Advertisment

ಅಯ್ಯೋ ವಿಧಿಯೇ.. ತಂದೆ, ತಾಯಿ ಮುಂದೆಯೇ ಪ್ರಾಣ ಬಿಟ್ಟ 3 ವರ್ಷದ ಪುಟಾಣಿ; ಕರುಣಾಜನಕ ಸ್ಟೋರಿ!

author-image
admin
Updated On
ಅಯ್ಯೋ ವಿಧಿಯೇ.. ತಂದೆ, ತಾಯಿ ಮುಂದೆಯೇ ಪ್ರಾಣ ಬಿಟ್ಟ 3 ವರ್ಷದ ಪುಟಾಣಿ; ಕರುಣಾಜನಕ ಸ್ಟೋರಿ!
Advertisment
  • ಸಲ್ಲೇಖನ ವ್ರತ ಸ್ವೀಕರಿಸಿದ ವಿಶ್ವದ ಮೊದಲ 3 ವರ್ಷದ ಪುಟಾಣಿ
  • ವಿಯಾನಾ ಜೈನ್ ತಂದೆ, ತಾಯಿ ಸಲ್ಲೇಖನ ವ್ರತಕ್ಕೆ ಒಪ್ಪಿಕೊಂಡಿದ್ದು ಯಾಕೆ?
  • ಕಠಿಣವಾದ ಸಲ್ಲೇಖನ ವ್ರತ ಸ್ವೀಕರಿಸೋ ಮೂಲಕ ಪ್ರಾಣ ತ್ಯಾಗ

ಈ ಪುಟಾಣಿ ಕಂದಮ್ಮನ ನೋಡಿದ್ರೆ ಎಂತಹವರಿಗೂ ಎತ್ತಿ ಮುದ್ದಾಡಬೇಕು ಅನ್ನಿಸುತ್ತೆ. ಈ ಬಾಲಕಿಗೆ ಇನ್ನೂ 3 ವರ್ಷ 4 ತಿಂಗಳು 1 ದಿನ ಆಗಿತ್ತಷ್ಟೇ. 3 ವರ್ಷಕ್ಕೆ ಸಲ್ಲೇಖನ ವ್ರತ ಸ್ವೀಕರಿಸಿದ ವಿಶ್ವದ ಮೊದಲ ಪುಟಾಣಿ, ಸಲ್ಲೇಖನ ವ್ರತ ಕೈಗೊಂಡ ಈ ಪುಟಾಣಿ 10 ನಿಮಿಷದಲ್ಲೇ ಜಿನೈಕ್ಯರಾಗಿದ್ದಾರೆ ಎನ್ನಲಾಗಿದೆ.

Advertisment

ಈ ಪೋರಿ ಹೆಸರು ವಿಯಾನಾ ಜೈನ್. ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಟೆಕ್ಕಿಯ ಮಗಳು. ಪಿಯೂಷ್ ಜೈನ್ ಹಾಗೂ ತಾಯಿ ವರ್ಷಾ ಜೈನ್‌ಗೆ ವಿಯಾನಾ ಅಂದ್ರೆ ಪಂಚ ಪ್ರಾಣ. ಆದರೆ ಈ ಬಾಲಕಿಗೆ ತನ್ನ ತಂದೆ, ತಾಯಿ ಹೆಚ್ಚು ದಿನ ಕಾಲ ಉಳಿಯೋ ಭಾಗ್ಯವೇ ಇಲ್ಲ. ಕಠಿಣವಾದ ಸಲ್ಲೇಖನ ವ್ರತ ಸ್ವೀಕರಿಸೋ ಮೂಲಕ ತನ್ನ ಪ್ರಾಣ ತ್ಯಾಗ ಮಾಡಿದೆ. 3 ವರ್ಷಕ್ಕೆ ಸಲ್ಲೇಖನ ವ್ರತ ಸ್ವೀಕರಿಸಿದ ದಾಖಲೆ ಈ ಪುಟ್ಟ ಪೋರಿಯ ಹೆಸರಿನಲ್ಲಿದೆ.

publive-image

2024ರ ಡಿಸೆಂಬರ್‌ನಲ್ಲೇ ಬಾಲಕಿ ವಿಯಾನ್ ಜೈನ್‌ ಮೆದುಳಿನಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ. ಈ ಮಾರಕ ಕಾಯಿಲೆಗೆ ಪೋಷಕರು ಮುಂಬೈನಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿದ್ದಾರೆ. ಆಪರೇಷನ್ ಬಳಿಕ ಸ್ವಲ್ಪ ಚೇತರಿಸಿಕೊಂಡಿದ್ದ ವಿಯಾನ್ ಜೈನ್ ಆರೋಗ್ಯ ಮತ್ತೆ ಏರುಪೇರಾಗಿದೆ.

Advertisment

ಇದನ್ನೂ ಓದಿ: ಪಹಲ್ಗಾಮ್​ನಲ್ಲಿ ಜೀವ ಕಳೆದುಕೊಂಡ ಲೆಫ್ಟಿನೆಂಟ್​ನ​ ಪತ್ನಿ ಟ್ರೋಲ್​.. ಅಸಲಿಗೆ ಆಗಿದ್ದೇನು..? 

publive-image

ಮಗಳ ಆರೋಗ್ಯ ಸುಧಾರಣೆಗೆ ವಿಯಾನ್ ಜೈನ್ ಪೋಷಕರು ಮಾಡದೇ ಇರೋ ಪ್ರಯತ್ನವೇ ಇಲ್ಲ. ಕೊನೆಗೆ ಜೈನ ಮುನಿಗಳಾದ ರಾಜೇಶ್ ಮಹಾರಾಜರ ಬಳಿ ಹೋಗಿದ್ದಾರೆ. ಆಗ ಜೈನ ಮುನಿಗಳು ಮಗುವಿಗೆ ಸಲ್ಲೇಖನ ವ್ರತ ಕೈಗೊಳ್ಳುವ ಸಲಹೆ ನೀಡಿದ್ದಾರೆ.

Advertisment

publive-image

ಇಡೀ ಕುಟುಂಬ ವಿಯಾನ್ ಜೈನ್‌ ಸಲ್ಲೇಖನ ವ್ರತಕ್ಕೆ ಒಪ್ಪಿಕೊಂಡಿದೆ. ಸಾಮಾನ್ಯವಾಗಿ ಜೀವನದ ಅಂತಿಮಘಟ್ಟದಲ್ಲಿ ಸಲ್ಲೇಖನ ವ್ರತವನ್ನು ಸ್ವೀಕರಿಸಲಾಗುತ್ತದೆ. ಸಲ್ಲೇಖನ ವ್ರತ ಸ್ವೀಕರಿಸಿದವರು ಆಹಾರ, ನೀರಿನ ಸೇವನೆಯನ್ನು ಕಡಿಮೆಗೊಳಿಸಿ ಬಳಿಕ ಸಂಪೂರ್ಣ ತ್ಯಜಿಸುತ್ತಾರೆ. 3 ವರ್ಷದ ಬಾಲಕಿ ಸಲ್ಲೇಖನ ವ್ರತ ಕೈಗೊಂಡ 10 ನಿಮಿಷಕ್ಕೆ ಪ್ರಾಣ ತ್ಯಾಗ ಮಾಡಿದ್ದಾಳೆ ಎಂದು ವಿಯಾನ್ ತಾಯಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment