ಧೋನಿಗೆ BCCI ಬಿಗ್ ಆಫರ್​.. ಮತ್ತೆ ಟೀಂ ಇಂಡಿಯಾದಲ್ಲಿ ಬದಲಾವಣೆ?

2026ರ ಟಿ20 ವಿಶ್ವಕಪ್ ದೃಷ್ಟಿಯಲ್ಲಿ ಇಟ್ಟುಕೊಂಡೇ ತೆರೆ ಹಿಂದೆ ಕಾರ್ಯ ನಿರ್ವಹಿಸ್ತಿರುವ ಬಿಸಿಸಿಐ ಬಿಗ್​ಬಾಸ್​ಗಳು, ಮತ್ತೊಮ್ಮೆ ಧೋನಿಯನ್ನ ಮೆಂಟರ್ ಆಗಿ ಕರೆತರಲು ಚಿಂತಿಸಿದ್ದಾರೆ. ಮತ್ತೊಂದ್ಕಡೆ ಧೋನಿಯ ಆಪ್ತರು ಹೊಸ ಇನ್ನಿಂಗ್ಸ್​ ಶುರು ಮಾಡೋಕೆ ಸಜ್ಜಾಗಿ ನಿಂತಿದ್ದಾರೆ.

author-image
Ganesh Kerekuli
MS Dhoni (1)
Advertisment

ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಸಜ್ಜಾಗ್ತಿದೆ. 2026ರ ಟಿ20 ವಿಶ್ವಕಪ್ ದೃಷ್ಟಿಯಲ್ಲಿ ಇಟ್ಟುಕೊಂಡೇ ತೆರೆ ಹಿಂದೆ ಕಾರ್ಯ ನಿರ್ವಹಿಸ್ತಿರುವ ಬಿಸಿಸಿಐ ಬಿಗ್​ಬಾಸ್​ಗಳು, ಮತ್ತೊಮ್ಮೆ ಧೋನಿಯನ್ನ ಮೆಂಟರ್ ಆಗಿ ಕರೆತರಲು ಚಿಂತಿಸಿದ್ದಾರೆ. ಮತ್ತೊಂದ್ಕಡೆ ಧೋನಿಯ ಆಪ್ತರು ಹೊಸ ಇನ್ನಿಂಗ್ಸ್​ ಶುರು ಮಾಡೋಕೆ ಸಜ್ಜಾಗಿ ನಿಂತಿದ್ದಾರೆ.

ಪ್ರತಿಷ್ಠೆಯ ವಿಶ್ವಕಪ್​ ಗೆಲ್ಲಲು ಪ್ಲಾನ್

ಏಷ್ಯಾಕಪ್​​​​ ಟೂರ್ನಿಗಾಗಿ ಟೀಮ್ ಇಂಡಿಯಾ ದುಬೈ ಹಾರಲು ಸಜ್ಜಾಗಿದೆ. ಬಿಸಿಸಿಐ ಮಾತ್ರ 2026ರಲ್ಲಿ ನಡೆಯೋ ಟಿ20 ವಿಶ್ವಕಪ್​ ಸಿದ್ಧತೆಯಲ್ಲಿ ಬ್ಯುಸಿಯಾಗಿದೆ. ಟಿ20 ಚಾಂಪಿಯನ್ ಟೀಮ್ ಇಂಡಿಯಾಗೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವುದು ಪ್ರತಿಷ್ಠೆಯಾಗಿದೆ. ಇದೇ ಕಾರಣಕ್ಕೆ ಮಾಸ್ಟರ್ ಪ್ಲಾನ್ ರೂಪಿಸ್ತಿರುವ ಬಿಸಿಸಿಐ ಬಾಸ್​​ಗಳು, ಮಿಸ್ಟರ್​ ಕೂಲ್​ ಮಾಹಿಗೆ ತಂಡಕ್ಕೆ ಕರೆತರಲು ಮುಂದಾಗಿದ್ದಾರೆ. ಆಟಗಾರನಾಗಿ ಅಲ್ಲ ಮೆಂಟರ್​ ಆಗಿ.

ಇದನ್ನೂ ಓದಿ:ಪೃಥ್ವಿ ಶಾ ಬಾಳಿಗೆ 3ನೇ ಗರ್ಲ್​ಫ್ರೆಂಡ್​​ ಎಂಟ್ರಿ.. ಯಾರು ಈ ಸುಂದರಿ?

2024ರ ಟಿ20 ವಿಶ್ವಕಪ್​ ಗೆದ್ದಿರುವ ಟೀಮ್ ಇಂಡಿಯಾ 17 ವರ್ಷಗಳ ಬಳಿಕ 2ನೇ ಬಾರಿಗೆ ಟಿ20 ಚಾಂಪಿಯನ್ ಆಗಿ ಮೆರೆದಾಡಿತ್ತು. ಈ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವುದು ಬಿಗ್​ಬಾಸ್​ಗಳಿಗೆ ಪ್ರತಿಷ್ಠೆಯ ಕಣವಾಗಿದೆ. ತವರಿನಲ್ಲೇ ಟಿ20 ವಿಶ್ವಕಪ್ ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಶತಯಾ-ಗತಾಯ ಗೆಲ್ಲೋಕೆ ಪಣ ತೊಟ್ಟಿದೆ. ಈ ನಿಟ್ಟಿನಲ್ಲೇ ಬಿಸಿಸಿಐ, ಮಿಸ್ಟರ್​ ಕೂಲ್ ಮಾಹಿಗೆ ಆಫರ್ ನೀಡಿದ್ದಾರೆ. ಟಿ20 ವಿಶ್ವಕಪ್​ ವೇಳೆ ತಂಡದ ಮೆಂಟರ್ ಆಗುವಂತೆ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.

ಟಿ20 ತಂಡಕ್ಕೆ ಬೇಕಿದೆ ಮಾರ್ಗದರ್ಶನ

2024ರ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಒಂದಾದ್ರೆ, ಮತ್ತೊಂದ್ಕಡೆ 2016ರ ನಂತರ ಟಿ20 ವಿಶ್ವಕಪ್​ ಭಾರತದಲ್ಲಿ ವಿಶ್ವಕಪ್​ ಟೂರ್ನಿ ನಡೀತಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಎಕ್ಸೈಟ್​​ಮೆಂಟ್​​ ಹೆಚ್ಚಿಸಿದೆ. ಹೀಗಾಗಿ 2007ರಲ್ಲಿ ಧೋನಿ ನೇತೃತ್ವದ ಟೀಮ್ ಇಂಡಿಯಾ ಜಯಿಸಿದಂತೆ, ಇಂದು ಸೂರ್ಯ ನಾಯಕತ್ವದ​ ಪಡೆ ಗೆದ್ದು ಬೀಗುತ್ತೆ ಎಂಬ ನಿರೀಕ್ಷೆ ಫ್ಯಾನ್ಸ್​ದ್ದಾಗಿದೆ. ಈ ನಿರೀಕ್ಷೆಯ ಭಾರವೇ ಆಟಗಾರರನ್ನ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಪರಿಹಾರವಾಗಿಯೇ ಬಿಗ್​ಬಾಸ್​ಗಳು ಮೆಂಟರ್ ಆಗಿ ಧೋನಿ ನೇಮಿಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ:RCB ವಿಜಯೋತ್ಸವ ದುರಂತ ಆಯಿತು.. ಮೌನ ಮುರಿದ ವಿರಾಟ್ ಕೊಹ್ಲಿ, ಫ್ಯಾನ್ಸ್​ಗೆ ಹೇಳಿದ್ದೇನು?

ಟಿ20 ವಿಶ್ವಕಪ್​ ಭಾರತದಲ್ಲೇ ನಡೀತಾ ಇರೋದು ತಂಡಕ್ಕೆ ಅಡ್ವಾಂಟೇಜ್​. ಸೂರ್ಯ ನಾಯಕತ್ವದ ಟೀಮ್ ಇಂಡಿಯಾ, ಯುವಕರ ಪಡೆಯಿಂದಲೇ ತುಂಬಿದೆ. ಬಹುತೇಕ ಆಟಗಾರರು ಐಸಿಸಿ ಟೂರ್ನಿಗಳಲ್ಲಿ ಆಡಿಲ್ಲ. ಹೀಗಾಗಿ ಹಾರ್ಡ್​ ವರ್ಕ್​​, ಎಫರ್ಟ್​​​​ ಜೊತೆಗೆ ಸ್ಮಾರ್ಟ್​​ ಗೇಮ್​ ಸೇರಿದ್ರೆ, ಟ್ರೋಫಿ ಗೆಲುವು ಸುಲಭ ಅನ್ನೋದು ಬಿಸಿಸಿಐ ಲೆಕ್ಕಾಚಾರ.  ಧೋನಿಯನ್ನು ವಿರೋಧಿಸುವ ಹೆಡ್​ ಕೋಚ್​ ಗಂಭೀರ್, ಗ್ರೀನ್ ಸಿಗ್ನಿಲ್ ನೀಡುವುದು ಕಷ್ಟ ಸಾಧ್ಯ. 

ಧೋನಿ ಬಂಟ ಸುರೇಶ್ ರೈನಾ ಚಿತ್ತ

ಒಂದ್ಕಡೆ  ಧೋನಿ ಮೆಂಟರ್ ಆಗ್ತಾರೆ ಎಂಬ ಸುದ್ದಿ ಹರಿದಾಡ್ತಿದ್ರೆ ಮತ್ತೊಂದ್ಕಡೆ ಧೋನಿ ಆಪ್ತರಾಗಿರುವ ಸುರೇಶ್ ರೈನಾ, ಅಶ್ವಿನ್, ಹೊಸ ಇನ್ನಿಂಗ್ಸ್​ ಆರಂಭಿಸುವತ್ತ ದೃಷ್ಟಿ ನೆಟ್ಟಿದ್ದಾರೆ. ಪ್ರಮುಖವಾಗಿ ಸುರೇಶ್ ರೈನಾ, ಸೀಸನ್​-19 ಐಪಿಎಲ್​ನಲ್ಲಿ ಕೋಚಿಂಗ್ ಹುದ್ದೆ ವಹಿಸಿಕೊಳ್ತಾರೆ ಎನ್ನಲಾಗ್ತಿದೆ. ಚೆನ್ನೈ ತಂಡದ ಬ್ಯಾಟಿಂಗ್ ಕೋಚ್ ಆಗ್ತಾರೆ ಎಂಬ ಗುಸುಗುಸು ಐಪಿಎಲ್ ವಲಯದಲ್ಲಿ ಓಡಾಡ್ತಿದೆ. 

ಪ್ಲೇಯರ್ ಕಮ್​ ಕೋಚ್​ ಆಗಲು ಆರ್​.ಅಶ್ವಿನ್ ರೆಡಿ!

ಕೆಲ ದಿನಗಳ ಹಿಂದಷ್ಟೇ ಐಪಿಎಲ್​ಗೆ ಗುಡ್ ಬೈ ಹೇಳಿರುವ ಅಶ್ವಿನ್, ಕೋಚಿಂಗ್ ಕಡೆಗೆ ಒಲವು ಹೊಂದಿದ್ದಾರೆ. ಹೀಗಾಗಿ ವಿದೇಶಿ ಲೀಗ್​ಗಳಲ್ಲಿ ಪ್ಲಯರ್ ಕಮ್ ಕೋಚ್ ಆಗಲು ಉತ್ಸುಕ ತೋರಿದ್ದಾರೆ. ದಿ ಹಂಡ್ರೆಡ್ ಲೀಗ್, ಮೇಜರ್ ಕ್ರಿಕೆಟ್ ಲೀಗ್, ಸೌತ್ ಆಫ್ರಿಕಾ ಟಿ20ಯಂಥ ವಿದೇಶಿ ಲೀಗ್​​ಗಳಲ್ಲಿ ಹೊಸ ರೋಲ್ ಪ್ಲೇ ಮಾಡೋ ಚಾನ್ಸ್​ ದಟ್ಟವಾಗಿದೆ.  ಈಗಾಗಲೇ ದಿನೇಶ್ ಕಾರ್ತಿಕ್​​​​​​​​, ಕಿರನ್ ಪೊಲಾರ್ಡ್​, ಐಪಿಎಲ್​​ನಲ್ಲಿ ಕೋಚ್​ಗಳಾಗಿ ಕಾರ್ಯ ನಿರ್ವಹಿಸಿ, ವಿದೇಶಿ ಆಟಗಾರನಾಗಿ ಆಡ್ತಿದ್ದಾರೆ. ಇದೇ ರೀತಿ ಅಶ್ವಿನ್, ಮಾಡಿದ್ರೂ ಅಚ್ಚರಿ ಇಲ್ಲ.   

ಇದನ್ನೂ ಓದಿ:IPLಗೆ ಗುಡ್​ ಬೈ ಹೇಳಿದ ಬೆನ್ನಲ್ಲೇ ಪ್ರತಿಷ್ಠಿತ ಬಿಬಿಎಲ್​​ನಲ್ಲಿ ಕಾಣಿಸಿಕೊಳ್ತಾರಾ ಲೆಜೆಂಡರಿ ಪ್ಲೇಯರ್?

ಕೋಚ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸ್ತಾರಾ ಪೂಜಾರ?

ಸುರೇಶ್ ರೈನಾ, ಆರ್.ಅಶ್ವಿನ್ ಮಾತ್ರವೇ ಅಲ್ಲ.  ಟೆಸ್ಟ್ ಸ್ಪೆಷಲಿಸ್ಟ್​ ಪೂಜಾರ ಸಹ ಹೊಸ ಇನ್ನಿಂಗ್ಸ್ ಆರಂಭಿಸುವುದು ಫಿಕ್ಸ್​. ಈಗಷ್ಟೇ ಕ್ರಿಕೆಟ್​ಗೆ ಗುಡ್ ಬೈ ಹೇಳಿರುವ ಪೂಜಾರ, ಸದ್ಯ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಟಿಕ್ನಿಕಲಿ ನಾಲೆಡ್ಜ್ ಹೊಂದಿರುವ ಪೂಜಾರ, ಐಪಿಎಲ್​​​ಗಿಂತ ದೇಶಿ ಕ್ರಿಕೆಟ್​ನಲ್ಲಿ ಅಗ್ನಿಪರೀಕ್ಷೆಗೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ಶೀಘ್ರದಲ್ಲೇ ದೇಶಿ ಟೂರ್ನಿಗಳು ಆರಂಭವಾಗಲಿದ್ದು, ಯಾವ ರಾಜ್ಯದ ಪರ ಕೋಚ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸ್ತಾರೆ ಅನ್ನೋದು ಕಾದುನೋಡಬೇಕಿದೆ.

ಇದನ್ನೂ ಓದಿ:ಒಬ್ಬನಿಗಾಗಿ ಮೂವರ ಬಲಿ ಪಡೆದ ಫ್ರಾಂಚೈಸಿ.. ದ್ರಾವಿಡ್ ತಲೆದಂಡಕ್ಕೆ ಕಾರಣ ರಿವೀಲ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

MS Dhoni car craze MS Dhoni defamation case MS Dhoni investment MS Dhoni
Advertisment