/newsfirstlive-kannada/media/media_files/2025/08/28/rohit-dhoni-yuvaraj-singh-2025-08-28-16-40-03.jpg)
ಟೀಮ್ ಇಂಡಿಯಾ ಪ್ರತಿನಿಧಿಸುವುದು ಹೆಮ್ಮೆಯ ವಿಚಾರ. ಹುಟ್ಟುತ್ತಲೇ ಬಹುತೇಕರ ಕನಸಾಗಿರುತ್ತೆ. ಈ ಪೈಕಿ ಕೆಲವರ ಕನಸಷ್ಟೇ ನನಸಾಗುತ್ತೆ. ಶ್ರೇಷ್ಠ ಕ್ರಿಕೆಟರ್ಗಳಾಗಿ ಬೆಳೆಯುತ್ತಾರೆ. ಅಪಾರ ಅಭಿಮಾನಿಗಳ ಬಳಗ ಸಂಪಾದಿಸ್ತಾರೆ. ಲೆಜೆಂಡ್ಗಳಾಗಿ ನಿವೃತ್ತಿ ಹೇಳುವ ಆಟಗಾರರಿಗೆ ಫೇರ್‌ವೆಲ್ ಮ್ಯಾಚ್ ಅನ್ನೋದು ಆಡಬೇಕು ಅನ್ನೋದು ಕನಸಾಗಿರುತ್ತೆ. ಈ ಭಾಗ್ಯವೇ ಟೀಮ್ ಇಂಡಿಯಾದಲ್ಲಿ ಸಿಕ್ತಿಲ್ಲ.
ಇದನ್ನೂ ಓದಿ: ಕೊಹ್ಲಿ ಮಾಡಿದ ಒಂದು ಯಡವಟ್ಟು.. ಈಕೆಯ ಅದೃಷ್ಟವೇ ಬದಲಾಗಿದೆ ನೋಡಿ..!
ಸಿಗುತ್ತಿಲ್ಲ ಭಾವನಾತ್ಮಕ ವಿದಾಯ..!
ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲ. ಒಂದು ಎಮೋಷನ್.. ಕೋಟ್ಯಾಂತರ ಅಭಿಮಾನಿಗಳನ್ನ ಒಂದುಗೂಡಿಸುವ ಶಕ್ತಿ.. ಟೀಮ್ ಇಂಡಿಯಾದ ಗೆಲುವಿಗಾಗಿ ದಶಕಗಳ ಕಾಲ ದುಡಿದ ಕ್ರಿಕೆಟರ್ಗಳಿದ್ದಾರೆ. ಕಪಿಲ್ ದೇವ್ರ ಸುವರ್ಣ ಯುಗದಿಂದ ಹಿಡಿದು, ಸಚಿನ್ ತೆಂಡುಲ್ಕರ್ ಎಂಬ ಮಾತ್ರಿಕ ಲೋಕದಿಂದ ಹಿಡಿದು ಎಮ್.ಧೋನಿಯ ಯುಗಾಂಂತ್ಯದ ತನಕ ಅದೆಷ್ಟೋ ಕ್ರಿಕೆಟರ್ಗಳು ಟೀಮ್ ಇಂಡಿಯಾಗೆ ಬಂದಿದ್ದಾರೆ. ವಿಶ್ವ ಕ್ರಿಕೆಟ್ ಲೋಕವನ್ನು ಆಳಿದ್ದಾರೆ. ದಶಕಗಳ ತನಕ ಟೀಮ್ ಇಂಡಿಯಾದ ಯಶಸ್ಸಿಗಾಗಿ ಶ್ರಮಿಸಿದ್ದಾರೆ. ಅಳಿಸಲಾಗದ ಹೆಜ್ಜೆಯ ಗುರುತುಗಳನ್ನ ಇಟ್ಟಿದ್ದಾರೆ. ಲೆಜೆಂಡರಿ ಆಟಗಾರರಾಗಿ ಕರೆಸಿಕೊಂಡಿದ್ದಾರೆ. ಇಂಥ ಲೆಜೆಂಡರಿ ಆಟಗಾರರಿಗೆ, ದಶಕಗಳ ಕಾಲ ಟೀಮ್ ಇಂಡಿಯಾಗಾಗಿ ಸೇವೆ ಸಲ್ಲಿಸಿದ ಆಟಗಾರರಿಗೆ ಕೊನೆಯಲ್ಲಿ ಸಿಕ್ಕಿದ್ದು ಮಾತ್ರ ಕಹಿ.
ಇದನ್ನೂ ಓದಿ:ಒಂದಕ್ಕಿಂತ ಒಂದು ಸೂಪರ್ ಲವ್ ಸ್ಟೋರಿ.. ಕ್ರಿಕೆಟರ್ಸ್ ಪ್ರೇಮಕಥೆಗಳು..!
/filters:format(webp)/newsfirstlive-kannada/media/media_files/2025/08/01/r-ashwin-2025-08-01-13-11-51.jpg)
ಟೀಮ್ ಇಂಡಿಯಾಗಾಗಿ ಸೇವೆ ಸಲ್ಲಿಸಿದ ಶ್ರೇಷ್ಠ ಆಟಗಾರರಿಗೆ ಗ್ರೇಟ್ ರಿಟೈರ್ಮೆಂಟ್ ಸಿಗಬೇಕು. ರಿಟೈರ್ಮೆಂಟ್ ಮ್ಯಾಚ್ ಮೂಲಕ ಗೌರವ ಸಲ್ಲಿಸಬೇಕು ಅನ್ನೋದು ಅಭಿಮಾನಿಗಳ ಆಶಯ. ಆದ್ರೀಗ ಇದೇ ಭಾವನಾತ್ಮಕ ವಿದಾಯವಿಲ್ಲದೆ, ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್ಗೆ ಅಂತ್ಯವಾಡ್ತಿದ್ದಾರೆ. ಭವಿಷ್ಯದ ಲೆಕ್ಕಾಚಾರದಲ್ಲಿ ಶ್ರೇಷ್ಠ ಆಟಗಾರರ ಕೊಡುಗೆಗಳನ್ನೇ ಮರೆತು ಬಿಡ್ತಿರುವ ಬಿಸಿಸಿಐ, ಸಚಿನ್ ತೆಂಡುಲ್ಕರ್ ಬಳಿಕ ಬಹುತೇಕ ಆಟಗಾರರಿಗೆ ಭಾವನಾತ್ಮಕ ವಿದಾಯ ನೀಡಿ ಗೌರವಿಸುವುದನ್ನೇ ಮರೆತಿದೆ. ಈ ಪೈಕಿ ಲೇಟೆಸ್ಟ್ ಎಕ್ಸಾಂಪಲ್ ಚೇತೇಶ್ವರ ಪೂಜಾರ.
ಇದನ್ನೂ ಓದಿ: ಶ್ರೀಶಾಂತ್ಗೆ ಭಜ್ಜಿ ಹೊಡೆದಿದ್ದ ವಿಡಿಯೋ ರಿವೀಲ್ ಮಾಡಿದ ಲಲಿತ್ ಮೋದಿ VIDEO
ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿದ್ದ ಪೂಜಾರ, 15 ವರ್ಷಗಳ ಕಾಲ ಟೀಮ್ ಇಂಡಿಯಾ ಗೆಲುವಿಗಾಗಿ ಹೋರಾಡಿದ್ದಾರೆ. ಹೆಬ್ಬಂಡೆಯಂತೆ ನಿಂತು ಮ್ಯಾಚ್ ಗೆಲ್ಲಿಸಿದ್ದಾರೆ. ಟೆಸ್ಟ್ ತಂಡದ ಪಿಲ್ಲರ್ ಆಗಿದ್ದ ಪೂಜಾರ, ಗೆಲ್ಲಿಸಿದ ಮ್ಯಾಚ್ಗಳು. ಕಟ್ಟಿದ ಹೋರಾಟದ ಇನ್ನಿಂಗ್ಸ್ಗಳು ನಿಜಕ್ಕೂ ಲೆಕ್ಕಕ್ಕಿಲ್ಲ. ಇಂಥ ಶ್ರೇಷ್ಠ ಆಟಗಾರನಿಗೆ ಕನಿಷ್ಠ ಪಕ್ಷ ಬೀಳ್ಕೊಡುಗೆಯ ಮ್ಯಾಚ್ ಆಯೋಜಿಸಲಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ.
ರೋಹಿತ್, ಕೊಹ್ಲಿಗೂ ಇಲ್ಲ ಫೇರ್‌ವೆಲ್ ಮ್ಯಾಚ್..!
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ. ಮಾಡ್ರನ್ ಡೇ ಕ್ರಿಕೆಟ್‌ನ ಲೆಜೆಂಡರಿ ಬ್ಯಾಟ್ಸ್ಮನ್ಗಳು.. ಟಿ20 ವಿಶ್ವಕಪ್ ಗೆದ್ದ ನಂತರ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ ಈ ಜೋಡಿ, ಇಂಗ್ಲೆಂಡ್ ಪ್ರವಾಸದ ಆರಂಭಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್ಗೂ ಗುಡ್ ಬೈ ಹೇಳಿ ಶಾಕ್ ನೀಡಿದರು. ಇದು ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ಅಘಾತ ತಂದಿತ್ತು. ಟೆಸ್ಟ್ನಿಂದ ದೂರ ಸರಿದ ಈ ದಿಗ್ಗಜ ಆಟಗಾರರಿಗೆ ಭವ್ಯ ವಿದಾಯ ಸಿಗಬೇಕಿತ್ತು. ಆದ್ರೆ ಸಿಗಲಿಲ್ಲ.
ರೋಹಿತ್, ಕೊಹ್ಲಿ ಯಾಕೆ. ಸ್ಪಿನ್ ಮೆಜೀಶಿಯ್ ಆರ್.ಅಶ್ವಿನ್ಗೂ ಸಿಗಲಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಅಶ್ವಿನ್, ಸರಣಿಯ ಮಧ್ಯೆಯಲ್ಲೇ ಕ್ರಿಕೆಟ್ ವೃತ್ತಿ ಜೀವನಕ್ಕೆ ಅಂತ್ಯವಾಡಿದ್ದರು. ಈ ವೇಳೆ ಒಂದು ಟೆಸ್ಟ್ನಲ್ಲಿ ಆಡಿಸುವ ಸೌಜನ್ಯ ಬಿಸಿಸಿಐ ಅಂಡ್ ಟೀಮ್ ಮ್ಯಾನೇಜ್ಮೆಂಟ್ ತೋರಬಹುದಿತ್ತು. ಅಂಥ ಯಾವುದೇ ನಿರ್ಧಾರ ತೆಗೆದುಕೊಳ್ಳದ್ದು ನಿಜಕ್ಕೂ ಅಚ್ಚರಿ.
3 ಐಸಿಸಿ ಟ್ರೋಫಿ ಗೆದ್ದ ಮಹಾ ನಾಯಕನಿಗೂ ಸಿಗಲಿಲ್ಲ ಮನ್ನಣೆ
ಎಮ್.ಎಸ್.ಧೋನಿ.. ಟೀಮ್ ಇಂಡಿಯಾದ ಮಹಾ ನಾಯಕ.. 3 ಐಸಿಸಿ ಟ್ರೋಫಿಗಳನ್ನು ಗೆದ್ದ ಒನ್ ಆ್ಯಂಡ್ ಒನ್ಲಿ ಕ್ಯಾಪ್ಟನ್. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಸಹಿತ, ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾವನ್ನ ನಂಬರ್.1 ಪಟ್ಟಕ್ಕೇರಿಸಿದ ಧೀಮಂತ ನಾಯಕ. ಈ ಶ್ರೇಷ್ಠ ನಾಯಕ 2020ರ ಆಗಸ್ಟ್ 15ರಂದು ಏಕದಿನ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು. ಧೋನಿಗೆ ವಿದಾಯ ಪಂದ್ಯ ಇರಲಿ, ಕನಿಷ್ಠ ಪಕ್ಷ ಸ್ಪೆಷಲ್ ಕಾರ್ಯಕ್ರಮ ಆಯೋಜಿಸಿ ಗೌರವ ಸೂಚಿಸುವ ಗೋಜಿಗೂ ಬಿಸಿಸಿಐ ಮನಸ್ಸು ಮಾಡಲಿಲ್ಲ.
ದ್ರಾವಿಡ್, ಸೆಹ್ವಾಗ್, ಯುವಿಯಂಥ ದಿಗ್ಗಜರಿಗೂ ಇಲ್ಲ ಫೇರ್‌ವೆಲ್
ಗೌರವಾನ್ವಿತ ವಿದಾಯಕ್ಕೆ ಮೊದಲ ಅರ್ಹ ವ್ಯಕ್ತಿ ರಾಹುಲ್ ದ್ರಾವಿಡ್. ದಿ ವಾಲ್ಗೆ ಅಂಥದ್ದೊಂದು ಭಾಗ್ಯವೇ ಸಿಗದಿದ್ದು ದುರಾದೃಷ್ಟ. ಆದ್ರೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗೌರವ ಸಲ್ಲಿಸಿತು. ವಿವಿಎಸ್ ಲಕ್ಷ್ಮಣ್, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ರಂಥ ಮ್ಯಾಚ್ ವಿನ್ನರ್ಗಳಿಗೆ ಆ ಭಾಗ್ಯವೂ ಸಿಗಲಿಲ್ಲ ಎಂಬ ಕೊರಗು ಇವತ್ತಿಗೂ ಅಭಿಮಾನಿಗಳಲ್ಲಿದೆ.
ಬೌಲಿಂಗ್ ಲೆಜೆಂಡ್ ಜಹೀರ್ ಖಾನ್, ಹರ್ಭಜನ್ ಸಿಂಗ್ಗೂ ಭವ್ಯ ವಿದಾಯ ಸಿಗಲಿಲ್ಲ. ಇದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾ? ಅಥವಾ ವೈಯಕ್ತಿಕ ನಿರ್ಧಾರ ತೆಗೆದುಕೊಂಡಿದ್ದಾ ಎಂಬ ಪ್ರಶ್ನೆಯೂ ಇದೆ. ಲೆಕ್ಕ ಇಲ್ಲದಷ್ಟು ಕೊಡುಗೆ ನೀಡಿದ ಇವರಿಗೆ ಬಿಸಿಸಿಐ ಅಭಿನಂದನಾ ಕಾರ್ಯಕ್ರಮವನ್ನಾದರೂ ಆಯೋಜಿಸಬಹುದಿತ್ತು. ಅದಕ್ಕೂ ಕ್ಯಾರೆ ಎನ್ನದ ಶ್ರೀಮಂತ ಕ್ರಿಕೆಟ್ ಸಂಸ್ಥೆ, ದಿಗ್ಗಜ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ಹಾದಿ ನಿಜಕ್ಕೂ ಸರಿಯಲ್ಲ.
ಇದನ್ನೂ ಓದಿ: ಟೀಮ್ ಇಂಡಿಯಾ ಸ್ಪಾನ್ಸರ್ಗಳಿಗೆ ಜರ್ಸಿ ಶಾಪ.. ಏನಿದು ಹೊಸ ಕತೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ