ಏಷ್ಯಾ ಕಪ್​ಗೆ ಸೂರ್ಯ ಫಿಟ್ ಆಗದಿದ್ದರೆ.. ಟೀಂ ಇಂಡಿಯಾದ ನಾಯಕ ಯಾರು? ರೇಸ್​ನಲ್ಲಿ ಮೂವರು..!

ಏಷ್ಯಾ ಕಪ್ (Asia cup) ಸೆಪ್ಟೆಂಬರ್ 9 ರಿಂದ 28 ವರೆಗೆ ಯುಎಇಯಲ್ಲಿ (UAE) ನಡೆಯಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಮೆಂಟ್‌ನಲ್ಲಿ ಸೆಪ್ಟೆಂಬರ್ 10 ರಂದು ಭಾರತ ತನ್ನ ಮೊದಲ ಪಂದ್ಯವನ್ನು ಯುಎಇ ವಿರುದ್ಧ ಆಡಲಿದೆ.

author-image
Ganesh
Suryakumar Yadav

ಸೂರ್ಯಕುಮಾರ್ ಯಾದವ್

Advertisment

ಏಷ್ಯಾ ಕಪ್ (Asia cup) ಸೆಪ್ಟೆಂಬರ್ 9 ರಿಂದ 28 ವರೆಗೆ ಯುಎಇಯಲ್ಲಿ (UAE) ನಡೆಯಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಮೆಂಟ್‌ನಲ್ಲಿ ಸೆಪ್ಟೆಂಬರ್ 10 ರಂದು ಭಾರತ ತನ್ನ ಮೊದಲ ಪಂದ್ಯವನ್ನು ಯುಎಇ ವಿರುದ್ಧ ಆಡಲಿದೆ.

ಸೆಪ್ಟೆಂಬರ್ 14 ರಂದು ಭಾರತ-ಪಾಕಿಸ್ತಾನ (IND vs PAK) ಪಂದ್ಯ ಮತ್ತು ಸೆಪ್ಟೆಂಬರ್ 19 ರಂದು ಓಮನ್ ವಿರುದ್ಧ ನಡೆಯಲಿದೆ. ಸದ್ಯ ಟೀಂ ಇಂಡಿಯಾದ (Team India) ಮ್ಯಾನೇಜ್ಮೆಂಟ್ ಮುಂದೆ ಇರುವ ಪ್ರಶ್ನೆ ಏನೆಂದರೆ, ಸೂರ್ಯಕುಮಾರ್ ಯಾದವ್ (Suryakumar Yadav) ಫಿಟ್ ಆಗದಿದ್ದರೆ, ತಂಡವನ್ನು ಮುನ್ನಡೆಸೋರು ಯಾರು ಅನ್ನೋದು!

ಇದನ್ನೂ ಓದಿ:ಒಂದೇ ಕಲ್ಲಲ್ಲಿ 3 ಹಕ್ಕಿ ಹೊಡೆಯಲು KKR ಪ್ಲಾನ್.. ಕನ್ನಡಿಗ ರಾಹುಲ್ ಮನಸ್ಸು ಮಾಡಬೇಕಷ್ಟೇ..!


ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ಜರ್ಮನಿಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪುನರ್ವಸತಿಗೆ ಒಳಗಲಿದ್ದಾರೆ. ಏಷ್ಯಾಕಪ್ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗುವ ನಿರೀಕ್ಷೆಯಿದೆ. ಒಂದು ವೇಳೆ ಫಿಟ್ ಆಗದಿದ್ದರೆ ನಾಯಕತ್ವ ವಹಿಸಿಕೊಳ್ಳಲು ಮುಖ್ಯ ರೇಸ್‌ನಲ್ಲಿ ಮೂವರು ಆಟಗಾರರಿದ್ದಾರೆ.

ಗಿಲ್

ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಮೊದಲ ಬಾರಿಗೆ ಟೆಸ್ಟ್ ನಾಯಕತ್ವದ ವಹಿಸಿಕೊಂಡ ಶುಬ್ಮನ್  ಗಿಲ್, ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಪ್ರಶಂಸೆ ಪಡೆದರು. ಬ್ಯಾಟಿಂಗ್‌ನಲ್ಲಿ ದಾಖಲೆಗಳನ್ನು  ಸೃಷ್ಟಿಸಿದರು. ಸೂರ್ಯ ನಾಯಕರಾಗಿದ್ದಾಗ ಗಿಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಯಿತು. ಆದ್ದರಿಂದ ಸೂರ್ಯಕುಮಾರ್ ಲಭ್ಯವಿಲ್ಲದಿದ್ದರೆ, ಗಿಲ್ ನಾಯಕನಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಗಿಲ್ ನಾಯಕರಾಗಿ ಒಟ್ಟು 5 ಟಿ20 ಪಂದ್ಯ ಮುನ್ನಡೆಸಿದ್ದಾರೆ. ಅವುಗಳಲ್ಲಿ 4 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 

ಇದನ್ನೂ ಓದಿ:ಕಿಂಗ್ ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ವರ್ಲ್ಡ್​​ಕಪ್ ಟೂರ್ನಿವರೆಗೆ ವಿರಾಟ್​ ದರ್ಶನ ಗ್ಯಾರಂಟಿ!

ಪಾಂಡ್ಯ

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಟೀಮ್ ಇಂಡಿಯಾ ಪರ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ನಾಯಕತ್ವದಲ್ಲಿ, ಗುಜರಾತ್ ಟೈಟಾನ್ಸ್ ಮೊದಲ ಸೀಸನ್‌ನಲ್ಲಿಯೇ ಚಾಂಪಿಯನ್ ಆಯಿತು. ಎರಡನೇ ಸೀಸನ್‌ನಲ್ಲಿ ಫೈನಲ್ ತಲುಪಿದರು. ಪ್ರಸ್ತುತ, ಮುಂಬೈ ಇಂಡಿಯನ್ಸ್ ನಾಯಕರಾಗಿ ಈ ಸೀಸನ್‌ನಲ್ಲಿ ತಂಡವನ್ನು ಕ್ವಾಲಿಫೈಯರ್ -2ಕ್ಕೆ ಕೊಂಡೊಯ್ದರು. ನಾಯಕನಾಗಿ ಪಾಂಡ್ಯ ಟೀಂ ಇಂಡಿಯಾವನ್ನು 16 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.

ಇದನ್ನೂ ಓದಿ: ಸಿರಾಜ್​ಗೆ ರಾಖಿ ಕಟ್ಟಿದ ಖ್ಯಾತ ಗಾಯಕಿ ಆಶಾ ಭೋಸ್ಲೆ ಮೊಮ್ಮಗಳು.. ಇದಕ್ಕೆ ಬಲವಾದ ಕಾರಣವಿದೆ, ಏನದು?

ಪಟೇಲ್

ಆಲ್‌ರೌಂಡರ್ ಅಕ್ಷರ್ ಪಟೇಲ್ ಕೂಡ ರೇಸ್‌ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಯಿತು. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಾತ್ರವಲ್ಲದೇ ಫೀಲ್ಡಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಾರೆ.

ಇದನ್ನೂ ಓದಿ: ಕೊಹ್ಲಿ, ರೋಹಿತ್​​ಗೆ ಬಿಸಿಸಿಐ ಶಾಕ್.. ದಿಗ್ಗಜರ ODI ವಿಶ್ವಕಪ್ ಆಡುವ ​ಕನಸು ಭಗ್ನ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cricket news in Kannada Shubman Gill Captaincy
Advertisment