/newsfirstlive-kannada/media/media_files/2025/08/29/bcci-team-india-2025-08-29-16-18-53.jpg)
ವಿಶ್ವ ಕ್ರಿಕೆಟ್ ಲೋಕದ ಶ್ರೀಮಂತ ಕ್ರಿಕೆಟ್ ಬೋರ್ಡ್ಸ್ ಅನ್ನೋದು ಗೊತ್ತೇ ಇದೆ. ಕ್ರಿಕೆಟ್ ಅನ್ನ ಆರಾಧಿಸುವ ಭಾರತದಲ್ಲಿ, ಟೀಮ್ ಇಂಡಿಯಾದ ಸ್ಪಾನ್ಸರ್ ಶಿಫ್ ಪಡೆದುಕೊಳ್ಳಲು ಕಂಪನಿಗಳು ಕ್ಯೂನಲ್ಲಿ ನಿಲ್ತಾವೆ. ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಪ್ರಾಯೋಕತ್ವ ಪಡೆದುಕೊಳ್ಳುವ ಆ ಕಂಪನಿಗಳಿಗೆ ಸಂಕಷ್ಟ ತಪ್ಪಿದಿಲ್ಲ.
ಬಿಸಿಸಿಐ ವಿಶ್ವ ಕ್ರಿಕೆಟ್ ಲೋಕದ ಶ್ರೀಮಂತ ಕ್ರಿಕೆಟ್ ಬೋರ್ಡ್. ಏಷ್ಯಾಕಪ್ಗೂ ಮುನ್ನವೇ ಬಿಸಿಸಿಐಗೆ ಅನಿರೀಕ್ಷಿತ ಆಘಾತ ಎದುರಾಗಿದೆ. ಕೇಂದ್ರ ಸರ್ಕಾರ ಜಾರಿ ತಂದಿರುವ ಆನ್‌ಲೈನ್ ಗೇಮಿಂಗ್ ಬಿಲ್ನಿಂದ ಬಿಸಿಸಿಐ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಹೊಸ ಕಾನೂನುನಿಂದಾಗಿ ಡ್ರೀಮ್ ಇಲೆವೆನ್ ಜೊತೆಗಿನ ಪ್ರಾಯೋಜಕತ್ವ ಅಂತ್ಯವಾಗಿದೆ. ಇದರಿಂದ ಟೀಮ್ ಇಂಡಿಯಾ, 2025ರ ಏಷ್ಯಾಕಪ್ನಲ್ಲಿ ಪ್ರಾಯೋಜಕರಿಲ್ಲದೆ ಆಡುವ ಸಂದಿಗ್ಧತೆ ಎದುರಾಗಿದೆ. ಟೀಮ್ ಇಂಡಿಯಾಗೆ ಅಲ್ಲ. ಟೀಮ್ ಇಂಡಿಯಾದ ಪ್ರಾಯೋಜಕತ್ವ ಪಡೆದುಕೊಂಡ ಕಂಪನಿಗಳೇ ಒಂದಿಲ್ಲೊಂದು ರೀತಿ ಸಂಕಷ್ಟ ಅನುಭವಿಸಿವೆ.
ಇದನ್ನೂ ಓದಿ:ಕೊಹ್ಲಿ ನಿವೃತ್ತಿಯಿಂದ ಕೋಟಿ ಕೋಟಿ ಲಾಸ್.. ಮತ್ತೊಬ್ಬ ಸ್ಟಾರ್ಗೆ ಪಟ್ಟಾಭಿಷೇಕ ಮಾಡಲು BCCI ಪ್ಲಾನ್
ಬಿಸಿಸಿಐ ಸ್ಪಾನ್ಸರ್‌ಶಿಪ್ ಪಡೆದು ದಿಕ್ಕೆಟ್ಟಿವೆ ಕಂಪನಿಗಳು
ಟೀಮ್ ಇಂಡಿಯಾ.. ವಿಶ್ವ ಕ್ರಿಕೆಟ್ ಲೋಕದ ಯಶಸ್ವಿ ಟೀಮ್ ಮಾತ್ರವಲ್ಲ. ಅತಿ ಹೆಚ್ಚು ಫ್ಯಾನ್ ಬೇಸ್ ಹೊಂದಿರುವ ಟೀಮ್.. ಇಂಥ ನಂಬರ್ 1 ಟೀಮ್ ಜೆರ್ಸಿ ಮೇಲೆ ಸ್ಥಾನ ಪಡೆಯುವುದು ಕಂಪನಿಗಳಿಗೆ ಪ್ರತಿಷ್ಠೆ. ಇದಕ್ಕಾಗಿ ಸಾವಿರಾರು ಕೋಟಿ ಪಾವತಿಸಿ ಜರ್ಸಿ ಮೇಲೆ ಸ್ಪಾನ್ಸರ್‌ಶಿಪ್ ಪಡೆಯುತ್ವೆ. ಟೀಮ್ ಇಂಡಿಯಾಗೆ ಸ್ಪಾನ್ಸರ್‌ಶಿಪ್ ನೀಡಿದ ಪ್ರಮುಖ ಕಂಪನಿಗಳೇ ಸಂಕಷ್ಟಕ್ಕೆ ಸಿಲುಕ್ತಿವೆ. ಇದು ಕೇವಲ ಒಂದು ಕಥೆಯಲ್ಲ. ಬರೋಬ್ಬರಿ 32 ವರ್ಷದಿಂದ ಯಾರೆಲ್ಲಾ ಸಾವಿರಾರು ಕೋಟಿ ಪಾವತಿಸಿ ಸ್ಪಾನ್ಸರ್‌ಶಿಪ್ ಪಡೆದಿದ್ದಾರೋ ಅವರೆಲ್ಲಾ ಮಕಾಡೆ ಮಲಗಿದ್ದಾರೆ.
ITC ವಿಲ್ಸ್ಗೆ ಟೀಮ್ ಇಂಡಿಯಾದ ಜರ್ಸಿ ಶಾಪ
ಐಟಿಸಿ ಕಂಪನಿಯ ವಿಲ್ಸ್ ಬ್ರ್ಯಾಂಡ್, 1993ರಿಂದ 2021ರ ತನಕ ಟೀಮ್ ಇಂಡಿಯಾದ ಪ್ರಾಯೋಜಕ ಪಡೆದಿತ್ತು. ಯಾವಾಗ ಕೇಂದ್ರ ಸರ್ಕಾರ ತಂಬಾಕು ಜಾಹೀರಾತು ಮೇಲೆ ಕಠಿಣ ನಿಯಮಗಳನ್ನ ಜಾರಿ ಮಾಡ್ತು. ಈ ಕಾರಣಕ್ಕೆ ಟೀಮ್ ಇಂಡಿಯಾ, ವಿಲ್ಸ್ ಬ್ರ್ಯಾಂಡ್ ಜೊತೆಗಿನ ಜರ್ಸಿ ಪ್ರಾಯೋಜಕತ್ವದ ಒಪ್ಪಂದಕ್ಕೆ ಟಾಟಾ ಹೇಳಬೇಕಾಯ್ತು.
ಇದನ್ನೂ ಓದಿ:ಧೋನಿ ನಾಯಕತ್ವದ ಬಗ್ಗೆ ದಿಗ್ಗಜರ ಬಿಗ್ ಬಾಂಬ್.. ಸಿಡಿದೆದ್ದ ಮಾಜಿ ಟೀಮ್ಮೇಟ್ಸ್..!
‘ಸಹರಾ ಇಂಡಿಯಾ’ ಬ್ರ್ಯಾಂಡ್ ಮುಳುಗಡೆ
ಸಹರಾ ಇಂಡಿಯಾ.. ಸುದೀರ್ಘ ಕಾಲ ಟೀಮ್ ಇಂಡಿಯಾಗೆ ಸ್ಪಾನ್ಸರ್ ಆಗಿತ್ತು. ಸಹರಾ ಇಂಡಿಯಾ ಅನ್ನೋದೇ ಬ್ರ್ಯಾಂಡ್ ಆಗಿತ್ತು. ಟೀಮ್ ಇಂಡಿಯಾ ಹೆಸರೇ ಸಹರಾ ಇಂಡಿಯಾ ಎಂದು ಭಾವಿಸಿದಿತ್ತು. ಅಷ್ಟರ ಮಟ್ಟಿಗೆ ಖ್ಯಾತಿ ಪಡೆದಿತ್ತು. 2001ರಿಂದ 2013ರವರೆಗೆ ಸ್ಪಾನ್ಸರ್ ಶಿಪ್ ನೀಡಿತ್ತು. ಇದೇ ಸಹರಾ ಸ್ಪಾನ್ಸರ್ ಶಿಫ್ ಅವಧಿಯಲ್ಲೇ ಟೀಮ್ ಇಂಡಿಯಾ, 2007ರ ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಗೆದ್ದಿತ್ತು. 24 ಸಾವಿರ ಕೋಟಿಯ ಚಿಟ್ ಫಂಡ್ ಅಕ್ರಮ ಸೇರಿದಂತೆ ಇನ್ನಿತ್ತರ ಕಾರಣಕ್ಕೆ ಸಹರಾ ಇಂಡಿಯಾ ಕಂಪನಿ ಬೀಗ ಹಾಕ್ತು. ಮುಖ್ಯಸ್ಥ ಸುಬ್ರತೋ ರಾಯ್, ತಿಹಾರ್ ಜೈಲು ಸೇರಬೇಕಾಯ್ತು.
ಸ್ಪಾನ್ಸರ್ಶಿಪ್ನಿಂದ ನಿರ್ಗಮಿಸಿದ ಸ್ಟಾರ್ ಇಂಡಿಯಾ
ಸ್ಟಾರ್ ಇಂಡಿಯಾ.. ಏಷ್ಯಾದಲ್ಲೇ ಅತೀ ದೊಡ್ಡ ಬ್ರಾಡ್‌ಕಾಸ್ಟರ್ ಕಂಪನಿ.. 2013ರಿಂದ 2017ರ ತನಕ ಸ್ಪಾನ್ಸರ್ ಶಿಪ್ ಪಡೆದಿತ್ತು. ಜರ್ಸಿ ಸ್ಪಾನ್ಸರ್ ಶಿಫ್ ಜೊತೆಗೆ ಬ್ರಾಡ್ಕಾಸ್ಟಿಂಗ್ ರೈಟ್ಸ್ ಪಡೆದಿತ್ತು. ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡಿತ್ತು. ಸ್ಟಾರ್ ಇಂಡಿಯಾಗೆ ನಷ್ಟ ಎದುರಾಗದಿದ್ದರೂ, ತಾನೇ ಸ್ಪಾನ್ಸರ್ಶಿಪ್ನಿಂದ ನಿರ್ಗಮಿಸಿತು. ಈ ಬಳಿಕ ಸ್ಟಾರ್ ಇಂಡಿಯಾವನ್ನ ವಾಲ್ಟ್ ಡಿಸ್ನಿ ಸಂಸ್ಥೆ ಖರೀದಿಸಿತ್ತು.
ಇದನ್ನೂ ಓದಿ:ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ.. ಕೋಟಿ ಕೋಟಿ ನಷ್ಟ..!
ಚೀನಾ ಜೊತೆಗಿನ ಬಿಕ್ಕಟ್ಟು ಒಪ್ಪೊಗೆ ಬಿಸಿಸಿಐ ಗುಡ್ ಬೈ
ಸ್ಟಾರ್ ಇಂಡಿಯಾ, ಚೀನಾ ಮೂಲಕ ಒಪ್ಪೊ ಕಂಪನಿ ಬರೋಬ್ಬರಿ 1079 ಕೋಟಿಗೆ ಜರ್ಸಿ ಸ್ಪಾನ್ಸರ್‌ಶಿಪ್ ಪಡೆದಿತ್ತು. ಭಾರತದಲ್ಲಿ ಮಾರುಕಟ್ಟೆಯ ವಿಸ್ತರಣೆಯ ಪ್ಲಾನ್ ಮಾಡಿತ್ತು. ಆದ್ರೆ, ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯ ಅತಿಕ್ರಮ, ಭಾರತೀಯ ಯೋಧರ ಮಾರಾಮಾರಿ ನಡೆದಿತ್ತು. ಈ ಘಟನೆಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಬಳಿಕ ಚೀನಾ ವಸ್ತುಗಳ ಬಹಿಷ್ಕಾರ ಆರಂಭಗೊಂಡಿತ್ತು. ಹೀಗಾಗಿ ಚೀನಾ ಮೂಲದ ಒಪ್ಪೋ ಸ್ಪಾನ್ಸರ್‌ಶಿಪ್ ಅಂತ್ಯಗೊಂಡಿತು.
ಆರ್ಥಿಕ ಸಂಕಷ್ಟ.. ಟೀಮ್ ಇಂಡಿಯಾಗೆ ಬೈಜುಸ್ ‘ಬೈ’
ಒಪ್ಪೊ ಬೆನ್ನಲ್ಲೇ ಭಾರತದಲ್ಲೇ ಕ್ರಾಂತಿ ಮಾಡಿದ್ದು ಬೈಜುಸ್. ಆನ್‌ಲೈನ್ ಶಿಕ್ಷಣ ಸಂಸ್ಥೆಯಾಗಿದ್ದ ಈ ಬೈಜುಸ್, ಟೀಮ್ ಇಂಡಿಯಾ ಸ್ಪಾನ್ಸರ್‌ಶಿಪ್ ವಹಿಸಿಕೊಂಡಿತು. 2020ರಲ್ಲಿ ಪ್ರಾಯೋಜಕತ್ವ ವಹಿಸಿಕೊಂಡ ಬೈಜುಸ್ 2022ರಲ್ಲೇ ಸ್ಪಾನ್ಸ್‌ಶಿಪ್ ಅಂತ್ಯಗೊಳಿಸಿತ್ತು. ಆರ್ಥಿಕ ಸಂಕಷ್ಟದಿಂದ ಕಂಪನಿ ಸಂಪೂರ್ಣ ಮುಳಗಿತ್ತು. ನೌಕರರಿಗೆ ವೇತನ ನೀಡದೇ, ಬೈಜೂಸ್ ರವೀಂದ್ರನ್, ಮನೆ ಸೇರಿದಂತೆ ಆಸ್ತಿ ಮಾರಾಟ ಮಾಡಬೇಕಾಯ್ತು.
ಇದನ್ನೂ ಓದಿ: ಕೊಹ್ಲಿ ಮಾಡಿದ ಒಂದು ಯಡವಟ್ಟು.. ಈಕೆಯ ಅದೃಷ್ಟವೇ ಬದಲಾಗಿದೆ ನೋಡಿ..!
ಡ್ರೀಮ್-XI, ಮೈ-XI ಸರ್ಕಲ್ ಅಡಿಪಾಯವೇ ಬುಡಮೇಲು
ಕೇಂದ್ರ ಸರ್ಕಾರ ಜಾರಿ ತಂದಿರುವ ಆನ್‌ಲೈನ್ ಗೇಮಿಂಗ್ ಬಿಲ್ನಿಂದ ಬಿಸಿಸಿಐ, ಡ್ರೀಮ್ ಇವೆವೆನ್, ಮೈ ಇಲೆವೆನ್ ಸರ್ಕಲ್ ಜೊತೆಗಿನ ಒಪ್ಪಂದ ರದ್ದುಗೊಳಿಸಬೇಕಿದೆ. ಡ್ರೀಮ್ ಇಲೆವೆನ್ ಜೊತೆಗಿನ 358 ಕೋಟಿ ಒಪ್ಪಂದ, ಮೈ 11 ಸರ್ಕಲ್ ಜೊತೆಗಿನ 625 ಕೋಟಿಯ ಐಪಿಎಲ್ ಪಾರ್ಟನರ್ ಒಪ್ಪಂದಕ್ಕೆ ಬ್ರೇಕ್ ಬಿದ್ದಿದೆ. ಬಿಸಿಸಿಐಗೆ 400 ಕೋಟಿ ನಷ್ಟವಾಗಲಿದೆ. ಬ್ಯಾನ್ನಿಂದಾಗಿ ಡ್ರೀಮ್ ಇಲೆವೆನ್ ಗೇಮಿಂಗ್, ಮೈ ಸರ್ಕಲ್ ಕಂಪನಿಯ ಅಡಿಪಾಯವೇ ಬುಡಮೇಲಾಗಿದೆ.
ಬಿಗ್ ಬ್ರ್ಯಾಂಡ್ಗಳಾಗಿ ಮರೆದಾಡಿದ್ದ ಈ ಕಂಪನಿಗಳು, ವಿಶ್ವ ಶ್ರೀಮಂತ ಸಂಸ್ಥೆಯ ಸ್ಪಾನ್ಸರ್ ಪಡೆದ್ಮೇಲೆ, ದಿಕ್ಕಿಟ್ಟಿವೆ. ಇದು ವಿಪರ್ಯಾಸವೋ.. ಇಲ್ಲ ಟೀಮ್ ಇಂಡಿಯಾ ಜರ್ಸಿ ಶಾಪವೋ? ಎಂಬ ಚರ್ಚಗೆ ನಾಂದಿಯಾಡಿರುವುದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ