ಕ್ರಿಕೆಟ್​​ಗೆ ಪೂಜಾರ ಗುಡ್​ ಬೈ, ಆಸ್ಟ್ರೇಲಿಯಾ ನಿರಾಳ.. ಹೇಗೆ ಗೊತ್ತಾ..?

ಆಸಿಸ್​ ಆಟಗಾರರಂತೂ ಒಬ್ಬರಿಗಿಂತ ಒಬ್ಬರು ಡೇಂಜರ್​​. ಯಾಮಾರಿದ್ರೆ ನರಕ ದರ್ಶನ ಮಾಡಿಸಿ ಬಿಡ್ತಾರೆ. ಇಂಥ ಡೇಂಜರಸ್​​​ ಅಂಡ್ ಡೆಡ್ಲಿ ಟೀಮ್​​​ಗೆ ನರಕ ತೋರಿಸಿದ್ದು ಪೂಜಾರ. ಸ್ಲೆಡ್ಜ್​ ಮಾಡಲಿಲ್ಲ, ಕೆಣಕಲಿಲ್ಲ. ಕನಿಷ್ಟ ಏರು ದನಿಯನ್ನೂ ಮಾತನ್ನೂ ಆಡಲಿಲ್ಲ. ಸೈಲೆಂಟಾಗೆ ಕಾಂಗರೂಗಳಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ.

author-image
Ganesh Kerekuli
Cheteshwar pujara (2)
Advertisment

ಕ್ರಿಕೆಟ್​​ ಜಗತ್ತಿನಲ್ಲಿ ಆಸ್ಟ್ರೇಲಿಯಾ ವೆರಿ ಡೇಂಜರಸ್​ ಟೀಮ್​. ಆಸಿಸ್​ ಆಟಗಾರರಂತೂ ಒಬ್ಬರಿಗಿಂತ ಒಬ್ಬರು ಡೇಂಜರ್​​. ಯಾಮಾರಿದ್ರೆ ನರಕ ದರ್ಶನ ಮಾಡಿಸಿ ಬಿಡ್ತಾರೆ. ಇಂತಹ ಡೇಂಜರಸ್​​​ ಅಂಡ್ ಡೆಡ್ಲಿ ಟೀಮ್​​​ಗೆ ನರಕ ತೋರಿಸಿದ್ದು ಚೇತೇಶ್ವರ್​ ಪೂಜಾರ. ಸ್ಲೆಡ್ಜ್​ ಮಾಡಲಿಲ್ಲ, ಕೆಣಕಲಿಲ್ಲ. ಕನಿಷ್ಟ ಏರು ದನಿಯನ್ನೂ ಮಾತನ್ನೂ ಆಡಲಿಲ್ಲ. ಸೈಲೆಂಟಾಗೆ ಪೂಜಾರ ಕಾಂಗರೂಗಳಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಬೆಸ್ಟ್ ಫಿನಿಶರ್ ಇಲ್ವಾ.. ತಂಡಕ್ಕೆ ಬೇಕಿದೆ ಆ ಒಬ್ಬ ಆಟಗಾರ

Cheteshwar pujara (1)

ಟೆಸ್ಟ್​​ ಸ್ಪೆಷಲಿಸ್ಟ್​​, ಟೀಮ್​ ಇಂಡಿಯಾ 2ನೇ ವಾಲ್​ ಚೇತೇಶ್ವರ್​ ಪೂಜಾರ ಇಂಟರ್​​ನ್ಯಾಷನಲ್​​ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ್ದಾರೆ. ಪೂಜಾರ ನಿವೃತ್ತಿ ಸುದ್ದಿ ಹೊರ ಬೀಳ್ತಿದ್ದಂತೆ, ಸೋಷಿಯಲ್​​ ಮೀಡಿಯಾಗಳು ಪೂಜಾರ ಬಗೆಗಿನ ಪ್ರಶಂಸೆಯ ಪೋಸ್ಟ್​​ಗಳಿಂದ ತುಂಬಿ ಹೋದ್ವು. ದಿಗ್ಗಜ ಆಟಗಾರರೆಲ್ಲಾ ಪೂಜಾರನ ಅಭಿನಂದಿಸಿದ್ರು. ಇದ್ರ ನಡುವೆ ಕೆಲ ತಮಾಷೆಯ ಪೋಸ್ಟ್​​ಗಳು ಕಾಣಿಸಿಕೊಂಡ್ವು.

ಕ್ರಿಕೆಟ್​​ಗೆ ಪೂಜಾರ ಗುಡ್​ ಬೈ, ಆಸ್ಟ್ರೇಲಿಯಾ ನಿರಾಳ

2023ರ ಬಳಿಕ ಟೀಮ್​ ಇಂಡಿಯಾದಿಂದ ಹೊರ ಬಿದ್ದಿದ್ದ ಚೇತೇಶ್ವರ್​ ಪೂಜಾರ ಇದೀಗ ಅಧಿಕೃತವಾಗಿ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ್ದಾರೆ. ಪೂಜಾರ ನಿವೃತ್ತಿಯಿಂದ ಆಸಿಸ್​​ ಬೌಲರ್ಸ್​​​ ನಿಟ್ಟುಸಿರು ಬಿಟ್ಟಿದ್ದಾರೆ ಅನ್ನೋ ಪೋಸ್ಟ್​​ಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ. ಈ ತಮಾಷೆಯ ಪೋಸ್ಟ್​ ಆಗಿ ಕಂಡರೂ ಆಸಿಸ್​ ಪಡೆ ನಿರಾಳರಾಗಿರೋದು ನಿಜ.

ಪ್ರತಿ ಸರಣಿ, ಪ್ರತಿ ಪಂದ್ಯಕ್ಕೂ ಮುನ್ನ ನಡೀತಿತ್ತು ಚರ್ಚೆ

ಇಂಡೋ-ಆಸಿಸ್​​​ ಟೆಸ್ಟ್​ ಸರಣಿ ಅಂದ್ರೆ ಇಡೀ ವಿಶ್ವದ ಕಣ್ಣಿರುತ್ತೆ. ಸರಣಿಯ ಪ್ರತಿ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ತಂತ್ರ, ಪ್ರತಿತಂತ್ರಗಳನ್ನ ಹೆಣೆಯುತ್ತವೆ. ಆಸ್ಟ್ರೇಲಿಯಾ ಡ್ರೆಸ್ಸಿಂಗ್​ ರೂಮ್​ನಲ್ಲೂ ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ಗಳನ್ನ ಖೆಡ್ಡಾಗೆ ಕೆಡವೋದು ಹೇಗೆ ಅನ್ನೋ ದೊಡ್ಡ ಚರ್ಚೆಯೇ ನಡೀತಿತ್ತು. ಕೊಹ್ಲಿ, ರೋಹಿತ್​ ಶರ್ಮಾ ಮುಂತಾದ ಸ್ಟಾರ್​​ ಬ್ಯಾಟರ್​ಗಳನ್ನ ಬಿಟ್ಟು ಬಿಡಿ. ಪ್ರತಿ ಸರಣಿ, ಪ್ರತಿ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯನ್ನರಿಗೆ ತಲೆ ನೋವಾಗಿದ್ದಿದ್ದು ಚೇತೇಶ್ವರ್​​ ಪೂಜಾರ.

ಇದನ್ನೂ ಓದಿ:ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪೂಜಾರ ಗುಡ್​ಬೈ..

cheteshwar_pujara

ಪ್ಯಾಟ್​ ಕಮಿನ್ಸ್​, ಮಿಚೆಲ್​ ಸ್ಟಾರ್ಕ್​, ಜೋಷ್​​ ಹೇಜಲ್​ವುಡ್​​ ಎಂತಾ ಪವರ್​ಫುಲ್​ ಪೇಸ್​ ಅಟ್ಯಾಕ್​ ಇದು. ಈ ಪೇಸರ್ಸ್​ ಕೂಡ ಚೇತೇಶ್ವರ್​​ ಪೂಜಾರ, ತಾಳ್ಮೆಯ ಮುಂದೆ ಬೆಸ್ತು ಬಿದ್ದಿದ್ರು. ಕ್ಯಾಪ್ಟನ್​- ಕೋಚ್​​, ಪ್ಲೇಯರ್ಸ್​ ತಮ್ಮದೇ ಪಿಚ್​ನಲ್ಲಿ ಔಟ್​ ಮಾಡೋದು ಹೇಗೆ ಎಂದು ತಿಳಿಯದೇ ದಿಕ್ಕೇ ತೋಚದೆ ನಿಂತು ಬಿಟ್ಟ ಉದಾಹರಣೆಯೂ ಇದೆ. 

ಪೂಜಾರ ಪಾಲಿನ ಫೇವರಿಟ್​​ ಎದುರಾಳಿ ಆಸಿಸ್

ಚೇತೇಶ್ವರ್​ ಪೂಜಾರ ವಿಶ್ವದ ಎಲ್ಲಾ ಟೆಸ್ಟ್​​ ನೆಷನ್ಸ್​ ಎದುರು ಪಂದ್ಯಗಳನ್ನಾಡಿದ್ದಾರೆ. ಎಲ್ಲರಿಗಿಂತ ಹೆಚ್ಚು ಕಾಟ ಕೊಟ್ಟಿರೋದು ಮಾತ್ರ ಆಸ್ಟ್ರೇಲಿಯಾಗೆ. ಪಂದ್ಯ ನಡೀತಿರೋದು ಭಾರತದಲ್ಲಾಗಲಿ, ಕಾಂಗರೂ ನಾಡಲ್ಲಾಗಲಿ ಪೂಜಾರ ಬ್ಯಾಟ್​​ ಸೌಂಡ್​ ಮಾಡೋದು ಮಾತ್ರ ಕನ್ಫರ್ಮ್​​. 

ಪ್ರವಾಸದಲ್ಲಿ ಪೂಜಾರ ಮಿಂಚು

2018ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್​ ಇಂಡಿಯಾ ಸರಣಿ ಗೆದ್ದು ಇತಿಹಾಸ ರಚಿಸಿತು. ಈ ಸಾಧನೆಯ ಹಿಂದೆ ಚೇತೇಶ್ವರ್​ ಪೂಜಾರ ಶ್ರಮ ಅಪಾರ. ಇದೊಂದೇ ಅಲ್ಲ. 2020-21ರ ಪ್ರವಾಸದಲ್ಲೂ ಅಷ್ಟೇ ಚೇತೇಶ್ವರ ಪೂಜಾರ ಕಟ್ಟಿದ ಸಾಲಿಡ್​ ಇನ್ನಿಂಗ್ಸ್​ ಟೀಮ್​ ಇಂಡಿಯಾ ಬಾರ್ಡರ್​​-ಗವಾಸ್ಕರ್​ ಟ್ರೋಫಿ ಗೆಲ್ಲಿಸಿಕೊಟ್ವು. 

2018 ಅಂಡ್ 20ರ ಆಸಿಸ್​ ಪ್ರವಾಸದಲ್ಲಿ ಪೂಜಾರ 

2018 ಹಾಗೂ 2022ರ 2 ಪ್ರವಾಸಗಳಲ್ಲಿ 8 ಪಂದ್ಯಗಳಲ್ಲಿ ಬ್ಯಾಟಿಂಗ್​ ನಡೆಸಿದ್ದ ಪೂಜಾರ, 792 ರನ್​ಗಳಿಸಿದ್ರು. 52.80ರ ಸರಾಸರಿಯಲ್ಲಿ ರನ್​ಗಳಿಸಿದ್ದ ಪೂಜಾರ 4 ಹಾಫ್​ ಸೆಂಚುರಿ, 3 ಶತಕ ಸಿಡಿಸಿ ಮಿಂಚಿದ್ರು. ಇವರೆಡು  ಪ್ರವಾಸ ಮಾತ್ರವಲ್ಲ. ಆಸ್ಟ್ರೇಲಿಯಾದಲ್ಲಿ ಒಟ್ಟು 11 ಪಂದ್ಯಗಳನ್ನ ಆಡಿರೋ ಪೂಜಾರ ಟಫ್​ ಕಂಡಿಷನ್ಸ್​ನಲ್ಲಿ ಸಲೀಸಾಗಿ ರನ್​​ ಕೊಳ್ಳೆ ಹೊಡೆದಿದ್ದಾರೆ. 47.28ರ ಸರಾಸರಿಯಲ್ಲಿ 993 ರನ್​ಗಳಿಸಿ ಮಿಂಚಿದ್ದಾರೆ. 3 ಶತಕ, 5 ಹಾಫ್​​ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೆ ಪೂಜಾರ ಹೆಸರಿಗಿದೆ. 

ಇದನ್ನೂ ಓದಿ:ಕ್ರಿಕೆಟ್ ಕರಿಯರ್​ಗೆ ಗುಡ್ ಬೈ ಹೇಳಿರುವ ಚೇತೇಶ್ವರ ಪೂಜಾರ ಟಾಪ್​- 5 ಇನ್ನಿಂಗ್ಸ್​..!

ರೋಹಿತ್ ಪಡೆಯ ಗರ್ವಭಂಗಕ್ಕೆ ಕಾರಣ ಆ 21 ಓವರ್​ಗಳು.. ಭಾರತ ಎಡವಿದ್ದು ಎಲ್ಲಿ?

ಅವರದ್ದೇ ಪಿಚ್​ನಲ್ಲಿ ಆರ್ಭಟಿಸಿದ ಪೂಜಾರ ಹೋಮ್​​ ಪಿಚ್​​ನಲ್ಲಿ ಬಿಡ್ತಾರಾ? ಭಾರತದ ನೆಲದಲ್ಲೂ ಕಾಂಗರೂಗಳನ್ನ ಕಂಗಾಲ್​​ ಆಗುವಂತೆ ಮಾಡಿದ್ದಾರೆ. ಆಸ್ಟ್ರೇಲಿಯಾ ಎದುರು ಪೂಜಾರ ಭಾರತದಲ್ಲಿ 13 ಪಂದ್ಯ ಆಡಿ 1040 ರನ್​ ಗಳಿಸಿದ್ರು. 54.73ರ ಸರಾಸರಿಯಲ್ಲಿ ರನ್​ಗಳಿಸಿದ್ದ ಪೂಜಾರ 1 ಡಬಲ್​ ಸೆಂಚುರಿ, 2 ಸೆಂಚುರಿ, 6 ಹಾಫ್​​ ಸೆಂಚುರಿ ಸಿಡಿಸಿದ್ರು.

ಆಸ್ಟ್ರೇಲಿಯಾ ಅಂದ್ರೆ ಕ್ರಿಕೆಟ್​ ಲೋಕದಲ್ಲಿ ಒಂದು ರೀತಿಯ ಭಯವಿದೆ. ಅವರ ಡಾಮಿನೆನ್ಸ್​ ಮೀರಿಸಿ ನಿಲ್ಲೋದು ಕಷ್ಟ ಎಂಬ ಕಲ್ಪನೆಯಿದೆ. ಕೆಲವೇ ಕೆಲವು ಆಟಗಾರರು ಮಾತ್ರ ಕಾಂಗರೂಗಳನ್ನ ಅಟ್ಟಾಡಿಸಿದ್ದಾರೆ. ಅವ್ರಲ್ಲಿ ಚೇತೇಶ್ವರ್​​ ಪೂಜಾರ ಕೂಡ ಒಬ್ಬರಾಗಿದ್ರು ಅನ್ನೋದು ನಮ್ಮ ಹೆಮ್ಮೆ.

ಇದನ್ನೂ ಓದಿ:ಬೆಂಗಳೂರು ಟು ಓವಲ್​.. 103 ಟೆಸ್ಟ್​ ಪಂದ್ಯಗಳ ಜರ್ನಿಯೇ ರೋಚಕ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Cheteshwar Pujara
Advertisment