ಪಾಂಡ್ಯಗೆ ದೊಡ್ಡ ಟೆನ್ಷನ್.. ತಂಡದ ಹೊರಗೂ, ಒಳಗೂ ವಿಲನ್ ಆಗ್ತಿರೋದು ಯಾರು?

ಹಾರ್ದಿಕ್ ಪಾಂಡ್ಯ ಫಾಸ್ಟ್​ ಬೌಲಿಂಗ್ ಆಲೌಂಡರ್. ಪಾಂಡ್ಯನ ಟಿ20, ಏಕದಿನ ಈ ಎರಡೂ ಫಾರ್ಮೆಟ್​​ಗಳ GENUINE ಮ್ಯಾಚ್ ವಿನ್ನರ್. ಆದ್ರೀಗ ಇದೇ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಭವಿಷ್ಯಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ. ಈ ಅಗ್ನಿಪರೀಕ್ಷೆ ಗೆದ್ದರಷ್ಟೇ ಮತ್ತಷ್ಟು ದಿನ ಸೇಫ್.

author-image
Ganesh Kerekuli
Hardik pandya (6)
Advertisment

ಹಾರ್ದಿಕ್ ಪಾಂಡ್ಯ ಫಾಸ್ಟ್​ ಬೌಲಿಂಗ್ ಆಲೌಂಡರ್.  ಪಾಂಡ್ಯನ ಟಿ20, ಏಕದಿನ ಈ ಎರಡೂ ಫಾರ್ಮೆಟ್​​ಗಳ GENUINE ಮ್ಯಾಚ್ ವಿನ್ನರ್. ಆದ್ರೀಗ ಇದೇ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಭವಿಷ್ಯಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ. ಈ ಅಗ್ನಿಪರೀಕ್ಷೆ ಗೆದ್ದರಷ್ಟೇ ಮತ್ತಷ್ಟು ದಿನ ಸೇಫ್.

ಟಿ20 ಏಷ್ಯಾನ್ ಮಹಾ ಸಮರಕ್ಕೆ ಟೀಮ್ ಇಂಡಿಯಾ ಅನೌನ್ಸ್​​​​ ಆಗಿದೆ. 15 ವೀರ ಸೇನಾನಿಗಳು ದುಬೈ ಫ್ಲೈಟ್ ಏರಲು ಸಜ್ಜಾಗಿದ್ದಾರೆ. ತಂಡದ ಆಯ್ಕೆಯ ಪರ ವಿರೋಧದ ಚರ್ಚೆಗಳು ಜೋರಾಗಿವೆ. ಈ ನಡುವೆಯೇ ಸ್ಟಾರ್ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯರ ಭವಿಷ್ಯದ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿವೆ. 

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​​ಗೆ ದ್ರಾವಿಡ್​ ಶಾಕ್; ಕೋಚ್​ ಹುದ್ದೆಗೆ ದಿಢೀರ್ ರಾಜೀನಾಮೆ..!

Hardik pandya (3)

ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್. ಬ್ಯಾಟಿಂಗ್​​ಗೂ ಸೈ, ಬೌಲಿಂಗ್​​ ಜೈ.. ಪಾಂಡ್ಯ ರಿಯಲ್ ಮ್ಯಾಚ್ ವಿನ್ನರ್ ಅನ್ನೋದ್ರಲ್ಲಿ ಡೌಟೇ ಇಲ್ಲ. 2016ರಿಂದ ತಂಡದ ಅವಿಭಾಜ್ಯ ಅಂಗವಾಗಿರುವ ಈ ಬರೋಡ ಸ್ಟಾರ್​​​​​​​​​​​, ಇಂಜುರಿಯಿಂದ ದೂರ ಉಳಿದಿದ್ದು ಬಿಟ್ರೆ, ಫಾರ್ಮ್​ ಸಮಸ್ಯೆಯಿಂದ ಹೊರಬಿದ್ದಿದ್ದು ಅಪರೂಪ. ಇನ್​​ಕನ್ಸಿಸ್ಟೆಂಟ್ ಪರ್ಫಾಮೆನ್ಸ್​ ನೀಡಿದ್ರೂ, ಟೀಮ್​ ಇಂಡಿಯಾ ಪಾಂಡ್ಯ ಮೇಲೆ ಡಿಪೆಂಡ್​ ಆದ ಕಾರಣಕ್ಕೆ ಸ್ಥಾನ ಫಿಕ್ಸ್​ ಆಗಿತ್ತು. ಆದ್ರೆ, ಇನ್ಮುಂದೆ ಕಷ್ಟ!

ಟೆಸ್ಟ್​​ನಿಂದ ಔಟ್​..  

ಈಗಾಗಲೇ ಟೆಸ್ಟ್ ಕ್ರಿಕೆಟ್​ನಿಂದ ದೂರವಾಗಿರುವ ಹಾರ್ದಿಕ್ ಪಾಂಡ್ಯ, ಏಕದಿನ ಕ್ರಿಕೆಟ್​ನಲ್ಲೂ ಕಾಣಿಸಿಕೊಳ್ಳುವುದು ಆಗೊಮ್ಮೆ.. ಈಗೊಮ್ಮೆ ಮಾತ್ರ. ಇದೀಗ ಇದೇ ಹಾರ್ದಿಕ್ ಪಾಂಡ್ಯದ ಟಿ20 ಕರಿಯರ್​ ಅಂತ್ಯಕ್ಕೆ ದಿನಗಣನೆ ಶುರುವಾಗಿದೆ. ಟಿ20 ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಟಫ್ ಫೈಟ್ ಎದುರಿಸಬೇಕಿದೆ. ಇದಕ್ಕೆ ಕಾರಣ ಕಾಂಪಿಟೇಷನ್. ಇದೇ ಕಾಂಪಿಟೇಷನ್ ಹಾರ್ದಿಕ್ ಟಿ20 ಭವಿಷ್ಯಕ್ಕೆ ಕುತ್ತಾಗುತ್ತಾ ಎಂಬ ಪ್ರಶ್ನೆ ಹುಟ್ಟಿಸಿದೆ.

ಇದನ್ನೂ ಓದಿ:ವಿರುಷ್ಕಾ ನೆಚ್ಚಿನ ಶ್ವಾನದ ಹೆಸರೇನು? KL ರಾಹುಲ್ ಏನೆಂದು ಕರೀತಾರೆ?

Hardik pandya (3)

ಪಾಂಡ್ಯಗೆ ಕಾಂಪಿಟೇಟರ್ಸ್

ಟೀಮ್ ಇಂಡಿಯಾಗೆ ಹಲವು ಆಲ್​ರೌಂಡರ್ಸ್ ಬಂದಿದ್ದಾರೆ, ಹೋಗಿದ್ದಾರೆ. ಯಾರೂ ಸಮರ್ಥವಾಗಿ ಹಾರ್ದಿಕ್​ಗೆ ಸಾಟಿಯಾಗಲಿಲ್ಲ. ಕನಿಷ್ಠ ಕಾಂಪಿಟೇಟರ್​ಗಳಾಗಿಯೂ ಉಳಿಯಲಿಲ್ಲ. ಈಗ ಶಿವಂ ದುಬೆ, ಆಕ್ಷರ್ ಪಟೇಲ್​ರಂಥ ಕಾಂಪಿಟೇಟರ್ಸ್ ತಂಡದಲ್ಲಿದ್ದಾರೆ. ಕೇವಲ ಟೀಮ್​​ನಲ್ಲಿ ಮಾತ್ರವಲ್ಲ. ಟೀಮ್ ಹೊರಗೂ ವಾಷಿಂಗ್ಟನ್ ಸುಂದರ್, ನಿತಿಶ್ ರೆಡ್ಡಿಯಂಥ ಆಲ್​ರೌಂಡರ್​ಗಳಿದ್ದಾರೆ. 

ಹಿಂದೆ ಫಾಸ್ಟ್​ ಬೌಲಿಂಗ್ ಆಲ್​ರೌಂಡರ್ ಅಂಡ್ ಮ್ಯಾಚ್ ವಿನ್ನರ್ ಆಗಿ ಪಾಂಡ್ಯರನ್ನೇ ನಂಬಿಕೊಂಡಿದ್ದ ಟೀಮ್ ಇಂಡಿಯಾ, ಈಗ ಒಬ್ಬರನ್ನೇ ನಂಬಿಕೊಳ್ಳುವ ಪರಿಸ್ಥಿತಿ ಇಲ್ಲ. ಟಾಪ್ ಆರ್ಡರ್ ಟು ಲೋವರ್ ಅರ್ಡರ್ ತನಕ ಮ್ಯಾಚ್ ವಿನ್ನರ್ ಅಂಡ್ ಗೇಮ್ ಚೇಂಜರ್ಸ್ ಆಟಗಾರರನ್ನು ಹೊಂದಿದೆ.  

ಇದನ್ನೂ ಓದಿ:ಬಿಸಿಸಿಐನ ಈ ನಡವಳಿಕೆ ಸರಿಯಿಲ್ಲ.. ದಿಗ್ಗಜರಿಗೆ ಕನಿಷ್ಠ ಗೌರವವೂ ಇಲ್ಲದಾಯಿತೇ..?

ಗೆದ್ದರಷ್ಟೇ  ಪಾಂಡ್ಯ ಸೇಫ್​

ಒಂದ್ಕಡೆ ಆಟಗಾರರ ಫೈಪೋಟಿ ಎದುರಿಸ್ತಿರುವ ಪಾಂಡ್ಯ, ಮತ್ತೊಂದ್ಕಡೆ ಆನ್​ಫೀಲ್ಡ್​ನಲ್ಲಿ ಬೆಸ್ಟ್​ ಪರ್ಫಾಮೆನ್ಸ್ ನೀಡುವ ಸವಾಲು ಮುಂದಿದೆ. ಐಪಿಎಲ್​ನಲ್ಲಿ ಬಹುತೇಕ ಫ್ಲಾಫ್ ಆಗಿರುವ ಹಾರ್ದಿಕ್, ದುಬೈನ ಸ್ಲೋ ಅಂಡ್ ಲೋ ಟ್ರ್ಯಾಕ್​ನಲ್ಲಿ ಅಬ್ಬರಿಸಿ ಬೊಬ್ಬೆರೆಯಬೇಕಿದೆ. ಗೇಮ್ ಚೇಂಜರ್​ ಅಂಡ್ ಮ್ಯಾಚ್ ವಿನ್ನರ್ ಪಟ್ಟಕ್ಕೆ ನ್ಯಾಯ ಒದಗಿಸಬೇಕಿದೆ. ಟಿ20ಯಿಂದ ಹಾರ್ದಿಕ್ ಸೈಡ್​ ಲೈನ್ ಆಗೋದು ಫಿಕ್ಸ್​.

ಟಿ20ಯಲ್ಲಿ ವೈಸ್ ಕ್ಯಾಪ್ಟನ್ಸಿ ಕಳೆದುಕೊಂಡಿರುವ ಹಾರ್ದಿಕ್, ಇನ್ಮುಂದೆ ಟಿ20ಯಲ್ಲಿ ಕನ್ಸಿಸ್ಟೆನ್ಸಿ ಉಳಿಸಿಕೊಳ್ಳಬೇಕಿದೆ. ಫಾರ್ಮ್​ ಜೊತೆ ಫಿಟ್ನೆಸ್, ಇಂಜುರಿಯಿಂದ ದೂರ ಉಳಿದರಷ್ಟೇ ಉಳಿಗಾಲ. ಟೆಸ್ಟ್ ಕ್ರಿಕೆಟ್​ನಂತೆಯೇ ಒಂದೊಂದು ಫಾರ್ಮೆಟ್​ನಿಂದ ದೂರವಾಗೋದು ಗ್ಯಾರಂಟಿ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಹಾದಿಯಲ್ಲೇ ಹಾರ್ದಿಕ್ ಪಾಂಡ್ಯ.. ಏನದು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Indian cricket team news Hardik Pandya
Advertisment