Advertisment

VIDEO: ‘ನನ್ನ ಜೈಲಿಗೆ ಹಾಕೋಕೆ ದೊಡ್ಡ ಸ್ಕೀಮ್‌ ರೆಡಿ ಆಗಿದೆ’- ಡಿಸಿಎಂ ಡಿ.ಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ

author-image
admin
Updated On
ಕಾವೇರಿ ನೀರಿಗಾಗಿ ಸಿದ್ದು ಒಗ್ಗಟ್ಟಿನ ತಂತ್ರ.. ಸರ್ವ ಪಕ್ಷ ಸಭೆಗೆ ಬಿಜೆಪಿ-ಜೆಡಿಎಸ್ ಸಾಥ್.. ಯಾರೆಲ್ಲ ಬರ್ತಿದ್ದಾರೆ..?
Advertisment
  • ಬೆಳಗಾವಿ ಅಧಿವೇಶನದಲ್ಲಿ ಹೆಚ್‌ಡಿಕೆ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ
  • ಹೆಚ್‌ಡಿಕೆ ಮಾತಿಗೆ ಆಡಳಿತ ಪಕ್ಷದವರು ಗಢಗಢ ಅಂತಾ ನಡುಗಬೇಕಾ?
  • ವಿಪಕ್ಷ ಅಶೋಕ್ ಅಣ್ಣಂಗೆ ಇವತ್ತು ಫಸ್ಟ್ ದಿನ ಅವರು ಸೀನಿಯರ್ ಅಲ್ವಾ?

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕರಾಗಿ ಆರ್‌. ಅಶೋಕ್ ಅವರ ಆಯ್ಕೆ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ಕೋಲ್ಮಿಂಚು ಸಂಚರಿಸಿದೆ. ಅತ್ತ ಬಿಜೆಪಿ ನಾಯಕರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಬ್ಬರಿಸೋಕೆ ರೆಡಿಯಾಗಿದ್ರೆ, ಇತ್ತ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರಿಗೆ ಸಖತ್ ಟಾಂಗ್ ಕೊಡುತ್ತಿದ್ದಾರೆ.

Advertisment

ಬಿಜೆಪಿ ನಾಯಕರ ಅಟ್ಯಾಕ್‌ ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರ ವಾಕ್ಸಮರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಿರುಗೇಟು ಕೊಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಮಾತಾಡಿದ್ರೆ ತೂಕ ಇರಬೇಕು. ಆಡಳಿತ ಪಕ್ಷದವರು ಗಢಗಢ ಅಂತಾ ನಡುಗುತ್ತಿರಬೇಕು. ಕುಮಾರಸ್ವಾಮಿ 2 ಬಾರಿ ಈ ರಾಜ್ಯದ ಮುಖ್ಯಮಂತ್ರಿ ಆದವರು. ಅವರು ಬೆಳಗ್ಗೆ ಎದ್ರೆ ಏನೇನು ಮಾತನ್ನಾಡುತ್ತಾರೆ ಅಂತ ನಾವೆಲ್ಲಾ ಎದುರು ನೋಡುತ್ತೇವೆ. ಬೆಳಗಾವಿ ಅಧಿವೇಶನದಲ್ಲಿ ಹೆಚ್‌ಡಿಕೆ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ. ನನ್ನನ್ನು ಜೈಲಿಗೆ ಹಾಕೋಕೆ ದೊಡ್ಡ ಸ್ಕೀಮ್ ರೆಡಿ ಮಾಡುತ್ತಿದ್ದಾರೆ. ಏನು ಮಾಡ್ತಾರೋ ಮಾಡಲಿ ಎಂದು ಸವಾಲು ಹಾಕಿದ್ದಾರೆ.

‘ಸೀನಿಯರ್’ ಅಶೋಕ್‌ ಅಣ್ಣಗೆ ಶುಭಾಶಯ!

ವಿಪಕ್ಷ ನಾಯಕ ಆರ್‌. ಅಶೋಕ್ ಅವರ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ಅಶೋಕ್ ಅಣ್ಣಗೆ ಇವತ್ತು ಫಸ್ಟ್ ದಿನ. ಅವರು ಸೀನಿಯರ್ ಅಲ್ವಾ? ವಿರೋಧ ಪಕ್ಷ ನಾಯಕ ಆಗಿ ಆಯ್ಕೆಯಾಗಿದ್ದು ನನಗೆ ಸಂತಸ ತಂದಿದೆ. ನಾನು ಶುಭಾಶಯ ಕೋರುತ್ತೇನೆ ಎಂದರು.

ಅಶೋಕ್ ಅವರ ಕನಕಪುರ ಸೋಲಿನ ಬಗ್ಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಪಾಲಿಟಿಕ್ಸ್‌ನಲ್ಲಿ ಸೋಲು, ಗೆಲುವು ಎರಡನ್ನೂ ಸ್ವೀಕಾರ ಮಾಡಬೇಕು. ದೇವೇಗೌಡರು, ಕುಮಾರಸ್ವಾಮಿ ಸೋತಿರಲಿಲ್ವಾ. ನಾನು ದೇವೇಗೌಡರ ಮೇಲೆ ಸೋತಿಲ್ವಾ. ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ಎಲ್ಲರೂ ಗೆಲ್ಲಲು ಆಗುತ್ತಾ‌? ನಾವೆಲ್ಲಾ ಅಡ್ಜೆಸ್ಟ್ ಮಾಡಿಕೊಳ್ಳಬೇಕು. ಸೋಲನ್ನ ಸ್ವೀಕಾರ ಮಾಡಕೊಳ್ಳಬೇಕು. ಏನೋ ಹುಮ್ಮಸ್ಸಿನಿಂದ ಕುಂಬಾರನ ಮಡಕೆ ಬಿಸಾಕಿದ್ರೆ ಹೊಡೆದು ಹೋಗುತ್ತೆ ಅಲ್ವಾ ಎಂದು ವ್ಯಂಗ್ಯವಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment