14-2025-12-28-14-29-22.jpg)
ಗಿಲ್ಲಿ ನಟ ದೈತ್ಯ ಪ್ರತಿಭೆ.. ತನ್ನ ಟೈಮಿಂಗ್​ ಹಾಗೂ ಪಂಚಿಂಗ್ ಡೈಲಾಗ್​ಗ ಮೂಲಕ ದೊಡ್ಡ ದೊಡ್ಡ ತಾರೆಯರ ಮನವನ್ನೇ ಈಗಾಗಲೇ ಗೆದ್ದಿದ್ದಾರೆ ಗಿಲ್ಲಿ. ರವಿಚಂದ್ರನ್, ಶಿವಣ್ಣ, ರಚಿತಾ ರಾಮ್, ರಕ್ಷಿತಾ, ಜಗ್ಗೇಶ್​ ಇವರೆಲ್ಲರೂ ಗಿಲ್ಲಿಯ ಕಾಮಿಡಿ ಮೋಡಿಗೆ ಎದ್ದು ಬಿದ್ದು ನಗಾಡಿದ್ದು ಅದೆಷ್ಟೋ ಬಾರಿ. ಅಂಥಾ ಗಿಲ್ಲಿಗೆ ನಾನೊಬ್ಬ ಅಭಿಮಾನಿ ಅಂತಾ ಒಬ್ಬ ಸ್ಟಾರ್​ ನಟ ಹೇಳೋದು ಇದ್ಯಲ್ಲ. ನಿಜಕ್ಕೂ ಅಚ್ಚರಿ ಅನಿಸದೇ ಇರೋದಿಲ್ಲ.
ಒಟ್ಟಾರೆ ಒಂದು ಕುಗ್ರಾಮದಿಂದ ಬಂದು ಇವತ್ತು ಬಿಗ್ ಬಾಸ್ ಮನೆಯಲ್ಲಿ ಅಬ್ಬರ ಮಾಡ್ತಿರೋ ಗಿಲ್ಲಿ ರಾಜ್ಯದ ಕಾಮಿಡಿ ಪ್ರಿಯರ ಸದ್ಯದ ಹಾಟ್​ ಫೇವರಿಟ್. ಇಂತಹ ಗಿಲ್ಲಿ ಬಿಗ್​ಬಾಸ್​ ಟ್ರೋಪಿ ಹೊಡೀತಾರಾ ಅನ್ನೋದೇ ಈಗಿರೋ ಕುತೂಹಲ. ಸದ್ಯ ಗಿಲ್ಲಿ ಅಂದ್ರೆ ರಾಜ್ಯಾದ್ಯಂತ ಸಿಕ್ಕಾಪಟ್ಟೆ ಕ್ರೇಜ್​ ಇದೆ. ನ್ಯೂ ಇಯರ್ ಟೈಮಲ್ಲಿ ಗಿಲ್ಲಿ ಫೀವರ್ ಜೋರಾಗಿದೆ. ಬಿಗ್​ಬಾಸ್​ ಮನೆಯಲ್ಲಿ ಬೆಂಕಿ ಆಟ ಆಡ್ತಿರೋ ಗಿಲ್ಲಿ, ಕಪ್ ಹೊಡೀತಾರಾ? ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us