ಸೂರ್ಯಗೆ ಇವತ್ತೇ ಲಾಸ್ಟ್​ ಚಾನ್ಸ್​.. ವಿಶ್ವಕಪ್​ ತಂಡದಿಂದ ಗೇಟ್​ಪಾಸ್​..?

ಇಂಡೋ-ಆಫ್ರಿಕಾ 5ನೇ ಟಿ20 ಪಂದ್ಯ ಸೋಲು-ಗೆಲುವಿಗಿಂತ ಟೀಮ್​ ಇಂಡಿಯಾ ನಾಯಕನ ಆಟವೇ ಹೆಚ್ಚು ಚರ್ಚೆಯಲ್ಲಿದೆ. ಕ್ಯಾಪ್ಟನ್​ ಸೂರ್ಯ​​ ಟಿ20 ವಿಶ್ವಕಪ್​ ಆಡ್ತಾರಾ? ಇಲ್ವಾ? ಅನ್ನೋ ದೊಡ್ಡ ಪ್ರಶ್ನೆಗೆ ಇಂದೇ ಉತ್ತರ ಸಿಗಲಿದೆ.

author-image
Ganesh Kerekuli
Updated On
Surya kumar yadav
Advertisment
  • 3 ಪಂದ್ಯ, 29 ರನ್​, 9.67 ಸರಾಸರಿ.. ಸೂರ್ಯನಿಗೆ ಸಂಕಷ್ಟ
  • 2025ರಲ್ಲಿ ವೈಫಲ್ಯದಲ್ಲೇ ಮುಳುಗೆದ್ದ ಸೂರ್ಯಕುಮಾರ್​
  • ಬೌಂಡರಿ ಬರ, ಸಿಕ್ಸರ್​ ಬರ, ರನ್​ಗಂತೂ ತೀವ್ರ ಬರ

ಇಂಡೋ-ಆಫ್ರಿಕಾ ಲಾಸ್ಟ್​ ಟಿ20 ಗೇಮ್​ಗೂ ಮುನ್ನ ಟೀಮ್​ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್​ ಯಾದವ್​ ಹೆಡ್​ಲೈನ್ ಆಗಿದ್ದಾರೆ. ಫ್ಲಾಪ್​ ಮೇಲೆ ಫ್ಲಾಪ್​ ಶೋ ನೀಡ್ತಿರೋ ಸೂರ್ಯನಿಗೆ ಅಹ್ಮದಾಬಾದ್​ ಪಂದ್ಯವೇ ಲಾಸ್ಟ್​ ಚಾನ್ಸ್​. ನಮೋ ಅಂಗಳದಲ್ಲಿ ನಡೆಯೋ ಇಂದಿನ ಪಂದ್ಯದಲ್ಲಿ ಶೈನ್​ ಆದ್ರೆ ಸೇಫ್​​ ಇಲ್ಲದಿದ್ರೆ ನಾಯಕನಿಗೆ ಸಂಕಷ್ಟ ತಪ್ಪಿದ್ದಲ್ಲ.

ಟೀಮ್​ ಇಂಡಿಯಾದ ಟಿ20 ಟೀಮ್​ನ ಕ್ಯಾಪ್ಟನ್ ಸೋ ಕಾಲ್ಡ್​ ಮಿಸ್ಟರ್​ 360 ಡಿಗ್ರಿ ಬ್ಯಾಟರ್​ ಸೂರ್ಯಕುಮಾರ್​ ಸೌತ್​ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನೀಡಿರೋ ಪರ್ಫಾಮೆನ್ಸ್​ ಇದು. ಕಟಕ್​ನಲ್ಲಿ ನಡೆದ ಮೊದಲ ಟಿ20ಯಲ್ಲಿ 12 ರನ್​ಗಳಿಗೆ ಸುಸ್ತಾದ ಸೂರ್ಯ, ಚಂಡೀಗಢದಲ್ಲಿ ನಡೆದ 2ನೇ ಪಂದ್ಯದಲ್ಲಿ ಗಳಿಸಿದ್ದು ಜಸ್ಟ್​ 5 ರನ್​ ಮಾತ್ರ. 3ನೇ ಪಂದ್ಯದಲ್ಲಾದ್ರೂ ಸೂರ್ಯ ಟ್ರ್ಯಾಕ್​ಗೆ ಮರಳ್ತಾರೆ ಅಂದುಕೊಂಡ್ರೆ ಅಲ್ಲೂ ನಿರೀಕ್ಷೆ ಸುಳ್ಳಾಯ್ತು. ಧರ್ಮಶಾಲಾದಲ್ಲಿ 12 ರನ್​ಗಳಿಸಿ ಸೂರ್ಯ ಪೆವಿಲಿಯನ್​ ಸೇರಿದ್ರು. 

ಇದನ್ನೂ ಓದಿ: ಬುಮ್ರಾಗಿಂತ ದುಬೆ ಬೆಟರ್​.. ತಂಡಕ್ಕೆ ಭಯ ಹೆಚ್ಚಿಸಿದ ಬೂಮ್ ಬೂಮ್ ಬುಮ್ರಾ..!

Suryakumara yadav

ಬೌಂಡರಿ ಬರ! ಸಿಕ್ಸರ್​ ಬರ! ರನ್​ಗೂ ಬರ! 

2025.. ಈ ವರ್ಷವೇ ಸೂರ್ಯಕುಮಾರ್​ ಪಾಲಿಗೆ ಅನ್​ಲಕ್ಕಿ. ಈ ಕ್ಯಾಲೆಂಡರ್​ ವರ್ಷದಲ್ಲಿ ವೈಫಲ್ಯದಲ್ಲೇ ಸೂರ್ಯಕುಮಾರ್​ ಮುಳುಗೆದ್ದಿದ್ದಾರೆ. 20 ಪಂದ್ಯಗಳನ್ನ ಆಡಿರೋ ಸೂರ್ಯ ಒಂದೇ ಒಂದು ಅರ್ಧಶತಕ ಸಿಡಿಸಿಲ್ಲ. 14.20ರ ಹೀನಾಯ ಸರಾಸರಿಯನ್ನ ಹೊಂದಿರೋ ಇಂಡಿಯನ್​ ಕ್ಯಾಪ್ಟನ್​ಕೇವಲ 125.29ರ ಸಾಧಾರಣ ಸ್ಟ್ರೈಕ್​ರೇಟ್​ ಹೊಂದಿದ್ದಾರೆ. ಬೌಂಡರಿ-ಸಿಕ್ಸರ್​​ಗಳ ಸಲೀಸಾಗಿ ಸಿಡಿಸಿ ಫ್ಯಾನ್ಸ್​ಗೆ ಟ್ರೀಟ್​ ನೀಡ್ತಿದ್ದ ಸೂರ್ಯ ಈ ವರ್ಷ ಸಿಡಿಸಿರೋದು ಕೇವಲ 18 ಬೌಂಡರಿ, 10 ಸಿಕ್ಸರ್​ ಮಾತ್ರ.!

ಇದನ್ನೂ ಓದಿ: ಈ ಸ್ಟಾರ್​ ಆಟಗಾರನ ಮೇಲೆ ಫ್ಯಾನ್ಸ್ ಬೇಸರ.. ಅಷ್ಟಕ್ಕೂ ಆಗಿದ್ದೇನು..?

Surya and sundar

2024ರಲ್ಲೂ ಇದೇ ರಾಗ.. ಇದೇ ಹಾಡು..!

ಈ ವರ್ಷ ಮಾತ್ರವಲ್ಲ.. ಸೂರ್ಯಕುಮಾರ್​ ಸೂರ್ಯಾಸ್ತದ ಕಡೆಗೆ 2024ರಿಂದಲೇ ಮುಖ ಮಾಡಿದ್ದಾರೆ. ಬಿಗ್​​ ಸ್ಟೇಜ್​ ಟಿ20 ವಿಶ್ವಕಪ್​​ನಲ್ಲಿ ಕೂಡ ಸೂರ್ಯನ ಅಬ್ಬರ ನಡೆಯಲಿಲ್ಲ. 2024ರ ಕ್ಯಾಲೆಂಡರ್​ ವರ್ಷದಲ್ಲಿ ಕೇವಲ 29.10ರ ಸರಾಸರಿಯಲ್ಲಿ ರನ್​ಗಳಿಸಿದ್ರು. 11 ಪಂದ್ಯವನ್ನಾಡಿದ್ದ ಸೂರ್ಯ ಕೇವಲ 291 ರನ್​ಗಳಿಸಿದ್ರು. 

ಪ್ರೈಮ್​ ಫಾರ್ಮ್​ನಲ್ಲಿದ್ದಾಗ ಟಿ20 ಕ್ರಿಕೆಟ್​ನ ಸುಲ್ತಾನ ಎನಿಸಿಕೊಂಡಿದ್ದ ಸೂರ್ಯಕುಮಾರ್​ಗೆ ಟೀಮ್​ ಇಂಡಿಯಾದಲ್ಲಿ ತನ್ನ ಸ್ಥಾನವನ್ನ ಉಳಿಸಿಕೊಳ್ಳೋಕೆ ಪರದಾಡೋ ಪರಿಸ್ಥಿತಿ ಎದುರಾಗಿದೆ. ಟೀಮ್​ ಇಂಡಿಯಾದ ನಾಯಕನಾಗಿದ್ರೂ ಕೂಡ ಕೆಲವೇ ತಿಂಗಳಲ್ಲಿ ಆರಂಭವಾಗೋ ವಿಶ್ವಕಪ್​ ಟೂರ್ನಿಯಿಂದ ಸ್ಥಾನ ಕಳೆದುಕೊಳ್ಳೋ ಭೀತಿ ಎದುರಾಗಿದೆ. ಸತತ ವೈಫಲ್ಯದ ಸುಳಿಗೆ ಸಿಲುಕಿರೋ ಸೂರ್ಯನನ್ನ ವಿಶ್ವಕಪ್​ನಿಂದ ಡ್ರಾಪ್​ ಮಾಡೋ ಬಗ್ಗೆ ಸೀರಿಯಸ್ಸಾದ ಚರ್ಚೆ ಬಿಸಿಸಿಐ ವಲಯದಲ್ಲಿ ಈಗ ಆರಂಭವಾಗಿದೆ. 

ಇದನ್ನೂ ಓದಿ:IND vs SA ಫೈನಲ್.. ಟೀಂ ಇಂಡಿಯಾಗೆ ಸ್ಟಾರ್​ ಬೌಲರ್​ ಕಂಬ್ಯಾಕ್​..!

Surya kumara Yadav

ಇಂದಿನ ಪಂದ್ಯವೇ ಸೂರ್ಯನಿಗೆ ಲಾಸ್ಟ್​ ಚಾನ್ಸ್​.?

ಸೌತ್​ ಆಫ್ರಿಕಾ ಇಂದಿನ 5ನೇ ಟಿ20 ಪಂದ್ಯ ಸೂರ್ಯಕುಮಾರ್​ ಪಾಲಿಗೆ ಡು ಆರ್​ ಡೈ ಕಣ. ಇದೇ ಅಹ್ಮದಾಬಾದ್​ನ ನಮೋ ಮೈದಾನದಲ್ಲಿ ಸೂರ್ಯಕುಮಾರ್​ ಇಂಟರ್​ನ್ಯಾಷನಲ್​ ಕ್ರಿಕೆಟ್​ಗೆ ಡೆಬ್ಯೂ ಮಾಡಿದ್ದು. ಅಂದು ಇಂಗ್ಲೆಂಡ್​ ವಿರುದ್ಧ ಸಿಕ್ಸರ್​ ಬಾರಿಸಿ ಅಕೌಂಟ್​ ಓಪನ್​ ಮಾಡಿದ್ದ ಸೂರ್ಯ, ಇವತ್ತೂ ಕೂಡ ಅಂತದ್ದೇ ಅತ್ಯದ್ಭುತ ಇನ್ನಿಂಗ್ಸ್​ ಕಟ್ಟಿದ್ರೆ ಕರಿಯರ್​ ಸೇವ್​ ಆಗಲಿದೆ. ಇಲ್ಲ ಅಂದ್ರೆ, ಸದ್ಯದ ಪರಿಸ್ಥಿತಿಯಲ್ಲಿ ಡೆಬ್ಯೂ ಮಾಡಿದ ಮೈದಾನದಲ್ಲೇ ಟೀಮ್​ ಇಂಡಿಯಾ ಪರ ಕೊನೆಯ ಆಟನ್ನಾಡಿದಂತಾಗೋ ಸಂದರ್ಭ ಎದುರಾಗಲೂಬಹುದು.

ಇಂದು ನಡೆಯೋ ಟಿ20 ಕದನ ಟೀಮ್​ ಇಂಡಿಯಾ ಕ್ಯಾಪ್ಟನ್​ ಸೂರ್ಯಕುಮಾರ್​ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ನಮೋ ಮೈದಾನದಲ್ಲಿ ಸೌತ್​ ಆಫ್ರಿಕಾ ಬೌಲರ್​ಗಳ ಮೇಲೆ ಸವಾರಿ ಮಾಡಿ ಸೂರ್ಯ ಸ್ಥಾನವನ್ನ ಸೆಫ್​ ಮಾಡಿಕೊಳ್ಳಬೇಕಿದೆ. ಫೇಲ್​ ಆದ್ರೆ, ನ್ಯೂಜಿಲೆಂಡ್​ ವಿರುದ್ಧ ಮುಂದಿನ ಟಿ20 ಸರಣಿಯ ತಂಡದಿದ ಸೂರ್ಯ ಡ್ರಾಪ್​ ಆಗೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. 

ಇದನ್ನೂ ಓದಿ: ಈ ಐದು ಆಟಗಾರರಿಗೆ ಮತ್ತೆ ಮರುಜೀವ ಕೊಟ್ಟ IPL; ಇದೇ ಲಾಸ್ಟ್ ಚಾನ್ಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Surya kumar Yadav
Advertisment