‘ನನ್ನರಸಿ ರಾಧೆ’ಯ ಇಂಚರಳ ಮುದ್ದು ಮಗಳು ಹೇಗಿದ್ದಾಳೆ..? So cute

ಇನಯ... ಎಷ್ಟು ಮುದ್ದಾಗಿದ ಅಲ್ವಾ ಈ ಹೆಸರು. ದೇವರು ಕೊಟ್ಟು ಉಡುಗೊರೆ ಇನಯ ಪದದ ಅರರ್ಥ. ಹೆಸರು ಎಷ್ಟು ಸೊಗಸಾಗಿ ಇದೆಯೋ, ಅರ್ಥವೂ ಕೂಡ ಅಷ್ಟೇ. ಚೆಂದುಳ್ಳಿ ಚೆಲುವೆ ಯಾರ ಮಗಳ ಗೊತ್ತಾ..? ನನ್ನರಸಿ ರಾಧೆಯ ಇಂಚರಳ ಮಗಳು.

author-image
Ganesh Kerekuli
Kaustuba Mani Actress (7)
Advertisment

ಈಗೊಂದು ಟ್ರೆಂಡ್ ಶುರುವಾಗಿದೆ. ಮದ್ವೆಯಾದ್ಮೇಲೆ ಇಮಿಡಿಯೇಟ್‌ ಆಗಿ ಮಕ್ಕಳನ್ನ ಮಾಡ್ಕೊತ್ತಿದ್ದಾರೆ. ಇದಕ್ಕೆ ಕಾರಣ ಹಲವಾರು ಇರಬಹುದು. ಬಟ್ ನಿಜಕ್ಕೂ ಗುಡ್‌ ಸೈನ್‌ ಇದು. ಈ ಸಾಲಿಗೆ ಹೊಸ ಸೇರ್ಪಡೆ ನನ್ನರಸಿ ರಾಧೆಯ ಕೌಸ್ತುಭ ಮಣಿ. ತಾಯ್ತನವನ್ನ ಅನುಕ್ಷಣವೂ ಅನುಭವಿಸ್ತಿರೋ ಕೌಸ್ತುಭಮಣಿ ತನ್ನ ಮಗಳನ್ನ ಪ್ರಪಂಚಕ್ಕೆ ಪರಿಚಿಯಿಸಿದ್ದಾರೆ.

ಇದನ್ನೂ ಓದಿ:‘ನಲ್ಲಿ ಮೂಳೆ’ ತಿಂದು ಮಲಗಬೇಕು, ಆಗ ನಾಯಿ ಬೊಗಳಬಾರದು -ಗಿಲ್ಲಿ ಆಸೆ ಕೇಳಿ ನಕ್ಕ ಬಿಗ್​ಬಾಸ್..!

Kaustuba Mani Actress (3)


ಇನಯ... ಎಷ್ಟು ಮುದ್ದಾಗಿದ ಅಲ್ವಾ ಈ ಹೆಸರು. ದೇವರು ಕೊಟ್ಟು ಉಡುಗೊರೆ ಇನಯ ಪದದ ಅರರ್ಥ. ಹೆಸರು ಎಷ್ಟು ಸೊಗಸಾಗಿ ಇದೆಯೋ, ಅರ್ಥವೂ ಕೂಡ ಅಷ್ಟೇ. ಚೆಂದುಳ್ಳಿ ಚೆಲುವೆ ಯಾರ ಮಗಳ ಗೊತ್ತಾ..? ನನ್ನರಸಿ ರಾಧೆಯ ಇಂಚರಳ ಮಗಳು.
ಇಂಚರ ಅಂದ್ರೆ, ನಮ್ಮ ಕೌಸ್ತುಭಮಣಿ, ಕಳೆದ ವರ್ಷ ಮದ್ವೆಯಾಗಿದ್ದು ನಿಮ್ಗೆ ಗೊತ್ತೇ ಇದೆ.  ಜೊತೆಗೆ ಅವರಿಗೊಂದು ಅಪ್ಸರೆಯಂಥಾ ಮಗಳು ಜನಿಸಿದ್ದಾಳೆ. ಈಗ ಮಗುವನ್ನ ಇಡೀ ಪ್ರಪಂಚಕ್ಕೆ ಪರಿಚಯಿಸಿದ್ದಾರೆ ಕೌಸ್ತುಭಮಣಿ.

ಇದನ್ನೂ ಓದಿ: ಅಶ್ವಿನಿ ಕಿರಿಕ್​.. ಗಿಲ್ಲಿ ಲೇಸಿ.. ಗಿಲ್ಲಿಗೆ ಸರಿಯಾದ ಎದುರಾಳಿ ಅಶ್ವಿನಿ.. ನಿಂತಿಲ್ಲ ಫೈಟ್​!

Kaustuba Mani Actress (4)

ವಿಶೇಷ ಅಂದ್ರೆ ಬಾಣಂತನ ಅನ್ನೋದು ನಾಲ್ಕು ಗೋಡೆಗಳ ಮಧ್ಯೆ ಆಗಬೇಕು ಅನ್ನೋ ಗೊಡ್ಡು ಆಚರಣೆಗಳಿಗೆ ಈಗ ಬಹುತೇಕ ಬೀಗ ಬಿದ್ದಿದೆ. ಕೌಸ್ತುಭಮಣಿ ಅವರಂತೂ, ಮಗಳನ್ನ ಸಮುದ್ರದ ಮಧ್ಯೆಯೇ ಕರೆದುಕೊಂಡು ಹೋಗಿದ್ದರು. ಆ ದೃಶ್ಯವಂತೂ ನಿಜಕ್ಕೂ ಅಮೋಘವಾಗಿದೆ. ಬಹುಶಃ ಇನಯ ದೊಡ್ಡವಳಾದ ನಂತರ ಈ ದೃಶ್ಯ ನೋಡಿ, ನನ್ನ ಹೆತ್ತವರ ಬಗ್ಗೆ ಹೆಮ್ಮೆಪಡುತಾಳೇ. ನಮ್ಮ ಪೇರೇಂಟ್ಸ್ ಅಡ್ವೆಂಚರರ್ಸ್‌ ಅಂತಾ ಖುಷಿಪಟ್ತಾಳೆ.

ಇದನ್ನೂ ಓದಿ: ಖದರ್ ಲೇಡಿ, ಖಡಕ್ ಗಿಲ್ಲಿ.. ಸ್ಟ್ರೆಂಥ್ ಏನು? ವೀಕ್ನೆಸ್ ಏನು..?

Kaustuba Mani Actress (6)

ಕೌಸ್ತುಭಮಣಿ ಮತ್ತು ಸಿದ್ದಾಂತ್ ಸತೀಶ್‌ ಮಗಳ ಪ್ರತಿ ಕ್ಷಣವನ್ನ ಎಂಜಾಯ್ ಮಾಡ್ತಿದ್ದಾರೆ. 8 ತಿಂಗಳ  ಇನಯನ ಪರಪಂಚದಲ್ಲಿ ತೇಲಾಡುತ್ತಿದ್ದಾರೆ. ಈ ಬಗ್ಗೆ ನ್ಯೂಸ್‌ಫಸ್ಟ್ ಜೊತೆ ಮಾತನಾಡಿದ  ನಟಿ, ಕೌಸ್ತುಭ ಮಣಿ, ತಾಯ್ತನ ಅನ್ನೋದು ತುಂಬಾ ಅಮೂಲ್ಯವಾದದ್ದು. ನಾನು ಅನುಕ್ಷಣವನ್ನ ಅನುಭವಿಸ್ತಿದ್ದೇನೆ. ನಟನೆ ಬ್ರೇಕ್‌ ಕೊಟ್ಟಿರುವುದರಿಂದ ಸಂಪೂರ್ಣ ಸಮಯವನ್ನ ಮಗಳ ಆರೈಕೆಗೆ ಮೀಸಲಿಟ್ಟಿದ್ದೇನೆ. ಆಗಾಗ ಮಗಳ ಜೊತೆ ಪ್ರವಾಸಕ್ಕೆ ಹೋಗ್ತೀನಿ. ಡೈಲಿ ರೂಟೀನ್‌ ಪರಿಪೂರ್ಣವಾಗಿ ಮಗಳಿಗಾಗಿಯೇ. ತಾಯ್ತನ ನಿಜಕ್ಕೂ ಹೊಸ ಅನುಭವ ಮತ್ತು ಹೊಸ ಚಾಲೆಂಜ್ ನೀಡುತ್ತೆ. ಇದು ಹೆಣ್ಣಿಗೆ ನಿಸರ್ಗ ನೀಡಿರುವ ದೊಡ್ಡ ಗಿಫ್ಟ್ ಎಂದರು ಕೌಸ್ತುಭಮಣಿ.

Kaustuba Mani Actress


ಒಟ್ನಲ್ಲಿ ಈಗ ಮದರ್‌ವುಡ್‌ ಅನುಭವಿಸ್ತಿರೋ ಕೌಸ್ತುಭಮಣಿ, ನಟನೆಗೆ ಮತ್ತೆ ವಾಪಸ್ ಆಗ್ಲಿ ಅನ್ನೋದು ಅವರ  ಇಷ್ಟ ಪಡೋ ಅಭಿಮಾನಿಗಳ ಬೇಡಿಕೆಯಾಗಿದೆ.

ಇದನ್ನೂ ಓದಿ: ಡಲ್‌ ಹೊಡೆದ ಗಿಲ್ಲಿ.. ಕೊನೆ ಕ್ಷಣದಲ್ಲಿ ಗೇಮ್‌ ಚೇಂಜರ್‌ ಆದ್ರಾ ಅಶ್ವಿನಿ ಗೌಡ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kousthubha Mani
Advertisment