Advertisment

ಪಾಂಡಿಚೇರಿಯಲ್ಲಿ ಆಟೋ, ಬಸ್​ ಮಧ್ಯೆ ಭೀಕರ ಅಪಘಾತ.. 8 ಶಾಲಾ ಮಕ್ಕಳಿಗೆ ಗಂಭೀರ ಗಾಯ!

author-image
Ganesh Nachikethu
Updated On
ಪಾಂಡಿಚೇರಿಯಲ್ಲಿ ಆಟೋ, ಬಸ್​ ಮಧ್ಯೆ ಭೀಕರ ಅಪಘಾತ.. 8 ಶಾಲಾ ಮಕ್ಕಳಿಗೆ ಗಂಭೀರ ಗಾಯ!
Advertisment
  • ಪಾಂಡಿಚೇರಿಯಲ್ಲಿ ಆಟೋ, ಬಸ್​ ಮಧ್ಯೆ ಭೀಕರ ರಸ್ತೆ ಅಪಘಾತ
  • ಭೀಕರ ರಸ್ತೆ ಅಪಘಾತದಲ್ಲಿ 8 ಶಾಲಾ ಮಕ್ಕಳಿಗೆ ಗಂಭೀರ ಗಾಯ!
  • ಚಿಕಿತ್ಸೆಗಾಗಿ ಆಟೋ ಡ್ರೈವರ್​​ ಸೇರಿ 8 ಮಕ್ಕಳು ಆಸ್ಪತ್ರೆ ದಾಖಲು..!

ಪಾಂಡಿಚೇರಿ:ಆಟೋ, ಬಸ್​​​ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 8 ಮಂದಿ ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.

Advertisment

ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವಾಗ ಆಟೋಗೆ ಮುಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಬಸ್​ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಮಕ್ಕಳೊಂದಿಗೆ ಆಟೋ ಡ್ರೈವರ್​​ಗೂ ಗಂಭೀರ ಗಾಯಗಳು ಆಗಿದ್ದು, ಚಿಕಿತ್ಸೆಗಾಗಿ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಭೀಕರ ದೃಶ್ಯವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಚಿಕಿತ್ಸೆ ಪಡೆಯುತ್ತಿರೋ ಮಕ್ಕಳನ್ನು ನೋಡಲು ಆಸ್ಪತ್ರೆಗೆ ಸಿಎಂ ರಂಗಸ್ವಾಮಿ, ಲೆಫ್ಟಿನೆಂಟ್​​ ಗವರ್ನರ್​​ ತಮಿಳಿಸೈ ಸುಂದರ್​​ ರಾಜನ್​ ಭೇಟಿ ನೀಡಿದ್ರು. ಈ ಸಂಬಂಧ ಟ್ವೀಟ್​ ಮಾಡಿರುವ ಸುಂದರ್​​ ರಾಜನ್​​, ಮಕ್ಕಳು ಸೇಫ್​​ ಆಗಿದ್ದಾರೆ. ಪೋಷಕರು ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment