Advertisment

ವಿಜಯಪುರ: ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಸ್ವಯಂ ಘೋಷಿಸಿಕೊಂಡ ಸಂಸದ ರಮೇಶ ಜಿಗಜಿಣಗಿ!

author-image
AS Harshith
Updated On
ವಿಜಯಪುರ: ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಸ್ವಯಂ ಘೋಷಿಸಿಕೊಂಡ ಸಂಸದ ರಮೇಶ ಜಿಗಜಿಣಗಿ!
Advertisment
  • ಬಿಜೆಪಿ ಹಾಲಿ ಸಂಸದನ ಸ್ಪೋಟಕ ಹೇಳಿಕೆ
  • ನಾನೇ ಈ ಕ್ಷೇತ್ರದ ಅಭ್ಯರ್ಥಿ ಎಂದ ಬಿಜೆಪಿ ಹಾಲಿ ಸಂಸದ
  • ಪಕ್ಷದಿಂದ ಸೂಚನೆಗಳು ಬಂದಿವೆ ಎಂದ ರಮೇಶ ಜಿಗಜಿಣಗಿ

ವಿಜಯಪುರ: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಭಾರೀ ಜಟಾಪಟಿ ನಡೆಸುತ್ತಿದೆ. ಸೀಟು ಹಂಚುವ ಮೊದಲೇ ಕೆಲವು ಅಭ್ಯರ್ಥಿಗಳು ಈಗಾಗಲೇ ಪರೋಕ್ಷವಾಗಿ ಪ್ರಚಾರ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಹೀಗಿರುವಾಗ ಬಿಜೆಪಿ ಹಾಲಿ ಸಂಸದ ರಮೇಶ ಜಿಗಜಿಣಗಿ ನಾನೇ ಈ ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ.

Advertisment

ವಿಜಯಪುರ ಎಸ್​ಸಿ ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿ ಸಂಸದ ರಮೇಶ ಜಿಗಜಿಣಗಿ ನಾನೇ ಇಲ್ಲಿನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ನನಗೆ ಈಗಾಗಲೇ ಪಕ್ಷದಿಂದ ಸೂಚನೆಗಳು ಬಂದಿವೆ ಎಂದು ಹೇಳಿದ್ದಾರೆ.

ನಾನೇ ಈ ಕ್ಷೇತ್ರದ ಅಭ್ಯರ್ಥಿ. ನನಗೆ ಈ ಭಾಗದ ಜನ ವೋಟ್ ಹಾಕ್ತಾರೆ ಅನ್ನೋ ವಿಶ್ವಾಸವಿದೆ. ಅಂದಾಜು 1 ಲಕ್ಷ ಕೋಟಿ ಕೋಟಿ ಅನುದಾನ ವಿಜಯಪುರ ಕ್ಷೇತ್ರಕ್ಕೆ ತಂದಿರುವೆ. ಜೆಡಿಎಸ್ ಜೊತೆ ಮೈತ್ರಿ ಹಿನ್ನೆಲೆ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಅವರು ಬಿಟ್ಟು ಕೊಡಲು ಕೇಳುವರೇ?. ಜೆಡಿಎಸ್ ನವರು ಕೇಳ್ತಾರೆ ನಮ್ಮವರು ಯಾವ ಕಾಲಕ್ಕೂ ಕ್ಷೇತ್ರ ಬಿಟ್ಟು ಕೊಡಲ್ಲ. ಒಂದು ವೇಳೆ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟು ಕೊಟ್ಟರೆ ಪ್ರಚಾರ ಮಾಡ್ತೀನಿ ಎಂದು ರಮೇಶ ಜಿಗಜಿಣಗಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment