VIDEO: ಬಿಟ್ಟು ಬಿಡಿ ಎಂದು ಗೋಗರೆದ್ರೂ ದೊಣ್ಣೆ, ರಾಡ್​​ನಿಂದ ಹಲ್ಲೆ ಮಾಡಿದ ಗ್ಯಾಂಗ್​​​; ಏನಿದು ಸ್ಟೋರಿ?

author-image
Bheemappa
Updated On
VIDEO: ಬಿಟ್ಟು ಬಿಡಿ ಎಂದು ಗೋಗರೆದ್ರೂ ದೊಣ್ಣೆ, ರಾಡ್​​ನಿಂದ ಹಲ್ಲೆ ಮಾಡಿದ ಗ್ಯಾಂಗ್​​​; ಏನಿದು ಸ್ಟೋರಿ?
Advertisment
  • ತಪ್ಪಾಯಿತು ಎಂದು ಕೇಳಿದರೂ ಇನ್ನು ಹೆಚ್ಚಿಗೆ ಹಲ್ಲೆ ಮಾಡಿದ ಗುಂಪು
  • ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ನೋಡುಗರನ್ನು ತಲ್ಲಣಗೊಳಿಸುತ್ತೆ.!
  • ದೆಹಲಿಯಿಂದ ತಾಜ್​ ಮಹಲ್​ ನೋಡಲು ಬಂದ ವ್ಯಕ್ತಿ ಮೇಲೆ ಹಲ್ಲೆ

ನವದೆಹಲಿ: ತಾಜ್​ ಮಹಲ್ ನೋಡಲು ಬಂದ ಪ್ರವಾಸಿಗನೊಬ್ಬನಿಗೆ ಯುವಕರ ಗುಂಪು ದೊಣ್ಣೆ, ರಾಡ್​ನಿಂದ ಮನಬಂದಂತೆ ಹೊಡೆದಿರುವ ಘಟನೆ ಆಗ್ರಾದ ತಾಜ್​ಗಂಜ್​ ಬಳಿಯ ಬಸೈ ಚೌಕಿಯಲ್ಲಿ ನಡೆದಿದೆ. ಸದ್ಯ ಪ್ರವಾಸಿಗನಿಗೆ ಥಳಿಸಿರುವ ಭೀಕರ ದೃಶ್ಯ ಸಿಸಿಟಿಬಿಯಲ್ಲಿ ಸೆರೆಯಾಗಿದ್ದು ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗುತ್ತಿದೆ.

ದೆಹಲಿಯಿಂದ ಬಂದಿದ್ದ ಪ್ರವಾಸಿಗನಿಗೆ ಥಳಿಸಿರುವ ಯುವಕರ ಗುಂಪು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತದೆ. ಈ ವೇಳೆ ಪ್ರವಾಸಿಗನ ಕಾರು ಅವರಲ್ಲಿ ಒಬ್ಬರಿಗೆ ಟಚ್​ ಆಗಿದೆ. ಇದರಿಂದ ಕೆರಳಿದ ಗುಂಪು ದೊಣ್ಣೆ, ರಾಡ್ ಅ​ನ್ನು ಹಿಡಿದುಕೊಂಡು ಬಂದು ಮನಬಂದಂತೆ ಥಳಿಸುತ್ತಿರುತ್ತಾರೆ. ಆಗ ಪ್ರವಾಸಿಗ ತಪ್ಪಿಸಿಕೊಂಡು ಬೇಕರಿಯೊಳಗೆ ಹೋಗುತ್ತಾರೆ. ಅಲ್ಲಿಯು ಬಿಡದ ದುಷ್ಕರ್ಮಿಗಳು ರಾಡ್​ನಿಂದ ಹೊಡೆಯುತ್ತಿರುತ್ತಾರೆ. ತಪ್ಪಾಯಿತು ಎಂದು ಕ್ಷಮೆ ಕೇಳುತ್ತಿದ್ರೂ ಯುವಕರ ಗುಂಪು ಇನ್ನು ಹೆಚ್ಚಿಗೆ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದರು.

ಈ ಹಲ್ಲೆ ಮಾಡಿದ ದೃಶ್ಯವು ಬೇಕರಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಂತರ ಸೋಷಿಯಲ್​ ಮೀಡಿಯಾದಲ್ಲಿ ಹರಿ ಬಿಡಲಾಗಿದೆ. ಈ ಬಗ್ಗೆ ತಾಜ್​ಗಂಜ್​ ಠಾಣಾ ಪೊಲೀಸರು ಕ್ರಮ ಕೈಗೊಳ್ಳುವಂತೆ ಟ್ವಿಟರ್​ನಲ್ಲಿ ಆಗ್ರಹಿಸಲಾಗಿತ್ತು. ಸದ್ಯ ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ಜೈಲಿಗೆ ಹಾಕಲಾಗಿದ್ದು, ಆರೋಪಿಗಳು ಜೈಲಿನಲ್ಲಿರುವ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment