/newsfirstlive-kannada/media/media_files/2025/08/25/cheteshwar-pujara-1-2025-08-25-15-26-12.jpg)
ಚೇತೇಶ್ವರ್ ಪೂಜಾರ. ಟೀಮ್ ಇಂಡಿಯಾದ ಮಿಸ್ಟರ್ ಡಿಪೆಂಡಬಲ್. ಟೀಮ್ ಇಂಡಿಯಾಗೆ ಸಿಕ್ಕ ಟ್ರಬಲ್ ಶೂಟರ್. ರಾಹುಲ್ ದ್ರಾವಿಡ್ ನಂತರ ಟೀಮ್ ಇಂಡಿಯಾಗೆ ಸಿಕ್ಕ ವಾಲ್. ಸಂಕಷ್ಟದ ಪರಿಸ್ಥಿತಿಗಳಲ್ಲಿ ಕಲ್ಲು ಬಂಡೆಯಂತೆ ನೆಲಕಚ್ಚಿ ನಿಲ್ಲೋ ಹೆಬ್ಬಂಡೆ. ಏಕಾಂಗಿಯಾಗಿ ಹೋರಾಟ ನಡೆಸಿ ಮ್ಯಾಚ್ ಗೆಲ್ಲಿಸುತ್ತಿದ್ದ ವಾರಿಯರ್. ಸೈಲೆಂಟ್ ಆಗಿಯೇ ಬಿಗ್ ಇನ್ನಿಂಗ್ಸ್ ಕಟ್ಟುತ್ತಿದ್ದ ರಿಯಲ್ ಸೇವಿಯರ್. ಆದ್ರೀಗ ಈ ಸೌರಾಷ್ಟ್ರ ಬ್ಯಾಟ್ಸ್ಮನ್ ಕ್ರಿಕೆಟ್ನಿಂದಲೇ ದೂರ ಸರಿದಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯಿಂದ ಬ್ಯಾಟ್ ಇಸ್ಕೊಳ್ಳುವುದನ್ನ ನಿಲ್ಲಿಸಿದ ಯಂಗ್ ಬ್ಯಾಟರ್..
ಟೀಮ್ ಇಂಡಿಯಾಗೆ ಅದೆಷ್ಟೋ ಮರೆಯಲಾಗದ ಇನ್ನಿಂಗ್ಸ್ಗಳನ್ನು ಕಟ್ಟಿಕೊಟ್ಟಿದ್ದ ಪೂಜಾರ, ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಭಾವನಾತ್ಮಕ ಪೋಸ್ಟ್ ಮೂಲಕ 20 ವರ್ಷಗಳ ಸುದೀರ್ಘ ಕ್ರಿಕೆಟ್ ಕರಿಯರ್ಗೆ ಅಂತ್ಯವಾಡಿದ್ದಾರೆ.
ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ
ರಾಜ್‌ಕೋಟ್ ಎಂಬ ಪಟ್ಟಣದ ಚಿಕ್ಕ ಹುಡುಗನಾಗಿದ್ದ ನಾನು, ನನ್ನ ಹೆತ್ತವರೊಂದಿಗೆ ನಕ್ಷತ್ರಗಳನ್ನು ಗುರಿಯಾಗಿಟ್ಟುಕೊಂಡು ಹೊರಟೆ. ಮುಂದೊಂದು ದಿನ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಬೇಕೆಂದು ಕನಸು ಕಂಡಿದ್ದೆ. ಈ ಆಟವು ನನಗೆ ಅಮೂಲ್ಯ ಅವಕಾಶ, ಅನುಭವ, ಪ್ರೀತಿ ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ರಾಜ್ಯ, ಈ ಮಹಾನ್ ರಾಷ್ಟ್ರವನ್ನ ಪ್ರತಿನಿಧಿಸುವ ಅವಕಾಶ ನೀಡಿದೆ. ಭಾರತ ತಂಡದ ಜೆರ್ಸಿ ಧರಿಸುವುದು, ರಾಷ್ಟ್ರಗೀತೆ ಹಾಡುವುದು. ನಾನು ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗ ತಂಡದ ಗೆಲುವಿಗೆ ಕೈಲಾದಷ್ಟು ಪ್ರಯತ್ನಿಸಿದ್ದನ್ನ ಪದಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯ. ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು, ಕೃತಜ್ಞತೆಯಿಂದ ನಾನು ಎಲ್ಲಾ ರೀತಿಯ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ.
ಚೇತೇಶ್ವರ್ ಪೂಜಾರ, ಕ್ರಿಕೆಟರ್
ಎಲ್ಲರಿಗೂ ಧನ್ಯವಾದ!
2005ರಲ್ಲಿ ದೇಶಿ ಕ್ರಿಕೆಟ್‌ನಿಂದ ವೃತ್ತಿ ಜೀವನ ಆರಂಭಿಸಿದ ಪೂಜಾರ, 2010ರಲ್ಲಿ ಟೀಮ್ ಇಂಡಿಯಾಗೆ ಡೆಬ್ಯು ಮಾಡಿದರು. 2023ರ ತನಕ ಟೀಮ್ ಇಂಡಿಯಾದ ಭಾಗವಾಗಿದ್ದ ಪೂಜಾರ, ಈ ಸುದೀರ್ಘ ಅವಧಿಯಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಿದೆ. ಈ ಸುದೀರ್ಘ ಕರಿಯರ್ನಲ್ಲಿ ನೆರವಿಗೆ ನಿಂತವರಿಗೆ ಚೇತೇಶ್ವರ ಪೂಜಾರ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಕರಿಯರ್ಗೆ ಗುಡ್ ಬೈ ಹೇಳಿರುವ ಚೇತೇಶ್ವರ ಪೂಜಾರ ಟಾಪ್- 5 ಇನ್ನಿಂಗ್ಸ್
ಬೆಂಗಳೂರು ಟು ಓವಲ್..!
ದೇಶಿ ಕ್ರಿಕೆಟ್ನಲ್ಲಿ ಅಬ್ಬರಿಸಿದ ಚೇತೇಶ್ವರ ಪೂಜಾರ, ಟೀಮ್ ಇಂಡಿಯಾ ಡೆಬ್ಯು ಮಾಡಿದ್ದು 2010ರಲ್ಲಿ. ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಡೆಬ್ಯು ಮಾಡಿದ್ದ ಚೇತೇಶ್ವರ ಪೂಜಾರ, 2013ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ್ದರು. ಏಕದಿನದಲ್ಲಿ ಸಕ್ಸಸ್ ಕಾಣದ ಪೂಜಾರ, ಬ್ಲೂ ಜರ್ಸಿಯಲ್ಲಿ ಆಡಿದ್ದು ಜಸ್ಟ್ 5 ಮ್ಯಾಚ್.
ಇದನ್ನೂ ಓದಿ: ಅಯ್ಯರ್ ಮಾಡಿದ ಒಂದೇ ಒಂದು ಪ್ರಮಾದ..
ವೈಟ್ ಜರ್ಸಿಗೆ ಸೀಮಿತವಾಗಿದ್ದ ಪೂಜಾರ ಏಳು ಬೀಳು ಕಂಡಿದ್ದಿದೆ. ಅಸಾಧಾರಣ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಸೌರಾಷ್ಟ್ರ ಬ್ಯಾಟರ್, ರನ್ಗಳಿಸದೆ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಿದೆ. ಕಮ್ಬ್ಯಾಕ್ ಮಾಡಿ ಸಿಡಿದಿದ್ದಿದೆ. ಆದ್ರೆ, 2023ರ ಓವಲ್ ಟೆಸ್ಟ್ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾದ ಪೂಜಾರ, 2 ವರ್ಷಗಳ ಬಳಿಕ ಕ್ರಿಕೆಟ್‌ನಿಂದ ದೂರ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ನೆಚ್ಚಿನ ಆಟದಿಂದ ತರೆಮರೆಗೆ ಸರಿದ್ದಿದ್ದಾರೆ.
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗಳ ಸ್ಪೆಷಲಿಸ್ಟ್ ಪೂಜಾರ
ಟೆಸ್ಟ್ ಕರಿಯರ್ನಲ್ಲಿ ಚೇತೇಶ್ವರ ಪೂಜಾರ, 103 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 43.60 ಸರಾಸರಿಯಲ್ಲಿ 7195 ರನ್ ಗಳಿಸಿದ್ದಾರೆ. 19 ಶತಕ, 35 ಅರ್ಧಶತಕ ದಾಖಲಿಸಿದ್ದಾರೆ. ಪೂಜಾರ ಅಂದ್ರೆ ಹೆಚ್ಚು ನೆನಪಾಗುವುದು 2018 ಹಾಗೂ 2022ರ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ. ಈ ಎರಡು ಟೆಸ್ಟ್ ಸರಣಿಗಳ ಗೆಲುವಿನಲ್ಲಿ ಪೂಜಾರ ಛಲದ ಆಟ, ಹೋರಾಟದ ಪ್ರತಿಫಲಕ್ಕೆ ಸಿಕ್ಕ ಗೆಲುವುಗಳೇ 2018-19 ಹಾಗೂ 2022ರ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗಳು ಅನ್ನೋದ್ರಲ್ಲಿ ಡೌಟಿಲ್ಲ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಬೆಸ್ಟ್ ಫಿನಿಶರ್ ಇಲ್ವಾ.. ತಂಡಕ್ಕೆ ಬೇಕಿದೆ ಆ ಒಬ್ಬ ಆಟಗಾರ!
ದಶಕಕ್ಕೂ ಹೆಚ್ಚು ಕಾಲ ಟೀಮ್ ಇಂಡಿಯಾದ ನಂಬಿಕಸ್ಥ ಭಂಟನಾಗಿದ್ದ ಪೂಜಾರ, ಸ್ವದೇಶ, ವಿದೇಶಗಳ ಟೆಸ್ಟ್ ಸರಣಿಗಳ ಗೆಲುವುಗಳಲ್ಲಿ ಪ್ರಮುಖ ಪಾತ್ರವನ್ನೇ ವಹಿಸಿದ್ದಾರೆ. ಯುವ ಆಟಗಾರರ ಪೈಪೋಟಿಯಲ್ಲಿ ಬದಲಾವಣೆಯ ಪರ್ವದಲ್ಲಿ 2 ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗಿದ್ದ ಪೂಜಾರ ತೆರೆಮರೆಗೆ ಸರಿಯುತ್ತಿದ್ದಾರೆ. ಪೂಜಾರ ಆನ್ಫೀಲ್ಡ್ನಲ್ಲಿ ಕಟ್ಟಿಕೊಟ್ಟಿರುವ ನೆನಪುಗಳು ಎಂದಿಗೂ ಯುವ ಕ್ರಿಕೆಟರ್ಗಳ ಪಾಲಿಗೆ ಸ್ಫೂರ್ತಿಯೇ ಸರಿ.
ಇದನ್ನೂ ಓದಿ: ಈ ಫಿನಿಕ್ಸ್ ಹಕ್ಕಿ ಹಿಂದಿದೆ ವಿಶೇಷ ಸಂದೇಶ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ