/newsfirstlive-kannada/media/media_files/2025/08/09/sanju_samson-1-2025-08-09-14-46-24.jpg)
ಐಪಿಎಲ್ ಅಖಾಡದ ಟಾಕ್ ಆಫ್ ದಿ ಟೌನ್ ಸಂಜು ಸ್ಯಾಮ್ಸನ್. 18ರ ಮಿಡ್ ಸೀಸನ್ನಿಂದ ಇದುವರೆಗೆ ಸಂಜು ಸ್ಯಾಮ್ಸನ್ರದ್ದೇ ಚರ್ಚೆ. ಯಾವ ತಂಡಕ್ಕೆ ಹೋಗ್ತಾರೆ ಅನ್ನೋದು. ಇದೀಗ ಸಂಜು ಟ್ರೇಡಿಂಗ್ ಬಗ್ಗೆ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ಚೆನ್ನೈ ನೋ ಎಂದಾಕ್ಷಣ ಸಂಜುಗಾಗಿ ಫ್ರಾಂಚೈಸಿಗಳು ಮುಗಿ ಬಿದ್ದಿವೆ.
ರಾಜಸ್ಥಾನ್ ರಾಯಲ್ಸ್ ಡಿಮ್ಯಾಂಡ್!
ಸೀಸನ್-18ರಿಂದಲೂ ಸಂಜು ಚೆನ್ನೈ ಸೇರ್ತಾರೆ. ಯೆಲ್ಲೋ ಆರ್ಮಿ ನಾಯಕರಾಗ್ತಾರೆ ಎಂಬ ಸುದ್ದಿ ಇತ್ತು. ಸಂಜು ಆರ್ಆರ್ಗೆ ಯಾವಾಗ ಟ್ರೇಡ್ ಮಾಡಿ ಅಂಡ್ ರಿಲೀಸ್ ಮಾಡಿ ಎಂದರೋ ಆಗಲೇ 100 ಪರ್ಸೆಟ್ ಇವರು ಚೆನ್ನೈ ಸೇರ್ತಾರೆ ಅನ್ನೋದು ಗ್ಯಾರಂಟಿ ಎನ್ನಲಾಗ್ತಿತ್ತು. ಆದ್ರೀಗ ಸಂಜು ಸ್ಯಾಮ್ಸನ್ ಕನಸಿಗೆ ಅಲ್ಪ ವಿರಾಮ ಬಿದ್ದಿದೆ. ಇದಕ್ಕೆ ಕಾರಣ ಆರ್ಆರ್ ಡಿಮ್ಯಾಂಡ್.
ಇದನ್ನೂ ಓದಿ:Asia Cup T20; ಕ್ಯಾಪ್ಟನ್ ಸೂರ್ಯಕುಮಾರ್ ಕೈಯಲ್ಲಿ ಬಲಿಷ್ಠ ತಂಡದ ಆಯ್ಕೆ..!
ಆರ್ಆರ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್, ಚೆನ್ನೈಗೆ ಟ್ರೇಡ್ ಆಗ್ತಾರೆ ಎನ್ನಲಾಗಿತ್ತು. ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಮಾತುಕತೆಯೂ ನಡೆಸಿರುವ ರಾಜಸ್ಥಾನ್ ರಾಯಲ್ಸ್, ಬಿಗ್ ಮ್ಯಾಚ್ ವಿನ್ನರ್ಗಳ ಡಿಮ್ಯಾಂಡ್ ಇಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್, ಆಲ್ರೌಂಡರ್ ರವೀಂದ್ರ ಜಡೇಜಾ ಅಥವಾ ಶಿವಂ ದುಬೆ ಪೈಕಿ ಒಬ್ಬರನ್ನು ಬಿಟ್ಟುಕೊಡುವಂತೆ ಒತ್ತಾಯಿಸಿದೆ. ಮ್ಯಾಚ್ ವಿನ್ನರ್ಗಳನ್ನ ಬಿಟ್ಟು ಕೊಡಲು ನೋ ಎಂದಿರುವ ಚೆನ್ನೈ, ಆರ್ಆರ್ ಆಫರ್ ತಿರಸ್ಕರಿಸಿದೆ.
ಕ್ಯಾಪ್ಟನ್ಗಾಗಿ ಮುಗಿಬಿದ್ದ ಫ್ರಾಂಚೈಸಿಗಳು
ಅತ್ತ ಚೆನ್ನೈ, ಆರ್ಆರ್ ಟ್ರೇಡ್ ವಿಫಲವಾಗಿದ್ದೆ ತಡ ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ಸಂಜು ಸ್ಯಾಮ್ಸನ್ಗಾಗಿ ಆಫರ್ ನೀಡಿದೆ. ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಕೊಟ್ಟು, ಸಂಜು ಸ್ಯಾಮ್ಸನ್ನ ಪಡೆಯುವ ಆಫರ್ ನೀಡಿದೆ. ಆ ಮೂಲಕ ವಿಕೆಟ್ ಕೀಪರ್, ಬ್ಯಾಟ್ಸಮನ್ ಅಂಡ್ ಕ್ಯಾಪ್ಟನ್ಗೆ ಗಾಳ ಹಾಕಲು ಮುಂದಾಗಿದೆ. ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯೋ ಪ್ಲಾನ್ನಲ್ಲಿದೆ.
ಇದನ್ನೂ ಓದಿ:ಸಾರಾಗೆ ಕೈ ಕೊಟ್ರಾ ಕ್ಯಾಪ್ಟನ್ ಗಿಲ್..? ಮುಂಬೈನಲ್ಲಿ ಹೊಸ ಬೆಡಗಿ ಜೊತೆ ಶುಭ್ಮನ್ ಸುತ್ತಾಟ!
ಕೊಲ್ಕತ್ತಾ ಮಾತ್ರವಲ್ಲ, ಮುಂಬೈ ಇಂಡಿಯನ್ಸ್ ಸಹ ಸಂಜು ಸ್ಯಾಮ್ಸನ್ ಕಣ್ಣಿಟ್ಟಿದೆ. ಈಗಾಗಲೇ ಓಪನರ್ ರೋಹಿತ್, ತರೆಮರೆಗೆ ಸರಿಯುವ ಕಾಲ ಸನ್ನಿತವಾಗಿದೆ. ಆಫ್ರಿಕಾದ ರಿಕಲ್ಟನ್ ಬಿಟ್ಟರೆ ಸೂಕ್ತ ವಿಕೆಟ್ ಕೀಪರ್ ಇಲ್ಲ. ಹೀಗಾಗಿ ಸಂಜು ಅವರನ್ನು ಸೆಳೆದ್ರೆ, ಮುಂಬೈ ಬಲ ಹೆಚ್ಚುತ್ತೆ ಅನ್ನೋದು ಮುಂಬೈ ಥಿಂಕ್ ಟ್ಯಾಕ್ಗಳ ಲೆಕ್ಕಾಚಾರ. ಮುಂಬೈ ಯಾರನ್ನು ಬಿಡುತ್ತೆ ಅನ್ನೋದೇ ಪ್ರಶ್ನೆ.
ಇದನ್ನೂ ಓದಿ:ಕನ್ನಡಿಗನ ಕನಸು ಬಹು ದೊಡ್ಡದು.. ಅದೊಂದು ಆಸೆ ಈಡೇರುತ್ತಾ..?
/filters:format(webp)/newsfirstlive-kannada/media/media_files/2025/08/13/sanju-samson-2025-08-13-18-46-18.jpg)
ಒಂದ್ಕಡೆ ಚೆನ್ನೈ, ಆರ್ಆರ್ ಟ್ರೇಡ್ ಡಿಮ್ಯಾಂಡ್ಗೆ ನೋ ಎಂದಿದೆ. ಇದರೊಂದಿಗೆ ಶಾರೂಖ್ ಒಡೆತನದ ಕೊಲ್ಕತ್ತಾ, ಮುಂಬೈ ಅಖಾಡಕ್ಕಿಳಿದಿದೆ. ಇದಕ್ಕೆ ಆರ್ಆರ್ ಅಥವಾ ಸಂಜು ಸ್ಯಾಮ್ಸನ್ ನೋ ಅಂದ್ರೆ ಸಂಜು ಸ್ಯಾಮ್ಸನ್ ಮುಂದಿನ ದಾರಿ ಯಾವುದು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಒಂದೇ ಅನ್ಸರ್ ರಿಲೀಸ್.
ಮಿನಿ ಹರಾಜಿನಲ್ಲಿ ಚೆನ್ನೈ ಟಾರ್ಗೆಟ್
ಈಗಾಗಲೇ ಸಂಜು ಡ್ರೇಡ್ ಮಾಡಿ ಇಲ್ಲ ರಿಲೀಸ್ ಮಾಡಿ ಎಂದಿದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ 100 ಪರ್ಸೆಂಟ್ ರಿಲೀಸ್ ಮಾಡುತ್ತೆ. ಇದರೊಂದಿಗೆ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಂಜುಗೆ ಬರುತ್ತೆ. ಈ ಮಿನಿ ಹರಾಜಿನಲ್ಲಿ ಒಂದೊಳ್ಳೆ ಟೀಮ್ ಕಟ್ಟಲು, ಚೆನ್ನೈ ಸೂಪರ್ ಕಿಂಗ್ಸ್ ಸಹ ಸನ್ನದ್ಧವಾಗಿದೆ. ಹೀಗಾಗಿ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ. ಟ್ರೇಡ್ ವಿಂಡೋದಲ್ಲಿ ಸಿಗದಿದ್ದರೇನು. ಮಿನಿ ಹರಾಜಿನಲ್ಲಿ ಸಿಗ್ತಾನೆ ಎಂದು ಚೆನ್ನೈ ಖರೀದಿಸುವಲ್ಲಿ ಅನುಮಾನ ಇಲ್ಲ. ಅಕಸ್ಮಾತ್ ಬೇರೆ ಫ್ರಾಂಚೈಸಿಗಳು, ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದ್ರೆ ಇಬ್ಬರಿಗೂ ನಿರಾಸೆ ತಪ್ಪಿದಲ್ಲ.
ಇದನ್ನೂ ಓದಿ: ಏಷ್ಯಾಕಪ್ ಸಮರದಲ್ಲಿ ಅಗ್ನಿಪರೀಕ್ಷೆ.. ವರ್ಲ್ಡ್ಕಪ್ಗಾಗಿ ಸೂರ್ಯ, ಗಿಲ್, ಸಂಜು ಗೆಲ್ಲಲೇಬೇಕಿದೆ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ