/newsfirstlive-kannada/media/media_files/2026/01/10/ashwini-gowda-and-gilli-nata-2026-01-10-13-58-25.jpg)
ರಿಯಾಲಿಟಿ ಶೋನಲ್ಲಿ ರಿಯಲ್ಲಾಗಿ ಇರ್ತಾರೆ ಅಂದ್ರೆ ಅದು ಒಪ್ಪೋಕೆ ಕಷ್ಟವೇ. ಯಾಕಂದ್ರೆ ಯಾರು ಹೇಗೆ ಸ್ಟ್ರಾಟರ್ಜಿಗಳನ್ನ ಮಾಡ್ತಾರೆ. ಯಾರೂ ಯಾವ ರೀತಿ ಟಾರ್ಗೆಟ್​ ಮಾಡ್ತಾರೆ. ಹೇಗೆ ಪಂಚ್​ ಕೊಡ್ತಾರೆ.. ಹೇಗೆ ಹಂಟ್​ ಮಾಡ್ತಾರೆ.. ಒಂದೂ ಗೊತ್ತಾಗಲ್ಲ. ಬಟ್​ ಗಿಲ್ಲಿ ಅಶ್ವಿನಿಯ ಹೈಪ್​ ಬೇರೆ ಲೆವೆಲ್​ಗಿದೆ. ಅವ್ರಿಬ್ಬರಿಗೆ ಬಿದ್ದ ಜಿದ್ದಾಜಿದ್ದು.. ಒಂದ್ರೀತಿ ಸ್ಟ್ರೆಂಥೂ ಹೌದು, ವೀಕ್ನೆಸ್ಸು ಹೌದು.
ಸ್ಟ್ರಾಟರ್ಜಿ ಇರ್ಬೇಕು.. ಟಾರ್ಗೆಟ್​ ಸಹ ಇರ್ಬೇಕು. ಯಾಕಂದ್ರೆ ಇದು ಅಸ್ತ್ರಗಳಿಂದ ಗೆಲ್ಲೋ ಯುದ್ಧವಲ್ಲ. ಮಾತುಗಾರಿಕೆಯಿಂದ.. ಆಟಗಾರಿಕೆಯಿಂದ ಗೆಲ್ಲೋ ಯುದ್ಧ. ಇಲ್ಲಿ ಯಾರು ಯಾವ ಕಡೆ ಇದ್ದು ಗಮ್ಯಕ್ಕೆ ಸೇರ್ತಾರೆ ಅನ್ನೋದಕ್ಕಿಂತ. ಯಾರು ಹೇಗೆ ತುದಿ ಮುಟ್ತಾರೆ ಅನ್ನೋದೇ ಲೆಕ್ಕ. ಬಟ್​ ಗಿಲ್ಲಿ ಅಶ್ವಿನಿ ಆಟದಲ್ಲಿ.. ಸ್ವಭಾವದಲ್ಲಿ ಇನ್ನೂ ಹಲವಾರು ಸ್ಟ್ರೆಂಥು ವೀಕ್ನೆಸ್​ಗಳಿವೆ.
ಇದನ್ನೂ ಓದಿ: ಗಿಲ್ಲಿ ಬಿಗ್​ ಗೇಮ್​ನಲ್ಲಿ ಪರಕಾಯ ಪ್ರವೇಶ.. ಆಟದ ರಹಸ್ಯ ಬಿಟ್ಟುಕೊಟ್ಟ ಗಿಲ್ಲಿ..!
/filters:format(webp)/newsfirstlive-kannada/media/media_files/2026/01/10/ashwini-gowda-and-gilli-nata-2-2026-01-10-13-56-53.jpg)
ನಿನ್ನ ಫ್ರೆಂಡ್​ ಯಾರು ಅಂತ ಗೊತ್ತಾದ್ರೆ ಕ್ಯಾರೆಕ್ಟರ್​ ಗೊತ್ತಾಗುತ್ತೆ.. ಅದೇ ನಿನ್ನ ಶತ್ರು ಯಾರು ಅಂತ ಗೊತ್ತಾದ್ರೆ ನಿನ್ನ ಕೆಪಾಸಿಟಿ ನಿಂಗೇ ಗೊತ್ತಾಗುತ್ತೆ ಇದೇ.. ಗಿಲ್ಲಿ ಅಶ್ವಿನಿಗೆ ತಿಳಿದಿರೋ ಸತ್ಯ. ಅವ್ರಿಬ್ಬರಿಗೆ ಯಾರನ್ನ ಫ್ರೆಂಡ್​ ಮಾಡ್ಕೊಳ್ಬೇಕು.. ಯಾರನ್ನ ಎದುರಾಳಿಯನ್ನಾಗಿ ಇಟ್ಕೊಳ್ಬೇಕು ಅಂತ ಗೊತ್ತಿದೆ. ಆ ಭರದಲ್ಲಿ ಅವ್ರಿಬ್ಬರೂ ಎಡವಿದ್ದಾರೆ.
ಕಾಮಿಡಿಯಿಂದಲೇ ಉತ್ತರ.. ಹಳ್ಳಿಗರ ಸಪೋರ್ಟ್​!
ಗಿಲ್ಲಿಯ ಮೊದಲ ಸ್ಟ್ರೆಂಥ್​.. ಕಾಮಿಡಿ ಮಾಡ್ತಲೇ ಕಾಮಿಡಿ ಮೂಲಕವೇ ನಿಜವನ್ನ ನಿರ್ಭೀತಿಯಿಂದ ಹೇಳೋ ಕಲೆ ಇರೋದು. ಎರಡನೇಯದು ಹಳ್ಳಿ ಹಳ್ಳಿಗೂ ಗಿಲ್ಲಿ ಅಂದ್ರೆ ಏನೂ.. ಬಿಗ್​ಬಾಸ್​ ಅಂದ್ರೆ ಏನು ಅಂತ ತಿಳಿಸಿರೋದು. ಇಲ್ಲಿವರೆಗೂ ಎಲ್ಲೆಲ್ಲಿ ಬಿಗ್​ಬಾಸ್​ ಇರ್ಲಿಲ್ಲವೋ ಅಲ್ಲೆಲ್ಲಾ ಬಿಗ್​ಬಾಸ್​ ತಲುಪಿದೆ. ಇನ್ನೂ ಮೂರನೇಯ ಸ್ಟ್ರೆಂಥ್​ ಎಲ್ಲೆಲ್ಲಿ ಸ್ಟ್ಯಾಂಡ್​ ತಗೋಬೇಕೋ ಅಲ್ಲೆಲ್ಲ ಸಮರ್ಪಕವಾಗಿ ಸ್ಟ್ಯಾಂಡ್​ ತಗೊಳ್ತಾನೆ.
ಇದನ್ನೂ ಓದಿ: ತಿಲಕ್​ ವರ್ಮಾ ವಿಶ್ವಕಪ್​ಗೆ ಡೌಟ್; ಕನ್ನಡಿಗನಿಗೆ ತೆರೆಯುತ್ತಾ ಅದೃಷ್ಟದ ಬಾಗಿಲು..?
/filters:format(webp)/newsfirstlive-kannada/media/media_files/2026/01/10/ashwini-gowda-and-gilli-nata-3-2026-01-10-13-52-57.jpg)
ಹಿಂದಿನ ಶೋಗಳೇ ಸ್ಟ್ರೆಂಥ್
ಗಿಲ್ಲಿಯ ನಾಲ್ಕನೇಯ ಸ್ಟ್ರೆಂತ್​ ಅಂದ್ರೆ 24/7 ಫುಲ್​ ಗೇಮ್ ಬಗ್ಗೆನೇ ಇಂಟ್ರಸ್ಟ್​ ತೋರಿಸಿ.. ಆಕ್ಟಿವೇಟ್​ ಆಗಿರೋ ಏಕೈಕ ಸ್ಪರ್ಧಿ. ಹಾಗೆ ಐದನೇಯದ್ದು ಹಿಂದೆ ನಡೆಸಿಕೊಟ್ಟಿದ್ದ ರಿಯಾಲಿಟಿ ಶೋಗಳು.. ಅವುಗಳಲ್ಲಿ ಸಿಕ್ಕ ಅನುಭವ ಗಿಲ್ಲಿಗೆ ಸಪೋರ್ಟ್​ ಆಗಿದೆ. ಆರನೇ ಸ್ಟ್ರೆಂತ್​ ಕೇವಲ ಮಾತುಗಾರ ಅಷ್ಟೇ ಅಲ್ಲ ಗಿಲ್ಲಿ ಒಳ್ಳೆ ಬರಹಗಾರ ಕೂಡ. ಏಳನೇಯದ್ದು.. ಗಿಲ್ಲಿಗಿರೋ ಮೈಂಡ್​ ಪವರ್​.. ಆತನಿಗಿರೋ ಜ್ಞಾಪಕ ಶಕ್ತಿ ಅದ್ಭುತ.. ಎಂಟು ಸಿನಿಮಾ ಡೈಲಾಗ್, ಸಿನಿಮಾ ಸಾಂಗ್‌ಗಳನ್ನ ಟೈಮ್​ಗೆ ತಕ್ಕಂತೆ ಬಳಸಿ ಟಾಂಗ್​ ಕೊಡೋ ಪಂಟರ್​.
ಐದು ವೀಕ್ನೆಸ್​..
ಗಿಲ್ಲಿಯ ವೀಕ್ನೆಸ್​ಗಳನ್ನ ನೋಡ್ತಾ ಹೋದ್ರೆ.. ಮೊದಲೇಯದೇ ಆತನಲ್ಲಿರೋ ಲೇಸಿನೆಸ್​. ಮತ್ತೊಂದು ಟಾಸ್ಕ್‌ನಲ್ಲಿ ಬೆಸ್ಟ್​ ಪರ್ಫಾಮೆನ್ಸ್​​ ಇಲ್ಲ. ಎರಡನೇ ವೀಕ್ನೆಸ್​ ಮನೆ ಕೆಲಸ ನೀಟ್ ಆಗಿ ಮಾಡದೇ ಇರೋದು, ಶಿಸ್ತು ಇಲ್ಲದೇ ಇರೋದು. ಮೂರನೇಯದ್ದು ಒಂದೇ ಗುಂಪಲ್ಲಿ ಹೆಚ್ಚು ಕಾಣಿಸಿಕೊಳ್ಳೊದು.
ಇದನ್ನೂ ಓದಿ: ಸಪ್ಪೆ ಮುಖ ಇಟ್ಟ ಗಿಲ್ಲಿ.. ಹಿರಿಹಿರಿ ಹಿಗ್ಗಿದ ಅಶ್ವಿನಿ ಗೌಡ..! ಮುಂದೇನು..?
/filters:format(webp)/newsfirstlive-kannada/media/media_files/2026/01/03/gilli-and-ashwini-2026-01-03-19-44-29.jpg)
ಕಾವ್ಯ ಪರ ಬ್ಯಾಟಿಂಗ್​!
ಗಿಲ್ಲಿ ಕಾವ್ಯ ಪರ ನಿಂತಿರೋದು ಗೊತ್ತೇ ಇದೆ. ನಿಜಕ್ಕೆ ಗಿಲ್ಲಿ ವೀಕ್ನೆಸ್​ ಇದೆ ಮೊದಲು ಅಂತಲೂ ಹೇಳ್ಬೋದು. ಕಾವ್ಯಪರ ಪಕ್ಷಪಾತ ತೋರೋದು, ಇನ್ನೂ ನಾಲ್ಕನೇಯದು ಇತರೆ ಸ್ಪರ್ಧಿಗಳನ್ನ ಅತೀಯಾಗಿ ಹೀಯಾಳಿಸೋದು.. ಕೊನೆಯದ್ದು ಗೆದ್ದೆ ಗೆಲ್ತೀನಿ, ಕಾವ್ಯ ಕರ್ಕೊಂಡ್ ಹೋಗ್ತೀನಿ ಅನ್ನೋ ಓವರ್​ ಕಾನ್ಫಿಡೆನ್ಸಿ ಇಟ್ಕೊಂಡಿರೋದು ಸಹ ವೀಕ್ನೆಸ್ಸೇ ಆಗಿದೆ.
ಅಶ್ವಿನಿ ಗೌಡರಲ್ಲೂ ಇವೆ ಸ್ಟ್ರೆಂಥ್​ & ವೀಕ್ನೆಸ್!
ಬಿಗ್​ ಮನೆಯಲ್ಲಿ ಅಶ್ವಿನಿ ಕೊಡ್ತಿರೋ ಥಗ್​ವಾರ್.. ಆ ಫೈರ್​​ ಬೇರೆ ಯಾವ ಲೇಡಿ ಕಂಟೆಸ್ಟಂಟ್​ನಲ್ಲೂ ಇಲ್ಲ. ಜಗಳಕ್ಕೆ ನಿಂತ್ರೆ ಕಾಳಿ.. ಮಾತಿಗೆ ನಿಂತ್ರೆ ಶಿವಗಾಮಿ. ಅಶ್ವಿನಿಯ ಈ ಸ್ಟ್ರೆಂಥ್​ ಜೊತೆಗೆ ಬೇರೆ ಸ್ಟ್ರೆಂತ್​ ಸಹ ಇವೆ.. ಅದ್ರಲ್ಲಿ ಮೊದಲನೇಯದೇ.. ಇಡೀ ಮನೆಯಲ್ಲಿ ಎಂಥಾ ಎದುರಾಳಿಯಾಗಿದ್ರೂ ಸರಿ ಎದುರಿಸೋ ಶಕ್ತಿ ಆಕೆಗಿದೆ. ಹಾಗೆ ಗಟ್ಟಿ ಮಹಿಳೆ ಅನ್ನೋದನ್ನ ಪದೇ ಪದೇ ಪ್ರೂವ್ ಮಾಡಿದ್ದು ಮತ್ತೊಂದು ಸ್ಟ್ರೆಂಥ್​.
ಇದನ್ನೂ ಓದಿ: ಬಿಗ್ ಬಾಸ್‌ಗೆ ಮುನ್ನ 80 ಸಾವಿರ, ಈಗ 1 ಮಿಲಿಯನ್ ಫಾಲೋವರ್ಸ್ ಗಿಟ್ಟಿಸಿದ ಗಿಲ್ಲಿ ನಟ!
/filters:format(webp)/newsfirstlive-kannada/media/media_files/2026/01/02/ashwini-vs-gilli-2026-01-02-16-28-00.jpg)
ಜಗಳ ನಂತರ ಮತ್ತೆ ಮಾತು.. ದ್ವೇಷ ಮರೆಯೋದು!
ಒಮ್ಮೊಮ್ಮೆ ಅಶ್ವಿನಿ ಕೋಪ ಬೆಂಕಿ ಕಡ್ಡಿ ಅಂತ ಹೇಳ್ಬೋದು.. ಭಗ ಭಗ ಉರಿದು ಸೈಲೆಂಟ್​ ಆಗಿಬಿಡುತ್ತೆ.. ಹಾಗಾಗಿ ಆಕೆ ಜಗಳ ಆಡಿದ್ರೂ ಕೂಡ ಮತ್ತೆ ಹೋಗಿ, ಅವ್ರನ್ನ ವಿಶ್ವಾಸಕ್ಕೆ ತಗೋಳ್ತಾಳೆ. ಜಗಳ ನಂತರ ಕೂಡ್ಲೇ ಆ ಕೆಲ್ಸ ಮಾಡ್ತಾಳೆ. ಹಾಗೆ ಹೆಚ್ಚು ದ್ವೇಷ ಸಾಧಿಸದೇ ಇರೋಕೆ ಟ್ರೈ ಮಾಡ್ತಾರೆ. ಇದು ಗಿಲ್ಲಿ ಜೊತೆಯೂ ಆಗಿದೆ.
ಬೇಗ ಕೋಪ..
ಅಶ್ವಿನಿ ಅವ್ರು ಕೆರಳಿ ನಿಂತ್ರೆ ಯಾವ ರೇಂಜ್​ಗಿರುತ್ತೆ ನಿಮ್ಗೆ ಗೊತ್ತೇ ಇದೆ. ಹಾಗಾಗಿ ಆಕೆ ಕೆರಳಿ ಕೆಂಡವಾದಾಗ ಆಕೆಯ ಮೈಯಲ್ಲಿ ಉಗ್ರರೂಪಿಣಿ ಬಂದಂತಿರುತ್ತೆ. ಮಹಾಕಾಳಿಯಂತೆ ಆಗ್ಬಿಡ್ತಾಳೆ. ಎದುರಿಗೆ ಶಿವನೇ ಬಂದ್ರೂ ನಿಲ್ಲದ ಭದ್ರಕಾಳಿ. ಆಗಾಗ ಗಿಲ್ಲಿಗೆ ತೊಡೆ ತಟ್ಟಿ ಬಾರೊಲೆ.. ಅಂತ ಗಡಸಾಗಿ ಟಾಂಗ್​ ಕೊಟ್ಬಿಡ್ತಾರೆ. ಅಶ್ವಿನಿಗೆ ಬೇಗನೇ ಕೋಪ ಬರುತ್ತೆ.. ಆ ಕೋಪದಲ್ಲಿ ಎದುರಾಳಿ ಮೇಲೆ ಕೆಟ್ಟ ಪದಗಳನ್ನ ಬಳಕೆ ಮಾಡೋದು ಹೆಚ್ಚು. ವಿಷ್ಯ ಎಂಥದ್ದೆ ಇರ್ಲಿ ಕೂಡ್ಲೆ ರಿಯಾಕ್ಟ್​ ಮಾಡಿ.. ಮನಸ್ಸಲ್ಲಿ ಇಟ್ಕೊಳ್ಳದೇ ವಾದಕ್ಕೆ ಇಳಿಯೋದು. ಇದು ಅಶ್ವಿನಿ ಅವ್ರ ಸ್ವಾಭಿಮಾನವೋ ಇಲ್ಲ ಈಗೋನೋ ಗೊತ್ತಿಲ್ಲ.
/filters:format(webp)/newsfirstlive-kannada/media/media_files/2025/12/09/ashwini-gowda-10-2025-12-09-14-47-21.jpg)
ಹೀಗೆ ಇಬ್ಬರಲ್ಲೂ ಪ್ಲಸ್​ ಇವೆ ಮೈನಸ್​ ಇವೆ.. ಸ್ಟ್ರೆಂಥೂ ಇವೆ ವೀಕ್ನೆಸ್ಸು ಇವೆ. ಇದೆಲ್ಲಾ ಇನ್ನೊಂದು ವಾರದಲ್ಲಿ ಕರಗಿ ಹೋಗಲಿವೆ. ಹೋರಾಟ.. ಮಾತುಗಳ ಕದನಕ್ಕೆ ತೆರೆ ಬೀಳಲಿದೆ. ಯಾರು ತಾನು ಮಾಡಿದ್ದೇ ಸರಿ ಅಂತ ಪ್ರೂವ್​ ಮಾಡಿಕೊಳ್ತಾರೋ.. ಯಾರು ಸೋಲನ್ನ ಒಪ್ಪಿಕೊಳ್ತಾರೋ.. ವೇಯ್ಟ್​ ಅಂಡ್ ಸೀ.
ಇದನ್ನೂ ಓದಿ: ಡಲ್ ಹೊಡೆದ ಗಿಲ್ಲಿ.. ಕೊನೆ ಕ್ಷಣದಲ್ಲಿ ಗೇಮ್ ಚೇಂಜರ್ ಆದ್ರಾ ಅಶ್ವಿನಿ ಗೌಡ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us