/newsfirstlive-kannada/media/media_files/2025/08/13/sofiya-quershi-n-vyomika-singh-kbc-222-2025-08-13-15-41-32.jpg)
ಕರ್ನಲ್ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ , ಪ್ರೇರಣಾ, ಅಮಿತಾಬ್ ಬಚ್ಚನ್
ಅಪರೇಷನ್ ಸಿಂಧೂರ್ ವೇಳೆ ಭಾರತೀಯ ಸೇನೆ, ವಾಯುಪಡೆಯ ಪರವಾಗಿ ಮಾಧ್ಯಮಗಳಿಗೆ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡಿದ್ದು ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್. ಈಗ ಈ ಇಬ್ಬರು ಸೇನಾಧಿಕಾರಿಗಳು ಕೌನ್ ಬನೇಗಾ ಕರೋಡ್ ಪತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜೊತೆಗೆ ಭಾರತೀಯ ನೌಕಾಪಡೆಯ ಕಮಾಂಡರ್ ಪ್ರೇರಣಾ ಕೂಡ ಕಾಣಿಸಿಕೊಂಡಿದ್ದಾರೆ. ಪ್ರೇರಣಾ ದೋಸ್ತಲೆ, ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಕಮಾಂಡರ್ ಆಗಿದ್ದಾರೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಈ ವಿಶೇಷ ಎಪಿಸೋಡ್ ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾರತದ ಮೂರು ಸೇನಾಗಳ ಮಹಿಳಾ ಅಧಿಕಾರಿಗಳು ಭಾಗವಹಿಸಿರುವ ಅಪರೂಪದ ಎಪಿಸೋಡ್‌ನ ಪ್ರಮೋ ಈಗ ಸೋನಿ ಟಿವಿಯಲ್ಲಿ ಬಿಡುಗಡೆಯಾಗಿದೆ.
ರಾಜಕೀಯ ಮೈಲೇಜ್ ಸಿಕ್ಕಾಗಿದೆ..
ಕೌನ್ ಬನೇಗಾ ಕರೋಡ್ ಪತಿ ಎಪಿಸೋಡ್ ನಲ್ಲಿ ಭಾರತೀಯ ಸೇನೆಯ ಮೂರು ಪಡೆಗಳ ಮಹಿಳಾ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಎಂದಿನಂತೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ವಿವಾದವೂ ಶುರುವಾಗಿದೆ. ಭಾರತದ ಸಶಸ್ತ್ರ ಪಡೆಗಳನ್ನು ಪಿ.ಆರ್. ಕೆಲಸಕ್ಕಾಗಿ ಹಾಗೂ ರಾಜಕೀಯ ಮೈಲೇಜ್ ಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮುಕೇಶ್ ಅಂಬಾನಿ ಅಲ್ಲ, ಅವರ ಪತ್ನಿ ಬಳಿ 100 ಕೋಟಿ ಮೌಲ್ಯದ ಕಾರು..!
ಸೋನಿ ಟಿವಿ ಬಿಡುಗಡೆ ಮಾಡಿರುವ ಕೌನ್ ಬನೇಗಾ ಕರೋಡ್ ಪತಿ ಎಪಿಸೋಡ್‌ನ ಟೀಸರ್ ನಲ್ಲಿ ಮೂವರು ಮಹಿಳಾ ಸೇನಾಧಿಕಾರಿಗಳಿಗೆ ಕಾರ್ಯಕ್ರಮಕ್ಕೆ ಗ್ರ್ಯಾಂಡ್ ವೆಲಕಮ್ ಮಾಡಲಾಗಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಮೂವರಿಗೂ ಅದ್ದೂರಿ ಸ್ವಾಗತ ಮಾಡಿದ್ದಾರೆ. ಬಳಿಕ ಕರ್ನಲ್ ಸೋಫಿಯಾ ಖುರೇಷಿ, ಅಪರೇಷನ್ ಸಿಂಧೂರ್ ಅನ್ನು ಏಕೆ ಮಾಡಬೇಕಾಯಿತು? ಅದರ ಅಗತ್ಯತೆ ಬಿದ್ದಿದ್ದು ಏಕೆ ಎಂದು ವಿವರಿಸಿದ್ದಾರೆ.
This 15th August, KBC Hosts Colonel Sofiya Qureshi, Wing Commander Vyomika Singh & Commander Prerna Deosthalee in its Independence Day Maha Utsav Special Episode
— Sony LIV (@SonyLIV) August 12, 2025
Dekhiye Kaun Banega Crorepati ka Independence Day Maha Utsav special episode
15th August raat 9 baje #SonyLIV par. pic.twitter.com/2wo2113BuZ
ಪಾಕಿಸ್ತಾನ ಇಂಥಾ ಭಯೋತ್ಪಾದನಾ ದಾಳಿಯನ್ನು ಪದೇ ಪದೇ ಮಾಡಿತ್ತು. ಅದಕ್ಕೆ ಉತ್ತರ ನೀಡುವುದು ಅಗತ್ಯವಾಗಿತ್ತು. ಹೀಗಾಗಿ ಅಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪ್ಲ್ಯಾನ್ ಮಾಡಲಾಯಿತು ಎಂದು ಕರ್ನಲ್ ಸೋಫಿಯಾ ಖುರೇಷಿ, ಅಮಿತಾಬ್ ಬಚ್ಚನ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಚಿಲ್ಲರೆ ಹಣದುಬ್ಬರ ಜುಲೈನಲ್ಲಿ ಶೇ.1.55 ಕ್ಕೆ ಕುಸಿತ ಎಂದ ಕೇಂದ್ರ ಸರ್ಕಾರ
ಆದರೇ, ಆರ್ಮಿ ಯೂನಿಫಾರಂನಲ್ಲೇ ಮೂವರು ಮಹಿಳಾ ಸೇನಾಧಿಕಾರಿಗಳು ಟಿವಿ ಚಾನಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೂವರನ್ನು ಸೇನಾ ಸಮವಸ್ತ್ರದಲ್ಲಿ ಭಾಗಿಯಾಗುವಂತೆ ಮಾಡಿದ್ದು, ಆಹ್ವಾನಿಸಿದ್ದು ಏಕೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ಬೀದಿನಾಯಿಗಳ ವಿಷಯ ಪ್ರಸ್ತಾಪ, ಈ ಬಗ್ಗೆ ಸಿಜೆಐ ಹೇಳಿದ್ದೇನು?
ಯಾವುದಾದರೂ ದೇಶದಲ್ಲಿ ಸೇನಾ ಅಪರೇಷನ್ ಬಳಿಕ ಇಂಥ ಎಪಿಸೋಡ್ ನೋಡಿದ್ದೀರಾ ಎಂದು ಒಬ್ಬರು ಟ್ವೀಟರ್ ನಲ್ಲೇ ಪ್ರಶ್ನಿಸಿದ್ದಾರೆ. ಸೇನೆಯಲ್ಲಿ ಇರುವವರಿಗೆ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿದ್ದು ಏಕೆ? ಈಗಿನ ಸರ್ಕಾರ, ನಾಚಿಕೆ ಇಲ್ಲದೇ, ನಮ್ಮ ಸೇನಾಪಡೆಗಳನ್ನು ತಮ್ಮ ಕೀಳು ರಾಜಕೀಯಕ್ಕೆ ಮತ್ತು ಹೈಪರ್ ರಾಷ್ಟ್ರೀಯತೆಗಾಗಿ ಬಳಸಿಕೊಳ್ಳುತ್ತಿದೆ ಎಂದು ಮತ್ತೊಬ್ಬರು ಟ್ವೀಟರ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಸೇನೆಯ ಪ್ರೋಟೋಕಾಲ್ ಸೇನಾಧಿಕಾರಿಗಳನ್ನು ರಿಯಾಲಿಟಿ ಷೋಗೆ ಕಳಿಸಲು ಅವಕಾಶ ಕೊಡುತ್ತಾ ಎಂದು ಪ್ರಶ್ನಿಸಿದ್ದಾರೆ. ಭಾರತದ ಸಶಸ್ತ್ರ ಪಡೆಗಳಿಗೆ ಕೆಲ ಶಿಷ್ಟಾಚಾರ, ಘನತೆ, ಗೌರವ ಇದೆ. ರಾಜಕಾರಣಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ನಾಚಿಕೆಗೇಡು ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಈ ವಿಚಾರಕ್ಕೆ ಒಂದಾದ ರಾಹುಲ್ ಗಾಂಧಿ, ಮೇನಕಾ ಗಾಂಧಿ.. ಏನದು..?
ನಮ್ಮ ಸೇನೆಯು ಪವಿತ್ರವಾದುದು. ರಾಜಕೀಯಕ್ಕೆ ಹೊರತಾಗಿದೆ. ಪಿಆರ್ನಿಂದ ದೂರ ಇದೆ. ನಮ್ಮ ಸಶಸ್ತ್ರ ಪಡೆಗಳು ದೇಶದ ರಕ್ಷಣೆಗಾಗಿ ಇವೆ. ರಾಜಕಾರಣಿಗಳ ಬ್ರ್ಯಾಂಡ್ ಗಾಗಿ ಇಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
यहां फौज KBC को यूज कर रही है?
— Poonam Pandey (@pandeypoonam20) August 12, 2025
या KBC फौज को?
(या थर्ड प्लेयर दोनों को )
I am curious to know whose idea it was?
Who approved it and how many officers objected (if any) before that? pic.twitter.com/Y61lwUHSUo
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ..