Advertisment

ಸೂರ್ಯನಿಗೂ ಗೇಟ್ ಪಾಸ್​ ಕೊಡಲು ಬಿಸಿಸಿಐ ಪ್ಲಾನ್.. ಕಾಂಗರೂ ನಾಡಲ್ಲಿ ಅಗ್ನಿಪರೀಕ್ಷೆ..!

ಟೀಮ್​ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್​ ಯಾದವ್ ಕರಿಯರ್​ ಸಂಕಷ್ಟಕ್ಕೆ ಸುಲುಕಿದೆ. ಬ್ಯಾಟ್​ ಹಿಡಿದು ಘರ್ಜಿಸುತ್ತಿದ್ದ ಸೂರ್ಯ ಸೈಲೆಂಟ್​ ಆಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ನಾಯಕನಾಗಿ ಆಯ್ಕೆಯಾಗಿದ್ರೂ ಸೂರ್ಯನ ಸೇಫ್​ ಇಲ್ಲ.

author-image
Ganesh Kerekuli
Surya kumar yadav (9)
Advertisment
  • ನಾಯಕನಾದ ಬಳಿಕ ಸೂರ್ಯನಿಗೆ ‘ಗ್ರಹಣ’.!
  • ಸತತ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿದ ಕರಿಯರ್
  • ಆಸ್ಟ್ರೇಲಿಯಾದಲ್ಲಿ ಫೇಲ್​ ಆದ್ರೆ ತಂಡದಿಂದ ಔಟ್​​..?

ಟೀಮ್​ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್​ ಯಾದವ್ ಕರಿಯರ್​ ಸಂಕಷ್ಟಕ್ಕೆ ಸುಲುಕಿದೆ. ಬ್ಯಾಟ್​ ಹಿಡಿದು ಘರ್ಜಿಸುತ್ತಿದ್ದ ಸೂರ್ಯ ಸೈಲೆಂಟ್​ ಆಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ನಾಯಕನಾಗಿ ಆಯ್ಕೆಯಾಗಿದ್ರೂ ಸೂರ್ಯನ ಸೇಫ್​ ಇಲ್ಲ. ಕಾಂಗರೂ ನಾಡಲ್ಲೂ ಸೂರ್ಯಕುಮಾರ್​ ಶೈನ್​ ಆಗದೇ ಇದ್ರೆ ಸ್ಥಾನಪಲ್ಲಟವಾಗೋದ್ರಲ್ಲಿ ಅನುಮಾನವೇ ಇಲ್ಲ.  

Advertisment

ಸೂರ್ಯಕುಮಾರ್ ಯಾದವ್.. ಟಿ20 ಕ್ರಿಕೆಟ್​​ನ ಬ್ರ್ಯಾಂಡ್ ಅಂಬಾಸಿಡರ್.  ಚುಟುಕು ಕ್ರಿಕೆಟ್​ನ ಈ ಬ್ರ್ಯಾಂಡ್​​ ಒಮ್ಮೆ ಸಿಡಿದು ನಿಂತ್ರೆ ಸ್ಫೋಟ ಫಿಕ್ಸ್​. ಬಾಲ್​ ಡಾಟ್ ಅನ್ನೋ ಪದವನ್ನೇ ಇಷ್ಟ ಪಡದ ಡೆಡ್ಲಿಯೆಸ್ಟ್ ಬ್ಯಾಟರ್. ಫಸ್ಟ್​ ಬಾಲ್ ಟು ಲಾಸ್ಟ್​ ಬಾಲ್​​​​​​​​​​​​​​​​​​​​​​​​ ತನಕ ರನ್​​​​ ಸುನಾಮಿ ಸೃಷ್ಟಿಸುತ್ತಿದ್ದರು. ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡನ್ನ ಬಡಿದಟ್ತಾ ಇದ್ದ ಸೂರ್ಯನ ಶಾಖಕ್ಕೆ ಎದುರಾಳಿಗಳು ವಿಲವಿಲ ಒದ್ದಾಡ್ತಿದ್ದರು. ಇಂಥ ಸೂರ್ಯನಿಗೆ ಇದೀಗ ಗ್ರಹಣ ಹಿಡಿದಂತಿದೆ. ಪ್ರಜ್ವಲಿಸ್ತಿದ್ದ ಸೂರ್ಯ ಮಂಕಾಗಿದ್ದಾನೆ. 

ಇದನ್ನೂ ಓದಿ: ಶ್ರೇಯಸ್​ ಅಯ್ಯರ್​ ನೋಡಲು ನಾವು ಸಿಡ್ನಿಗೆ ಹೋಗಲ್ಲ.. ಮಗನ ಬಗ್ಗೆ ತಂದೆ ಹೀಗೆ ಹೇಳಿದ್ದು ಯಾಕೆ?

SURYA_KUMAR_BAT

ಡು ಆರ್​​ ಡೈ ಕಣದಲ್ಲಿ ಸೂರ್ಯಕುಮಾರ್​ ಯಾದವ್​

ಸತತ ವೈಫಲ್ಯ ಅನುಭವಿಸಿರೋ ಸೂರ್ಯಕುಮಾರ್​ ಯಾದವ್​ ಕರಿಯರ್​ ಈಗ​ ಸಂಕಷ್ಟಕ್ಕೆ ಸಿಲುಕಿದೆ. ಈ ವರ್ಷವಂತೂ ಸೂರ್ಯನ ಆಟ ಅತ್ಯಂತ ಹೀನಾಯ ಸ್ಥಿತಿ ತಲುಪಿದೆ. ಟಿ20 ನಂಬರ್​ 1 ಬ್ಯಾಟರ್​ ಆಗಿ  ಮೆರೆದಾಡಿದ್ದ ಸೂರ್ಯ ಈಗ ಪಾತಾಳಕ್ಕೆ ಕುಸಿದಿದ್ದಾರೆ. ಸತತ ವೈಫಲ್ಯ ಕಂಡಿರೋ ಮುಂಬೈಕರ್​ ಪಾಲಿಗೆ ಆಸ್ಟ್ರೇಲಿಯಾ ಪ್ರವಾಸ ಡು ಆರ್​​ ಡೈ ಸರಣಿಯಾಗಿದೆ. 

Advertisment

ಆಸ್ಟ್ರೇಲಿಯಾದಲ್ಲಿ ಫೇಲ್​ ಆದ್ರೆ ಡೋರ್​​ ಕ್ಲೋಸ್​

ಈಗಾಗಲೇ ಟೆಸ್ಟ್​ ತಂಡದಿಂದ ಡ್ರಾಪ್​ ಆಗಿರೋ ಸೂರ್ಯನಿಗೆ ಒನ್​ ಡೇ ತಂಡದಲ್ಲೂ ಸ್ಥಾನವಿಲ್ಲದಂತಾಗಿದೆ. ನಾಯಕನಾಗಿರೋ ಕಾರಣಕ್ಕೆ ಟಿ20 ತಂಡದಲ್ಲಿ ಮಾತ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಹೀಗಾಗಿ ನಾಳೆಯಿಂದ ಆರಂಭವಾಗೋ ಆಸ್ಟ್ರೇಲಿಯಾ ಎದುರಿನ ಸರಣಿ ಸೂರ್ಯನ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ. ವೈಫಲ್ಯ ಮುಂದುವರೆದ್ರೆ ಎಲ್ಲಾ ಫಾರ್ಮೆಟ್​ನಲ್ಲೂ ಸೂರ್ಯನಿಗೆ ಡೋರ್​​ ಕ್ಲೋಸ್​ ಆಗೋದು ಕನ್ಫರ್ಮ್.  

ಇದನ್ನೂ ಓದಿ: 6, 6, 6, 6, 6; ಪೃಥ್ವಿ ಶಾ ಬ್ಯಾಟಿಂಗ್ ಅಬ್ಬರ​​.. 29 ಬೌಂಡರಿ, ಡಬಲ್ ಹಂಡ್ರೆಡ್​ ಸಿಡಿಸಿದ ಯಂಗ್ ಬ್ಯಾಟರ್​!

Surya kumar yadav (5)

ಯಾರು ಬ್ಯಾಟಿಂಗ್​ಗೆ ಬಂದ್ರೆ ಬೌಲರ್​​ಗಳು ನಡುಗಿ ಹೋಗ್ತಿದ್ರೋ ಎದುರಾಳಿ ಪಡೆ ಬೆಚ್ಚಿ ಬೀಳ್ತಿತ್ತೋ ಆ ಸೂರ್ಯಕುಮಾರ್​ ಯಾದವ್​ ಕಂಡ್ರೆ ಈಗ ಯಾರಿಗೂ ಭಯವಿಲ್ಲದಂತಾಗಿದೆ. ಇದಕ್ಕೆ ರಿಸೆಂಟ್​ ಆಗಿ ಅಂತ್ಯವಾದ ಏಷ್ಯಾಕಪ್​​​ ಟೂರ್ನಿ ಬೆಸ್ಟ್​ ಎಕ್ಸಾಂಪಲ್​. ನಾಯಕನಾಗಿ ಕಪ್​ ಗೆಲ್ಲಿಸಿದ್ರು ಆದ್ರೆ, ಆಟಗಾರನಾಗಿ ಅಟ್ಟರ್​​ಫ್ಲಾಪ್​ ಶೋ ನೀಡಿದ್ರು. ಏಷ್ಯಾಕಪ್​ನಲ್ಲಿ ನೀಡಿದ ಹೀನಾಯ ಪರ್ಫಾಮೆನ್ಸ್​ ಸೆಲೆಕ್ಟರ್ಸ್​ ಹಾಗೂ ಮ್ಯಾನೇಜ್​ಮೆಂಟ್​ಗೆ ನಿರಾಸೆ ಮೂಡಿಸಿದೆ.  ಏಷ್ಯಾಕಪ್​ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿದ ಸೂರ್ಯಕುಮಾರ್​​ ಯಾದವ್ ಕೇವಲ 72 ರನ್​ಗಳಿಸಿದ್ರು. ಕೇವಲ 18.00ರ ಸರಾಸರಿ ಹೊಂದಿದ್ದು, ಕೇವಲ 6 ಬೌಂಡರಿ, 2 ಸಿಕ್ಸರ್​​ ಸಿಡಿಸಿದ್ರು.

Advertisment

2025ರಲ್ಲಿ ಸೂರ್ಯಕುಮಾರ್​​ ಬ್ಯಾಟ್​ ಫುಲ್​ ಸೈಲೆಂಟ್​

ಏಷ್ಯಾಕಪ್​ ಟೂರ್ನಿ ಮಾತ್ರವಲ್ಲ. ಈ ವರ್ಷದ ಆರಂಭದಿಂದಲೂ ಸೂರ್ಯಕುಮಾರ್​​ ಬ್ಯಾಟ್​​​ ಸೈಲೆಂಟ್​ ಮೂಡ್​ಗೆ ಜಾರಿದೆ. 2025ರಲ್ಲಿ 12 ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್​ ಕೇವಲ 100 ರನ್​ಗಳಿಸಿದ್ದಾರೆ. 11.11ರ ಹೀನಾಯ ಸರಾಸರಿ ಹೊಂದಿದ್ದು, ಅರ್ಧಶತಕದ ಗಡಿ ದಾಟಲೂ ಪರದಾಡಿದ್ದಾರೆ. 12 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಡಕೌಟ್​ ಕೂಡ ಆಗಿದ್ದಾರೆ. 

ಇದನ್ನೂ ಓದಿ:ಶ್ರೇಯಸ್ ಅಯ್ಯರ್​ ಬಗ್ಗೆ ಬಿಗ್ ಅಪ್​ಡೇಟ್​.. ಕ್ಯಾಪ್ಟನ್ ಸೂರ್ಯಕುಮಾರ್ ಏನ್ ಹೇಳಿದರು?

Surya kumar yadav (10)

2024ರಲ್ಲಿ ಟೀಮ್​ ಇಂಡಿಯಾ ಟಿ20 ಚಾಂಪಿಯನ್​ ಆದ ಬಳಿಕ ನಾಯಕನ ಪಟ್ಟ ಅಲಂಕರಿಸಿದ ಸೂರ್ಯಕುಮಾರ್​​ ಯಾದವ್​ ಮೇಲೆ ಅಪಾರವಾದ ನಿರೀಕ್ಷೆಯಿತ್ತು. ನಾಯಕನ ಪಟ್ಟವೇರಿದ್ದೇ ಏರಿದ್ದು, ಸೂರ್ಯಕುಮಾರ್​​ ಬ್ಯಾಟಿಂಗ್​ ಚಾರ್ಮೇ​ ಕಳೆದು ಹೋಗಿದೆ. ಮೈದಾನದ ಉದ್ದಗಲಕ್ಕೆ ಚೆಂಡಿನ ದರ್ಶನ ಮಾಡಿಸಿ ಎದುರಾಳಿಗಳನ್ನ ಕಂಗೆಡಿಸ್ತಾ ಇದ್ದ ಸೂರ್ಯಕುಮಾರ್​ ರನ್​ಗಳಿಕೆಗೆ ತಿಣುಕಾಟ ನಡೆಸಿದ್ದಾರೆ. ನಾಯಕತ್ವವೇ ಸೂರ್ಯನಿಗೆ ಹೊರೆಯಾಗ್ತಿದ್ಯಾ ಎಂಬ ಪ್ರಶ್ನೆಯೂ ಹುಟ್ಟಿದೆ.

Advertisment

ನಾಯಕನಾದ ಬಳಿಕ ಸೂರ್ಯ

ಟೀಮ್​ ಇಂಡಿಯಾದ ನಾಯಕನ ಪಟ್ಟವೇರಿದ ಬಳಿಕ ಸೂರ್ಯಕುಮಾರ್​​ 20 t20 ಪಂದ್ಯಗಳನ್ನ ಆಡಿದ್ದಾರೆ. ಈ ಪಂದ್ಯಗಳಲ್ಲಿ ಕೇವಲ 18.33ರ ಸರಾಸರಿಯಲ್ಲಿ 330 ರನ್​ಗಳಿಸಿರೋ ಸೂರ್ಯ 2 ಬಾರಿ ಅರ್ಧಶತಕದ ಗಡಿದಾಟಿದ್ದಾರಷ್ಟೇ. 2026ರಲ್ಲಿ ಟಿ20 ವಿಶ್ವಕಪ್​ ಟೂರ್ನಿ ನಡೆಯಲಿದ್ದು, ಇದಕ್ಕೆ ಸಿದ್ಧತೆ ಟೀಮ್​ ಇಂಡಿಯಾದಲ್ಲಿ ಜೋರಾಗಿ ನಡೀತಿದೆ. ಇದ್ರ ನಡುವೆ ಸೂರ್ಯಕುಮಾರ್​ ಯಾದವ್​ ಸತತ ವೈಫಲ್ಯ ಅನುಭವಿಸ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲೂ ಫೇಲ್​ ಆದ್ರೆ, ಸೂರ್ಯನಿಗೆ ಗೇಟ್​ಪಾಸ್​ ಗ್ಯಾರೆಂಟಿ.

ಸೂರ್ಯನಿಗೆ ಪರ್ಯಾಯವಾಗಿ ಶುಭ್​ಮನ್​ ಗಿಲ್​ ನಾಯಕತ್ವದ ಜವಾಬ್ದಾರಿ ಹೊರಲು ರೆಡಿಯಾಗಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಗೆಲ್ಲಿಸಿದ್ದನ್ನೂ ಲೆಕ್ಕಿಸದೇ ಏಕದಿನದಲ್ಲಿ ರೋಹಿತ್​ ಶರ್ಮಾನ ಕೆಳಗಿಳಿಸಿ ಗಿಲ್​ ಪಟ್ಟ ಕಟ್ಟಲಾಗಿದೆ. ಸತತ ವೈಫಲ್ಯ ಅನುಭವಿಸ್ತಿರೋ ಸೂರ್ಯಕುಮಾರ್​​ ಯಾವ ಲೆಕ್ಕ.? ಹೀಗಾಗಿ ಕಾಂಗರೂ ನಾಡಲ್ಲಿ ಫೇಲ್​ ಆದ್ರೆ ಸೂರ್ಯನಿಗೆ ಸಂಕಷ್ಟ ತಪ್ಪಿದ್ದಲ್ಲ.

ಇದನ್ನೂ ಓದಿ:ಸ್ವಾರ್ಥಕ್ಕೆ ಪ್ಲೇಯರ್ಸ್​ ಸೈಡ್​ಲೈನ್​.. ಟೀಮ್ ಇಂಡಿಯಾದಲ್ಲಿ ಫೇವರಿಸಂಗೆ ಆಟಗಾರರ ಬದುಕು ಬಲಿ..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Suryakumar Yadav profile Surya kumar Yadav
Advertisment
Advertisment
Advertisment