/newsfirstlive-kannada/media/media_files/2025/09/09/gyle-and-anil-kumble-2025-09-09-14-28-34.jpg)
2021ರ ಐಪಿಎಲ್ ಟೂರ್ನಿ ಅತ್ಯಂತ ವಿಚಿತ್ರ ಘಟನೆಗೆ ಸಾಕ್ಷಿಯಾಗಿತ್ತು. ಯುನಿವರ್ಸೆಲ್ ಬಾಸ್ ಕ್ರಿಸ್ ಗೇಲ್ ಇದ್ದಕ್ಕಿದ್ದಂತೆ ಪಂಜಾಬ್ ತೊರೆದಿದ್ರು. ಇದ್ರೊಂದಿಗೆ ಗೇಲ್ ಐಪಿಎಲ್ ಕರಿಯರ್ ಎಂಡ್ ಆಯ್ತು. ಅಂದು ಟೂರ್ನಿಯ ಮಧ್ಯೆ ತಂಡ ತೊರೆದಿದ್ರ ಹಿಂದಿನ ಸತ್ಯವನ್ನ ಇದೀಗ ಗೇಲ್ ರಿವೀಲ್ ಮಾಡಿದ್ದಾರೆ. ಅಂದಿನ ಹೆಡ್ಕೋಚ್ ಅನಿಲ್ ಕುಂಬ್ಳೆ ಮೇಲೆ ಸ್ಫೋಟಕ ಆರೋಪ ಮಾಡಿದ್ದಾರೆ.
ಕ್ರಿಸ್ಟೋಪರ್ ಹೆನ್ರಿ ಗೇಲ್ ಅಲಿಯಾಸ್ ಕ್ರಿಸ್ ಗೇಲ್. ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್ ಲೋಕವನ್ನ ತನ್ನದೇ ಶೈಲಿಯಲ್ಲಿ ಆಳಿದ ಗೇಲ್ಗೆ ವಿಶ್ವಾದ್ಯಂತ ಸಪರೇಟ್ ಫ್ಯಾನ್ ಬೇಸ್ಯಿದೆ. ಟಿ20 ಕ್ರಿಕೆಟ್ನಲ್ಲಂತೂ ಈತನನ್ನ ಮೀರಿಸೋ ಮತ್ತೊಬ್ಬ ಮಾಸ್ ಎಂಟರ್ಟೈನರ್ ಬಂದಿಲ್ಲ ಬಿಡಿ. ಕ್ರಿಸ್ನಲ್ಲಿ ನಿಂತು ಈ ದೈತ್ಯ ಬೌಂಡರಿ, ಸಿಕ್ಸರ್ ಸುರಿಮಳೆ ಸುರಿಸುತ್ತಿದ್ದರೆ ಸ್ಟ್ಯಾಂಡ್ನಲ್ಲಿ ಫ್ಯಾನ್ಸ್ ಹುಚ್ಚೆದ್ದು ಕುಣೀತಿದ್ರು. ಸಪ್ತ ಸಾಗರದಾಚೆ ಇರೋ ಜಮೈಕಾದಿಂದ ಹಿಡಿದು ನಮ್ಮ ಬೆಂಗಳೂರುವರೆಗೂ ಕ್ರಿಸ್ಗೇಲ್ ನಂಟಿದೆ.
ಇದನ್ನೂ ಓದಿ:ಆಲ್ ಟೈಮ್ IPL ತಂಡ ಪ್ರಕಟಿಸಿದ ಗೇಲ್..! ಆರ್ಸಿಬಿಯಿಂದ ಎಷ್ಟು ಮಂದಿಗೆ ಸ್ಥಾನ..?
ಕ್ರಿಕೆಟ್ ಲೋಕದ ರಿಯಲ್ ಎಂಟರ್ಟೈನರ್ ಎನಿಸಿದ್ದ ಕ್ರಿಸ್ಗೇಲ್ ಐಪಿಎಲ್ ಕರಿಯರ್ ವಿಚಿತ್ರ ರೀತಿಯಲ್ಲಿ ಅಂತ್ಯವಾಯ್ತು. 2021ರ ಐಪಿಎಲ್ ಟೂರ್ನಿಯ ಮಧ್ಯದಲ್ಲೇ ಗೇಲ್ ಪಂಜಾಬ್ ತಂಡವನ್ನ ತೊರೆದ್ರು. ಗೇಲ್ ತಂಡ ತೊರೆದಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಮೊದಲ ಬಾರಿ ಮಾತನಾಡಿರೋ ಕ್ರಿಸ್ ಗೇಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮರ್ಯಾದೆ ಸಿಗಲಿಲ್ಲ
ಸಂದರ್ಶನವೊಂದರಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಕರಿಯರ್ ವಿಚಿತ್ರ ಅಂತ್ಯ ಕಂಡಿದ್ರ ಬಗ್ಗೆ ಗೇಲ್ ಮಾಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಹಾಗೂ ತಂಡದ ಹೆಡ್ ಕೋಚ್ ಅನಿಲ್ ಕುಂಬ್ಳೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಐಪಿಎಲ್ ಕ್ರಿಕೆಟ್ ಕರಿಯರ್ ಅಂತ್ಯವಾಗೋಕೆ ಇವರೇ ಕಾರಣ ನೇರಾ ನೇರವಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಏಷ್ಯಾಕಪ್ಗೂ ಮೊದಲೇ ಟೀಂ ಇಂಡಿಯಾಗೆ ಭರ್ಜರಿ ಗುಡ್ನ್ಯೂಸ್.. ಏನದು?
ಹೌದು.. ನನ್ನನ್ನ ಅಗೌರವಯುತವಾಗಿ ನಡೆಸಿಕೊಳ್ಳಲಾಯ್ತು. ಪಂಜಾಬ್ ಕಿಂಗ್ಸ್ ಇಲೆವೆನ್ ಫ್ರಾಂಚೈಸಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹಿರಿಯ ಆಟಗಾರನಾಗಿ, ಲೀಗ್ನಲ್ಲಿ ಸಾಧನೆ ಮಾಡಿ, ಫ್ರಾಂಚೈಸಿಗೆ ಹೆಚ್ಚಿನ ಮೌಲ್ಯ ತಂದು ಕೊಟ್ಟಿದ್ರೂ ನನಗೆ ಮರ್ಯಾದೆ ಸಿಗಲಿಲ್ಲ. ಅವರು ನನ್ನನ್ನ ಮಗುವಿನಂತೆ ಟ್ರೀಟ್ ಮಾಡಿದ್ರ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಡಿಪ್ರೆಶನ್ಗೆ ಹೋದೆ. ಯಾವಾಗ ಜನ ಡಿಪ್ರೆಶನ್ ಬಗ್ಗೆ ಮಾತನಾಡ್ತಾರೋ ನಾನು ಅದನ್ನ ಅರ್ಥ ಮಾಡಿಕೊಳ್ಳಬಲ್ಲೆ. ನಾವು ಅದರ ಬಗ್ಗೆ ಮಾತನಾಡುತ್ತಿದ್ದೇವೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬಲ್ಲೆ. ಆ ಸಮಯದಲ್ಲಿ ದುಡ್ಡು ಏನೂ ಇಲ್ಲ. ದುಡ್ಡಿಗಿಂತ ಮಾನಸಿಕ ಆರೋಗ್ಯ ಮುಖ್ಯವಾದದ್ದು- ಕ್ರಿಸ್ ಗೇಲ್, ವೆಸ್ಟ್ ವಿಂಡೀಸ್ ಮಾಜಿ ಕ್ರಿಕೆಟಿಗ
ಕುಂಬ್ಳೆ, ಮ್ಯಾನೇಜ್ಮೆಂಟ್ ನಡೆಗೆ ಬೇಸರ
ಆ ಸಮಯದಲ್ಲಿ ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ಆಗಿದ್ರು. ಹೆಡ್ ಕೋಚ್ ಕುಂಬ್ಳೆ ಹಾಗೂ ಮ್ಯಾನೇಜ್ಮೆಂಟ್ ಸರಿಯಾಗಿ ನಡೆಸಿಕೊಳ್ಳದಿದ್ದಿದ್ದಕ್ಕೆ ಗೇಲ್ ತುಂಬಾ ಬೇಸರಗೊಂಡಿದ್ರಂತೆ. ಎಷ್ಟರ ಮಟ್ಟಿಗೆ ಅಂದ್ರೆ ಕುಂಬ್ಳೆ ಜೊತೆ ಮಾತನಾಡುವಾಗ ಕಣ್ನೀರು ಹಾಕಿದ್ರಂತೆ.
ಇದನ್ನೂ ಓದಿ:ಗಿಲ್ಗಾಗಿ ಯಶಸ್ವಿ ಜೈಸ್ವಾಲ್ ಬಲಿ.. ಏಷ್ಯಾಕಪ್ ಓಪನರ್ ಸ್ಲಾಟ್ನಲ್ಲಿ ಮತ್ಯಾರು ಟಾರ್ಗೆಟ್?
ನಾನು ಅನಿಲ್ ಕುಂಬ್ಳೆಗೆ ಕರೆ ಮಾಡಿದ್ದೆ. ಒನ್ ಟು ಒನ್ ಚರ್ಚೆ ನಡೆಸಿದ್ದೆ. ನಾನು ಕುಸಿದು ಹೋಗಿದ್ದೆ. ಎಷ್ಟು ಅಂದ್ರೆ ನಾನು ಮಾತನಾಡುವಾಗ ಅತ್ತು ಬಿಟ್ಟೆ. ಅಷ್ಟು ಬೇಸರವಾಗಿತ್ತು. ನಾನು ಅನಿಲ್ ಕುಂಬ್ಳೆ ಹಾಗೂ ಪೂರ್ತಿ ತಂಡ, ಫ್ರಾಂಚೈಸಿಯನ್ನ ಆಗ ನಡೆಸುತ್ತಿದ್ದವರ ಮೇಲೆ ಬೇಸರಗೊಂಡಿದ್ದೆ. ಆಗ ನಾನು ಹೇಳಿದ್ದೆ ಕೇಳಿಸಿಕೊಳ್ಳಿ ಥ್ಯಾಂಕ್ಯೂ ಅಂತಾ. ಆಗ ಕೆ.ಎಲ್.ರಾಹುಲ್ ನಾಯಕನಾಗಿದ್ರು. ಕಾಲ್ ಮಾಡಿ ಕ್ರಿಸ್ ನೀವು ಇರಬೇಕು ಎಂದು ಹೇಳಿದ್ರು. ಮುಂದಿನ ಪಂದ್ಯದಲ್ಲಿ ನೀವು ಆಡ್ತೀರಾ ಎಂದು ಹೇಳಿದ್ರು. ನನ್ನ ಮಾತನ್ನ ಕೇಳಿಸಿಕೋ ನಿಮಗೆಲ್ಲಾ ಒಳ್ಳೆಯದಾಗಿ ಎಂದು ಹೇಳಿ ಬ್ಯಾಗ್ ಪ್ಯಾಕ್ ಮಾಡಿ ಹೊರಟೆ-ಕ್ರಿಸ್ ಗೇಲ್, ಮಾಜಿ ಕ್ರಿಕೆಟಿಗ
ಪಂಜಾಬ್ ಮೇಲೆ ಗೇಲ್ ಬೇಸರ
2021ರ ಐಪಿಎಲ್ನಲ್ಲಿ ಪಂಜಾಬ್ ತಂಡದಲ್ಲಿ ಮೂವರು ಓಪನರ್ಸ್ ಇದ್ರು. ಗೇಲ್, ಮಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್. ಕನ್ನಡಿಗರಿಗೆ ಮಣೆ ಹಾಕಿದ್ದ ಮ್ಯಾನೇಜ್ಮೆಂಟ್ ಗೇಲ್ನ 3ನೇ ಕ್ರಮಾಂಕದಲ್ಲಿ ಆಡುವಂತೆ ಸೂಚಿಸಿತ್ತು. ಇದು ಗೇಲ್ಗೆ ಬೇಸರಕ್ಕೆ ಮೊದಲ ಕಾರಣ. ಮೊದಲ 8 ಪಂದ್ಯಗಳಲ್ಲಿ ಗೇಲ್ಗೆ ಚಾನ್ಸ್ ನೀಡಿ ಏಡೆನ್ ಮರ್ಕಮ್ ತಂಡಕ್ಕೆ ವಾಪಾಸ್ಸಾದ ಕೂಡಲೇ ಡ್ರಾಪ್ ಮಾಡಲಾಗಿತ್ತು. ಇದು ಇನ್ನಷ್ಟು ನೋವುಂಟು ಮಾಡಿತ್ತು. ನಂತರ ಗೇಲ್ ತಂಡ ತೊರೆದಿದ್ರು.
ಇದನ್ನೂ ಓದಿ:Asia Cup; ಹದ್ದಿನ ಕಣ್ಣಿಟ್ಟ ಸೂರ್ಯಕುಮಾರ್ ಸೇನೆ.. ಭರ್ಜರಿ ಬ್ಯಾಟಿಂಗ್, ಬೌಲಿಂಗ್ ಸಮರಾಭ್ಯಾಸ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ