Advertisment

ಇಂದಿನಿಂದಲೇ ಅನ್ನಭಾಗ್ಯ ಜಾರಿ; ಯಾಱರಿಗೆ 5 ಕೆಜಿ ಅಕ್ಕಿ ಜತೆ 170 ರೂ. ಹಣ ಸಿಗೋದು ಗೊತ್ತಾ..?

author-image
Ganesh Nachikethu
Updated On
ಇಂದಿನಿಂದಲೇ ಅನ್ನಭಾಗ್ಯ ಜಾರಿ; ಯಾಱರಿಗೆ 5 ಕೆಜಿ ಅಕ್ಕಿ ಜತೆ 170 ರೂ. ಹಣ ಸಿಗೋದು ಗೊತ್ತಾ..?
Advertisment
  • ಅನ್ನಭಾಗ್ಯ 5 ಕೆ.ಜಿ ಬದಲು ಖಾತೆಗೆ ಬರಲಿದೆ ಹಣ
  • ಅಂತ್ಯೋದಯ, ಪಡಿತರ ಚೀಟಿದಾರರಿಗೆ ಸಿಗುತ್ತೆ ಕ್ಯಾಶ್​​​
  • ಅನ್ನಭಾಗ್ಯ ಯೋಜನೆ ಜಾರಿಯಾಗಿ ಇಂದಿಗೆ 10 ವರ್ಷ!

ಬೆಂಗಳೂರು: ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಅನ್ನಭಾಗ್ಯ ಇಂದಿನಿಂದ ಜಾರಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯದ ಜೊತೆ ಧನಭಾಗ್ಯಕ್ಕೂ ಚಾಲನೆ ನೀಡಿದ್ದಾರೆ. ಐದು ಕೆಜಿ ಅಕ್ಕಿ ಬದಲಿಗೆ ಸರ್ಕಾರ 170 ರೂಪಾಯಿ ಹಣ ನೀಡಲಿದೆ. ಅಕ್ಕಿ ಕೊರತೆ, ಕೇಂದ್ರದ ರೈಸ್​​ ಪಾಲಿಟಿಕ್ಸ್​ನಿಂದ ಕಿಚ್ಚು ಹೊತ್ತಿಸಿದ್ದ ಈ ಯೋಜನೆಗೆ ಸಿಎಂ ಇವತ್ತು ಸ್ವಾಭಿಮಾನವನ್ನೆ ಪಣಕ್ಕಿಟ್ಟು ಚಾಲನೆ ಕೊಟ್ಟಿದ್ದಾರೆ.

Advertisment

ಧನಭಾಗ್ಯಕ್ಕೆ ಕಂಡೀಷನ್ಸ್​!

ಅನ್ನಭಾಗ್ಯ ಸಿಎಂ ಸಿದ್ದರಾಮಯ್ಯರ ಕನಸಿನ ಕೂಸು. ಜುಲೈ 10, 2013ರಲ್ಲಿ ಬಡವರ ಮನೆಗೆ ಅಕ್ಕಿ ಕೊಟ್ಟ ಸಿದ್ದು, ಅನ್ನಯ್ಯ ಅಂತಲೇ ನಾಡಿನಲ್ಲಿ ಮನೆ ಮಾತಾಗಿದ್ದಾರೆ. ಈ ಬಾರಿ ವಿಪಕ್ಷಗಳ ಕಿಡಿ ನುಡಿ ಮಧ್ಯೆ ಸರ್ಕಾರ ಹೊತ್ತಿಸಿದ ಸ್ವಾಭಿಮಾನದ ಕಿಚ್ಚಿನಲ್ಲಿ ಬಡವನ ಒಲೆ ಮೇಲೆ ಅನ್ನ ಬೇಯಲಿದೆ. ರೈಸ್​​​ ಪಾಲಿಟಿಕ್ಸ್​​ ನಡುವೆ ರಾಜ್ಯದಲ್ಲಿ ಮತ್ತೆ ಅನ್ನಭಾಗ್ಯಕ್ಕೆ ಮರು ಚಾಲನೆ ಸಿಕ್ಕಿದೆ.

ಅನ್ನಭಾಗ್ಯ ಯೋಜನೆ ಜಾರಿಯಾಗಿ ಇಂದಿಗೆ 10 ವರ್ಷ!

ರಾಜ್ಯದಲ್ಲೀಗ ಗ್ಯಾರಂಟಿ ಯುಗ. ಹಸಿವು, ಬಡತನ, ರಟ್ಟೆ ಸೋತು ಮಲಗಿದವರಿಗೆ ಹಿಡಿ ಅನ್ನದ ಆಶ್ರಯ. ಹಸಿವು ಕರ್ನಾಟಕ ಎಂಬ ಘೋಷ ವಾಕ್ಯದಡಿ ಅನ್ನ ರಾಮಯ್ಯ ಸಂಕಲ್ಪ ತೊಟ್ಟಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಪ್ರತಿ ಬಡ ಕುಟುಂಬದ ಮನೆ ತಲುಪೋ ಈ ಯೋಜನೆ, ಹಸಿದ ಜನರ ಹೊಟ್ಟೆ ತುಂಬಿಸಲಿದೆ. ಬಡಜನರ ಹಸಿವು ನೀಗಿಸುವ ಅನ್ನಭಾಗ್ಯದ ಜೊತೆ ಧನಭಾಗ್ಯವೂ ಮಾಸುಗಟ್ಟಿದ ಬಡವರ ಜೇಬಿನಲ್ಲಿ ಕಾಂಚಾಣದ ಕುಣಿತವಾಗಲಿದೆ.

ಈಗಾಗಲೇ ಅನ್ನಭಾಗ್ಯಕ್ಕಾಗಿ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಸಂಜೆ ನಡೆದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ಸಿಕ್ಕಿದೆ. ಹಸಿವು ಮುಕ್ತ ಕರ್ನಾಟಕ ಎಂಬ ಘೋಷ ವಾಕ್ಯದೊಂದಿಗೆ ಈ ಯೋಜನೆಗೆ ಸಿಎಂ ಚಾಲನೆ ನೀಡಿದ್ದಾರೆ. 10 ಕೆ.ಜಿ ಧಾನ್ಯ ಕೊಡುವ ಯೋಜನೆಯಾಗಿದ್ದು, ಇದರಲ್ಲಿ 5 ಕೆ.ಜಿ ಅಕ್ಕಿ ಬದಲಿಗೆ ಪ್ರತಿ ಫಲಾನುಭವಿಗಳಿಗೆ 170 ರೂಪಾಯಿ ಹಣ ಸಂದಾಯ ಆಗಲಿದೆ.

Advertisment

ಅನ್ನಭಾಗ್ಯ ಜೊತೆಗೆ ಧನಭಾಗ್ಯ!

1.28 ಕೋಟಿ ಪಡಿತರ ಕುಟುಂಬಗಳ ‌4.42 ಕೋಟಿ ಫಲಾನುಭವಿಗಳಿಗೆ ನೇರವಾಗಿ ನಗದು ವರ್ಗಾವಣೆ ಆಗಲಿದೆ. ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ಸಂದಾಯ ಆಗಲಿದೆ. ಆಹಾರ ಇಲಾಖೆಯು ಹೊಂದಿರುವ ತಂತ್ರಾಂಶದಲ್ಲಿ ಲಭ್ಯವಿರುವಂತಹ ದತ್ತಾಂಶ ಮಾಹಿತಿ ಬಳಸಿ ಕುಟುಂಬಗಳಿಗೆ ಹಣ ಸಿಗಲಿದೆ.

ಯೋಜನೆ ಜಾರಿ ಹಿನ್ನೆಲೆ ಜುಲೈ ತಿಂಗಳ ಹಣ ಈ ತಿಂಗಳೊಳಗಾಗಿ ಜಮೆ ಆಗುತ್ತೆ. ಇದರಿಂದ 44.80 ಲಕ್ಷ ಅಂತ್ಯೋದಯ, 3.97 ಕೋಟಿ ಬಿಪಿಎಲ್‌ ಚೀಟಿದಾರರಿಗೆ ಪ್ರಯೋಜನ ಆಗಲಿದೆ ಅಂತ ಸರ್ಕಾರ ಹೇಳ್ಕೊಂಡಿದೆ. ಈ ಧನಭಾಗ್ಯ ಕೋಲಾರ ಮತ್ತು ಮೈಸೂರಿನಲ್ಲಿ ಪ್ರಾಯೋಗಿಕವಾಗಿ ನಗದು ವರ್ಗಾವಣೆ ಆರಂಭ ಆಗಲಿದ್ದು, ತಿಂಗಳಾಂತ್ಯದ ವೇಳೆಗೆ ಎಲ್ಲ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ.

ಅಕ್ಕಿಯುದ್ಧ ಮಾಡಿದ್ದ ಕೇಂದ್ರಕ್ಕೆ ಭಾರೀ ಹಿನ್ನಡೆ ಆಗಿದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಅಕ್ಕಿಯ ಇ-ಹರಾಜಿಗೆ ಸ್ಪಂದನೆ ಸಿಕ್ಕಿದೆ. ರಾಜ್ಯ ಸರ್ಕಾರಗಳಿಗೆ ಓಪನ್ ಮಾರ್ಕೆಟ್ ಸೇಲ್ ಸ್ಕೀಮ್​ನಲ್ಲಿ ಅಕ್ಕಿ ಮಾರಾಟ ನಿಲ್ಲಿಸಿದ್ದ ಎಫ್​​ಸಿಐ ರಾಜಕೀಯ ವೈಷಮ್ಯಕ್ಕೆ ಕೈ-ಕೈ ಹಿಸುಕಿಕೊಳ್ತಿದೆ.

Advertisment

ಅಕ್ಕಿ ಇ-ಹರಾಜುಗೆ ಹಿನ್ನಡೆ!

ಕರ್ನಾಟಕಕ್ಕೆ ಅಕ್ಕಿ ನೀಡಲು ಹಿಂದೇಟು ಹಾಕಲು ದೇಶದಲ್ಲಿ ಅಕ್ಕಿ ಬೆಲೆ ಏರಿಕೆ ನಿಯಂತ್ರಣಕ್ಕೆ ಇ-ಹರಾಜು ಅಂತ ಕೇಂದ್ರ ನೆಪ ಹೇಳಿತ್ತು. ಆದ್ರೆ, ಇದೇ ಇ-ಹರಾಜಿನಲ್ಲಿ FCIನ ಅಕ್ಕಿಯೇ ಮಾರಾಟವೇ ಆಗಿಲ್ಲ. FCI ಬಳಿಯಲ್ಲಿ ಸದ್ಯ 3.86 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇದೆ. ಆದ್ರೆ, ಇ-ಹರಾಜಿನಲ್ಲಿ ಕೇವಲ 170 ಮೆಟ್ರಿಕ್ ಟನ್ ಅಕ್ಕಿಗೆ ಮಾತ್ರ ಬಿಡ್ ಆಗಿದೆ. ರಾಜ್ಯದ ವ್ಯಾಪಾರಿಗಳಿಂದ 40 ಮೆಟ್ರಿಕ್ ಟನ್ ಅಕ್ಕಿಗೆ ಬಿಡ್ ಮಾಡಲಾಗಿದೆ. ಇತ್ತ, ಮಹಾರಾಷ್ಟ್ರ, ಗುಜರಾತ್​ನಿಂದ ತಲಾ 70, 50 ಮೆಟ್ರಿಕ್ ಟನ್ ಅಕ್ಕಿಗೆ ಬಿಡ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment