/newsfirstlive-kannada/media/media_files/2025/09/30/bhima-river-flood-1-2025-09-30-07-01-45.jpg)
ಮಳೆರಾಯ.. ಉತ್ತರ ಕರ್ನಾಟಕದ ಜನತೆಗೆ ಗಾಯದ ಮೇಲೆ ಮತ್ತೆ ಬರೆ ಮಾಡಿದ್ದಾನೆ. ನವರಾತ್ರಿ ಹಬ್ಬದ ಆಚರಣೆಯಲ್ಲಿ ತೇಲಬೇಕಿದ್ದ ಜನ ಪ್ರವಾಹದಲ್ಲಿ ಮುಳುಗಿ ಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರೋ ಮಳೆ ಉತ್ತರ ಕರ್ನಾಟಕವನ್ನ ತಲ್ಲಣಗೊಳಿಸಿದೆ.
ಭೀಮಾ ಪ್ರವಾಹ.. ಮತ್ತೆ ರಾಷ್ಟ್ರೀಯ ಹೆದ್ದಾರಿ ಬಂದ್!
ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಜನ ಅದರ ಎಫೆಕ್ಟ್​ ಅನುಭವಿಸುವಂತಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗ್ತಿರೋ ಕಾರಣ, ಡ್ಯಾಂಗಳಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗ್ತಿದೆ. ನಿನ್ನೆ ರಾತ್ರಿ ಸಿನಾ ನದಿಯ ಡ್ಯಾಂ ನಿಂದ 2 ಲಕ್ಷದ 63 ಸಾವಿರ 500 ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಸಲಾಗ್ತಿದೆ. ಇತ್ತ ನಿರಾ ನದಿಯ ಜಲಾಶಯದಿಂದ 1 ಲಕ್ಷದ 25 ಸಾವಿರ 532 ಕ್ಯೂಸೆಕ್ ನೀರು ಭೀಮಾ ನದಿಗೆ ಬಂದು ಸೇರ್ತಿದೆ. ಇದರಿಂದ ಭೀಮಾ ಪಾತ್ರದಲ್ಲಿ ಮತ್ತಷ್ಟು ಆತಂಕ ಉಲ್ಬಣವಾಗಿದೆ.
ಇದನ್ನೂ ಓದಿ: ASIA CUP ಟೂರ್ನಿಯಲ್ಲಿ ಒಂದೇ 1 ಪಂದ್ಯ ಆಡಿಲ್ಲ.. ಫೈನಲ್​​ನಲ್ಲಿ ರಿಂಕು ಸಿಂಗ್ ಚಾಂಪಿಯನ್!
ಭೀಮಾ ನದಿಗೆ ಅಪಾರ ನೀರು ಬಿಟ್ಟಿರುವ ಕಾರಣ ಮತ್ತೆ ಕರ್ನಾಟಕ ಮಹರಾಷ್ಟ್ರ ರಾಷ್ಟ್ರೀಯ ಹೆದ್ದಾರಿ ಬಂದ್​ ಮಾಡಲಾಗಿದೆ. ಮೊನ್ನೆ ಪ್ರವಾಹ ತಗ್ಗಿದ ಹಿನ್ನೆಲೆ ಹುಬ್ಬಳ್ಳಿ, ಹೊಸಪೇಟೆಯಿಂದ ಸಂಪರ್ಕಿಸುವ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸಂಚಾರ ಆರಂಭ ಆಗಿತ್ತು. ಮತ್ತೆ ಪ್ರವಾಹ ಹೆಚ್ಚಾದ ಹಿನ್ನೆಲೆ ವಿಜಯಪುರ ಮಾರ್ಗವಾಗಿ ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಫ್ಲೋ..
ಗಾಣಗಾಪುರದ ಸಂಗಮ ಕ್ಷೇತ್ರ ಮತ್ತೇ ಜಲಾವೃತ
ಮಹಾರಾಷ್ಟ್ರದಿಂದ ಮತ್ತೆ ನೀರು ಬಿಟ್ಟಿರುವ ಕಾರಣ, ಕಲಬುರಗಿ ಜಿಲ್ಲೆಯ ಭೀಮಾ ನದಿ ರಕ್ಕಸ ರೂಪ ತಾಳಿದೆ. ಪ್ರವಾಹ ಸೃಷ್ಟಿಸಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಭೀಮಾ ನದಿ ಮತ್ತೆ ಗಾಣಗಾಪುರದ ಸಂಗಮ ಕ್ಷೇತ್ರ ಮತ್ತೇ ಜಲದಿಗ್ಬಂಧನ ಹಾಕಿದ್ದು, ಸ್ನಾನಘಟ್ಡ, ಪರಾಯಣ ಸ್ಥಳ ಮುಳುಗಡೆ ಆಗಿದೆ.
ಇದನ್ನೂ ಓದಿ: BBK12; ದೊಡ್ಮನೆಯಿಂದ ಮೊಟ್ಟ ಮೊದಲ ಕಂಟೆಸ್ಟೆಂಟ್ ಔಟ್​..​ ಇವರು ಯಾರು?
ಭೀಮಾ ನದಿಯ ಅಬ್ಬರಕ್ಕೆ ಅಫ್ಜಲಪುರ ತಾಲೂಕಿನ ಗ್ರಾಮಗಳು ತತ್ತರಿಸಿ ಹೋಗಿದ್ದು, ಗಣಗಾಪೂರ ಗ್ರಾಮದ ಕಾಳಜಿ ಕೇಂದ್ರಕ್ಕೆ ಬಿಜೆಪಿ ನಿಯೋಗ ಭೇಟಿ ಕೊಟ್ಟು ಪರಿಶೀಲಿಸಿದೆ. ರಾಜ್ಯ ಬಿಜೆಪಿ ಸಾರಥಿ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಸಂತ್ರಸ್ತರಿಗೆ ಬೆಡ್​ಶೀಟ್​ ಹಂಚಿ, ಅವರ ಯೋಗಕ್ಷೇಮವನ್ನು ವಿಚಾರಿಸಿದ್ರು.. ಇತ್ತ ಸಂಸದ ಗೋವಿಂದ ಕಾರಜೋಳ ಕೂಡ ಭೀಮಾ ಅಮರ್ಜಾ ಸೇತುವೆ ಮುಳುಗಡೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ರು.
ಇದನ್ನೂ ಓದಿ: ನವರಾತ್ರಿ ಸಂಭ್ರಮ; ನಮ್ರತಾ, ಅಮೃತಾ, ಮೋಕ್ಷಿತಾ, ಚಂದನಾ ಸೇರಿ ಕಿರುತೆರೆ ಸ್ಟಾರ್ಸ್ ಬ್ಯೂಟಿ​ ಫೋಟೋಸ್!
ವಿಪಕ್ಷಗಳ ಟೀಕೆಗೆ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ಅತಿವೃಷ್ಠಿಯಿಂದ ಹಾನಿಗೊಳಗಾದ ಕಲಬುರಗಿ ಪ್ರದೇಶಗಳಿಗೆ ಇಂದು ಭೇಟಿ ನೀಡಲಿದ್ದಾರೆ. ಅದ್ಹೇನೆ ಇರಲಿ, ಅಬ್ಬರಿಸ್ತಿರೋ ಮಳೆ ಅನೇಕರ ಬದುಕನ್ನ ಮುಳುಗಿಸಿದೆ. ಇದರಿಂದ ನಮಗೆ ಮುಕ್ತಿ ಯಾವಾಗ ತಂದೆ ಅಂತ ಜನ ಆಕಾಶ ನೋಡಿ ಬೇಡುವಂತಾಗಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರವಾಹ; CM ಸಿದ್ದರಾಮಯ್ಯ 3000 ಕೋಟಿ ಹಣ ಕೊಡಬೇಕು- ವಿಪಕ್ಷ ನಾಯಕ ಆರ್ ಅಶೋಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ