ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ICICI ಬ್ಯಾಂಕ್.. ಮಿನಿಮಂ ಬ್ಯಾಲೆನ್ಸ್​ ಮೊತ್ತ ಭಾರೀ ಏರಿಕೆ..!

ಐಸಿಐಸಿಐ ಬ್ಯಾಂಕ್ ತನ್ನ ಹೊಸ ಗ್ರಾಹಕರಿಗೆ ಮಾಸಿಕ ಕನಿಷ್ಠ ಬ್ಯಾಲೆನ್ಸ್ ಮೊತ್ತವನ್ನು 50 ಸಾವಿರ ರೂಪಾಯಿವರೆಗೂ ಏರಿಸಿದೆ. ಗ್ರಾಮೀಣಾ ಪ್ರದೇಶದಲ್ಲಿ ಕನಿಷ್ಠ ಬ್ಯಾಲೆನ್ಸ್ 10 ಸಾವಿರ ಇದ್ದರೇ, ಮೆಟ್ರೋ, ನಗರ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್ 50 ಸಾವಿರ ರೂಪಾಯಿ ಇರಲೇಬೇಕು. ಇಲ್ಲದಿದ್ದರೇ, ದಂಡ ಗ್ಯಾರಂಟಿ

author-image
Chandramohan
ICICI BANK
Advertisment
  • ICICI ಬ್ಯಾಂಕ್​ನಿಂದ ಹೊಸ ಗ್ರಾಹಕರಿಗೆ ಕನಿಷ್ಠ ಬ್ಯಾಲೆನ್ಸ್ ಮಿತಿ ಏರಿಕೆ
  • ಗ್ರಾಮೀಣಾ ಭಾಗದಲ್ಲಿ ಕನಿಷ್ಠ ಬ್ಯಾಲೆನ್ಸ್ 10 ಸಾವಿರಕ್ಕೆ ಏರಿಕೆ
  • ಮೆಟ್ರೋ, ಆರ್ಬನ್ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್ 50 ಸಾವಿರಕ್ಕೆ ಏರಿಕೆ

ಭಾರತದ ಎರಡನೇ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ತನ್ನ ಮಾಸಿಕ ಕನಿಷ್ಠ ಬ್ಯಾಲೆನ್ಸ್ ಮಿತಿಯನ್ನು ಆಗಸ್ಟ್ 1 ರಿಂದ ಎಲ್ಲ ಗ್ರಾಹಕರಿಗೂ ಏರಿಕೆ ಮಾಡಿದೆ.

ಆಗಸ್ಟ್ 1 ರಿಂದ ಎಲ್ಲ ಮೆಟ್ರೋ ನಗರಗಳು ಮತ್ತು ಆರ್ಬನ್ ಪ್ರದೇಶದ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ತೆರೆಯುವವರು ತಿಂಗಳ ಸರಾಸರಿ ಬ್ಯಾಲೆನ್ಸ್ ಆಗಿ 50 ಸಾವಿರ ರೂಪಾಯಿ ಅನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟಿರಲೇಬೇಕು. ಇಲ್ಲದಿದ್ದರೆ ಅಂಥ ಬ್ಯಾಂಕ್ ಖಾತೆಗಳಿಗೆ ದಂಡ ವಿಧಿಸಲಾಗುತ್ತೆ ಎಂದು ಬ್ಯಾಂಕ್ ನ ವೆಬ್ ಸೈಟ್​ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ:ಓಬಿಸಿ ಕ್ರಿಮಿಲೇಯರ್ ಆದಾಯ ಮಿತಿ ಏರಿಕೆಗೆ ಶಿಫಾರಸ್ಸು, ಇದರಿಂದ ಏನು ಲಾಭ ಗೊತ್ತಾ?

ಹೊಸ ಗ್ರಾಹಕರಿಗೆ ಹೇಳಿದ್ದೇನು..?

ಐಸಿಐಸಿಐ ಬ್ಯಾಂಕ್​ನ ಹಳೆಯ ಗ್ರಾಹಕರಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ 10 ಸಾವಿರ ರೂಪಾಯಿ ಎಂದು ಬ್ಯಾಂಕ್ ಹೇಳಿದೆ.  ಆಗಸ್ಟ್ 1 ರಿಂದ ಸೆಮಿ ಆರ್ಬನ್ ಪ್ರದೇಶಗಳ ಹೊಸ ಗ್ರಾಹಕರು ತಿಂಗಳ ಕನಿಷ್ಠ ಸರಾಸರಿ 25 ಸಾವಿರ ರೂಪಾಯಿ ಬ್ಯಾಲೆನ್ಸ್ ಬ್ಯಾಂಕ್ ಖಾತೆಯಲ್ಲಿ ಹೊಂದಿರಬೇಕು. ಆಗಸ್ಟ್ 1 ರಿಂದ ಗ್ರಾಮೀಣಾ ಪ್ರದೇಶದ ಹೊಸ ಗ್ರಾಹಕರು ತಿಂಗಳ ಸರಾಸರಿ ಕನಿಷ್ಠ ಬ್ಯಾಲೆನ್ಸ್ ಆಗಿ 10 ಸಾವಿರ ರೂಪಾಯಿ ಬ್ಯಾಂಕ್ ಖಾತೆಯಲ್ಲಿ ಹೊಂದಿರಬೇಕು. ಬ್ಯಾಂಕ್​ನ ಹಳೆಯ ಗ್ರಾಹಕರು ಸೆಮಿ ಆರ್ಬನ್ ಮತ್ತು ಗ್ರಾಮೀಣಾ ಪ್ರದೇಶದಲ್ಲಿ ಕನಿಷ್ಠ ಬ್ಯಾಲೆನ್ಸ್ ಆಗಿ 5 ಸಾವಿರ ರೂಪಾಯಿಯನ್ನು ಬ್ಯಾಂಕ್ ಖಾತೆಯಲ್ಲಿ ಹೊಂದಿರಬೇಕು ಎಂದು ಬ್ಯಾಂಕ್ ಹೇಳಿದೆ.

ಇದನ್ನೂ ಓದಿ:‘ರತ್ನಗಿರಿ ರಹಸ್ಯ’ ಬೆನ್ನೇರಿದ ಎಸ್​ಐಟಿ.. ಅನಾಮಿಕ ಹೂತಿದ್ದ ಜಾಗ ಗೊತ್ತಿದೆ ಎಂದು SIT ಮುಂದೆ ಬಂದ ಮತ್ತಿಬ್ಬರು..!

ICICI BANK022


ಕನಿಷ್ಠ ಬ್ಯಾಲೆನ್ಸ್ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟಿರದೇ ಇದ್ದರೇ, ಶೇ.6 ರಷ್ಟು ದಂಡ ಅಥವಾ 500 ರೂಪಾಯಿ ದಂಡ ವಿಧಿಸಲಾಗುತ್ತೆ. ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ವಿಧಿಸಲಾಗುತ್ತೆ ಎಂದು ಐಸಿಐಸಿಐ  ಬ್ಯಾಂಕ್  ಹೇಳಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ 160 ಸೀಟು ಗೆಲ್ಲಿಸಿಕೊಡುವ ಗ್ಯಾರಂಟಿ ಆಫರ್‌ ಬಂದಿತ್ತು ಎಂದ ಶರದ್ ಪವಾರ್‌

ಇದನ್ನೂ ಓದಿ: ಮೋದಿಯವರ ಪಾಕಿಸ್ತಾನಿ ಸಹೋದರಿ ಯಾರು? 30 ವರ್ಷದಿಂದ ರಾಖಿ ಕಟ್ತಿದ್ದಾರೆ.. ಅಣ್ಣ-ತಂಗಿ ಸಂಬಂಧ ಚಿಗುರಿದ್ದೇಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BANKING JOBS, JOBS, UNEMPLOYMENT, YOUTHS, KARNATAKA BANKS, IBPS, RECRUITMENT
Advertisment