Advertisment

ಐದು ವರ್ಷ ಸಿದ್ದರಾಮಯ್ಯ CM ಎಂದ R ಅಶೋಕ್​​.. ನಿಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ ನೋಡಿ ಎಂದು ಡಿಕೆಶಿ ಟಾಂಗ್​​

author-image
Bheemappa
Updated On
ಐದು ವರ್ಷ ಸಿದ್ದರಾಮಯ್ಯ CM ಎಂದ R ಅಶೋಕ್​​.. ನಿಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ ನೋಡಿ ಎಂದು ಡಿಕೆಶಿ ಟಾಂಗ್​​
Advertisment
  • ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗ್ತಿಲ್ಲ
  • ಕೇಂದ್ರ ಸರ್ಕಾರವೇನು ಪುಕ್ಕಟೆ ಏನು ಅಕ್ಕಿ ಕೊಡಲ್ಲ- ಡಿ.ಕೆ ಶಿವಕುಮಾರ್
  • ಗ್ರೂಪ್​ ಫೋಟೋಗಾಗಿ ಎಲ್ಲ ಸಚಿವರು ದೆಹಲಿಗೆ ಹೋಗಬೇಕಾಗಿದೆ..!

ಬೆಂಗಳೂರು: ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಇನ್ನೂ ಆಗದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾಜಿ ಸಚಿವ ಆರ್​.ಅಶೋಕ್​ಗೆ ಟಾಂಗ್ ಕೊಟ್ಟಿದ್ದಾರೆ. ಅವರ ತಟ್ಟಿಯಲ್ಲಿ ಹೆಗ್ಗಣ ಬಿದ್ದಿದೆ. ಅದು ಬಿಟ್ಟು ನೋಣ ಹುಡುಕಲು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Advertisment

publive-image

ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಬಡವರಿಗೆ ಅಕ್ಕಿ ಕೊಡದೆ ಕೇಂದ್ರ ಸರ್ಕಾರ ತೊಂದರೆ ಕೊಡಲು ಹೊರಟಿದೆ. ಅಕ್ಕಿ ಕೊಡುವ ಪದ್ಧತಿಯಿದೆ. ಕೇಂದ್ರವೇನು ಪುಕ್ಕಟೆ ಅಕ್ಕಿ ಕೊಡಲ್ಲ. ಹೀಗಾಗಿ ಅಕ್ಕಿ ಕೊಡದಿದ್ದಕ್ಕೆ ನಾಳೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್​ ಪ್ರತಿಭಟನೆ ಮಾಡಲಿದೆ. ನಾನು ಕೂಡ ಬೆಂಗಳೂರು ನಗರದ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ರು.

ಇನ್ನು ಇದೇ ವೇಳೆ ನಾಳೆ ದೆಹಲಿ ಭೇಟಿ ಬಗ್ಗೆ ಮಾತನಾಡಿದ ಡಿಸಿಎಂ ಶಿವಕುಮಾರ್​, ನಮ್ಮ ಸರ್ಕಾರ ಬಂದಿದ್ದರಿಂದ ಜಾಗೃತರಾಗಿರಬೇಕು. ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಿ ಉತ್ತಮ ಆಡಳಿತ ನೀಡಬೇಕಿದೆ. ಗ್ರೂಪ್ ಫೋಟೋ ಕಾರ್ಯಕ್ರಮ ಇರುವುದರಿಂದ ಎಲ್ಲ ಸಚಿವರಿಗೂ ದೆಹಲಿಗೆ ಬರಬೇಕೆಂದು ಸೂಚಿಸಿದ್ದಾರೆ ಎಂದಿದ್ದಾರೆ.

ಈ ಮುನ್ನ ಮಾತಾಡಿದ್ದ ಮಾಜಿ ಸಚಿವ ಆರ್​​. ಅಶೋಕ್​, ಸಿದ್ದರಾಮಯ್ಯ ಅವರೇ ಮುಂದಿನ ಐದು ವರ್ಷ ಸಿಎಂ. ಡಿ.ಕೆ ಶಿವಕುಮಾರ್​​ಗೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಸಿಎಂ ಪೋಸ್ಟ್​ ಬಿಟ್ಟುಕೊಡಲ್ಲ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್​​, ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಲ್ಲ. ಅಶೋಕ್​​ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ, ಇಲ್ಲಿ ನೊಣ ಹುಡುಕಲು ಬಂದಿದ್ದಾರೆ ಎಂದು ಟಾಂಗ್​​ ಕೊಟ್ಟಿದ್ದಾರೆ. ​​

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment