BCCI ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ.. ಮುಂದಿನ ಬಿಗ್​ಬಾಸ್​ ಯಾರು ಗೊತ್ತಾ..?

ಸಚಿನ್ ತೆಂಡುಲ್ಕರ್​.. ಗಾಡ್ ಆಫ್ ಕ್ರಿಕೆಟ್​.. ಈ ಗಾಡ್ ಆಫ್ ಕ್ರಿಕೆಟ್,​ ಇದೀಗ ಬಾಸ್ ಆಫ್ ಬಿಸಿಸಿಐ ಆಗ್ತಾರಾ ಎಂಬ ಚರ್ಚೆ ಶುರುವಾಗಿದೆ. ಟೀಮ್ ಇಂಡಿಯಾ ಪರ ಆಟಗಾರನಾಗಿ 24 ವರ್ಷಗಳ ಸೇವೆ ಸಲ್ಲಿಸಿದ್ದ ಸಚಿನ್, ಈಗ ಬಿಸಿಸಿಐನ ಬಿಗ್​ ಬಾಸ್ ಆಗಿ ಮತ್ತೊಂದು ಹೊಸ ಇನ್ನಿಂಗ್ಸ್​ ಆರಂಭಿಸುವ ಸಾಧ್ಯತೆ ಇದೆ.

author-image
Ganesh Kerekuli
BCCI (2)
Advertisment

ಸಚಿನ್ ತೆಂಡುಲ್ಕರ್​.. ಗಾಡ್ ಆಫ್ ಕ್ರಿಕೆಟ್​.. ಈ ಗಾಡ್ ಆಫ್ ಕ್ರಿಕೆಟ್,​ ಇದೀಗ ಬಾಸ್ ಆಫ್ ಬಿಸಿಸಿಐ ಆಗ್ತಾರಾ ಎಂಬ ಚರ್ಚೆ ಶುರುವಾಗಿದೆ. ಟೀಮ್ ಇಂಡಿಯಾ ಪರ ಆಟಗಾರನಾಗಿ 24 ವರ್ಷಗಳ ಸೇವೆ ಸಲ್ಲಿಸಿದ್ದ ಸಚಿನ್, ಈಗ ಬಿಸಿಸಿಐನ ಬಿಗ್​ ಬಾಸ್ ಆಗಿ ಮತ್ತೊಂದು ಹೊಸ ಇನ್ನಿಂಗ್ಸ್​ ಆರಂಭಿಸುವ ಸಾಧ್ಯತೆ ಇದೆ.

ಬಿಸಿಸಿಐನ ಬಿಗ್​ ಬಾಸ್ ಯಾರ್ ಆಗ್ತಾರೆ? ಟೀಮ್ ಇಂಡಿಯಾ ಅಭಿಮಾನಿಗಳಲ್ಲೇ ಅಲ್ಲ. ವಿಶ್ವ  ಕ್ರಿಕೆಟ್ ಲೋಕದ ಸಂಸ್ಥೆಗಳಲ್ಲೂ ಇದೇ ಪ್ರಶ್ನೆ ಕಾಡ್ತಿದೆ. ರೋಜರ್ ಬಿನ್ನಿಯಿಂದ ತೆರವಾದ ಸ್ಥಾನಕ್ಕೆ ಯಾರನ್ನ ಅಧ್ಯಕ್ಷರನ್ನಾಗಿ ಮಾಡಲಾಗುತ್ತೆ ಎಂಬ ಕ್ಯೂರಿಯಾಸಿಟಿ ಇದ್ದೇ ಇದೆ. ಆದ್ರೀಗ ಹೊಸ ಅಪಡೇಟ್ ಪ್ರಕಾರ, ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್​​, ಬಿಸಿಸಿಐ ಅಧ್ಯಕ್ಷ ಗಾದಿಗೇರ್ತಾರೆ ಎಂಬ ಸುದ್ದಿ ಹೊರಬಿದ್ದಿದೆ. 

ಇದನ್ನೂ ಓದಿ:ಗಂಭೀರ್, ಸೂರ್ಯನ ಪ್ಲಾನ್​​ ಸಕ್ಸಸ್.. ಟೀಂ ಇಂಡಿಯಾದ ಗೆಲುವಿನ ತಂತ್ರ ಏನು ಗೊತ್ತಾ?

SACHIN_NO_1

ಬಿಸಿಸಿಐ ಅಧ್ಯಕ್ಷರ ರೇಸ್​​ನಲ್ಲಿ ಸಚಿನ್ ಹೆಸರು ಮುಂಚೂಣಿಯಲ್ಲಿದೆ. ಇದೇ ಸೆಪ್ಟೆಂಬರ್ 28ರಂದು ನಡೆಯಲಿರುವ 94ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಮಾಡಲಿದ್ದು, ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡುಲ್ಕರ್, ಸರ್ವಾನುಮತದ ಆಯ್ಕೆ ಬಹುತೇಕ ಫಿಕ್ಸ್​ ಎನ್ನಲಾಗ್ತಿದೆ. ಸಚಿನ್ ಆಯ್ಕೆಗೆ ನಾನಾ.. ಕಾರಣಗಳು ಇವೆ. 

24 ವರ್ಷಗಳ ಕಾಲ ಟೀಮ್ ಇಂಡಿಯಾ ಪರ ಆಡಿದ್ದ ಸಚಿನ್, ವಿಶ್ವ ಕ್ರಿಕೆಟ್​​ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಟೀಮ್ ಇಂಡಿಯಾ ಪರ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಸಚಿನ್, ಕ್ಲೀನ್ ಇಮೇಜ್  ಹೊಂದಿದ್ದಾರೆ. ಆಟಗಾರನಾಗಿ ತರೆ ಹಿಂದೆ ಶ್ರಮಿಸಿರುವ ಸಚಿನ್, ಸದ್ಯದ ಪರಿಸ್ಥಿತಿಗಳಲ್ಲಿ ಬಿಸಿಸಿಐ ಅಧ್ಯಕ್ಷ ಹುದ್ದೆಗೇರಲು ಅರ್ಹರೂ ಆಗಿದ್ದಾರೆ. ಎಲ್ಲಾ ಕ್ರೀಡೆಗಳಲ್ಲಿ ಈಗ ಆಟಗಾರರೇ ಕ್ರಿಕೆಟ್​ ಸಂಸ್ಥೆಗಳ ರಾಜ್ಯಭಾರ ನಡೆಸ್ತಿರುವುದು ಟ್ರೆಂಡ್. ಹೀಗಾಗಿ ಸಚಿನ್, ಅಧ್ಯಕ್ಷ ಹುದ್ದೆಗೆ ಏರಿದ್ರೆ ಟೀಮ್ ಇಂಡಿಯಾ ವೃದ್ದಿಗೆ ಮತ್ತಷ್ಟು ಶ್ರಮಿಸುವುದು ಪಕ್ಕಾ.

ಇದನ್ನೂ ಓದಿ:ಕೇವಲ 4 ಓವರ್​ಗಳಲ್ಲಿ UAE ತಂಡದ ವಿರುದ್ಧ ಟೀಮ್ ಇಂಡಿಯಾಗೆ ಗೆಲುವು

BCCI (1)

ಬಿಸಿಸಿಐ ಅಧ್ಯಕ್ಷಗಿರಿ ಸಚಿನ್​​ಗೆ ನೀಡುವ ಒಲವಿಗೆ ಕಾರಣ ಪಶ್ಚಿಮ ವಲಯದ ಕ್ರಿಕೆಟರ್ ಎಂಬುವುದು ಒಂದಾಗಿದೆ. ಬಿಸಿಸಿಐನ ಪದ್ಧತಿಯನ್ವಯ ಪ್ರತಿ ಬಾರಿ ಒಂದೊಂದು ಪ್ರದೇಶಕ್ಕೆ ಒತ್ತು ನೀಡಲಾಗಿತ್ತು. ಇದು ಕಡ್ಡಾಯವಾಗಿ ಪಾಲಿಸದಿದ್ದರೂ, ಕಳೆದ 2 ಅವಧಿಗಳಲ್ಲಿ ಪೂರ್ವ ವಲಯದ ಸೌರವ್ ಗಂಗೂಲಿ, ದಕ್ಷಿಣ ವಲಯದ ರೋಜರ್ ಬಿನ್ನಿಗೆ ಅಧ್ಯಕ್ಷ ಪಟ್ಟ ಸಿಕ್ಕಿತ್ತು. ಇದರಂತೆಯೇ ಈ ಬಾರಿ ಪಶ್ಚಿಮ ವಲಯದವರಿಗೆ ಅಧ್ಯಕ್ಷ ಹುದ್ದೆ ನೀಡಲು ಚಿಂತನೆ ನಡೆದಿದೆ. ಇದೇ ಕಾರಣಕ್ಕೆ ಸಚಿನ್​ಗೆ ಪಟ್ಟ ಕಟ್ಟಲು ಆಸಕ್ತಿ ವಹಿಸಿದೆ.

ಸರ್ವಾನುಮತದ ಆಯ್ಕೆ

ಸಚಿನ್ ಬಿಸಿಸಿಐ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿದ್ದರೆ, ಆಯ್ಕೆ ಬಹಳ ಸುಲಭ ಎಂಬ ಲೆಕ್ಕಾಚಾರವೂ ಇದೆ. ಯಾಕಂದ್ರೆ ಕ್ಲೀನ್ ಹ್ಯಾಂಡ್, ಲೆಜೆಂಡರಿ ಕ್ರಿಕೆಟರ್​​​​ ಆಯ್ಕೆಗೆ ವಿರೋಧ ವ್ಯಕ್ತವಾಗಲ್ಲ. ಅಧ್ಯಕ್ಷ ಗಿರಿಯ ಮೇಲೆ ಒಲವು ಹೊಂದಿರುವ ಇತರರು ರೇಸ್​​ನಿಂದ ಹಿಂದೆ ಸರಿಯಲಿದ್ದಾರೆ. ಹೀಗಾಗಿ ಪ್ರತಿ ಸ್ಪರ್ಧಿ ಇಲ್ಲದೆ ಸರ್ವಾನುಮತದ ಆಯ್ಕೆ ಎಂಬ ಲೆಕ್ಕಾಚಾರವೂ ಅಡಗಿದೆ.

ಸಚಿನ್​​ಗೆ ರಾಜಕೀಯ ವರ್ಗದಿಂದಲೂ ಬೆಂಬಲ

ಸಚಿನ್ ತೆಂಡುಲ್ಕರ್​.. ಬಿಸಿಸಿಐ ಅಧ್ಯಕ್ಷಗಿರಿಯ ಫ್ರಂಟ್​ ರನ್ನರ್​ ಆಗಿದ್ದಾರೆ. ಇದಕ್ಕೆ ಕಾರಣ ರಾಜಕೀಯ ನಾಯಕರ ಬೆಂಬಲ. ಬಿಸಿಸಿಐ ಆಪ್ತ ವಲಯದಲ್ಲಿರುವ ರಾಜಕೀಯ ನಾಯಕರ ಬೆಂಬಲ ಸಚಿನ್ ತೆಂಡುಲ್ಕರ್​​ಗೆ ಇದೆ. ಸಚಿನ್​ ಬಿಸಿಸಿಐನ ಅಧ್ಯಕ್ಷಗಿರಿ ನೀಡುವಂತೆ ಕೆಲ ರಾಜಕೀಯ ನಾಯಕರು ಬ್ಯಾಟ್​ ಬೀಸಿದ್ದಾರಂತೆ. ರಾಜಕೀಯ ನಾಯಕರ ಸೂಚನೆಯಂತೆಯೇ ಸಚಿನ್ ಜೊತೆ ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗ್ತಿದೆ. 

ಇದನ್ನೂ  ಓದಿ:ನೆಟ್ ಬೌಲರ್ಸ್​​ಗೆ ಬೆಂಡೆತ್ತಿದ ಯಂಗ್ ಬ್ಯಾಟರ್.. 30 ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ

BCCI ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ ರೋಜರ್ ಬಿನ್ನಿ ಗುಡ್​ಬೈ.. ಹೊಸ ಬಾಸ್ ಯಾರ್ ಆಗ್ತಾರೆ?

ಸಚಿನ್​​ ಕ್ರಿಕೆಟ್​​​ಗೆ ಗುಡ್​ ಬೈ ಹೇಳಿ 12 ವರ್ಷಗಳೇ ಕಳೆದಿವೆ. ಇದುವರೆಗೆ ಕ್ರಿಕೆಟ್​ ಆಡಳಿದತ್ತ ಒಲವು ತೋರದ ಸಚಿನ್, ಐಪಿಎಲ್​​ನಲ್ಲಿ ಮುಂಬೈ ಪರ ಕೆಲಸ ಮಾಡಿದ್ದು ಬಿಟ್ರೆ, ಕೇವಲ ಪ್ರಚಾರ ರಾಯಭಾರಿಯಾಗಿ ವಿವಿಧ ಜಾಹೀರಾತುಗಳಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದಾರೆ. ತಮ್ಮ ಬ್ಯುಸಿನೆಸ್​​​ಗಳತ್ತಲೇ ಚಿತ್ತ ನೆಟ್ಟಿರುವ ಸಚಿನ್, ಬಿಸಿಸಿಐ ಆಫರ್ ಒಪ್ಪಿಕೊಳ್ಳುವುದು ಕಷ್ಟ.. ಕಷ್ಟ.. ಒಂದು ವೇಳೆ ಒಪ್ಪಿದರೆ ಚುನಾವಣೆ ಇಲ್ಲದೆ ಸರ್ವಾನುಮತದ ಆಯ್ಕೆ ಫಿಕ್ಸ್. ಆದ್ರೆ, ಇದೆಕ್ಕೆಲ್ಲಾ ಸಚಿನ್ ಒಕೆ ಅಂತಾರಾ ಅನ್ನೋದೆ ಸದ್ಯದ ಪ್ರಶ್ನೆ.

ಇದನ್ನೂ ಓದಿ:ತೊಡೆ ತಟ್ಟಿ ಗೆದ್ದವರಿಲ್ಲ.. ಹಾಲಿ ಚಾಂಪಿಯನ್​ ಟೀಮ್ ಇಂಡಿಯಾದ 50 ವರ್ಷದ ಇತಿಹಾಸ ಹೇಗಿದೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

roger binny sachin tendulkar
Advertisment