/newsfirstlive-kannada/media/media_files/2025/08/31/rahul-dravid-2025-08-31-08-31-59.jpg)
ಡಿಸೆಂಬರ್ನಲ್ಲಿ ನಡೆಯೋ ಮಿನಿ ಆಕ್ಷನ್ಗೂ ಮುನ್ನ ಐಪಿಎಲ್ ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲಂತೂ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಸಂಜು ಸ್ಯಾಮ್ಸನ್ ತಂಡದಿಂದ ಹೊರ ಬರೋ ನಿರ್ಧಾರ ಮಾಡಿ ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದ್ರು. ಇದೀಗ ಹೆಡ್ಕೋಚ್ ರಾಹುಲ್ ದ್ರಾವಿಡ್ ಸರ್ಪ್ರೈಸ್ ಶಾಕ್ ಕೊಟ್ಟಿದ್ದಾರೆ. ಹೆಡ್ಕೋಚ್ ಪಟ್ಟಕ್ಕೆ ದಿ ವಾಲ್ ಗುಡ್ ಬೈ ಹೇಳಿದ್ದಾರೆ.
ದ್ರಾವಿಡ್ ‘ತಲೆದಂಡ’ಕ್ಕೆ ಅಸಲಿ ಕಾರಣ ಏನು?
ರಾಜಸ್ಥಾನ್ ರಾಯಲ್ಸ್ ಹೆಡ್ಕೋಚ್ ಸ್ಥಾನದಿಂದ ದ್ರಾವಿಡ್ ಕೆಳಗಿಳೀತಾರೆ ಅಂತಾ ಯಾರೊಬ್ಬರೂ ಊಹೆ ಕೂಡ ಮಾಡಿರಲಿಲ್ಲ. ಸುದೀರ್ಘ ಕಾಲದಿಂದ ಫ್ರಾಂಚೈಸಿ ಜೊತೆಗೆ ದ್ರಾವಿಡ್ ಇದ್ರು. ಫ್ರಾಂಚೈಸಿ ವಲಯದಲ್ಲಿ ದ್ರಾವಿಡ್ಗೆ ರೆಸ್ಪೆಕ್ಟ್ ಹೆಚ್ಚಿತ್ತು. ಆದ್ರೀಗ ಇದ್ದಕ್ಕಿದ್ದಂತೆ ದ್ರಾವಿಡ್ ಎಕ್ಸಿಟ್ ಆಗಿದ್ದಾರೆ. ಇದಕ್ಕೆ ಫ್ರಾಂಚೈಸಿ ಕೊಟ್ಟ ಬಿಗ್ಗರ್ ಪೋಸ್ಟ್ನ ಆಫರ್ನ ರಿಜೆಕ್ಟ್ ಮಾಡಿದ್ದು ಕಾರಣ ಎನ್ನಲಾಗ್ತಿದೆ. ಜೊತೆಗೆ ಕಳೆದ ಸೀಸನ್ನ ಕಳಪೆ ಪ್ರದರ್ಶನವೂ ನಿರ್ಧಾರದ ಹಿಂದಿದೆ ಅನ್ನೋ ಸುದ್ದಿಯೂ ಇದೆ. ಆದ್ರೆ ಅಸಲಿ ಕಾರಣ ಬೇರೆಯೇ ಇದೆ.
ಇದನ್ನೂ ಓದಿ:ಕಿಂಗ್ ಕೊಹ್ಲಿನ ಫಾಲೋ ಮಾಡ್ತಿರೋ ಯಂಗ್ ಪ್ಲೇಯರ್.. ಈಗ ಸ್ಟೈಲೀಶ್ ಸ್ಟಾರ್..!
/filters:format(webp)/newsfirstlive-kannada/media/media_files/2025/08/13/sanju-samson-2025-08-13-18-46-18.jpg)
ಪರಾಗ್ ಮೇಲೆ ಮಾಲೀಕರಿಗೆ ವಿಪರೀತ ವ್ಯಾಮೋಹ
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಯಾಗಿರೋದಕ್ಕೆ ಮುಖ್ಯ ಕಾರಣವೇ ರಿಯಾನ್ ಪರಾಗ್. ಅದೇನೋ ಗೊತ್ತಿಲ್ಲ.. ಈ ಪರಾಗ್ ಮೇಲೆ ಫ್ರಾಂಚೈಸಿ ಮಾಲೀಕರಿಗೆ ವಿಪರೀತವಾದ ವ್ಯಾಮೋಹ. 2019ರಿಂದ ತಂಡದಲ್ಲಿರೋ ರಿಯಾನ್ ಪರಾಗ್ 2024ರ ಸೀಸನ್ ಒಂದು ಬಿಟ್ರೆ ಉಳಿದ್ಯಾವ ಸೀಸನ್ನಲ್ಲೂ ಅದ್ಭುತ ಅನ್ನುವಂತಹ ಪರ್ಫಾಮೆನ್ಸ್ ನೀಡಿಲ್ಲ. ಈತನಿಗೆ ತಂಡದಲ್ಲಿ ಸ್ಥಾನ ಮಾತ್ರ ಮಿಸ್ ಆಗಿಲ್ಲ. ಇದೀಗ ಈ ಪರಾಗ್ನ ರಾಜಸ್ಥಾನದ ನೂತನ ರಾಜನನ್ನಾಗಿ ಮಾಡೋಕೆ ಕೂಡ ಫ್ರಾಂಚೈಸಿ ಹೊರಟಿದೆ. ಈ ನಿರ್ಧಾರವೇ ನೋಡಿ ಅಲ್ಲೋಲ ಕಲ್ಲೋಲಕ್ಕೆ ಕಾರಣ.
ಪರಾಗ್ಗೆ ನಾಯಕತ್ವ ನೀಡಲು ದ್ರಾವಿಡ್ ವಿರೋಧ
ಮುಂದಿನ ಸೀಸನ್ಗೂ ಮುನ್ನ ರಿಯಾನ್ ಪರಾಗ್ಗೆ ಪಟ್ಟಾಭಿಷೇಕ ಮಾಡೋದು ಫ್ರಾಂಚೈಸಿ ಪ್ಲಾನ್ ಆಗಿತ್ತು. ದ್ರಾವಿಡ್ ಇದಕ್ಕೆ ಸುತಾರಂ ಒಪ್ಪಿರಲಿಲ್ಲ. ರಿಯಾನ್ ಪರಾಗ್ ಬದಲಾಗಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮೇಲೆ ದ್ರಾವಿಡ್ಗೆ ಒಲವಿತ್ತು. ದ್ರಾವಿಡ್ ಅಭಿಪ್ರಾಯ ಫ್ರಾಂಚೈಸಿ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಇದ್ರಿಂದ ಬೇಸರಗೊಂಡೇ ದ್ರಾವಿಡ್ ತಂಡದಿಂದ ಹೊರಬರುವ ನಿರ್ಧಾರ ಮಾಡಿದ್ರು.
ಇದನ್ನೂ ಓದಿ:ಐಪಿಎಲ್ ಆಡ್ಲಿಲ್ಲ, ವಿಶ್ವಕಪ್ನಲ್ಲೂ ಇಲ್ಲ.. ಎಲ್ಲಿಗೆ ಹೋದ್ರು ಕನ್ನಡತಿ..?
ಸ್ಯಾಮ್ಸನ್ಗೆ ಮ್ಯಾನೇಜ್ಮೆಂಟ್ ಮೇಲೆ ಬೇಸರ
ಸಂಜು ಸ್ಯಾಮ್ಸನ್ ಅಂದ್ರೆ ರಾಜಸ್ಥಾನ್ ರಾಯಲ್ಸ್. ರಾಜಸ್ಥಾನ್ ರಾಯಲ್ಸ್ ಅಂದ್ರೆ ಸಂಜು ಸ್ಯಾಮ್ಸನ್ ಅನ್ನೋ ಮಾತಿತ್ತು. ಸುದೀರ್ಘ ಕಾಲದಿಂದ ಫ್ರಾಂಚೈಸಿ ಜೊತೆಗೆ ಅವಿನಾಭಾವ ನಂಟು ಹೊಂದಿದ್ದ ಸಂಜು ಸ್ಯಾಮ್ಸನ್ ಇದ್ದಕ್ಕಿದ್ದಂತೆ ತಂಡದಿಂದ ಹೊರ ಬರೋ ನಿರ್ಧಾರ ಮಾಡಿದ್ದಕ್ಕೂ ಇದೇ ಪರಾಗ್ ಕಾರಣ. ಪರಾಗ್ಗೆ ಪಟ್ಟ ಕಟ್ಟಲು ಮ್ಯಾನೇಜ್ಮೆಂಟ್ನ ನಿರ್ಧರಿಸಿದ್ದು ಸಂಜುಗೆ ಬೇಸರ ತರಿಸಿತ್ತು. ಆ ಬಳಿಕವೇ ನನ್ನನ್ನ ತಂಡದಿಂದ ರಿಲೀಸ್ ಮಾಡಿ ಅಥವಾ ಟ್ರೇಡ್ ಮಾಡಿ ಎಂದು ಫ್ರಾಂಚೈಸಿಗೆ ಸಂಜು ಮನವಿ ಮಾಡಿದ್ದು.
ಇದನ್ನೂ ಓದಿ:S ಶ್ರೀಶಾಂತ್ಗೆ ಇಂಜುರಿ ಆದ್ರೆ.. ಈ IPL ಫ್ರಾಂಚೈಸಿನ ಸುಪ್ರೀಂ ಕೋರ್ಟ್ಗೆ ಎಳೆದ ಇನ್ಶುರೆನ್ಸ್ ಕಂಪನಿ
ಜೋಸ್ ಬಟ್ಲರ್ಗೆ ಮೋಸ
2018ರಿಂದ ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ರು. ಪ್ರತಿ ಸೀಸನ್ನಲ್ಲೂ ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಿದ್ರು. 2025 ಮೆಗಾ ಆಕ್ಷನ್ಗೂ ಮುನ್ನ ಫ್ರಾಂಚೈಸಿ ಬಟ್ಲರ್ನ ರಿಲೀಸ್ ಮಾಡ್ತು. ಬಟ್ಲರ್ನ ಬಿಟ್ಟು ಪರಾಗ್ನ ಉಳಿಸಿಕೊಂಡಿದ್ದು, ಸಂಜು ಸ್ಯಾಮ್ಸನ್ ಹಾಗೂ ರಾಹುಲ್ ದ್ರಾವಿಡ್ ಇಬ್ಬರಲ್ಲೂ ಬೇಸರ ತರಿಸಿತ್ತು. ಅಲ್ಲಿಂದ ಆರಂಭವಾದ ಬೇಸರ ಇದೀಗ ಇವರಿಬ್ಬರೇ ತಂಡದಿಂದ ಹೊರ ಬರೋದ್ರಿಂದಿಗೆ ಅಂತ್ಯವಾಗಿದೆ.
ರಾಹುಲ್ ದ್ರಾವಿಡ್ರ ಮುಂದಿನ ನಡೆ ಏನು?
ರಾಜಸ್ಥಾನ್ ರಾಯಲ್ಸ್ಗೆ ಗುಡ್ ಬೈ ಹೇಳಿದ ರಾಹುಲ್ ದ್ರಾವಿಡ್ರ ಮುಂದಿನ ನಡೆ ಏನು ಅನ್ನೋದು ಕ್ರಿಕೆಟ್ ವಲಯದ ಕುತೂಹಲದ ಪ್ರಶ್ನೆಯಾಗಿದೆ. ಹೊಸ ಕೋಚ್ ಹುಡುಕಾಟದಲ್ಲಿರೋ 2 ಬಾರಿಯ ಚಾಂಪಿಯನ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ದ್ರಾವಿಡ್ನ ಅಪ್ರೋಚ್ ಮಾಡಿದೆ. ದ್ರಾವಿಡ್ ಫೈನಲ್ ನಿರ್ಧಾರ ತಿಳಿಸಿಲ್ಲ. ಇದ್ರ ನಡುವೆ ಸಂಜು ಸ್ಯಾಮ್ಸನ್ಗೂ ಕೆಕೆಆರ್ ಗಾಳ ಹಾಕ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಕೆಕೆಆರ್ ತಂಡದಲ್ಲಿ ಮತ್ತೊಮ್ಮೆ ಗುರು-ಶಿಷ್ಯರ ಸಮಾಗಮವಾಗಲಿದೆ.
ಇದನ್ನೂ ಓದಿ:ಮಿಡಿದ RCB.. ಸ್ಥಳೀಯರಿಗೆ ಉದ್ಯೋಗ, ಸ್ಮಾರಕ ಸೇರಿ ಕೆಲ ಯೋಜನೆಗೆ ಬಿಗ್ ಪ್ಲಾನ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ