Advertisment

ಚಾಮರಾಜನಗರದಲ್ಲಿ ಭಯ ಹುಟ್ಟಿಸಿದ ಚುಕ್ಕಿ ಚರ್ಮ ರೋಗ.. ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿಗೆ ಜನರು ಎಚ್ಚರಿಕೆ..!

author-image
Bheemappa
Updated On
ಚಾಮರಾಜನಗರದಲ್ಲಿ ಭಯ ಹುಟ್ಟಿಸಿದ ಚುಕ್ಕಿ ಚರ್ಮ ರೋಗ.. ಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿಗೆ ಜನರು ಎಚ್ಚರಿಕೆ..!
Advertisment
  • ಭೇಟಿ ನೀಡಿದ್ದ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಹೇಳಿದ್ದೇನು?
  • ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದ ಚರ್ಮ ಚುಕ್ಕಿ ರೋಗ
  • ಮಕ್ಕಳ ಆರೋಗ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್

ಚಾಮರಾಜನಗರ: ಜಿಲ್ಲೆಯಾದ್ಯಂತ ಚುಕ್ಕಿ ಚರ್ಮ ರೋಗ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಇದು ಮಕ್ಕಳಲ್ಲಿಯೇ ಹೆಚ್ಚಾಗಿ ಕಾಣಿಸುತ್ತಿದೆ ಎನ್ನಲಾಗುತ್ತಿದ್ದು, ಜಿಲ್ಲಾಧಿಕಾರಿ ಶಿಲ್ಪಾನಾಗ್ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

Advertisment

ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಭೇಟಿ ನೀಡಿ ಚುಕ್ಕಿ ಚರ್ಮ ರೋಗದ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದಾರೆ. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಮಕ್ಕಳ ಆರೋಗ್ಯ ಪರಿಶೀಲನೆ ಮಾಡಿದ್ರು. ಈ ರೋಗದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಿಕೊಡಿ, ಆಟವಾಡಿಕೊಂಡು ಇರಲಿ. ಯಾವುದೇ ತೊಂದರೆಯಿಲ್ಲ. ಈ ಚರ್ಮರೋಗ ಸಾಂಕ್ರಾಮಿಕ ಕಾಯಿಲೆ ಏನು ಅಲ್ಲ. ಯಾರೇ ಆಗಲಿ ಭಯ ಪಡುವುದು ಬೇಡ ಎಂದು ಜನರಿಗೆ ಡಿಸಿ ತಿಳಿಸಿದ್ದಾರೆ.

ಈ ಚರ್ಮ ರೋಗಕ್ಕೆ ಔಷಧಿ ಇಲ್ಲದಿರುವ ಕಾಯಿಲೆ ಆಗಿರುವುದರಿಂದ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಇದಕ್ಕೆ ಆರಂಭದಲ್ಲಿ ಹೆಚ್ಚಿನ ಚಿಕಿತ್ಸೆ ಮಕ್ಕಳಿಗೆ ಕೊಡಿಸಿದರೆ ಯಾವುದೇ ಅನಾಹುತಗಳು ಸಂಭವಿಸಲ್ಲ. ಹೀಗಾಗಿ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಿ, ಇಲ್ಲವಾದರೆ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಗ್ರಾಮಸ್ಥರು ಡಿಸಿಗೆ ಎಚ್ಚರಿಕೆ ನೀಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment