/newsfirstlive-kannada/media/media_files/2025/09/05/dhoni-and-shrinivasan-2025-09-05-18-24-55.jpg)
ಕಳೆದ ಸೀಸನ್ನಲ್ಲಿ ಹೀನಾಯ ಪರ್ಫಾಮೆನ್ಸ್ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂದಿನ ಸೀಸನ್ನಲ್ಲಿ ಶತಯಗತಾಯ ಕಮ್ಬ್ಯಾಕ್ ಮಾಡೋಕೆ ರೆಡಿಯಾಗಿದೆ. 2026 ಐಪಿಎಲ್ಗೆ ಬಲಿಷ್ಟ ಟೀಮ್ ಕಟ್ಟೋಕೆ ಈಗಿನಿಂದಲೇ ಸಿಎಸ್ಕೆ ತಂಡದಲ್ಲಿ ಚುಟುವಟಿಗಳು ನಡೀತಿವೆ. ತಂಡವನ್ನ ಮತ್ತೆ ಬಲಿಷ್ಟಗೊಳಿಸೋಕೆ ಇದೀಗ ಫ್ರಾಂಚೈಸಿಯ ದಿಗ್ಗಜರು ಒಂದಾಗಿದ್ದಾರೆ.
ಇದನ್ನೂ ಓದಿ:ಹೊಸ ಲುಕ್ನಲ್ಲಿ ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ.. ಹೋಗಿದ್ದು ಎಲ್ಲಿಗೆ ಗೊತ್ತಾ?
ಮುಂದಿನ ಐಪಿಎಲ್ ಸೀಸನ್ಗೆ ಫ್ರಾಂಚೈಸಿಗಳಲ್ಲಿ ಸದ್ದಿಲ್ಲದೇ ಸಿದ್ಧತೆ ಶುರುವಾಗಿದೆ. ಆಟಗಾರರ ವರ್ಗಾವಣೆ, ರಿಟೈನ್, ರಿಲೀಸ್ ಚರ್ಚೆಗಳು ಜೋರಾಗಿವೆ. ಕಳೆದ ಸೀಸನ್ನಲ್ಲಿ ಹೀನಾಯ ಪ್ರದರ್ಶನ ನೀಡಿದ ಸಿಎಸ್ಕೆ ತಂಡದಲ್ಲಂತೂ ಚಟುವಟಿಕೆಗಳು ಜೋರಾಗಿವೆ. ತಂಡವನ್ನ ಮತ್ತೆ ಬಲಿಷ್ಟಗೊಳಿಸೋಕೆ, ಫ್ಯೂಚರ್ ಟೀಮ್ ರೆಡಿ ಮಾಡೋಕೆ ಯೋಜನೆಗಳು ಸಿದ್ಧವಾಗ್ತಿವೆ. ಇದಕ್ಕಾಗಿ ಚೆನ್ನೈ ಫ್ರಾಂಚೈಸಿಯ ದಿಗ್ಗಜರು ಮತ್ತೆ ಒಂದಾಗಿದ್ದಾರೆ.
ಮತ್ತೆ CSK ಚೇರ್ಮನ್ ಹುದ್ದೆಗೇರಿದ ಶ್ರೀನಿವಾಸನ್
ಸಿಎಸ್ಕೆ ರಿಬ್ಯುಲ್ಡ್ ಮಾಡೋ ನಿಟ್ಟಿನಲ್ಲಿ ಚೆನ್ನೈ ಸೂಪರ್ ಫ್ರಾಂಚೈಸಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ದಶಕದಿಂದ ಕ್ರಿಕೆಟ್ ಆಡಳಿತದಿಂದ ದೂರ ಉಳಿದಿದ್ದ ಎನ್. ಶ್ರೀನಿವಾಸನ್ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಅಧ್ಯಕ್ಷರಾಗಿ ಮತ್ತೆ ಅಧಿಕಾರ ವಹಿಸಿದಕೊಂಡಿದ್ದಾರೆ. 2025ರ ಡಿಸೆಂಬರ್ ಅಂತ್ಯದಲ್ಲಿ ನಡೆಯೋ ಮಿನಿ ಹರಾಜಿಗೂ ಮುನ್ನ ಶ್ರೀನಿವಾಸನ್ ಕಮ್ಬ್ಯಾಕ್ ಮಾಡಿರೋದು ತಂಡದಲ್ಲಿ ಮಹತ್ವದ ಬದಲಾವಣೆಗಳ ಭರವಸೆ ಹುಟ್ಟಿಸಿದೆ.
ಧೋನಿ ಗುಡ್ನ್ಯೂಸ್
ಶ್ರೀನಿವಾಸನ್ ಸಿಎಸ್ಕೆ ತಂಡದ ಅಧ್ಯಕ್ಷ ಹುದ್ದೆ ಅಲಂಕರಿಸಿದ ಬೆನ್ನಲ್ಲೇ ಎಮ್.ಎಸ್ ಧೋನಿ ಅಭಿಮಾನಿಗಳಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ. ಧೋನಿ 2026ರ ಐಪಿಎಲ್ ಆಡ್ತಾರಾ.? ಇಲ್ವಾ.? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರದ ಹುಡುಕಾಟ ಕೇವಲ ಅಭಿಮಾನಿಗಳಲ್ಲೇ ಅಲ್ಲ, ಚೆನ್ನೈ ಫ್ರಾಂಚೈಸಿಯಲ್ಲೂ ನಡೀತಿತ್ತು. ಇದೀಗ ಈ ಪ್ರಶ್ನೆಗೆ ಧೋನಿ ಆನ್ಸರ್ ಕೊಟ್ಟಿದ್ದಾರೆ. ಶ್ರೀನಿವಾಸನ್ ಅಧ್ಯಕ್ಷ ಹುದ್ದೆಗೇರುತ್ತಿದ್ದಂತೆ ಧೋನಿ ಮುಂದಿನ ಸೀಸನ್ ಆಡೋದಾಗಿ ಫ್ರಾಂಚೈಸಿಗೆ ತಿಳಿಸಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.
ಮತ್ತೆ ತಂಡ ಬಲಿಷ್ಟಗೊಳಿಸಲು ಒಂದಾದ ದಿಗ್ಗಜರು?
ಎಮ್.ಎಸ್ ಧೋನಿ ಮತ್ತು ಎನ್.ಶ್ರೀನಿವಾಸನ್. ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನ ಸೂತ್ರದಾರರು. ಮೊದಲ ಸೀಸನ್ನಿಂದ ಚೆನ್ನೈ ತಂಡವನ್ನ ಧೋನಿ ಯಶಸ್ವಿಯಾಗಿ ಮುನ್ನಡೆಸಿದ್ರೆ, ಶ್ರೀನಿವಾಸನ್ ಅಧ್ಯಕ್ಷರಾಗಿ ಆಡಳಿತವನ್ನ ನಿರ್ವಹಿಸಿದ್ರು. ತಂಡವನ್ನ ಕಟ್ಟಿದ್ದು, ಫ್ರಾಂಚೈಸಿಯನ್ನ ಯಶಸ್ವಿನ ಉತ್ತುಂಗಕ್ಕೇರಿಸಿದ್ದು ಈ ದಿಗ್ಗಜರೇ. ಶ್ರೀನಿವಾಸನ್ ಅಧ್ಯಕ್ಷ ಹುದ್ದೆಯಿಂದ, ಧೋನಿ ನಾಯಕತ್ವದಿಂದ ಕೆಳಗಿಳಿದ ಮೇಲೆ ಚೆನ್ನೈ ತಂಡ ಹಳಿ ತಪ್ಪಿತು. ಇದೀಗ ಮತ್ತೆ ತಂಡವನ್ನ ಬಲಿಷ್ಠಗೊಳಿಸೋಕೆ ದಿಗ್ಗಜರು ಒಂದಾಗಿದ್ದಾರೆ ಅನ್ನೋದು ಕ್ರಿಕೆಟ್ ವಲಯದ ಟಾಕ್.
ಇದನ್ನೂ ಓದಿ:RCB ವಿಜಯೋತ್ಸವದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಟೂರ್ನಿ
/filters:format(webp)/newsfirstlive-kannada/media/media_files/2025/08/13/ms-dhoni-2025-08-13-15-59-33.jpg)
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ 13 ಬಾರಿ ಪ್ಲೇ-ಆಫ್ ತಲುಪಿದೆ. 5 ಬಾರಿ ಐಪಿಎಲ್ ಟ್ರೋಫಿಗೂ ಮುತ್ತಿಟ್ಟಿದೆ. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಚಾಂಪಿಯನ್ ಟೀಮ್ ಆಗಿ ಗುರುತಿಸಿಕೊಂಡಿದೆ. ಇಂಥ ಚಾಂಪಿಯನ್ ಟೀಮ್, ಕಳೆದ ಸೀಸನ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿತ್ತು. ಸತತ ಸೋಲುಗಳ ಮುಖಭಂಗ ಅನುಭವಿಸಿತ್ತು. ಹಿಂದೆಂದೂ ಕಾಣದ ಹೀನಾಯ ಪ್ರದರ್ಶನ ನೀಡಿ ಟೀಕೆಗಳನ್ನ ಎದುರಿಸಿತು. ಆ ಕಳಪೆ ಪ್ರದರ್ಶನದ ಕುರಿತು ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ಧೋನಿ ಬದಲಾವಣೆಯ ಹಿಂಟ್ ಕೊಟ್ಟಿದ್ರು.
ನಮಗೆ ಕಳೆದ ಕೆಲ ವರ್ಷಗಳು ಉತ್ತಮವಾಗಿಲ್ಲ. ಅಂದುಕೊಂಡ ಫಲಿತಾಂಶ ಬಂದಿಲ್ಲ. ಅದಕ್ಕೇ ಕಾರಣ ಏನೇ ಇರಲಿ, ಕಲಿಯುವುದು ಮುಖ್ಯ. ಏನು ತಪ್ಪಾಯ್ತು ಎಂಬುವುದೇ ಕಳೆದ ವರ್ಷ ನಮ್ಮ ಪ್ರಶ್ನೆಯಾಗಿತ್ತು. ಕೆಲ ನೂನ್ಯತೆಗಳು ಇವೆ. ಏನೆಲ್ಲಾ ತಪ್ಪಾಗಿದೆ ಎಂದು ತಿಳಿಬೇಕಾಗಿತ್ತು. ಏನು ಪರಿಹಾರ ಇದೆ ಎಂಬುವುದು ಅರಿಯಬೇಕಿತ್ತು. ಡಿಸೆಂಬರ್‌ನಲ್ಲಿ ಮಿನಿ ಹರಾಜು ಇದೆ. ಸಮಸ್ಯೆಗಳನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತೇವೆ -ಎಂಎಸ್ ಧೋನಿ
ಕಳೆದ ತಿಂಗಳು ಧೋನಿ ಚೆನ್ನೈಗೆ ಸರ್ಪ್ರೈಸ್ ವಿಸಿಟ್ ನೀಡಿದ್ರು. ಈ ವೇಳೆ ಸಿಎಸ್ಕೆ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಕೂಡ ಚೆನ್ನೈನಲ್ಲೇ ಇದ್ರು. ಆ ಭೇಟಿಯ ವೇಳೆಯೇ ಚೆನ್ನೈ ಸೂಪರ್ ಕಿಂಗ್ಸ್ ಕಚೇರಿಯಲ್ಲಿ ಮಹತ್ವದ ಮೀಟಿಂಗ್ ನಡೆದಿತ್ತು. ಧೋನಿ, ಋತುರಾಜ್ ಗಾಯಕ್ವಾಡ್, ಸಿಎಸ್ಕೆ ಸಿಇಒ ಕಾಸಿ ವಿಶ್ವನಾಥನ್ ಹಾಗೂ ಚೇರ್ಮನ್ ಶ್ರೀನಿವಾಸನ್ ಈ ಸಭೆಯಲ್ಲಿ ಭಾಗಿಯಾಗಿದ್ರು. ಡಿಸೆಂಬರ್‌ನಲ್ಲಿ ನಡೆಯೋ ಮಿನಿ ಆಕ್ಷನ್ಗೂ ಮುನ್ನ ಆಟಗಾರರ ರಿಟೈನ್, ರಿಲೀಸ್ ಹಾಗೂ ತಂಡಕ್ಕೆ ಬೇಕಾದ ಆಟಗಾರರ ಖರೀದಿ ಸೇರಿದಂತೆ ಫ್ರಾಂಚೈಸಿಯ ಭವಿಷ್ಯದ ಯೋಜನೆಗಳ ಬಗ್ಗೆ ಆ ಸಭೆಯಲ್ಲಿ ಚರ್ಚಿಸಲಾಗಿತ್ತು.
ಇದನ್ನೂ ಓದಿ:ಶಿಕ್ಷಕರ ದಿನ ಶಿಷ್ಯರ ನೆನೆದ ಕೋಚ್.. ಗುರುವಿಗೆ 80 ಲಕ್ಷ ಆರ್ಥಿಕ ಸಹಾಯ ಮಾಡಿದ ಪಾಂಡ್ಯ ಬ್ರದರ್ಸ್..!
ಧೋನಿಗೀಗ 44 ವರ್ಷ. ಮೊಣಕಾಲಿನ ಇಂಜುರಿ ಸಮಸ್ಯೆ ಬೇರೆ ಧೋನಿಯನ್ನ ಕಾಡ್ತಿದೆ. ಶ್ರೀನಿವಾಸಗೂ ಅಷ್ಟೇ ಅನಾರೋಗ್ಯದ ಸಮಸ್ಯೆಯಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಇಬ್ಬರೂ ಒಂದಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ತಂಡವನ್ನ ರಿಬ್ಯುಲ್ಡ್ ಮಾಡೋ ಇವರ ಯತ್ನಕ್ಕೆ ಸಕ್ಸಸ್ ಸಿಗುತ್ತಾ? ಕಾದು ನೋಡೋಣ.
ಇದನ್ನೂ ಓದಿ:ಪಾಂಡ್ಯ ಬೆಂಕಿ ಲುಕ್! ಈ ಫೋಟೋಗಳನ್ನ ನೀವು ನೋಡಲೇಬೇಕು.. Photos
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ