ಏಷ್ಯಾಕಪ್​​ಗೆ ಇವತ್ತು ಟೀಂ ಇಂಡಿಯಾ ಪ್ರಕಟ.. ಆಯ್ಕೆ ಆಗುವ ಸಂಭಾವ್ಯ ಆಟಗಾರರ ಲಿಸ್ಟ್..!

ಏಷ್ಯಾಕಪ್ ಟಿ20 ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಶುರುವಾಗಲಿರುವ ಏಷ್ಯನ್ ಕದನಕ್ಕೆ ರಣಕಲಿಗಳನ್ನ ಪ್ರಕಟಿಸಲು ತೆರೆ ಹಿಂದೆಯೇ ಸೆಲೆಕ್ಷನ್ ಕಮಿಟಿ ಲೆಕ್ಕಾಚಾರ ಹಾಕ್ತಿದೆ. ಬಲಿಷ್ಠ ಪಡೆ ಕಣಕ್ಕಿಳಿಸಲು ಯೋಜನೆ ರೂಪಿಸ್ತಿದೆ. ಆ ತೆರೆ ಹಿಂದಿನ ಸಿಕ್ರೇಟ್​​ ಇವತ್ತು ರಿವೀಲ್ ಆಗಿದೆ!

author-image
Ganesh Kerekuli
suryakumar_SANJU
Advertisment
  • ಏಷ್ಯಾಕಪ್​ಗೆ ಟೀಮ್ ಇಂಡಿಯಾ ಪ್ರಕಟಕ್ಕೆ ಕೌಂಟ್​ಡೌನ್
  • ಯಾರಿಗೆ ದುಬೈ ಟಿಕೆಟ್​..? ಯಾರಿಗೆಲ್ಲಾ ಕಾದಿದೆ ಶಾಕ್..?
  • ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಓಪನರ್ಸ್​..!

ಬಹು ನಿರೀಕ್ಷಿತ ಏಷ್ಯಾಕಪ್​ ಆರಂಭಕ್ಕೆ ಕೌಂಟ್​​ಡೌನ್ ಶುರುವಾಗಿದೆ. ಈ ಮಹತ್ವದ ಟೂರ್ನಿಗಾಗಿ ತಂಡಗಳನ್ನು ಪ್ರಕಟಿಸಿರುವ ಪಾಕ್​​​, ಅಫ್ಘಾನ್​, ಬಾಂಗ್ಲಾ ಅಭ್ಯಾಸದ ಅಖಾಡಕ್ಕೂ ಇಳಿದಿವೆ. ಈ ನಡುವೆ ಏಷ್ಯಾಕಪ್​​​​ನ ಟೀಮ್ ಇಂಡಿಯಾದಲ್ಲಿ ಯಾರೆಲ್ಲಾ ಇರ್ತಾರೆ. ಯಾರಿಗೆ ಶಾಕ್ ಕೊಡ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆ ಕ್ಯೂರಿಯಾಸಿಟಿ ಅಂತ್ಯವಾಡಲು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಸನ್ನದ್ಧರಾಗಿದ್ದಾರೆ. ಇಂದು 1.30ಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದೆ. 

ಇದನ್ನೂ ಓದಿ: ಕ್ರಿಕೆಟರ್ಸ್ ಪ್ರಸಿದ್ಧ ಮಹಾಕಾಳೇಶ್ವರನ ಮೊರೆ ಹೋಗುವುದು ಯಾಕೆ​..?

Shubman gill captain
ಶುಬ್ಮನ್ ಗಿಲ್

ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಏಷ್ಯಾಕಪ್​​ನಲ್ಲಿ ಟೀಮ್ ಇಂಡಿಯಾದ ಓಪನರ್​ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಬಾಂಗ್ಲಾ, ಸೌತ್ ಆಫ್ರಿಕಾ ಸರಣಿಯ ಗೆಲುವಿನ ರೂವಾರಿಗಳಾಗಿದ್ದ ಇವರಿಬ್ಬರ ಆಟಕ್ಕೆ ಫಿದಾ ಆಗಿರುವ ಸೆಲೆಕ್ಟರ್ಸ್​, ಸಂಜು ಹಾಗೂ ಅಭಿಷೇಕ್​ ಶರ್ಮಾರನ್ನೇ ಆರಂಭಿಕರನ್ನಾಗಿ ಪರಿಗಣಿಸಲು ಮುಂದಾಗಿದೆ. ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ಸಾಲಿಡ್ ಆಟವಾಡಿದ್ದ ಟೆಸ್ಟ್​ ಕ್ಯಾಪ್ಟನ್​ ಶುಬ್ಮನ್ ಕಮ್​ಬ್ಯಾಕ್ ಕನಸು ನುಚ್ಚುನೂರಾಗಲಿದೆ. 

ಜೈಸ್ವಾಲ್​ ಸ್ಟ್ರಾಂಗ್ ಪ್ಲೇಯರ್

2025ರಿಂದ ಟಿ20ಯಲ್ಲಿ ಕಾಣಿಸಿಕೊಳ್ಳದ ಗಿಲ್​​​ಗೆ ಕೊಕ್ ನೀಡಲು ಮುಂದಾಗಿರುವ ಸೆಲೆಕ್ಷನ್ ಕಮಿಟಿ, ಬದಲಿಯಾಗಿ ಜೈಸ್ವಾಲ್​​ಗೆ ಸ್ಥಾನ ನೀಡಲು ನಿರ್ಧರಿಸಿದ್ದಾರೆ. ಅಳೆದು ತೂಗಿ ಲೆಕ್ಕಾಚಾರ ಹಾಕಿಯೇ ಬಂದಿರುವ ಸೆಲೆಕ್ಟರ್ಸ್​​​, ಬ್ಯಾಕ್ ಆಪ್ ಓಪನರ್ ಆಗಿ ಯಶಸ್ವಿ ಜೈಸ್ವಾಲ್​​ಗೆ ಮಣೆಹಾಕ್ತಿದೆ ಎನ್ನಲಾಗ್ತಿದೆ. ಇದಕ್ಕೆ ಕಾರಣ ಗಿಲ್ ಸ್ಟ್ರೈಕ್​ರೇಟ್. 129ರ ಸ್ಟ್ರೈಕ್​ರೇಟ್​ ಹೊಂದಿರುವ ಶುಬ್ಮನ್​, ಟಿ20 ಫಾರ್ಮೆಟ್​ಗೆ ಬೇಡ ಅನ್ನೋದು ಸೆಲೆಕ್ಟರ್ಸ್​ಗಳ ಲೆಕ್ಕಾಚಾರ. ಹೀಗಾಗಿ ಬ್ಯಾಕ್ ಆಫ್ ಓಪನರ್ ಸ್ಥಾನಕ್ಕೆ ಜೈಸ್ವಾಲ್ ಸ್ಟ್ರಾಂಗ್ ಕಂಟೆಂಡರ್ ಆಗಿ ಕಾಣಿಸಿಕೊಂಡಿದ್ದಾರೆ.

ದುಬೆ, ಸುಂದರ್​ ನಡುವೆ ಟಫ್ ಕಾಂಪಿಟೇಷನ್

ಸೂರ್ಯಕುಮಾರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಸ್ಥಾನ ಕನ್ಫರ್ಮ್​. ಆಲ್​ರೌಂಡರ್ ಕೋಟಾದ ಒಂದು ಸ್ಥಾನಕ್ಕಾಗಿ ಶಿವಂ ದುಬೆ ಹಾಗೂ ವಾಷಿಗ್ಟಂನ್ ಸುಂದರ್ ನಡುವೆ ಮೆಗಾ ಫೈಟ್​ ನಡೀತಿದೆ. ಇಬ್ಬರಲ್ಲಿ ಯಾರಿಗೆ ಮಣೆಹಾಕುವುದು ಅನ್ನೋ ತಲೆನೋವು ಬಿಸಿಸಿಐ ಮುಂದಿದೆ. ಯುಎಇ ಪಿಚ್​​ಗಳಲ್ಲಿ ಸ್ಪಿನ್ ಆಲ್​ರೌಂಡರ್ ಬೆಟರ್ ಚಾಯ್ಸ್​. ಹೀಗಾಗಿ ವಾಷಿಂಗ್ಟನ್ ಸುಂದರ್ ಕೈ ಮೇಲಾಗುವುದರಲ್ಲಿ ಎರಡು ಮಾತಿಲ್ಲ.  ಅಂತಿಮವಾಗಿ ಯಾರಿಗೆ ಮಣೆ ಹಾಕುತ್ತೆ ಅನ್ನೋದೇ ಡೌಟ್.

ಇದನ್ನೂ ಓದಿ: ಬಾಬರ್ ಅಜಮ್, ರಿಜ್ವಾನ್​ಗೆ ಭಾರೀ ಅವಮಾನ.. ಏಷ್ಯಾ ಕಪ್​ಗೆ ಪಾಕ್​ ಆಟಗಾರರ ಹೆಸರು ಘೋಷಣೆ

ಮೊಹಮ್ಮದ್ ಸಿರಾಜ್ ಕೈಬಿಟ್ಟು ಪ್ರಮಾದ ಮಾಡೀತಾ ಟೀಮ್ ಮ್ಯಾನೇಜ್ಮೆಂಟ್​; ಇದರ ಪರಿಣಾಮ ಏನಾಗಲಿದೆ?

ಜಿತೇಶ್​ ಶರ್ಮಾ ಬ್ಯಾಕ್ ಅಪ್ ಕೀಪರ್​!

ಸೀಸನ್​​-18ರ ಐಪಿಎಲ್​ನಲ್ಲಿ ಸಾಲಿಡ್ ಆಟವಾಡಿದ್ದ ಜಿತೇಶ್ ಶರ್ಮಾ, ಏಷ್ಯಾಕಪ್​ನಲ್ಲಿ ಸ್ಥಾನ ಪಡೆಯುವುದು ಬಹುತೇಕ ಫಿಕ್ಸ್. ಆರ್​ಸಿಬಿ ಪರ ಮ್ಯಾಚ್ ಫಿನಿಷರ್ ಆಗಿ, ಲೋವರ್ ಆರ್ಡರ್​ನಲ್ಲಿ ಇಂಪ್ಯಾಕ್ಟ್​ ಮೂಡಿಸಿದ್ದ ಜಿತೇಶ್​, ಬ್ಯಾಕ್ ಆಫ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ದೃವ್ ಜುರೇಲ್, ರಾಹುಲ್ ಕನಸು ಬಹುತೇಕ ಭಗ್ನ. ಪಾಕೆಟ್ ಮಿಸೈಲ್ ಆಗಿರುವ ಜಿತೇಶ್​, ಮುಂದೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡರೂ ಅಚ್ಚರಿ ಇಲ್ಲ.

ಸಿರಾಜ್​​ ಔಟ್​​..?

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಗೆಲುವಿಗಾಗಿ ಸಿರಾಜ್, ಓರ್ವ ಫೈಟರ್​​ನಂತೆ ಹೋರಾಡಿದ್ದರು. ಟೆಸ್ಟ್​ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ್ದ ಸಿರಾಜ್, ಐಪಿಎಲ್​ನಲ್ಲೂ ಉತ್ತಮ ಸಾಧನೆ ತೋರಿದ್ರು. ಹೀಗಾಗಿ ಸಿರಾಜ್​ಗೆ ಏಷ್ಯಾಕಪ್ ಡೋರ್ ಓಪನ್ ಆಗುತ್ತೆ ಎಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಒಂದೇ ಒಂದು ಲೈಕ್,​ ಬಿಗ್ ಮೆಸೇಜ್ ಕೊಟ್ಟ ವಿರಾಟ್!

ಫಸ್ಟ್​ ಚಾಯ್ಸ್​ ಪೇಸರ್​ಗಳಾಗಿ ಬೂಮ್ರಾ, ಆರ್ಷ್​​​​ದೀಪ್ ಸಿಂಗ್ ಕಾಣಿಸಿಕೊಳ್ಳುವುದು ಕನ್ಫರ್ಮ್​. ಉಳಿದಿರುವ ಬ್ಯಾಕ್ ಅಪ್ ಪೇಸರ್ ಸ್ಥಾನಕ್ಕೆ ಪ್ರಸಿದ್ಧ್​ ಕೃಷ್ಣ, ಹರ್ಷಿತ್ ರಾಣಾ ನಡುವೆ ಬಿಗ್ ಫೈಟ್​ ನಡೀತಿದೆ. ಒಂದ್ಕಡೆ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಸಿದ್ಧ್​ ಸ್ಥಾನದ ಕನಸಿನಲ್ಲಿದ್ದರೆ, ಮತೊದ್ಕಡೆ ಗಂಭೀರ್  ಆಪ್ತ ಹರ್ಷಿತ್ ರಾಣಾ ರೇಸ್​ನಲ್ಲಿದ್ದಾರೆ. ಹೀಗಾಗಿ ಇಬ್ಬರಲ್ಲಿ ಯಾರ ಮೇಲೆ ಸೆಲೆಕ್ಷನ್​ ಕಮಿಟಿ ಕೃಪೆ ತೋರುತ್ತೆ ಅನ್ನೋದೇ ಪ್ರಶ್ನೆಯಾಗಿದೆ. 

ಇದನ್ನೂ ಓದಿ:Asia Cupನಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶನಾ..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Asia Cup 2025 Indian cricket team news T20I team
Advertisment