/newsfirstlive-kannada/media/media_files/2025/10/04/team-india-announcement-2025-10-04-14-53-21.jpg)
ಗಂಭೀರ್ ಅವರ ಒಂದೊಂದು ನಡೆ ಅನುಮಾನ ಮೂಡಿಸುತ್ತದೆ. ತೆಗೆದುಕೊಳ್ಳೋ ಒಂದೊಂದು ನಿರ್ಧಾರ ಆತಂಕ ಸೃಷ್ಟಿಸುತ್ತದೆ. ಗಂಭೀರ್ ಕೋಚ್ ಆದ್ಮೇಲೆ ತಂಡದಲ್ಲಿ ಪಾಸಿಟೀವ್​ ವಾತಾವರಣ ಮಾಯವಾಗಿದೆ. ಪ್ಲಾನ್ ಏನು? ವಿಷನ್ ಏನು? ಅನ್ನೋದು ಯಾರಿಗೂ ಅರ್ಥವಾಗ್ತಿಲ್ಲ. ಗಂಭೀರ್​​​, ಹಿಟ್ಲರ್​​ರಂತೆ ವರ್ತಿಸ್ತಿರೋದು ಮಾತ್ರ ಮೇಲ್ನೋಟಕ್ಕೆ ಕಣ್ಣಿಗೂ ಕುಕ್ಕುವಂತೆ ಕಾಣುತ್ತದೆ.
ಗೌತಮ್ ಗಂಭೀರ್ ಆಟಗಾರನಾಗಿದ್ದಾಗ ಸಿಕ್ಕಾಪಟ್ಟೆ ಅಗ್ರೆಸಿವ್ ಆಗಿದ್ರು. ಇದು ನಿಮ್ಮೆಲ್ಲರಿಗೂ ಗೊತ್ತಿರೋ ವಿಚಾರನೇ. ಆದ್ರೆ ಗಂಭೀರ್ ಟೀಮ್ ಇಂಡಿಯಾ ಕೋಚ್ ಆದ್ಮೇಲೆ, ಹೆಚ್ಚು ಅಗ್ರೆಸಿವ್ ಆಗಿ ನಡೆದುಕೊಳ್ತಿದ್ದಾರೆ. ಗಂಭೀರ್ ಅಗ್ರೆಸಿವ್ ಇದ್ದರೆ ತಪ್ಪಲ್ಲ. ಯಾವಾಗಲೂ ಅಗ್ರೆಸಿವ್ ನಡೆ ಅನುಸರಿಸೋದು ಸರಿಯಲ್ಲ. ಗಂಭೀರ್​ರ ನಡೆ, ನುಡಿ ಗಮನಿಸ್ತಿದ್ರೆ, ಅವರು ಟೀಮ್ ಇಂಡಿಯಾದಲ್ಲಿ ದಾದಾಗಿರಿ ಮಾಡ್ತಿದ್ದಾರೆ.
/filters:format(webp)/newsfirstlive-kannada/media/media_files/2025/09/13/gautam_gambhir_surya-2025-09-13-17-26-22.jpg)
ಹಿಟ್ಲರ್​ರಂತೆ ಗಂಭೀರ್ ಕೂಡ ನಡೆದುಕೊಳ್ತಿದ್ದಾರೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗ್ತಿದೆ. ಆದ್ರೆ ಪ್ರಶ್ನೆ ಅದಲ್ಲ. ಟೀಮ್ ಇಂಡಿಯಾಕ್ಕೆ ಇಂತಹ ಸರ್ವಾಧಿಕಾರಿ ಕೋಚ್ ಬೇಕಿತ್ತಾ ಅನ್ನೋದು. ಶುಭ್ಮನ್ ಗಿಲ್ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ. ಸೂರ್ಯಕುಮಾರ್ ಯಾದವ್ ಟಿ-ಟ್ವೆಂಟಿ ತಂಡದ ನಾಯಕ. ಇಬ್ಬರೂ ಯುವ ನಾಯಕರೇ.
ಇಬ್ಬರಿಗೂ ತಂಡವನ್ನ ಆಯ್ಕೆ ಮಾಡೋದು ಪ್ಲೇಯಿಂಗ್ ಇಲೆವೆನ್ ಸೆಲೆಕ್ಟ್ ಮಾಡೋಕೆ ಅಧಿಕಾರ ಇಲ್ಲ. ಇಲ್ಲಿ ಕೋಚ್ ಗಂಭೀರ್ ಮಾತೇ ಫೈನಲ್. ಗಂಭೀರ್ ಯಾವ ಆಟಗಾರನನ್ನ ಆಡಿಸಬೇಕು? ಯಾವ ಆಟಗಾರರ ಡ್ರಾಪ್ ಮಾಡಬೇಕು ಅಂತ ಕ್ಯಾಪ್ಟನ್​​ಗೆ ಹೇಳ್ತಾರೆ. ತಂಡದ ನಾಯಕ ಅದನ್ನ ತಪ್ಪದೇ ಫಾಲೋ ಮಾಡಬೇಕು. ಕೋಚ್ ಮುಂದೆ ಕ್ಯಾಪ್ಟನ್ ಡಮ್ಮೀ ಅನ್ನೋಕ್ಕೆ, ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಮತ್ತೊಂದು ಇಲ್ಲ.
ಇದನ್ನೂ ಓದಿ: ‘ಬಂದಿದ್ದೇ ಲೇಟು..’ ಕೊಹ್ಲಿ-ರೋಹಿತ್ ಬಗ್ಗೆ ಅಚ್ಚರಿ ವಿಷಯ ಬಿಚ್ಚಿಟ್ಟ ಕೈಫ್..!
/filters:format(webp)/newsfirstlive-kannada/media/media_files/2025/10/19/kohli-rohit-gill-1-2025-10-19-15-45-23.jpg)
ಈ ಹಿಂದೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕನಾಗಿದ್ದಾಗ ಮತ್ತು ರವಿ ಶಾಸ್ತ್ರಿ ಕೋಚ್ ಆಗಿದ್ದಾಗ. ತಂಡದ ಕಲ್ಚರೇ ಬೇರೆಯಿತತ್ತು. ಕೋಚ್ ರವಿ ಶಾಸ್ತ್ರಿ, ಈ ತಂಡ ನನ್ನದಲ್ಲ. ಈ ತಂಡದ ನಾಯಕನದ್ದು. ನಾಯಕ ನಿರ್ಧಾರವೇ ಫೈನಲ್ ಅಂತ ಹೇಳಿದ್ರು. ಅಷ್ಟೇ ಯಾಕೆ? ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ, ನಾಯಕ ರೋಹಿತ್ ಶರ್ಮಾಗೆ ಎಲ್ಲಾ ನಿರ್ಧಾರಗಳನ್ನ ಕೈಗೊಳ್ಳಲು ಫ್ರೀಡಂ ನೀಡ್ತಿದ್ರು. ದ್ರಾವಿಡ್ ಹಿಂದೆ ನಿಂತು, ರೋಹಿತ್​​​ ಶರ್ಮಾರನ್ನ ಬ್ಯಾಕ್ ಮಾಡ್ತಿದ್ರು. ಆದ್ರೀಗ ಟೀಮ್ ಇಂಡಿಯಾದಲ್ಲಿ ಎಲ್ಲವೂ ಉಲ್ಟಾ! ಕೋಚ್ ಹೇಳಿದ್ದೇ ಮಾತು. ಆ ಮಾತನ್ನ ನಾಯಕನಾಗಲಿ ಅಥವಾ ಆಟಗಾರರಾಗಲಿ, ಮೀರುವಂತಿಲ್ಲ. ಇದು ಈಗಿನ ಲೇಟೆಸ್ಟ್ ಕಥೆ.
ಗೌತಮ್ ಗಂಭೀರ್ ಕೋಚ್ ಆದ್ಮೇಲೆ ಮೊದಲು ಮಾಡಿದ ಕೆಲಸಾನೇ ಇದು. ಹಿರಿಯ ಆಟಗಾರರನ್ನ ಸೈಡ್​ಲೈನ್ ಮಾಡಿ, ತಂಡದ ಯುವ ಆಟಗಾರರನ್ನ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್.ಅಶ್ವಿನ್, ಮೊಹಮ್ಮದ್ ಶಮಿ ಸೇರಿದಂತೆ ಇನ್ನೂ ಕೆಲ ಹಿರಿಯ ಆಟಗಾರರು ಸದ್ದಿಲ್ಲದಂತೆ ಆದ್ರು. ಹಿರಿಯ ಆಟಗಾರರು ತಂಡದಲ್ಲಿದ್ರೆ, ತನ್ನ ದರ್ಬಾರ್ ನಡೆಯೊಲ್ಲ ಅಂತ ಗಂಭೀರ್ ತನ್ನ ಸ್ವಾರ್ಥ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ: ಅಡಿಲೇಡ್​​ನಿಂದ ಶಾಕಿಂಗ್ ನ್ಯೂಸ್.. 2ನೇ ODI ನಿಂದ ಇಬ್ಬರು ಸ್ಟಾರ್ ನಾಪತ್ತೆ..?
/filters:format(webp)/newsfirstlive-kannada/media/post_attachments/wp-content/uploads/2024/11/KL-Rahul_Gambhir_1.jpg)
ಮುಂಬೈನ ಯುವ ಆಟಗಾರ ಸರ್ಫರಾಜ್ ಖಾನ್, ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಸಣ್ಣ ವಯಸ್ಸಿನಲ್ಲೇ ಸರ್ಫರಾಜ್, ತನ್ನ ಪ್ರತಿಭೆಯಿಂದ ಗಮನ ಸೆಳೆದಿದ್ದಾನೆ. ಇಂತಹ ಟ್ಯಾಲೆಂಟೆಡ್ ಆಟಗಾರರನನ್ನೇ ಗಂಭೀರ್ ತುಳಿದುಬಿಟ್ರು. ಡ್ರೆಸಿಂಗ್ ರೂಮ್ ಸೀಕ್ರೆಟ್ ಲೀಕ್ ಮಾಡ್ತಿದ್ದಾರೆ ಅಂತ ಸರ್ಫರಾಜ್​​ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ, ಕೊನೆಗೆ ಆತನನ್ನ ಮೂಲೆಗುಂಪು ಮಾಡಿಬಿಟ್ರು. ಆತ ಸಿಕ್ಕಾಪಟ್ಟೆ ಹಾರ್ಡ್​​ವರ್ಕ್​ ಮಾಡಿ, ಫಿಟ್ನೆಸ್ ವರ್ಕ್​ಔಟ್ ಮಾಡಿ, ತೂಕ ಇಳಿಸಿಕೊಂಡು ಕಮ್​ಬ್ಯಾಕ್​​​ಗೆ ರೆಡಿಯಾಗಿದ್ರು. ಆತನಿಗೆ ಟೀಮ್ ಇಂಡಿಯಾದಲ್ಲಿರಲಿ, ಇಂಡಿಯಾ ಎ ತಂಡದಲ್ಲೂ ಸ್ಥಾನ ಪಡೆಯದಂತೆ ಮಾಡಿಬಿಟ್ರು.
ಗೌತಮ್ ಗಂಭೀರ್​​​​​​​ ಕೋಚ್ ಆಗಿ ಆಟಗಾರರ ಸರಿ ತಪ್ಪುಗಳನ್ನ ಗುರುತಿಸಿ ಅದನ್ನ ಅವರಿಗೆ ಹೇಳಿ ತಿದ್ದಬೇಕು. ಅದನ್ನ ಬಿಟ್ಟು, ಸರ್ವಾಧಿಕಾರಿ, ಹಿಟ್ಲರ್​ರಂತೆ ವರ್ತಿಸಿದ್ರೆ ಹೆಚ್ಚು ದಿನಗಳು ಕೋಚ್ ಆಗಿ ಉಳಿಯೋದಿಲ್ಲ. ಇದನ್ನ ಗಂಭೀರ್ ಸಹ ತಿಳಿದುಕೊಳ್ಳಬೇಕು.
ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಗೆ ಕಾರಣ 5; KL ರಾಹುಲ್ ಸಮಸ್ಯೆ ಏನು ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us